ಪುಟಿನ್‌ನ್ನು ಯುದ್ಧಾಪರಾಧಿ ಎಂದು ಕರೆದಿದ್ದಕ್ಕೆ ಈ ಕ್ರಮ ಅಮೆರಿಕ ರಾಯಭಾರಿಯನ್ನು ಕರೆಸಿ ತನ್ನ ಪ್ರತಿಭಟನೆ ಜೋ ಬೈಡನ್ ಮಾತಿಗೆ ಕೆರಳಿ ಕೆಂಡವಾದ ರಷ್ಯಾ
ನ್ಯೂಯಾರ್ಕ್(ಮಾ.22): ಅಮೆರಿಕದ ಜೊತೆಗಿನ ರಷ್ಯಾದ ಸಂಬಂಧಗಳು ಉಲ್ಲಂಘಟನೆಯ ಸಮೀಪದಲ್ಲಿವೆ ಎಂದು ರಷ್ಯಾ ಅಮೆರಿಕಕ್ಕೆ ಎಚ್ಚರಿಗೆ ನೀಡಿದೆ. ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಅಮೆರಿಕ ಟೀಕಿಸಿದ್ದಕ್ಕಾಗಿ ಅಮೆರಿಕ ರಾಯಭಾರಿಯನ್ನು ಕರೆಸಿ ತನ್ನ ಪ್ರತಿಭಟನೆಯನ್ನು ಸಲ್ಲಿಸಿದೆ. ಈ ಕುರಿತಾಗಿ ಹೇಳಿಕೆ ಬಿಡುಗಡೆ ಮಾಡಿರುವ ರಷ್ಯಾ ವಿದೇಶಾಂಗ ಸಚಿವಾಲಯ ಅಮೆರಿಕ ಅಧ್ಯಕ್ಷ ಪುಟಿನ್‌ನನ್ನು ಟೀಕಿಸಿದ್ದನ್ನು ಉಲ್ಲೇಖಿಸಿದೆ.
ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ನಡೆಸಿದ ನಂತರ ನಾಗರಿಕರ ಮೇಲೆ ನಡೆದಿರುವ ಹಲ್ಲೆಗಳನ್ನು ಗಮನಿಸಿದ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಪುಟಿನ್‌ನ್ನು ಯುದ್ಧಾಪರಾಧಿ ಎಂದು ಕರೆದಿದ್ದರು. ಇದಕ್ಕೆ ತೀವ್ರ ಪ್ರತಿಟನೆ ವ್ಯಕ್ತಪಡಿಸಿರುವ ರಷ್ಯಾ ಮಾಸ್ಕೋದಲ್ಲಿ ಅಮೆರಿಕ ರಾಯಾಭಾರಿ ಜಾನ್ ಸುಲ್ಲಿವಾನ್ ಅವರೊಂದಿಗೆ ನಡೆಸಿದ ಸಭೆಯಲ್ಲಿ, ರಾಜ್ಯದ ಉನ್ನತ ವ್ಯಕ್ತಿಯಿಂದ ಬಂದಿರುವ ಇಂತಹ ಹೇಳಿಕೆಗಳು ಎರಡು ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧವನ್ನು ಅಂಚಿನಲ್ಲಿಟ್ಟಿದೆ ಎಂದು ರಷ್ಯಾ ಒತ್ತಿ ಹೇಳಿದೆ.
ಉಕ್ರೇನ್ ಆಸ್ಪತ್ರೆ ವಶಕ್ಕೆ ಪಡೆದು 400 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡ ರಷ್ಯಾ!
ಕೀವ್‌ಗಾಗಿ ಭಾರೀ ಸಂಘರ್ಷ
ರಷ್ಯಾವು ಉಕ್ರೇನ್‌ನ ರಾಜಧಾನಿಯನ್ನು ವಶಪಡಿಕೊಳ್ಳಲು ಪ್ರಯತ್ನಿಸುತ್ತಿರವ ಹಿನ್ನೆಲೆಯಲ್ಲಿ ಕೀವ್‌ನ ಉತ್ತರ ಭಾಗದಲ್ಲಿ ಭಾರೀ ಸಂಘರ್ಷ ಏರ್ಪಟ್ಟಿದೆ ಎಂದು ಬ್ರಿಟನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಈಶಾನ್ಯದಿಂದ ವಾಯುವ್ಯದತ್ತ ರಷ್ಯಾಪಡೆಗಳು ಮುನ್ನುಗುತ್ತಿದ್ದು ಇದಕ್ಕೆ ಉಕ್ರೇನ್ ಸೈನಿಕರು ತೀವ್ರ ಪ್ರತಿರೋಧ ಒಡ್ಡಿ ಅವರನ್ನು ಹಿಂದಕ್ಕೆ ಕಳಿಸಲಾಗಿದೆ. ಪ್ರಸ್ತುತ ಕೀವ್‌ನಿಂದ ರಷ್ಯಾ ಪಡೆಗಳು 25ಕಿ.ಮೀ ದೂರದಲ್ಲಿ ಮುಂದಿನ ದಿನಗಳಲ್ಲಿ ರಾಜಧಾನಿಯನ್ನು ಸುತ್ತುವರೆಯುವ ಸಾಧ್ಯತೆ ಇದೆ ಬ್ರಿಟನ್ ಅಧಿಕಾರಿಗಳು ತಿಳಿಸಿದ್ದಾರೆ.
ಸುಮಿಯಲ್ಲಿ ಅಮೋನಿಯಾ ಸೋರಿಕೆ
ಉಕ್ರೇನ್‌ನ ಸುಮಿ ನಗರದಲ್ಲಿರುವ ರಾಸಾಯನಿಕ ಸ್ಥಾವರದಲ್ಲಿ ಅಮೋನಿಯಾ ಸೋರಿಕೆಯಾಗಿದ್ದು ಸುಮಾರು 2.5 ಕಿ.ಮೀ ಪ್ರದೇಶ ಕಲುಷಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಈ ಸೋರಿಕೆಗೆ ಕಾರಣ ಏನು ಎಂದು ಈವರೆಗೂ ತಿಳಿದುಬಂದಿಲ್ಲ. ಸುಮಿಖಿಮೋಪ್ರೋಂ ಸ್ಥಾವರವು ನಗರದಿಂದ ಹೊರ ವಲಯದಲ್ಲಿದ್ದು ನಗರದ ಜನಸಂಖ್ಯೆ ಸುಮಾರು 2,63,000 ದಷ್ಟಿದೆ. ಕಳೆದ ಕೆಲವು ದಿನಗಳಿಂದ ರಷ್ಯಾ ಈ ಪ್ರದೇಶದ ಮೇಲ್ ಶೆಲ್‌ದಾಳಿ ಕೂಡ ನಡೆಸುತ್ತಿದೆ. ಈ ದಾಳಿಯಿಂದಲೇ ರಾಸಾಯನಿಕ ಸೋರಿಕೆಯಾಗಿರುವ ಶಂಕೆ ಇದೆ.
ತಕ್ಷಣವೇ ಉಕ್ರೇನ್ ಮೇಲಿನ ಆಕ್ರಮಣ ನಿಲ್ಲಿಸಿ, ರಷ್ಯಾಗೆ ಆದೇಶ ನೀಡಿದ ಅಂತಾರಾಷ್ಟ್ರೀಯ ಕೋರ್ಟ್ !
ಉಕ್ರೇನ್ ಮೇಲೆ ರಷ್ಯಾ ಶಬ್ದಾತೀತ ಕ್ಷಿಪಣಿ ದಾಳಿ
ಮೂರು ವಾರ ಕಳೆದರೂ ಉಕ್ರೇನನ್ನು ಮಣಿಸಲು ಸಾಧ್ಯವಾಗದೆ ಸಿಟ್ಟಿಗೆದ್ದಿರುವ ರಷ್ಯಾ ಭಾನುವಾರ ಸತತ ಎರಡನೇ ದಿನ ಶಬ್ದಾತೀತ ಕ್ಷಿಪಣಿ ‘ಕಿಂಝಾಲ್’ ಬಳಸಿ ಮಾರಕ ದಾಳಿ ನಡೆಸಿದೆ. ಶನಿವಾರ ಡೆಲಿಟ್ಯನ್ ಎಂಬ ಸ್ಥಳದಲ್ಲಿರುವ ಭೂಗತ ಶಶಾತ್ರಸ್ತ್ರ ಸಂಗ್ರಹಾಗಾರದ ಮೇಲೆ ಕಿಂಝಾಲ್ ದಾಳಿ ನಡೆಸಿದ್ದ ರಷ್ಯಾ, ಭಾನುವಾರ ಕೋಸ್ತಿಯಾಂತಿನಿವ್ಕಾ ಎಂಬಲ್ಲಿರುವ ತೈಲ ಸಂಗ್ರಹಾಗಾರದ ಮೇಲೆ ಅದೇ ಕ್ಷಿಪಣಿ ಬಳಸಿ ಬಾಂಬ್ ದಾಳಿ ನಡೆಸಿ ನಾಶಗೈದಿದೆ. ಇದನ್ನು ಸ್ವತಃ ರಷ್ಯಾದ ಮಿಲಿಟರಿಯೇ ಅಧಿಕೃತವಾಗಿ ತಿಳಿಸಿದೆ.
ಕಿಂಝಾಲ್ ಕ್ಷಿಪಣಿಯು ಶಬ್ದಕ್ಕಿಂತ 10 ಪಟ್ಟು ಹೆಚ್ಚು ವೇಗದಲ್ಲಿ ಧಾವಿಸುವ ಶಕ್ತಿ ಹೊಂದಿದ್ದು, 2000 ಕಿ.ಮೀ. ದೂರದಲ್ಲಿರುವ ಗುರಿಯ ಮೇಲೂ ದಾಳಿ ನಡೆಸುತ್ತದೆ. ಭಾನುವಾರ ಎರಡನೇ ಬಾರಿ ಈ ಕ್ಷಿಪಣಿಯನ್ನು ಉಕ್ರೇನ್ ಮೇಲೆ ಬಳಸಿರುವುದಾಗಿ ರಷ್ಯಾದ ರಕ್ಷಣಾ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
