* ಉಕ್ರೇನ್- ರಷ್ಯಾ ನಡುವಿನ ಯುದ್ಧ ಐದನೇ ದಿನಕ್ಕೆ* ಸಾವು ನೋವಿನಿಂದ ನಲುಗುತ್ತಿದೆ ಉಕ್ರೇನ್* ಯುದ್ಧದ ಮಧ್ಯೆ ವೈರಲ್ ಆಗ್ತಿದೆ ಹಳೇ ವಿಡಿಯೋ
ಕೀವ್(ಫೆ.28): ಉಕ್ರೇನ್ ಮತ್ತು ರಷ್ಯಾ ನಡುವೆ ನಡೆಯುತ್ತಿದೆ. ಯುದ್ಧದಿಂದಾಗಿ ಸಾವಿರಾರು ಅಮಾಯಕರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರು ತಮ್ಮ ಮನೆಗಳನ್ನು ತೊರೆಯುವಂತೆ ಒತ್ತಾಯಿಸಲಾಗಿದೆ. ಆದರೆ ರಷ್ಯಾ ನಡೆ ದಿನದಿಂದ ದಿನಕ್ಕೆ ಹೆಚ್ಚು ಆಕ್ರಮಣಕಾರಿಯಾಗುತ್ತಿದೆ. ಮತ್ತೊಂದೆಡೆ ಉಕ್ರೇನ್‌ನ ಜನರು ತಮ್ಮ ಮಾತೃಭೂಮಿಗಾಗಿ ಕೊನೆಯುಸಿರು ಇರುವವರೆಗೂ ಹೋರಾಡುತ್ತೇವೆ, ನಾವು ತಲೆಬಾಗುವುದಿಲ್ಲ ಎಂದು ಹೇಳುತ್ತಿದ್ದಾರೆ. ಏತನ್ಮಧ್ಯೆ, ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋ ಒಂದು ಭಾರೀ ವೈರಲ್ ಆಗಿದೆ, ಇದರಲ್ಲಿ ಪುಟ್ಟ ಬಾಲಕಿಯೊಬ್ಬಳು ಸೈನಿಕನಿಗೇ ಎದುರು ನಿಂತು ಬೆದರಿಸುವ ದೃಶ್ಯಗಳಿವೆ. ಆದರೆ ಉಕ್ರೇನ್ ರಷ್ಯಾ ಯುದ್ಧದ ಸಂದರ್ಭದಲ್ಲಿ ವೈರಲ್ ಆದ ಈ ವಿಡಿಯೋ ಹತ್ತು ವರ್ಷ ಹಳೆಯದ್ದಾಗಿದ್ದು, ವಾಸ್ತವವಾಗಿ ಇದು ಪಾಲೆಸ್ತೀನ್‌ನಲ್ಲಿ ನಡೆದ ಘಟನೆಯ ವಿಡಿಯೋ ಆಗಿದೆ.
ಮಾತೃಭೂಮಿಗಾಗಿ ಸಾಯಲು ಸಿದ್ಧ
ವೈರಲ್ ಆಗಿರುವ ವಿಡಿಯೋದಲ್ಲಿ ಸೈನಿಕನೊಬ್ಬ ಆಯುಧ ಹಿಡಿದು ನಿಂತಿರುವುದನ್ನು ಕಾಣಬಹುದು. ಒಬ್ಬ ಹುಡುಗಿ ಅವನ ಮುಂದೆ ನಿಂತಿದ್ದಾಳೆ ಮತ್ತು ಇದ್ದಕ್ಕಿದ್ದಂತೆ ಅವಳು ಸೈನಿಕನನ್ನು ಹೊಡೆಯಲು ಪ್ರಾರಂಭಿಸುತ್ತಾಳೆ. ಹುಡುಗಿಯನ್ನು ನೋಡಿದಾಗ ಅವಳಿಗೆ ಸಾಯುವ ಭಯವೂ ಇಲ್ಲ, ಸೈನಿಕನ ಭಯವೂ ಇಲ್ಲ ಎಂದು ತೋರುತ್ತದೆ. ತಾಯ್ನಾಡಿಗಾಗಿ ಎಲ್ಲವನ್ನೂ ತ್ಯಾಗ ಮಾಡಲು ಸಿದ್ಧಳಾಗಿ ಆಕೆ ನಿಂತಿದ್ದಾಳೆ. ವೀಡಿಯೋ ನೋಡಿದಾಗಲೇ ಯೋಧನಿಗೆ ದೇಶ ತೊರೆಯುವಂತೆ ನಿರಂತರವಾಗಿ ಹೇಳುತ್ತಿದ್ದರೂ ಯೋಧ ಸುಮ್ಮನಿದ್ದು, ನಗುನಗುತ್ತಲೇ ಹೊರಟು ಹೋಗಿದ್ದಾನೆ.
ಯುದ್ಧ ನಿಲ್ಲಿಸಿ ಎಂದು ಮುದ್ದಾಗಿ ಹೇಳಿದ ಪುಟ್ಟ ಬಾಲೆ
ವಾಸ್ತವವಾಗಿ ಈ ವಿಡಿಯೋ 2012ದ್ದಾಗಿದ್ದು, ಇದರಲ್ಲಿ ಪ್ಯಾಲೇಸ್ತೀನ್‌ನ ಸಾಮಾಜಿಕ ಕಾರ್ಯಕರ್ತೆ ತಮಿಮಿ, ಇಸ್ರೇಲ್ ಸೈನಿಕನನ್ನು ಎದುರಾಕ್ಕೊಂಡ ದೃಶ್ಯಗಳಿವೆ. 2017 ರಲ್ಲಿ ಈ ಬಾಲಕಿಯನ್ನು ಇಸ್ರೇಲಿ ಸೈನಿಕರು ಬಂಧಿಸಿದ್ದರೆಂಬುವುದು ಉಲ್ಲೇಖನೀಯ. ಅದರೆ ರಷ್ಯಾ ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಉಕ್ರೇನಿಯನ್ ಬಾಲಕಿ ಎಂಬ ತಪ್ಪು ಮಾಹಿತಿಯೊಂದಿಗೆ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಜೀವ ಉಳಿಸಿಕೊಳ್ಳಲು 20 ಗಂಟೆ ನಡೆದು ಪೊಲ್ಯಾಂಡ್ ತಲುಪಿದ ಉಕ್ರೇನ್ ವ್ಯಕ್ತಿ
ಒಳ್ಳೆಯ ದೇಶ ಹಾಳಾಗುತ್ತಿದೆ
ಇಂದು ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಐದನೇ ದಿನ ಎಂಬುವುದು ಗಮನಾರ್ಹ. ಈ ಯುದ್ಧದಿಂದಾಗಿ 200,000 ಕ್ಕೂ ಹೆಚ್ಚು ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಅದೇ ಸಮಯದಲ್ಲಿ, ಉಕ್ರೇನ್ ಹಾಗೂ ರಷ್ಯಾದ ಸೇನೆಯ 4300 ಸೈನಿಕರು ಇದುವರೆಗೆ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳಿಕೊಂಡಿದೆ. ಈ ಯುದ್ಧದಿಂದಾಗಿ 352 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಹೇಳಿದೆ. ಗುರುವಾರ (ಫೆಬ್ರವರಿ 24) ಭಾರತೀಯ ಕಾಲಮಾನ ಬೆಳಗ್ಗೆ 8.30ಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಮೇಲೆ ಮಿಲಿಟರಿ ಕ್ರಮವನ್ನು ಘೋಷಿಸಿದ್ದರು. ಇದಾದ ನಂತರ ರಷ್ಯಾ ಸೇನೆ ಉಕ್ರೇನ್ ಮೇಲೆ ವಾಯುದಾಳಿ ಆರಂಭಿಸಿತು. ಈ ದಾಳಿಗಳ ನಂತರ, ಉಕ್ರೇನ್‌ನ ರಾಜಧಾನಿ ಕೈವ್ ಹೊರತುಪಡಿಸಿ, ಖಾರ್ಕಿವ್, ಮರಿಯುಪೋಲ್ ಮತ್ತು ಒಡೆಸ್ಸಾದಲ್ಲಿ ಎಲ್ಲವೂ ನಾಶವಾಗಿರುವ ದೃಶ್ಯಗಳು ಗೋಷರಿಸಿದ್ದವು.
