Asianet Suvarna News Asianet Suvarna News

Russia Ukraine War ಉಕ್ರೇನ್‌ಗೆ ಸೇನಾ ನೆರವು ಹೆಚ್ಚಿಸಿದ ಐರೋಪ್ಯ ಒಕ್ಕೂಟ

- ಮಿಲಿಟರಿ ವಸ್ತು ಖರೀದಿಗೆ ಹೆಚ್ಚುವರಿ 4100 ಕೋಟಿ ರು. ಅನುದಾನ

- ರಷ್ಯಾದ 160 ಮಂದಿ ಮತ್ತು ರೇಡಿಯೋ ತಂತ್ರಜ್ಞಾನದ ಮೇಲೆ ನಿರ್ಬಂಧ

- ಉಕ್ರೇನ್ ನಿಂದ 25 ಲಕ್ಷ ಜನರ ವಲಸೆ

russia ukraine war european union leaders pledge increased military aid for kyiv mulling new sanctions san
Author
Bengaluru, First Published Mar 12, 2022, 1:49 AM IST | Last Updated Mar 12, 2022, 1:49 AM IST

ವರ್ಸೈಲ್ಸ್‌ (ಮಾ.12): ಉಕ್ರೇನ್‌ ( Ukraine) ಮೇಲೆ ಆಕ್ರಮಣ ಮಾಡಿರುವ ರಷ್ಯಾ ( Russia ) ಮೇಲೆ ಮತ್ತಷ್ಟುಹೊಸ ನಿರ್ಬಂಧಗಳನ್ನು ವಿಧಿಸುವುದಾಗಿ ಮತ್ತು ಉಕ್ರೇನ್‌ಗೆ ಹೆಚ್ಚಿನ ಸೈನಿಕ ಒದಗಿಸುವುದಾಗಿ ಐರೋಪ್ಯ ಒಕ್ಕೂಟದ ( European Union ) ದೇಶಗಳ ಮುಖ್ಯಸ್ಥರು ಹೇಳಿದ್ದಾರೆ. ಉಕ್ರೇನ್‌ಗೆ ಸೈನಿಕ ಸಹಾಯ ಒದಗಿಸಲು 4,100 ಕೋಟಿ ರು. ಹೆಚ್ಚುವರಿ ಅನುದಾನ ನೀಡುವುದಾಗಿ ಐರೋಪ್ಯ ಒಕ್ಕೂಟದ ಮುಖ್ಯ ಕಾನೂನು ತಜ್ಞ ಜೋಸೆಫ್‌ ಬೊರೆಲ್‌ (Josep Borrell Fontelles ) ಹೇಳಿದ್ದಾರೆ.

ರಷ್ಯಾ ಸೇನೆ ಉಕ್ರೇನ್‌ನ ಪಶ್ಚಿಮದಲ್ಲಿರುವ ವಿಮಾನನಿಲ್ದಾಣಗಳನ್ನು ವಶಪಡಿಸಿಕೊಂಡು ರಾಜಧಾನಿಯ ಮೇಲೆ ಒತ್ತಡ ಹಾಕುತ್ತಿದೆ. ಹಾಗಾಗಿ ಉಕ್ರೇನ್‌ಗೆ ನಮ್ಮ ಸಹಾಯವನ್ನು ದ್ವಿಗುಣಗೊಳಿಸುತ್ತಿದ್ದೇವೆ ಎಂದು ಬೊರೆಲ್‌ ಹೇಳಿದ್ದಾರೆ. ಈ ಹಿಂದೆ ಉಕ್ರೇನ್‌ಗೆ 3700 ಕೋಟಿ ಸಹಾಯಧನ ನೀಡುವುದಾಗಿ ಐರೋಪ್ಯ ಒಕ್ಕೂಟ ಹೇಳಿತ್ತು.

ಅಲ್ಲದೇ ರಷ್ಯಾದ ರಫ್ತು, ಸಮುದ್ರಯಾನ ಮತ್ತು ರೇಡಿಯೋ ತಂತ್ರಜ್ಞಾನದ ಮೇಲೆ ಮತು 160 ರಷ್ಯಾ ನಾಗರಿಕರ ಮೇಲೆ ಬಾಲ್ಕನ್ ದೇಶಗಳು ನಿರ್ಬಂಧಗಳನ್ನು ವಿಧಿಸಿವೆ. ಇದರೊಂದಿಗೆ ಬೆಲಾರಸ್‌ನ 3 ಬ್ಯಾಂಕ್‌ಗಳ ಮೇಲೂ ಸಹ ನಿರ್ಬಂಧ ವಿಧಿಸಲಾಗಿದೆ. ಈವರೆಗೆ ಐರೋಪ್ಯ ಒಕ್ಕೂಟ 862 ಮಂದಿ ಮತ್ತು 53 ಸಂಸ್ಥೆಗಳ ವಿರುದ್ಧ ನಿರ್ಬಂಧ ವಿಧಿಸಿವೆ. ಇದರೊಂದಿಗೆ ರಷ್ಯಾದ ಮೇಲೆ ಆರ್ಥಿಕ ಒತ್ತಡ ಹೇರಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲು ಸಿದ್ಧರಿದ್ದೇವೆ ಎಂದು ಐರೋಪ್ಯ ಒಕ್ಕೂಟದ ದೇಶಗಳ ಮುಖ್ಯಸ್ಥರು ಹೇಳಿದ್ದಾರೆ.

ಉಕ್ರೇನ್‌ನಿಂದ 25 ಲಕ್ಷ ಜನರ ವಲಸೆ
ಕೀವ್‌:
ರಷ್ಯಾ ಯುದ್ಧ ಆರಂಭಿಸಿದ ಬಳಿಕ ಉಕ್ರೇನ್‌ನಿಂದ ಕನಿಷ್ಠ 25 ಲಕ್ಷ ಜನರು ದೇಶ ತೊರೆದು ವಲಸೆ ( Fled ) ಹೋಗಿದ್ದಾರೆ ಎಂದು ಅಂತರಾಷ್ಟ್ರೀಯ ವಲಸೆ ಸಂಸ್ಥೆ ಮಾಹಿತಿ ನೀಡಿದೆ. ಅಂಕಿ ಅಂಶಗಳ ಪ್ರಕಾರ ಯುದ್ಧ ಪ್ರಾರಂಭವಾದಗಿನಿಂದ ಇದುವರೆಗೆ 25 ಲಕ್ಷ ದೇಶ ತೊರೆದಿದ್ದು, ಈ ಪೈಕಿ 15 ಲಕ್ಷ ಜನರು ನೆರೆಯ ಪೋಲೆಂಡ್‌ಗೆ ( Poland ) ಮತ್ತು ಉಳಿದ 10 ಲಕ್ಷ ಜನರು ಅಕ್ಕಪಕ್ಕದ ದೇಶಗಳಿಗೆ ಮೊರೆ ಹೋಗಿದ್ದಾರೆ ಎಂದು ತಿಳಿಸಿದೆ.

Russia Ukraine war ಉಕ್ರೇನ್ ಗಡಿ ದಾಟುವ ವ್ಯಕ್ತಿಗಳಿಗೆ ಭಾರತದ ಪ್ರಜೆಗಳ ಸಹಾಯ!
ರಷ್ಯಾ ಸೇನೆಗೂ ಸ್ವಯಂಸೇವಕ ಯೋಧರ ಸೇರ್ಪಡೆಗೆ ಅವಕಾಶ
ಕೀವ್‌:
ರಷ್ಯಾ ವಿರುದ್ದದ ಯುದ್ಧದಲ್ಲಿ ಉಕ್ರೇನ್‌ ಸೈನ್ಯಕ್ಕೆ ಸ್ವಯಂಸೇವಕ ಯೋಧರು ಸೇರಿರುವ ಬೆನ್ನಲ್ಲೇ ಇತ್ತ ರಷ್ಯಾ ಕೂಡ ತನ್ನ ಸೈನ್ಯಕ್ಕೆ ಸ್ವಯಂಸೇವಕ ಯೋಧರ ಸೇರ್ಪಡೆಗೆ ಅವಕಾಶ ನೀಡಿದೆ. ಈ ಬಗ್ಗೆ ರಷ್ಯಾ ರಕ್ಷಣಾ ಸಚಿವ ಸೆರ್ಗಯ್‌ ಶೋಯಿಗು ಮಾಹಿತಿ ನೀಡಿದ್ದು, ರಷ್ಯಾ ಸೇನೆ ಸೇರಲು ಈಗಾಗಲೇ 16000 ಅರ್ಜಿಗಳು ಬಂದಿವೆ ಎಂದು ತಿಳಿಸಿದ್ದಾರೆ. ಈ ಹಿಂದೆ ಐಸಿಸ್‌ (ISIS) ವಿರುದ್ಧ ಹೋರಾಡಲು ರಷ್ಯಾ ಸೇನೆಗೆ ನೆರವಾಗಿದ್ದ ಮಧ್ಯಪ್ರಾಚ್ಯ ದೇಶಗಳ ಸಾವಿರಾರು ಈಗ ಉಕ್ರೇನ್‌ ವಿರುದ್ಧದ ಹೋರಾಟಕ್ಕೂ ಕೈಜೋಡಿಸಲು ಮುಂದೆ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

Operation Ganga: ಕಾರ್ಯಾಚರಣೆ ಅಂತ್ಯ, ಇಂದು ಕೊನೆಯ ವಿಮಾನದಲ್ಲಿ 700 ವಿದ್ಯಾರ್ಥಿಗಳು ವಾಪಸ್
ಗಾಯಾಳು ಯೋಧನ ತರಲು ಹೊರಟಿದ್ದ ಸೇನಾ ಕಾಪ್ಟರ್‌ ಅಪಘಾತ: ಪೈಲಟ್‌ ಸಾವು
ಶ್ರೀನಗರ :
ಉತ್ತರ ಕಾಶ್ಮೀರದ ಗುರೆಜ್‌ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯ ಬಳಿ ಗಾಯಾಳು ಯೋಧನನ್ನು ಕರೆತರಲು ಹೊರಟ್ಟಿದ್ದ ಸೇನಾ ಹೆಲಿಕಾಪ್ಟರ್‌ ಚೀತಾ ಪತನಗೊಂಡಿದೆ. ಈ ಘಟನೆಯಲ್ಲಿ ಪೈಲೆಟ್‌ ಸಾವನಪ್ಪಿದ್ದು ಸಹ ಪೈಲೆಟ್‌ ಗಾಯಗೊಂಡಿದ್ದಾರೆ. ಗಾಯಗೊಂಡ ಸಹ ಪೈಲೆಟ್‌ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯು ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೆಜ್‌ ಸೆಕ್ಟರ್‌ನ ಗುಜ್ರಾನ್‌ ನಾಲ ಬಔಜಿ ನಡೆದಿದ್ದು, ವ್ಯತಿರಿಕ್ತ ಹವಾಮಾನದ ಹಿನ್ನೆಲೆಯಲ್ಲಿ ಹೆಲಿಕಾಪ್ಟರ್‌ ಲ್ಯಾಂಡ್‌ ಆಗುವ ವೇಳೆ ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios