ಲಕ್ಕುಂಡಿ ಬಳಿಕ ಅತೀ ದೊಡ್ಡ ಚಿನ್ನದ ಗಣಿಯಲ್ಲಿ ಹಾವಿನ ಪ್ರಭೇದದ ಕಪ್ಪು ಕಣ್ಣಿನ ಹೊಸ ಜೀವಿ ಪತ್ತೆ, ಚಿನ್ನದ ಗಣಿಗೆ ಈ ಜೀವಿ ಕಾವಲಿತ್ತಾ? ಅಧ್ಯಯನ ವೇಳೆ ಪತ್ತೆಯಾದ ಈ ಜೀವಿಗೆ ಡೆಂಡ್ರೆಲಾಫಿಸ್ ಅಟ್ರಾ ಎಂದು ಹೆಸರಿಡಲಾಗಿದೆ.
ಪಪುವಾ ನ್ಯೂ ಗಿನಿಯಾ (ಜ.29) ಲಕ್ಕುಂಡಿಯಲ್ಲಿ ಚಿನ್ನ ಸೇರಿದಂತೆ ಹಲು ಲೋಹಗಳು, ಐತಿಹಾಸಿಕ ವಸ್ತುಗಳು, ರಾಜಕರ ಕಾಲದ ವಸ್ತುಗಳು, ದೇವಸ್ಥಾನದ ಕುರುಹು, ನಾಗ ಶಿಲ್ಪ ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿದೆ. ಇದೇ ವೇಳೆ ಈ ಸ್ಥಳದಲ್ಲಿ ನಾಗರ ಹಾವುಗಳು ಪತ್ತೆಯಾಗಿದೆ. ಲಕ್ಕುಂಡಿ ಬೆನ್ನಲ್ಲೇ ವಿಶ್ವದಲ್ಲೇ ಅತೀ ದೊಡ್ಡ ಚಿನ್ನದ ಗಣಿಯಾಗಿ ಗುರುತಿಸಿಕೊಂಡಿದ್ದ ಪಪುಪಾ ನ್ಯೂ ಗಿನಿಯಾ ದೇಶದ ಹಳೆಯ ಚಿನ್ನದ ಗಣಿಯೊಂದರಲ್ಲಿ ಹಾವಿನ ಪ್ರಭೇದಕ್ಕೆ ಸೇರಿದ ಕಡು ಕಪ್ಪು ಬಣ್ಣದ ಹಾವು ಪತ್ತೆಯಾಗಿದೆ. ಇದೇ ಮೊದಲ ಬಾರಿಗೆ ಪತ್ತೆಯಾದ ಅಪರೂಪದ ಈ ಜೀವಿಗೆ ಡೆಂಡ್ರೆಲಾಫಿಸ್ ಅಟ್ರಾ ಎಂದು ಹೆಸರಿಟ್ಟಿದ್ದಾರೆ.
2004ರಲ್ಲಿ ಮುಚ್ಚಲ್ಪಟ್ಟ ಚಿನ್ನದ ಗಣಿಯಲ್ಲಿ ಅಟ್ರಾ ಪತ್ತೆ
ಪಪುವಾ ನ್ಯೂಗಿನಿಯಾ ದೇಶದಲ್ಲಿ ಮಿಲೆನ್ ಬೇ ಪ್ರಾಂತ್ಯದ ಬಳಿಯಾ ಮಿಸಿಮಾ ಅನ್ನೋ ದ್ವೀಪದಲ್ಲಿ 2004ರ ವರೆಗೆ ಚಿನ್ನದ ಗಣಿ ಕಾರ್ಯನಿರ್ವಹಿಸಿತ್ತು. ವಿಶ್ವದ ಅತೀ ದೊಡ್ಡ ಚಿನ್ನದ ಗಣಿಗಳಲ್ಲಿ ಇದು ಒಂದಾಗಿತ್ತು. ಆದರೆ 2004ರಲ್ಲಿ ಈ ಗಣಿಯನ್ನು ಮುಚ್ಚಲಾಗಿತ್ತು. ಇದೀಗ ಈ ಪ್ರದೇಶಗಳಲ್ಲಿ ಪೊದೆಗಲು, ಕಾಡುಗಳು ಬಳೆದಿದೆ. ಇಲ್ಲಿ ಈ ಹೊಸ ಹಾವಿನ ಪ್ರಭೇದದ ಜೀವಿ ಪತ್ತೆಯಾಗಿದೆ.
ಹೊಸ ತಳಿಯ ಹಾವು
ಇದು ಹೊಸ ತಳಿಯ ಹಾವು. ಕಡು ಕಪ್ಪು ಬಣ್ಣದಿಂದ ಕೂಡಿರುತ್ತದೆ. ತಲೆಯಿಂದ ಬಾಲದವರೆಗೆ ಸಂಪೂರ್ಣ ಕಪ್ಪು ಬಣ್ಣದಿಂದ ಕೂಡಿದೆ. ಇದರ ಕಣ್ಣುಗಳು ಕೂಡ ಕಪ್ಪು ಬಣ್ಣದಿಂದ ಕೂಡಿದ್ದು, ಪ್ರಕಾಶಮಾನವಾಗಿ ಹೊಳೆಯುತ್ತದೆ. ಗಾತ್ರದಲ್ಲಿ ದೊಡ್ಡದಿದೆ ಎಂದು ವಿಜ್ಞಾನಿಗಳು ಹೊಸ ಹಾವಿನ ಕುರಿತು ವಿವರಣೆ ನೀಡಿದ್ದಾರೆ. ಈ ಹಾವುಗಳು ಪಾಳು ಬಿದ್ದ ಪ್ರದೇಶ ಹಾಗೂ ದಟ್ಟ ಕಾಡುಗಳಲ್ಲಿ ಬದುಕ ಬಲ್ಲದು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಹಾವುಗಳು ವಿಷಕಾರಿಯಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಈ ಕುರಿತು ಮಿಚಿಗನ್ ವಿಶ್ವವಿದ್ಯಾಲಯದ ವಿಜ್ಞಾನಿ ಫ್ರೆಡ್ ಕ್ರೌಸ್ ಸಂಶೋಧನೆ ನಡೆಸಿದ್ದಾರೆ. ಇದೇ ವೇಳೆ ಇದೇ ಪ್ರದೇಶದಲ್ಲಿ ನಾಲ್ಕಕ್ಕೂ ಹೆಚ್ಚು ಹೊಸ ಪ್ರಬೇಧದ ಮರ ಹಾವುಗಳಿವೆ ಎಂದಿದ್ದಾರೆ.
ಗಣಿಗಾರಿಕೆ ಪುನರ್ ಆರಂಭಕ್ಕೆ ಅಡ್ಡಿ
ಮಿಸಿಮಾ ದ್ವೀಪದಲ್ಲಿನ ಗಣಿಗಾರಿಕೆ ಪುನರ್ ಆರಂಭಕ್ಕೆ ಪಪುವಾ ನ್ಯೂ ಗಿನಿಯಾ ದೇಶ ತಯಾರಿ ಆರಂಭಿಸಿತ್ತು. ಹೊಸ ಯಂತ್ರಗಳ ಸಹಾಯದಿಂದ ಚಿನ್ನದ ಗಣಿ ಶೋಧಿಸಿ ಹೊರತೆಗೆಯಲು ಮುಂದಾಗಿತ್ತು. ಇದರ ನಡುವೆ ಇದೇ ಪ್ರದೇಶದಲ್ಲಿ ಪರಿಸರ ತಜ್ಞರು, ಸಂಶೋಧಕರು ನಡೆಸಿದ ಅಧ್ಯಯನ ಇದೀಗ ಗಣಿಗಾರಿಕೆ ಪುನರ್ ಆರಂಭಕ್ಕೆ ಅಡ್ಡಿ ಮಾಡಲಿದೆ. ವಿಶೇಷ ಹಾಗೂ ಅಪರೂಪದ ಹಾವಿನ ಪ್ರಭೇದಗಳು ಪತ್ತೆಯಾಗಿರುವ ಕಾರಣ ಮತ್ತೆ ಗಣಿಗಾರಿಕೆಯಿಂದ ಪರಿಸರಕ್ಕೆ ಹಾಗೂ ಪ್ರಾಣಿ ಸಂಕುಲದ ಸಮತೋಲನಕ್ಕೆ ಅಡ್ಡಿಯಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.


