ಜೀವ ಉಳಿಸಿಕೊಳ್ಳಲು ಉಕ್ರೇನ್‌ನಿಂದ ಪಲಾಯನ 20 ಗಂಟೆಗಳ ಕಾಲ ನಡೆದು ಪೊಲ್ಯಾಂಡ್ ತಲುಪಿದ ವ್ಯಕ್ತಿ ಟ್ವಿಟ್ಟರ್‌ನಲ್ಲಿ ವೈರಲ್‌ ಆಗ್ತಿವೆ ಯುದ್ಧದ ಮತ್ತೊಂದು ಮುಖ  

ಉಕ್ರೇನ್‌ ಮೇಲೆ ರಷ್ಯಾ ದಾಳಿ ಮಾಡಿದ ನಂತರ ಅಲ್ಲಿನ ಜನಜೀವನ ಸಂಪೂರ್ಣ ಹದಗೆಟ್ಟಿದ್ದು, ಭಯಭೀತಗೊಂಡಿರುವ ಜನರು ಜೀವ ಉಳಿಸಿಕೊಳ್ಳಲು ಪಕ್ಕದ ದೇಶಗಳಿಗೆ ಪಲಾಯನ ಮಾಡಲು ಹತಾಶ ಪ್ರಯತ್ನ ಮಾಡುತ್ತಿದ್ದಾರೆ. ಯುದ್ಧದ ದೃಶ್ಯಾವಳಿಗಳು ಒಂದು ಕಡೆಯಾದರೆ ಮತ್ತೊಂದೆಡೆ ಹೃದಯ ಹಿಂಡುವಂತಹ ಅನೇಕ ಘಟನೆಗಳು ಮುನ್ನೆಲೆಗೆ ಬರುತ್ತಿವೆ. ಮಗಳನ್ನು ಸುರಕ್ಷಿತ ಪ್ರದೇಶಕ್ಕೆ ಕಳುಹಿಸಿಕೊಡುವ ಮುನ್ನ ಬಿಕ್ಕಿ ಬಿಕ್ಕಿ ಅತ್ತ ತಂದೆ, ದೇಶಕ್ಕಾಗಿ ಗನ್ ಹಿಡಿದು ನಿಂತ ರೂಪದರ್ಶಿ, ಮುಂದಿನ ಪೀಳಿಗೆಯ ಉಳಿವಿಗಾಗಿ ಸೇನೆ ಸೇರಲು ಬಂದ 80 ವರ್ಷದ ವೃದ್ಧ ಹೀಗೆ ಮನಸ್ಸನ್ನು ಭಾರವಾಗಿಸುವ ಹಲವು ಘಟನೆಗಳು ಬೆಳಕಿಗೆ ಬರುತ್ತಿವೆ. 

ಉಕ್ರೇನ್‌ನ ಎಲ್ಲಾ ವಯೋಮಾನದ ಪುರುಷರು ಮತ್ತು ಮಹಿಳೆಯರು ರಷ್ಯಾ ಆಕ್ರಮಣದ ವಿರುದ್ಧ ಕೆಚ್ಚೆದೆಯ ಹೋರಾಟ ನಡೆಸುತ್ತಿರುವ ಕೆಲವು ದೃಶ್ಯಗಳನ್ನು ಈಗಾಗಲೇ ನೋಡಿರಬಹುದು. ಕೆಲವರು ಈಗ ನಡೆಯುತ್ತಿರುವ ಹೋರಾಟದ ಬಗ್ಗೆ ಜಗತ್ತಿಗೆ ತಿಳಿಸಲು ತಮ್ಮ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ದಾಖಲಿಸಲು ಪ್ರಾರಂಭಿಸಿದ್ದಾರೆ. ಈ ಮಧ್ಯೆ ವ್ಯಕ್ತಿಯೊಬ್ಬ ಜೀವ ಉಳಿಸಿಕೊಳ್ಳುವ ಸಲುವಾಗಿ ಬರೋಬರಿ 20 ಗಂಟೆಗಳ ಕಾಲ ನಡೆದಿದ್ದಾರೆ. ಇವರು ಉಕ್ರೇನ್‌ನ್‌ ಎಲ್ವಿವ್‌ನಿಂದ ಪೋಲ್ಯಾಂಡ್‌ ತಲುಪಲು 20 ಗಂಟೆಗಳ ಕಾಲ ನಡೆದಿದ್ದಾರೆ. 

Russia Ukraine Crisis: ಗೂಗಲ್, ಯುಟ್ಯೂಬ್‌ನಲ್ಲೂ ರಷ್ಯಾ ಮೀಡಿಯಾ ಬ್ಯಾನ್!

25 ವರ್ಷದ ಮನ್ನಿ ಮರೋಟ್ಟಾ (Manny Marotta) ಪಶ್ಚಿಮ ಉಕ್ರೇನ್‌ನ ಎಲ್ವಿವ್‌ನಿಂದ ಪೋಲಿಷ್ ಗಡಿಯನ್ನು ತಲುಪಲು ನಿರ್ಧರಿಸಿದ ಗುಂಪೊಂದರ ಭಾಗವಾಗಿದ್ದರು. ಇವರು ಯುದ್ಧ ನಿರಾಶ್ರಿತರೊಂದಿಗೆ ಸುಮಾರು 70 ಕಿಲೋ.ಮೀಟರ್‌ನಷ್ಟು ದೂರ ಕಾಲ್ನಡಿಗೆಯಲ್ಲೇ ಪ್ರಯಾಣಿಸಿದ್ದಾರೆ. Ukraine Conflict Live 2022 ಎಂಬ ಟ್ವಿಟ್ಟರ್‌ ಖಾತೆ ಈ ವಿಚಾರವನ್ನು ಹಂಚಿಕೊಂಡಿದೆ. ಈ ಟ್ವಿಟ್ಟರ್‌ ಪೇಜ್‌ ಯುದ್ಧದ ಮತ್ತೊಂದು ಕರಾಳ ಮುಖವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ. ಚಾಲಕರು, ನವಜಾತ ಶಿಶುಗಳು,ತಾಯಂದಿರು ಸೇರಿದಂತೆ ಅನೇಕರು ಬಲವಂತವಾಗಿ ಜೀವ ಉಳಿಸಿಕೊಳ್ಳಲು ಹೆಜ್ಜೆ ಹಾಕುತ್ತಿದ್ದಾರೆ. 

Scroll to load tweet…

25 ಕಿಲೋ. ಮೀಟರ್‌ಗೂ ಅಧಿಕ ದೂರ ವಾಹನಗಳು ಸಾಲು ನಿಂತಿವೆ. ಇವುಗಳಲ್ಲಿ ಬಹುತೇಕ ಇಂಧನಗಳು ಖಾಲಿಯಾಗಿವೆ. ಜನರು ಎಷ್ಟು ಸಾಧ್ಯವೋ ಅಷ್ಟು ವೇಗವಾಗಿ ಹೆಜ್ಜೆ ಹಾಕಿ ಸುರಕ್ಷಿತ ಪ್ರದೇಶಗಳನ್ನು ತಲುಪಲು ಯತ್ನಿಸುತ್ತಿದ್ದಾರೆ. ಇನ್ನೊಂದು ದೃಶ್ಯದಲ್ಲಿ ಮಹಿಳೆಯೊಬ್ಬರು ತಮ್ಮ ಗಂಡನನ್ನು ಸೇನೆಯಿಂದ ರಕ್ಷಿಸಿಕೊಳ್ಳಲು ಅವರ ವಿರುದ್ಧ ಜಗಳ ಮಾಡುತ್ತಿರುವುದು ಕಂಡು ಬಂತು. ಈ ವೇಳೆ ಆಕೆಯ ಕೆನ್ನೆಗೆ ಬಾರಿಸಿದ ಯೋಧ ಆಕೆಯ ಗಂಡನನ್ನು ಅಲ್ಲಿಂದ ಕರೆದುಕೊಂಡು ಹೋಗುತ್ತಾನೆ. ಇನ್ನೊಂದೆಡೆ ವೃದ್ಧ ಮಹಿಳೆಯೊಬ್ಬರು ಪೊಲೆಂಡ್‌ಗೆ ಹೊರಟು ನಿಂತಿದ್ದು, ಅವರು 80 ಕಿ.ಲೋ ಮೀಟರ್‌ ದೂರ ನಡೆದು ಸಾಗಲು ನಿರ್ಧರಿಸಿದ್ದಾರೆ ಎಂಬುದು ತಿಳಿದು ಬಂದಿದೆ. 

Russia Ukraine Crisis: ರಷ್ಯಾ ಮೇಲೆ ಮತ್ತಷ್ಟು ಆರ್ಥಿಕ ನಿರ್ಬಂಧಕ್ಕೆ ಸಿದ್ಧತೆ

ಇನ್ನು ಸಣ್ಣ ಕಂದಮ್ಮಗಳಿಗೆ ಈ ಪ್ರಯಾಣ ಭಾರಿ ದುಸ್ತರವೆನಿಸಿದೆ. ಏಕೆಂದರೆ ಅವರಿಗೆ ಇಲ್ಲಿ ಏನಾಗುತ್ತಿದೆ ಎಂಬುದು ತಿಳಿದಿಲ್ಲ. ಮತ್ತೊಂದೆಡೆ ಅಷ್ಟು ದೂರ ಪ್ರಯಾಣಿಸುವ ಸಾಮರ್ಥ್ಯವೂ ಇಲ್ಲ ಎಂದು ಮನ್ನಿ ಮರೋಟ್ಟಾ ಹೇಳಿದ್ದಾರೆ. ಇನ್ನು ಪೊಲೆಂಡ್ ತಲುಪಿದ ಮನ್ನಿ ಮರೋಟ್ಟಾ ಅವರನ್ನು ಸೇರಿದಂತೆ ಅನೇಕರನ್ನು ಅಲ್ಲಿನ ಸಮಿತಿಯೊಂದು ಸ್ವಾಗತಿಸಿದೆ ಎಂದು ತಿಳಿದು ಬಂದಿದೆ. ಇದೊಂದು ನನ್ನ ಜೀವನದ ಧೀರ್ಘ ಹಾಗೂ ಕೆಟ್ಟ ರಾತ್ರಿ. ನನಗೆ ಮಾತುಬಾರದಾಗಿದ್ದೇನೆ. ಅಂತೂ ಕೊನೆಗೂ ನಾನು ಪೊಲೆಂಡ್ ತಲುಪಿದ್ದೇನೆ ಇಲ್ಲಿನ ಸಮಿತಿಯೊಂದು ನಮಗೆ ಚಹಾ ನೀಡಿ ಸ್ವಾಗತಿಸಿತು. ಅದೊಂದು ರುಚಿಯಾದ ಟೀ ಆಗಿತ್ತು ಎಂದು ಅವರು ಹೇಳಿದ್ದಾರೆ.