Asianet Suvarna News Asianet Suvarna News

Grandfather Graduated : ಮೊಮ್ಮಗಳು ಪದವಿ ಪಡೆದಂದೆ ಪದವಿ ಶಿಕ್ಷಣ ಪೂರ್ಣಗೊಳಿಸಿದ 87ರ ತಾತ

  • 87ರ ಅಜ್ಜನಿಂದ ಅರ್ಥಶಾಸ್ತ್ರದಲ್ಲಿ ಪದವಿ
  • ಮೊಮ್ಮಗಳ ಜೊತೆ ಜೊತೆಯೇ ಪದವಿ ಪಡೆದ ರೆನೇ ನೀರಾ
  • ಸಮೂಹ ಸಂವಹನದಲ್ಲಿ ಪದವಿ ಪಡೆದ ಮೊಮ್ಮಗಳು
Same day Woman and her 87 year old grandfather get graduates
Author
Bangalore, First Published Dec 22, 2021, 5:55 PM IST

ನ್ಯೂಯಾರ್ಕ್‌(ಡಿ.22) ವಿದ್ಯೆ ಎನ್ನುವುದು ಯಾರಪ್ಪನ ಸ್ವತ್ತಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಕಲಿಯುವ ಮನಸ್ಸೊಂದಿದ್ದರೆ ವಯಸ್ಸು, ಕಾಯಿಲೆ ಇದ್ಯಾವುದು ಶಿಕ್ಷಣಕ್ಕೆ ಅಡ್ಡಿಯಾಗದು. ಕಲಿಕೆ ಎಂಬುದಕ್ಕೆ ಅಂತ್ಯ ಎಂಬುದಿಲ್ಲ. ಅದೊಂದು ನಿರಂತರ ಪ್ರಕ್ರಿಯೆ. ಹೌದು. 87 ವರ್ಷದ ವೃದ್ಧರೊಬ್ಬರು ಮೊಮ್ಮಗಳ ಜತೆಯೇ ಪದವಿಯನ್ನು ಪಡೆದ ಅಪರೂಪದ ಘಟನೆ ವಿದೇಶದಲ್ಲಿ ನಡೆದಿದೆ. ರೆನೇ ನೀರಾ (Rene Neira) ಎನ್ನುವ 87 ವರ್ಷದ ವೃದ್ಧರೊಬ್ಬರು  ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಇದೇ ಸಮಯದಲ್ಲಿ ರೆನೇ ನೀರಾ ಅವರ ಮೊಮ್ಮಗಳು ಮೆಲಾನಿ ಸಲಜರ್​ (Melanie Salazar) ಸಮೂಹ ಸಂವಹನ (Mass Communications) ವಿಷಯದಲ್ಲಿ ಪದವಿ ಪಡೆದಿದ್ದಾಳೆ. ಯುಟಿಎಸ್‌ಎ (UTSA) ಕಾಲೇಜ್ ಆಫ್ ಲಿಬರಲ್ ಮತ್ತು ಫೈನ್ ಆರ್ಟ್ಸ್ ಈ ಅಜ್ಜ ಮೊಮ್ಮಗಳ ಭಾವುಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. 

ಪದವಿ ಪ್ರದಾನ ಸಮಾರಂಭದಲ್ಲಿ  87ರ ವೃದ್ಧ ರೆನೇ ನೀರಾ ಗಾಲಿ ಕುರ್ಚಿಯಲ್ಲಿ ಕುಳಿತು  ಪದವಿ ಪ್ರಮಾಣ ಪತ್ರ ಪಡೆದಿದರು. ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದರೂ ಓದುವ ಹಂಬಲದಿಂದ 2016ರಲ್ಲಿ ಕಾಲೇಜು ಸೇರಿದ್ದ ರೆನೇ ನೀರಾ ಅವರಿಗೆ ಓದುವ ಹಂಬಲ ಹೆಚ್ಚಾಗಿಯೇ ಇತ್ತು. ಈ ಸ್ಪೂರ್ತಿದಾಯಕ ಕ್ಷಣವನ್ನು ಯುಟಿಎಸ್‌ಎ (UTSA) ಕಾಲೇಜ್ ಆಫ್ ಲಿಬರಲ್ ಮತ್ತು ಫೈನ್ ಆರ್ಟ್ಸ್ ತನ್ನ ಫೇಸ್‌ಬುಕ್‌ (Facebook) ಮತ್ತು ಟ್ವಿಟ್ಟರ್‌ (Twitter) ಖಾತೆಯಲ್ಲಿ ಹಂಚಿಕೊಂಡಿದೆ. ಇದಕ್ಕೆ ಪ್ರಪಂಚದಾದ್ಯಂತ ಇರುವ ನೆಟ್ಟಿಗರು ಅಭಿನಂದನೆಯ ಜೊತೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. 

 

ಯುಟಿಎಸ್‌ಎ ಕಾಲೇಜಿನ ಈ ಪೋಸ್ಟನ್ನು ಟೆಕ್ಸಾಸ್‌ನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯ ಡಿಯಾಗೋ ಬರ್ನಾಲ್ (Diego Bernal), ಚಿತ್ರಕಥೆಗಾರ ಮತ್ತು ಫೋಟೋ ಜರ್ನಲಿಸ್ಟ್ ರೊಲ್ಯಾಂಡೊ ಗೊಮೇಜ್ (Rolando Gómez) ಮತ್ತು ಸೆನೆಟರ್ ಜೋಸ್ ಮೆನೆಂಡೆಜ್ (José Menéndez) ಇತರರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. 

ಮರಿ ಮೊಮ್ಮಗನ ಎತ್ತಿ ಮುದ್ದಾಡಿದ ಮುತ್ತಾತ...ಸಂತಸಕ್ಕೆ ಪಾರವೇ ಇಲ್ಲ! ಪೋಟೋಸ್

ನೀರಾ ಅವರ ಮೊಮ್ಮಗಳ ಪ್ರಕಾರ, ನೀರಾ ಅವರು 1950 ರ ದಶಕದಲ್ಲಿ ಸೇಂಟ್ ಮೇರಿಸ್ ವಿಶ್ವವಿದ್ಯಾಲಯ (St. Mary’s University) ದಲ್ಲಿ ವ್ಯಾಸಂಗ ಮಾಡಿದ್ದರು, ಆದರೆ ಅವರು ಮದುವೆಯಾದ ನಂತರ ಕಾಲೇಜು ತೊರೆದರು. ಅವರ ಪತ್ನಿಯ ಮರಣದ ನಂತರ, ಅವರು ಮತ್ತೆ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ನಿರ್ಧರಿಸಿದರು. ಅಂತಿಮವಾಗಿ 2016 ರಲ್ಲಿ ಅವರು ತಮ್ಮ ಮೊಮ್ಮಗಳನ್ನು ಯುಟಿಎಸ್‌ಎ(UTSA) ಕಾಲೇಜ್ ಆಫ್ ಲಿಬರಲ್ ಮತ್ತು ಫೈನ್ ಆರ್ಟ್ಸ್‌ಗೆ ತಂದು ಸೇರಿದರು. ಬಳಿಕ ಮತ್ತೆ ಅವರೂ ಕೂಡ ಕಾಲೇಜು ಪ್ರವೇಶಿಸಿದ್ದು, ಆಗ ಅವರಿಗೆ 82 ವರ್ಷವಾಗಿತ್ತು ಎಂದು ಮೊಮ್ಮಗಳು ಮೆಲಾನಿ ಸಲಜರ್ ಹೇಳಿದ್ದಾರೆ. 

ಜ್ಯೂಸ್ ಎಂದು ಅಜ್ಜನ ಮದ್ಯ ಸೇವಿಸಿ ಬಾಲಕ  ಸಾವು,  ತಾತನೂ ಉಸಿರು ಚೆಲ್ಲಿದ!

ಇತ್ತೀಚಿನ ಕೆಲವು ವರ್ಷಗಳಿಂದ, ಜನರು ತಮ್ಮ ಶಿಕ್ಷಣವನ್ನು ವೃದ್ಧಾಪ್ಯದಲ್ಲಿ ಪೂರ್ಣಗೊಳಿಸಿ ಕನಸನ್ನು ನನಸಾಗಿಸಿಕೊಂಡ ಅನೇಕ ಕಥೆಗಳನ್ನು ನಾವು ಈಗಾಗಲೇ ಕೇಳಿದ್ದೇವೆ. 2015 ರಲ್ಲಿ, 94 ವರ್ಷದ ಯುಎಸ್ ವ್ಯಕ್ತಿಯೊಬ್ಬರು ಕಾಲೇಜಿನಿಂದ ಪದವಿ ಪಡೆದ್ದಿದ್ದರು. ಇತ್ತೀಚೆಗೆ ನಿವೃತ್ತ ಪ್ರೊಫೆಸರ್ ಎಂ. ಕೆ . ಪ್ರೇಮ್ (M K Prem) ತಮ್ಮ ನಿವೃತ್ತಿ ಬಳಿಕ ರಾಜಸ್ಥಾನ ವಿಶ್ವವಿದ್ಯಾಲಯ (Rajasthan University) ದಲ್ಲಿ ಅನೇಕ ಕೋರ್ಸ್‌ಗಳಿಗೆ ದಾಖಲಾಗಿದ್ದರು. ಈ ನಿದರ್ಶನಗಳನ್ನು ನೋಡಿದಾಗ ಕೆಲವು ಜನರಿಗೆ ಜ್ಞಾನದ ದಾಹ ಎಂದಿಗೂ ಕೊನೆಗೊಳ್ಳುವುದಿಲ್ಲ ಎಂಬುದು ಸಾಬೀತಾಗುತ್ತಿದೆ

Follow Us:
Download App:
  • android
  • ios