Asianet Suvarna News Asianet Suvarna News

ಜ್ಯೂಸ್ ಎಂದು ಅಜ್ಜನ ಮದ್ಯ ಸೇವಿಸಿ ಬಾಲಕ  ಸಾವು,  ತಾತನೂ ಉಸಿರು ಚೆಲ್ಲಿದ!

* ಅಜ್ಜನ ಮದ್ಯ ಸೇವಿಸಿ ಬಾಲಕ ದುರಂತ ಸಾವು
* ಮೊಮ್ಮಗನ ಸ್ಥಿತಿ ಕಂಡು ಉಸಿರು ಚೆಲ್ಲಿದ ಅಜ್ಜ
* ಜ್ಯೂಸ್ ಎಂದು ಭಾವಿಸಿ ಮದ್ಯ ಸೇವಿಸಿದ್ದ
* ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನ ಆಗಲಿಲ್ಲ
 

Boy mistakenly consumes grandfather s alcohol dies Tamil Nadu mah
Author
Bengaluru, First Published Oct 4, 2021, 3:56 PM IST
  • Facebook
  • Twitter
  • Whatsapp

ವೆಲ್ಲೂರು(ಅ. 04)  ಇದೊಂದು ಘೋರ ದುರಂತ. ತಾತನ ಮದ್ಯಪಾನದ (Liquor) ಹವ್ಯಾಸ ಮೊಮ್ಮಗ ಮತ್ತು ತಾತ ಇಬ್ಬರನ್ನು ಬಲಿ ಪಡೆದುಕೊಂಡಿದೆ.  ಸೇವನೆ ಮಾಡಿ ಅರ್ಧ ಉಳಿಸಿದ್ದ ಮದ್ಯವೇ ಬಾಲಕನಿಗೆ ಮೃತ್ಯುವಾಗಿದೆ. ಜ್ಯೂಸ್ ಎಂದು ಭಾವಿಸಿ ಮದ್ಯ ಸೇವಿಸಿದ ಬಾಲಕ ಸಾವನ್ನಪ್ಪಿದರೆ ಮೊಮ್ಮಗನ ಸ್ಥಿತಿ ಕಂಡು ಅಜ್ಜನೂ ಮೃತಪಟ್ಟಿದ್ದಾನೆ.

ಜ್ಯೂಸ್(Juice)  ಎಂದು ಭಾವಿಸಿ ಮದ್ಯ ಸೇವನೆ ಮಾಡಿದ ಐದು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ(Death). ತಮಿಳುನಾಡಿನ (Tamilnadu)ವೆಲ್ಲೂರು ಜಿಲ್ಲೆಯ ತಿರುವಳಂ ಪೊಲೀಸ್ ಠಾಣಾ ವ್ಯಾಪ್ತಿಯ ಅಣ್ಣಾನಗರದ ಕನ್ನಿಕೊಯಿಲ್ ಬೀದಿಯಲ್ಲಿ ಘಟನೆ ನಡೆದಿದೆ. ಮೊಮ್ಮಗನ ಸಾವಿನ ಸ್ಥಿತಿ ಕಂಡು ಅಜ್ಜ ಸಹ ಮೃತಪಟ್ಟಿದ್ದಾನೆ.

ಯಾದಗಿರಿ ಜಲಪಾತಕ್ಕೆ ಬಂದು ಜೀವ ಕೊಟ್ಟ ಕಲಬುರಗಿ ಯುವತಿ

ಬಾಲಕ ರುಕೇಶ್ ತಾತ ಚಿನ್ನಸ್ವಾಮಿ (62) ಬ್ರಾಂಡಿ ಸೇವಿಸುವ ವಾಡಿಕೆ ಹೊಂದಿದ್ದರು. ಮದ್ಯ ಸೇವಿಸಿದ ಬಳಿಕ ಬಾಟಲಿಯಲ್ಲಿ ಒಂದಷ್ಟು ಬ್ಯ್ರಾಂಡಿ ಉಳಿದುಕೊಂಡಿತ್ತು.  ಇದನ್ನು ಜ್ಯೂಸ್ ಎಂದು ಭಾವಿಸಿದ ಬಾಲಕ ಕುಡಿದಿದ್ದಾನೆ. ಮಗುವಿಗೆ ಉಸಿರು ಕಟ್ಟಲು ಆರಂಭವಾಗಿದ್ದು ಪೋಷಕರು ಗುರುತಿಸಿದ್ದಾರೆ. ಮೊಮ್ಮಗನ ಸ್ಥಿತಿ ಕಂಡ ಅಜ್ಜನಿಗೆ ತಾನೇ ತಪ್ಪು ಮಾಡಿದೆ ಎಂಬ ಭಾವನೆ ಉಂಟಾಗಿದ್ದು ಅವರು ಮೂರ್ಛೆ ಹೋಗಿದ್ದಾರೆ. ತಾತ ಆಸ್ತಮಾದಿಂದ (Asthma)ಬಳಲುತ್ತಿದ್ದರು.

ತಕ್ಷಣವೇ ಖಾಸಗಿ ಆಸ್ಪತ್ರೆಗೆ ತಾತ-ಮೊಮ್ಮಗನನ್ನು ಕರೆದುಕೊಂಡು ಹೋಗಲಾಗಿದೆ.  ಆದರೆ ತಾತ ಅಷ್ಟರಲ್ಲಿಯೇ ಮೃತಪಟ್ಟಿದ್ದರು. ನಂತರ ಬಾಲಕ ರುಕೇಶ್ ನನ್ನು ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು (ಸಿಎಮ್‌ಸಿ) ಆಸ್ಪತ್ರೆಗೆ ದಾಖಲಿಸಲಾಯಿತು ಆದರೆ ಚಿಕಿತ್ಸೆಗೆ ಸ್ಪಂದಿಸದೆ ಬಾಲಕ ಸಹ ಮೃತಪೊಟ್ಟ.

ಮರಣೋತ್ತರ ಪರೀಕ್ಷೆಗಾಗಿ(postmortem) ಪೊಲೀಸರು ಎರಡೂ ಶವಗಳನ್ನು ಸರ್ಕಾರಿ ವೆಲ್ಲೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದಾರೆ. ತಿರುವಳಂ ಪೊಲೀಸರು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ) ಸೆಕ್ಷನ್ 174 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಳೆದ ಜನವರಿಯಲ್ಲಿ ತಮಿಳುನಾಡಿನ  ಬಾಲಕನೋರ್ವ ಜ್ಯೂಸ್ ಎಂದುಕೊಂಡು ಸೀಮೆಎಣ್ಣೆಯನ್ನು ಕುಡಿದು ಮೃತಪಟ್ಟಿದ್ದ.  ತಿರುಚ್ಚಿಯಲ್ಲಿ ಈ ದುರಂತ ನಡೆದಿದ್ದು, ಜನವರಿ 3ರಂದು ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕ ಬಾಟಲಿಯಲ್ಲಿ ತುಂಬಿಟ್ಟಿದ್ದ ಸೀಮೆಎಣ್ಣೆಯನ್ನ ಕುಡಿದಿದ್ದಾನೆ. ಇದರಿಂದ ಆತನಿಗೆ ಹೊಟ್ಟೆನೋವು ಹಾಗೂ ವಾಂತಿ ಶುರುವಾಗಿತ್ತು. ಆಸ್ಪತ್ರೆಗೆ ಸೇರಿಸಿದರೂ ಪ್ರಯೋಜನವಾಗಿರಲಿಲ್ಲ. 

 

Follow Us:
Download App:
  • android
  • ios