Asianet Suvarna News Asianet Suvarna News

Russia-Ukraine War: ಉಕ್ರೇನ್ ಆಸ್ಪತ್ರೆ ವಶಕ್ಕೆ ಪಡೆದು 400 ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡ ರಷ್ಯಾ!

ಮಾರಿಯುಪೋಲ್ ಆಸ್ಪತ್ರೆಯನ್ನು  ರಷ್ಯಾ ಸೇನೆ ವಶಕ್ಕೆ ಪಡೆದಿದ್ದು, ಆಸ್ಪತ್ರೆಯಲ್ಲಿದ್ದ 400 ಮಂದಿಯನ್ನು ಒತ್ತೆಯಾಳುಗಳಾಗಿರಿಸಿಕೊಂಡಿದೆ  ಎಂದು ಉಕ್ರೇನ್ ಆರೋಪಿಸಿದೆ. 
 

Ukrainian officials say  Russian  holding 400 people include  hospital patients and staff  in Mariupol gow
Author
Bengaluru, First Published Mar 16, 2022, 11:00 PM IST | Last Updated Mar 16, 2022, 11:00 PM IST

ಕೈವ್: ರಷ್ಯಾ-ಉಕ್ರೇನ್ (Russia - Ukraine ) ನಡುವಿನ ಯುದ್ಧ 21ನೇ ದಿನಕ್ಕೆ ಕಾಲಿಟ್ಟಿದ್ದು, ಮಾರಿಯುಪೋಲ್ ( Mariupol) ಆಸ್ಪತ್ರೆಯನ್ನು  ರಷ್ಯಾ ಸೇನೆ ವಶಕ್ಕೆ ಪಡೆದಿದ್ದು, ಆಸ್ಪತ್ರೆಯಲ್ಲಿದ್ದ 400 ಮಂದಿಯನ್ನು ಒತ್ತೆಯಾಳುಗಳಾಗಿರಿಸಿಕೊಂಡಿದೆ. ಉಕ್ರೇನಿಯನ್ ನಗರಗಳಲ್ಲಿ ರಷ್ಯಾ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದ್ದು, ದಾಳಿಯ ಮಧ್ಯೆ ಹಲವು ಭಾರತೀಯರು ಸಿಕ್ಕಿಬಿದ್ದಿದ್ದರು. ಅವರನ್ನು ರಷ್ಯಾದ ನಗರಗಳ ಮೂಲಕ ಮರಳಿ ತರಲಾಗುತ್ತಿದೆ. ಖೆರ್ಸನ್‌ನಲ್ಲಿ ಸಿಲುಕಿರುವ 3 ಭಾರತೀಯರನ್ನು ಸಿಮ್ಫೆರೋಪೋಲ್ ಮತ್ತು ಮಾಸ್ಕೋ ಮೂಲಕ ಸ್ಥಳಾಂತರಿಸಲಾಯಿತು.

ಈ ನಡುವೆ ಮಾರಿಯುಪೋಲ್‌ನಲ್ಲಿರುವ ಅತಿದೊಡ್ಡ ಆಸ್ಪತ್ರೆಯನ್ನು ರಷ್ಯಾ ವಶಪಡಿಸಿಕೊಂಡಿದೆ. ವೈದ್ಯರು ಮತ್ತು ರೋಗಿಗಳು ಸೇರಿದಂತೆ 400 ಜನರನ್ನು ರಷ್ಯಾದ ಪಡೆಗಳು ಒತ್ತೆಯಾಳಾಗಿಸಿಕೊಂಡಿದ್ದಾರೆ ಎಂದು ಇಲ್ಲಿನ ಅಧಿಕಾರಿಗಳು ಹೇಳಿದ್ದಾರೆ. ಅವರನ್ನು ಹೊರಗೆ ಹೋಗಲು ಬಿಡುತ್ತಿಲ್ಲ ಎಂದು ಉಕ್ರೇನ್ ಆರೋಪಿಸಿದೆ.

ಉಕ್ರೇನ್ ವೈದ್ಯಕೀಯ ವಿಶ್ವವಿದ್ಯಾಲಯಗಳಿಂದ ಆನ್‌ಲೈನ್ ತರಗತಿ: ಭಾರತೀಯ ವಿದ್ಯಾರ್ಥಿಗಳು ನಿರಾಳ

ಮಾಕ್ಸರ್ ಒದಗಿಸಿದ ಉಪಗ್ರಹ ಚಿತ್ರಗಳು ಮಾರ್ಚ್ 9 ರಂದು ದಾಳಿಯ ಮೊದಲು ಮತ್ತು ನಂತರ ಮಾರ್ಚ್ 12 ರಂದು ದಾಳಿಯ ನಂತರ ಮಕ್ಕಳ ಆಸ್ಪತ್ರೆ ಮತ್ತು ವೈದ್ಯಕೀಯ ಕಟ್ಟಡಗಳನ್ನು ತೋರಿಸುತ್ತಿದ್ದು, ದಾಳಿ ಬಳಿಕ ಕಟ್ಟಡಕ್ಕಾದ ಹಾನಿಯನ್ನು ಇನು ತೋರಿಸುತ್ತಿದೆ.

ಇನ್ನು ಗೊತ್ತುಪಡಿಸಿದ ಸುರಕ್ಷಿತ ಕಾರಿಡಾರ್ ಮೂಲಕ ಸುಮಾರು 20,000 ಜನರು 4,000 ಖಾಸಗಿ ವಾಹನಗಳಲ್ಲಿ ಮಾರಿಯುಪೋಲ್ ಅನ್ನು ತೊರೆಯಲು ಯಶಸ್ವಿಯಾಗಿದ್ದಾರೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಹಿರಿಯ ಸಹಾಯಕ ಕೈರಿಲೊ ಟಿಮೊಶೆಂಕೊ ಹೇಳಿದ್ದಾರೆ. 

Russia-Ukraine War: 20 ದಿನವಾದರೂ ನಿಲ್ಲದ ಯುದ್ಧ: ಅಕ್ಷರಶಃ ಸ್ಮಶಾನವಾದ ಉಕ್ರೇನ್‌..!

ತಕ್ಷಣವೇ ಉಕ್ರೇನ್ ಮೇಲಿನ ಆಕ್ರಮಣ ನಿಲ್ಲಿಸಿ, ರಷ್ಯಾಗೆ ಆದೇಶ ನೀಡಿದ ಅಂತಾರಾಷ್ಟ್ರೀಯ ಕೋರ್ಟ್ ! : ಮಹತ್ವದ ಆದೇಶದಲ್ಲಿ, ನೆದರ್‌ಲ್ಯಾಂಡ್ಸ್‌ನ ( Netherlands ) ಹೇಗ್‌ನಲ್ಲಿರುವ ( The Hague ) ಅಂತರರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಬುಧವಾರ,  ಸಾರ್ವಭೌಮ ರಾಷ್ಟ್ರ ಉಕ್ರೇನ್ ( Ukraine ) ಮೇಲಿನ ಆಕ್ರಮಣವನ್ನು ರಷ್ಯಾ ( Russia ) ತಕ್ಷಣವೇ ನಿಲ್ಲಿಸಬೇಕು ಎಂದು ಸೂಚನೆ ನೀಡಿದೆ.

" ಈ ಪ್ರಕರಣದಲ್ಲಿ ಇನ್ನೂ ಅಂತಿಮ ನಿರ್ಧಾರ ಬಾಕಿ ಉಳಿದಿದ್ದು, ರಷ್ಯಾದ ಒಕ್ಕೂಟವು, ಉಕ್ರೇನ್ ದೇಶದ ಮೇಲೆ ಆರಂಭಿಸಿರುವ ಸೇನಾ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು" ಎಂದು ಅದೇಶ ನೀಡಿದೆ. "ರಷ್ಯಾದ ಒಕ್ಕೂಟವು ಮಿಲಿಟರಿ (Russia Federation Military ) ಅಥವಾ ಅದು ನಿರ್ದೇಶಿಸುವ ಅಥವಾ ಬೆಂಬಲಿಸುವ ಯಾವುದೇ ಅನಿಯಮಿತ ಸಶಸ್ತ್ರ ಘಟಕಗಳು ಉಕ್ರೇನ್ ನೆಲದಲ್ಲಿ ಇರಬಾರದು ಎಂದು ಹೇಳಿದೆ.

 


ವಿಶ್ವಸಂಸ್ಥೆಯ ( United Nations ) ಅತ್ಯುನ್ನತ ನ್ಯಾಯಾಲಯವಾಗಿರುವ ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್ (ICJ), ರಷ್ಯಾ ತನ್ನ ಆಕ್ರಮಣವನ್ನು ( invasion ) ನಿಲ್ಲಿಸಲು ಉಕ್ರೇನ್ ಮಾಡಿದ ತುರ್ತು ಮನವಿಯ ಮೇಲೆ ಬುಧವಾರ ತೀರ್ಪು ನೀಡಿದೆ. 13-2 ಮತಗಳಿಂದ, ರಷ್ಯಾದ ಒಕ್ಕೂಟವು ಫೆಬ್ರವರಿ 24 ರಂದು ಪ್ರಾರಂಭವಾದ ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಎಂದು ತೀರ್ಪು ಹೇಳಿದೆ. ವರದಿಗಳ ಪ್ರಕಾರ, ರಷ್ಯಾ ಮತ್ತು ಚೀನಾದ  (China) ನ್ಯಾಯಾಧೀಶರು ಮಾತ್ರ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು.

ಫೆಬ್ರವರಿ 24 ರಂದು ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದ ನಂತರ ನ್ಯಾಯಾಲಯ ನೀಡಿರುವ ಆದೇಶ, ಅಂತರರಾಷ್ಟ್ರೀಯ ನ್ಯಾಯಾಲಯ ( International Court of Justice ) ನೀಡಿದ ಮೊದಲ ತೀರ್ಪು ಎನಿಸಿದೆ.  ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ( Volodymyr Zelenskyy) ಅವರು ಟ್ವಿಟರ್‌ನಲ್ಲಿ ಸುದ್ದಿಯನ್ನು ಸ್ವಾಗತ ಮಾಡಿದ್ದಾರೆ. "ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ರಷ್ಯಾ ವಿರುದ್ಧದ ಪ್ರಕರಣದಲ್ಲಿ ಉಕ್ರೇನ್ ಸಂಪೂರ್ಣ ಜಯ ಸಾಧಿಸಿದೆ. ಆಕ್ರಮಣವನ್ನು ತಕ್ಷಣವೇ ನಿಲ್ಲಿಸಲು ಐಸಿಜೆ ಆದೇಶ ನೀಡಿದೆ. ಆದೇಶವು ಅಂತರರಾಷ್ಟ್ರೀಯ ಕಾನೂನಿನ ಅಡಿಯಲ್ಲಿ ಬದ್ಧವಾಗಿದೆ. ರಷ್ಯಾ ಇದನ್ನು ಪಾಲಿಸಬೇಕು, ಆದೇಶವನ್ನು ನಿರ್ಲಕ್ಷ್ಯ ಮಾಡಿದಲ್ಲಿ, ರಷ್ಯಾ ವಿಶ್ವದಿಂದ ಮತ್ತಷ್ಟು ಪ್ರತ್ಯೇಕವಾಗಲಿದೆ ಎಂದು ಬರೆದುಕೊಂಡಿದ್ದಾರೆ.

Latest Videos
Follow Us:
Download App:
  • android
  • ios