ಯುದ್ಧ ನಿಲ್ಲಿಸುವಂತೆ ಮನವಿ ಮಾಡಿದ ಪುಟ್ಟ ಬಾಲೆ ಬಾಲಕಿಯ ವಿಡಿಯೋ ಸಂಪೂರ್ಣ ವೈರಲ್‌ ಜಾಗತಿಕ ಶಾಂತಿ ಬೇಕು ಎಂದ ಬಾಲಕಿ  

ರಷ್ಯಾ ಹಾಗೂ ಉಕ್ರೇನ್‌ ನಡುವಿನ ಯುದ್ಧ 5ನೇ ದಿನವೂ ಮುಂದುವರೆದಿದೆ. ಈ ಮಧ್ಯೆ ಪುಟ್ಟ ಮಗುವೊಂದು ಯುದ್ಧ ನಿಲ್ಲಿಸಿ ಎಂದು ಹೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣದಿಂದಾಗಿ ಅಲ್ಲಿನ ಜನ ಅಕ್ಷರಶ: ನರಕಯಾತನೆ ಅನುಭವಿಸುತ್ತಿದ್ದಾರೆ. ಉಕ್ರೇನಿಯನ್ನರು ಮತ್ತು ಯುದ್ಧದಂತಹ ಪರಿಸ್ಥಿತಿಯಲ್ಲಿ ಸಿಲುಕಿರುವ ಇತರ ದೇಶಗಳ ಜನರು ಸಹಾಯಕ್ಕಾಗಿ ಮತ್ತು ಸಾಮಾಜಿಕ ಜಾಲತಾಣಗಳ ಮೂಲಕ ಈ ಸಂಘರ್ಷವನ್ನು ನಿಲ್ಲಿಸಲು ಕೇಳುತ್ತಿದ್ದಾರೆ. ಯುದ್ಧವೂ ಉಕ್ರೇನ್‌ನಲ್ಲಿ ಭಯಾನಕ ಸ್ಥಿತಿ ನಿರ್ಮಾಣ ಮಾಡಿದ್ದು, ಉಕ್ರೇನ್‌ಗಾಗಿ ಪ್ರಪಂಚದಾದ್ಯಂತ ಜನ ಪ್ರಾರ್ಥಿಸುತ್ತಿದ್ದಾರೆ. ಜಾಗತಿಕ ದೇಶಗಳ ತೀವ್ರ ಒತ್ತಡದಿಂದಾಗಿ ವಿಶೇಷವಾಗಿ ರಷ್ಯಾ ಅಧ್ಯಕ್ಷ ಪುಟಿನ್ ಯುದ್ಧವನ್ನು ನಡೆಸಲು ಸಾಕಷ್ಟು ಹಿನ್ನಡೆಯನ್ನು ಎದುರಿಸುತ್ತಿದ್ದಾರೆ.

ಈ ಮಧ್ಯೆ ಪುಟ್ಟ ಬಾಲಕಿಯೊಬ್ಬಳು ಯುದ್ಧ ನಿಲ್ಲಿಸುವಂತೆ ಮತ್ತು ವಿಶ್ವಶಾಂತಿಗಾಗಿ ಮನವಿ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋದಲ್ಲಿ ಪುಟ್ಟ ಬಾಲಕಿ ಲಿಲಿ, ರಷ್ಯಾ ಉಕ್ರೇನ್ ಮಧ್ಯೆ ಸಂಘರ್ಷ ನಿಂತು ಶಾಂತಿ ಸ್ಥಾಪನೆಯಾಗಬೇಕು ಎಂದು ಹೇಳುತ್ತಾಳೆ. ಮಧ್ಯೆ ಭೂಮಿಯ ಮೇಲೆ ಶಾಂತಿಗಾಗಿ ಮನವಿ ಮಾಡುವ ಹುಡುಗಿ ಲಿಲಿಯನ್ನು ತೋರಿಸುತ್ತದೆ. ಇಂಗ್ಲೀಷ್‌ನಲ್ಲಿ ಪೀಸ್‌ ಎಂಬ ಪದಕ್ಕೆ ಶಾಂತಿ ಹಾಗೂ ತುಂಡು ಎಂಬ ಎರಡು ಅರ್ಥ ಇದ್ದು, ಬಾಲಕಿ ಇಲ್ಲಿ 'ನನಗೆ ಭೂಮಿಯ ಮೇಲೆ ಶಾಂತಿ ಬೇಕು, ಭೂಮಿಯ ತುಂಡುಗಳಲ್ಲ' (I want peace on Earth, not pieces of Earth) ಎಂದು ಹೇಳುತ್ತಾಳೆ. ನಾವೆಲ್ಲರೂ ಸಹೋದರರು ಮತ್ತು ಸಹೋದರಿಯರಾಗಿದ್ದು, ದಯವಿಟ್ಟು ಯುದ್ಧವನ್ನು ನಿಲ್ಲಿಸಿ ಎಂದು ಆಕೆ ಹೇಳುತ್ತಾಳೆ. 

Russia Ukraine Crisis: ರಷ್ಯಾ ಮೇಲೆ ಮತ್ತಷ್ಟು ಆರ್ಥಿಕ ನಿರ್ಬಂಧಕ್ಕೆ ಸಿದ್ಧತೆ

ಈ ವೀಡಿಯೊವನ್ನು ಬ್ರಿಟಾನಿ & ಲಿಲಿ ಎಂಬ ಪುಟದಿಂದ Instagram ನಲ್ಲಿ ಪೋಸ್ಟ್ ಮಾಡಲಾಗಿದೆ. ಈ ವಿಡಿಯೋವನ್ನು 1 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ನಾವು ಉಕ್ರೇನ್ ಮತ್ತು ಬಾಧಿತರಾದ ಎಲ್ಲಾ ಮುಗ್ಧ ಜೀವಗಳಿಗಾಗಿ ಪ್ರಾರ್ಥಿಸುತ್ತಿದ್ದೇವೆ ಎಂದು ಈ ವಿಡಿಯೋ ಪೋಸ್ಟ್ ಮಾಡಿ ಬರೆಯಲಾಗಿದೆ. ರಷ್ಯಾ-ಉಕ್ರೇನ್ ಮಹಾಯುದ್ಧ 5 ನೇ ದಿನಕ್ಕೆ ಕಾಲಿಟ್ಟಿದೆ. ರಷ್ಯಾದ ಬೃಹತ್ ಸೈನ್ಯದ ಎದುರು, ಪುಟ್ಟ ದೇಶ ಉಕ್ರೇನ್ ಪ್ರತಿರೋಧ ತೋರುತ್ತಿದೆ. ರಷ್ಯಾದ 4500 ಯೋಧರನ್ನು ಬಲಿ ಪಡೆದಿದ್ದೇವೆ ಎಂದಿದೆ ಉಕ್ರೇನ್. 150 ಯುದ್ಧದ ಟ್ಯಾಂಕರ್, 700 ಶಸ್ತ್ರಾಸ್ತ್ರ ವಾಹನಗಳು, 60 ಇಂಧನ ಟ್ಯಾಂಕರ್, 1 ಕ್ಷಿಪಣಿ ಉಡಾವಣಾ ವಾಹನವನ್ನು ಧ್ವಂಸಗೊಳಿಸಿದ್ದೇವೆ ಎಂದು ಉಕ್ರೇನ್ ರಕ್ಷಣಾ ಇಲಾಖೆ ಹೇಳಿದೆ. ಇನ್ನು ಭಾರತಕ್ಕೆ ವಾಪಸ್ಸಾಗಲು 406 ಕನ್ನಡಿಗರು ನೋಂದಣಿ ಮಾಡಿಸಿದ್ದಾರೆ. 

View post on Instagram

ಇನ್ನೊಂದೆಡೆ ಇಡೀ ವಿಶ್ವದಲ್ಲಿ ಆತಂಕ ಹುಟ್ಟು ಹಾಕಿರುವ ರಷ್ಯಾ ಉಕ್ರೇನ್‌ ಯುದ್ಧ ನಿಧಾನವಾಗಿ ಸಂಧಾನದ ಮೂಲಕ ಶೀಘ್ರವೇ ಇತ್ಯರ್ಥವಾಗುವ ಸುಳಿವು ಸಿಕ್ಕಿದೆ. ಬೆಲಾರಸ್‌ಗೆ ಉಕ್ರೇನ್ ಅಧಿಕಾರಿಗಳ ನಿಯೋಗ ಆಗಮಿಸಿದೆ. ಉಕ್ರೇನ್ ಸಂಧಾನಕ್ಕೆ ಬರದಿದ್ರೆ ಮುಂದಿನ ಅನಾಹುತಗಳಿಗೆ ನಾವು ಜವಾಬ್ದಾರರಲ್ಲ ಎಂದಿದೆ ರಷ್ಯಾ. ಹಾಗಾಗಿ ಇಂದು ಸಂಧಾನವಾಗುವ ಎಲ್ಲಾ ಸಾಧ್ಯತೆಗಳಿವೆ. ಇಂದು ಸಂಜೆ 6.30 ರವರೆಗೆ ರಷ್ಯಾ ಅಧ್ಯಕ್ಷ ಪುಟಿನ್‌ ಡೆಡ್‌ಲೈನ್ ಕೊಟ್ಟಿದ್ದಾರೆ . ಸಂಧಾನ ವಿಫಲವಾದರೆ ಇನ್ನೂ ಭೀಕರ ದಾಳಿಗೆ ರಷ್ಯಾ ಸೇನೆ ತಯಾರಾಗಿದೆ. 

Russia Ukraine War: ಇದುವರೆಗೂ 3500 ಮಂದಿಯನ್ನು ಬಲಿ ಪಡೆದಿದೆ ಯುದ್ಧ
ಯುದ್ಧ ಭೂಮಿ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣಾ ಕಾರ್ಯ ಮುಂದುವರೆದಿದೆ. ಯುದ್ಧಭೂಮಿಯಿಂದ ಈವರೆಗೆ 1158 ಜನ ವಾಪಸ್ಸಾಗಿದ್ದಾರೆ. ಇನ್ನೂ ಸಾವಿರಾರು ಜನರನ್ನು ಏರ್‌ ಇಂಡಿಯಾ ಕರೆತರಲಿದೆ. 'ಕೇಂದ್ರದ ಜೊತೆ ನಾನು ನಿರಂತರ ಸಂಪರ್ಕದಲ್ಲಿದ್ದೇನೆ. ಇನ್ನೆರಡು ದಿನಗಳಲ್ಲಿ ಎಲ್ಲಾ ಸಮಸ್ಯೆ ಬಗೆಹರಿಯಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇನ್ನು 406 ಮಂದಿ ಭಾರತಕ್ಕೆ ವಾಪಸ್ಸಾಗಲು ನೋಂದಣಿ ಮಾಡಿಸಿದ್ದಾರೆ.