Asianet Suvarna News Asianet Suvarna News

Russia Ukraine War ತಕ್ಷಣವೇ ಉಕ್ರೇನ್ ಮೇಲಿನ ಆಕ್ರಮಣ ನಿಲ್ಲಿಸಿ, ರಷ್ಯಾಗೆ ಆದೇಶ ನೀಡಿದ ಅಂತಾರಾಷ್ಟ್ರೀಯ ಕೋರ್ಟ್ !

ಉಕ್ರೇನ್ ದೇಶದ ಮೇಲೆ ರಷ್ಯಾದ ಆಕ್ರಮಣ

ತಕ್ಷಣವೇ ಕಾರ್ಯಾಚರಣೆಯನ್ನು ನಿಲ್ಲಿಸಿ

ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ ನಿಂದ ಆದೇಶ

international court of justice orders russia to suspend ukraine invasion san
Author
Bengaluru, First Published Mar 16, 2022, 9:26 PM IST | Last Updated Mar 16, 2022, 10:35 PM IST

ದಿ ಹೇಗ್, ನೆದರ್ಲೆಂಡ್ಸ್ (ಮಾ. 16): ಮಹತ್ವದ ಆದೇಶದಲ್ಲಿ, ನೆದರ್‌ಲ್ಯಾಂಡ್ಸ್‌ನ ( Netherlands ) ಹೇಗ್‌ನಲ್ಲಿರುವ ( The Hague ) ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಬುಧವಾರ,  ಸಾರ್ವಭೌಮ ರಾಷ್ಟ್ರ ಉಕ್ರೇನ್ ( Ukraine ) ಮೇಲಿನ ಆಕ್ರಮಣವನ್ನು ರಷ್ಯಾ ( Russia ) ತಕ್ಷಣವೇ ನಿಲ್ಲಿಸಬೇಕು ಎಂದು ಸೂಚನೆ ನೀಡಿದೆ.

" ಈ ಪ್ರಕರಣದಲ್ಲಿ ಇನ್ನೂ ಅಂತಿಮ ನಿರ್ಧಾರ ಬಾಕಿ ಉಳಿದಿದ್ದು, ರಷ್ಯಾದ ಒಕ್ಕೂಟವು, ಉಕ್ರೇನ್ ದೇಶದ ಮೇಲೆ ಆರಂಭಿಸಿರುವ ಸೇನಾ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು" ಎಂದು ಅದೇಶ ನೀಡಿದೆ. "ರಷ್ಯಾದ ಒಕ್ಕೂಟವು ಮಿಲಿಟರಿ (Russia Federation Military ) ಅಥವಾ ಅದು ನಿರ್ದೇಶಿಸುವ ಅಥವಾ ಬೆಂಬಲಿಸುವ ಯಾವುದೇ ಅನಿಯಮಿತ ಸಶಸ್ತ್ರ ಘಟಕಗಳು ಉಕ್ರೇನ್ ನೆಲದಲ್ಲಿ ಇರಬಾರದು ಎಂದು ಹೇಳಿದೆ.

ವಿಶ್ವಸಂಸ್ಥೆಯ ( United Nations ) ಅತ್ಯುನ್ನತ ನ್ಯಾಯಾಲಯವಾಗಿರುವ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ (ICJ), ರಷ್ಯಾ ತನ್ನ ಆಕ್ರಮಣವನ್ನು ( invasion ) ನಿಲ್ಲಿಸಲು ಉಕ್ರೇನ್ ಮಾಡಿದ ತುರ್ತು ಮನವಿಯ ಮೇಲೆ ಬುಧವಾರ ತೀರ್ಪು ನೀಡಿದೆ. 13-2 ಮತಗಳಿಂದ, ರಷ್ಯಾದ ಒಕ್ಕೂಟವು ಫೆಬ್ರವರಿ 24 ರಂದು ಪ್ರಾರಂಭವಾದ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ತೀರ್ಪು ಹೇಳಿದೆ. ವರದಿಗಳ ಪ್ರಕಾರ, ರಷ್ಯಾ ಮತ್ತು ಚೀನಾದ  (China) ನ್ಯಾಯಾಧೀಶರು ಮಾತ್ರ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು.


ಫೆಬ್ರವರಿ 24 ರಂದು ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದ ನಂತರ ನ್ಯಾಯಾಲಯ ನೀಡಿರುವ ಆದೇಶ, ಅಂತರರಾಷ್ಟ್ರೀಯ ನ್ಯಾಯಾಲಯ ( International Court of Justice ) ನೀಡಿದ ಮೊದಲ ತೀರ್ಪು ಎನಿಸಿದೆ.  ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ( Volodymyr Zelenskyy) ಅವರು ಟ್ವಿಟರ್‌ನಲ್ಲಿ ಸುದ್ದಿಯನ್ನು ಸ್ವಾಗತ ಮಾಡಿದ್ದಾರೆ. "ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ರಷ್ಯಾ ವಿರುದ್ಧದ ಪ್ರಕರಣದಲ್ಲಿ ಉಕ್ರೇನ್ ಸಂಪೂರ್ಣ ಜಯ ಸಾಧಿಸಿದೆ. ಆಕ್ರಮಣವನ್ನು ತಕ್ಷಣವೇ ನಿಲ್ಲಿಸಲು ಐಸಿಜೆ ಆದೇಶ ನೀಡಿದೆ. ಆದೇಶವು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಬದ್ಧವಾಗಿದೆ. ರಷ್ಯಾ ಇದನ್ನು ಪಾಲಿಸಬೇಕು, ಆದೇಶವನ್ನು ನಿರ್ಲಕ್ಷ್ಯ ಮಾಡಿದಲ್ಲಿ, ರಷ್ಯಾ ವಿಶ್ವದಿಂದ ಮತ್ತಷ್ಟು ಪ್ರತ್ಯೇಕವಾಗಲಿದೆ ಎಂದು ಬರೆದುಕೊಂಡಿದ್ದಾರೆ.

ಭಾರಿ ರಿಯಾಯಿತಿಯಲ್ಲಿ ಭಾರತಕ್ಕೆ 3.5 ಮಿಲಿಯನ್ ಬ್ಯಾರಲ್ Crude Oil ಮಾರಲು ಸಜ್ಜಾದ ರಷ್ಯಾ!
ಐಸಿಜೆ ವ್ಯಾಪ್ತಿಗೆ ಬರುವ ಪ್ರಕರಣಗಳು ಯಾವುದು: ಉಕ್ರೇನ್‌ ಮಾಡಿರುವ ಕೋರಿಕೆಯು ನ್ಯಾಯಾಲಯದ ವ್ಯಾಪ್ತಿಗೆ ಒಳಪಡುತ್ತದೆ ಎಂದೂ ಐಸಿಜೆ ಹೇಳಿದೆ. 2ನೇ ಮಹಾಯುದ್ಧದ ಬಳಿಕ, ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ನಡುವೆ ಏರ್ಪಡುವ ವಿವಾದಗಳನ್ನು ಇತ್ಯರ್ಥಪಡಿಸಲು ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ ಅನ್ನು ಸ್ಥಾಪಿಸಲಾಗಿತ್ತು. ಐಸಿಜೆ ನೀಡುವ ತೀರ್ಪುಗಳಿಗೆ ಬದ್ಧವಾರಗಿರಬೇಕು ಎಂದು ಹೇಳಲಾಗುತ್ತದೆಯಾದರೂ, ದೇಶಗಳಲ್ಲಿ ಅವುಗಳನ್ನು ಜಾರಿಗೊಳಿಸಲು ಯಾವುದೇ ಕಾರ್ಯನಿರ್ವಾಹಕ ವಿಧಾನಗಳಿಲ್ಲ.

ರಷ್ಯಾದ ವಿರುದ್ಧ  ಅಂತರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ನಲ್ಲಿ ಉಕ್ರೇನ್ ಹೂಡಿರುವ  ಯುದ್ಧಾಪರಾಧಗಳ ತನಿಖೆಯಿಂದ ಈ ಪ್ರಕರಣವು ಪ್ರತ್ಯೇಕವಾಗಿದೆ, ಇದು ಹೇಗ್‌ನಲ್ಲಿರುವ ಪ್ರತ್ಯೇಕ ನ್ಯಾಯಮಂಡಳಿಯಾಗಿದೆ.

'ಭಾರತ, ಚೀನಾ ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧ ಮತ ಚಲಾಯಿಸಬೇಕು, ಪುಟಿನ್ ನಡೆ ಸರಿಯಲ್ಲ'
ಇನ್ನು ಬುಧವಾರ ಐಸಿಜಿ ಆದೇಶದ ನಡುವೆಯೂ ಉಕ್ರೇನ್ ನ ರಾಜಧಾನಿ ಕೈವ್ ನಲ್ಲಿರುವ ಜನವಸತಿ ಪ್ರದೇಶಗಳ ಮೇಲೆ ರಷ್ಯಾ ದಾಳಿ ನಡೆಸಿದೆ. ನಿರಾಶ್ರಿತರಾಗಿ ಉಕ್ರೇನ್ ನಿಂದ ಪಲಾಯನ ಮಾಡಿದವರ ಸಂಖ್ಯೆ ಅಂದಾಜು 30 ಲಕ್ಷಕ್ಕೆ ಏರಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಛೇರಿಯು ಇಲ್ಲಿಯವರೆಗೆ 691 ಜನರು ಸಾವನ್ನಪ್ಪಿದ್ದಾರೆ ಮತ್ತು 1,143 ಜನರು ಗಾಯಗೊಂಡಿದ್ದಾರೆ ಎಂದು ವರದಿ ಮಾಡಿದೆ, 

 

Latest Videos
Follow Us:
Download App:
  • android
  • ios