Russia Ukraine Crisis: ಚರ್ನೋಬಿಲ್‌ ಪರಮಾಣು ಸ್ಥಾವರ ವಶಕ್ಕೆ: ಮಹಾಬಾಂಬ್‌ ದಾಳಿಗೆ ರಷ್ಯಾ ಚಿಂತನೆ?

*ಭಾರೀ ಕಾದಾಟದ ಬಳಿಕ ಉಕ್ರೇನ್‌ನಿಂದ ವಶಪಡಿಸಿಕೊಂಡ ಪಡೆಗಳು
*ಯುದ್ಧದ ವೇಳೆ ಪರಮಾಣು ತ್ಯಾಜ್ಯ ಘಟಕಕ್ಕೆ ಹಾನಿಯಾದರೆ ಅಪಾಯ
*ರಷ್ಯಾ ಬಳಿ ಇದೆ 300 ಕಿ.ಮೀ ವ್ಯಾಪ್ತಿಯಲ್ಲಿ ಹಾನಿ ಸಾಮರ್ಥ್ಯದ ಫಾದರ್‌ ಆಫ್‌ ಆಲ್‌ ಬಾಂಬ್‌
*ಭಾರತಕ್ಕೆ ರಷ್ಯಾ, ಉಕ್ರೇನ್‌ ಎರಡೂ ಪರಮಾಪ್ತ ದೇಶಗಳು: ಯಾರ ಪರವೂ ನಿಲುವು ತಾಳದಂತಹ ಇಕ್ಕಟ್ಟಿನ ಸ್ಥಿತಿ

Russia Ukraine Crisis Chernobyl plant captured Kyiv under Curfew What Next mnj

ಕೀವ್‌ (ಫೆ. 25) : ಗುರುವಾರ ಉಕ್ರೇನ್‌ ಪ್ರವೇಶಿಸಲು ಯಶಸ್ವಿಯಾಗಿರುವ ರಷ್ಯಾ ಸೇನೆ, ಜಗತ್ತು ಕಂಡ ಘನಘೋರ ಪರಮಾಣು ದುರಂತಕ್ಕೆ ಕಾರಣವಾದ ‘ಚರ್ನೋಬಿಲ್‌ ಘಟಕ’ವನ್ನೂ ವಶಪಡಿಸಿಕೊಂಡಿದೆ. ರಾಜಧಾನಿ ಕೀವ್‌ನಿಂದ 1​00 ಕಿ.ಮೀ ದೂರದಲ್ಲಿರುವ ಚರ್ನೋಬಿಲ್‌ ಅಣುಸ್ಥಾವರವನ್ನು ವಶಕ್ಕೆ ಪಡೆದಿವೆ ಎಂದು ಉಕ್ರೇನ್‌ ಅಧ್ಯಕ್ಷರ ಕಾರ್ಯಾಲಯದ ಸಲಹೆಗಾರ ತಿಳಿಸಿದ್ದಾರೆ. ಚರ್ನೋಬಿಲ್‌ ಅಣುಸ್ಥಾವರವನ್ನು ವಶಕ್ಕೆ ಪಡೆಯಲು ರಷ್ಯಾ ಸೇನೆ, ಉಕ್ರೇನ್‌ ಯೋಧರ ಜತೆ ಭಾರೀ ಕಾದಾಟ ನಡೆಸಿತ್ತು. ಈ ವೇಳೆ ಪರಿಸ್ಥಿತಿ ಕೈಮೀರಿ ಅಣುಸ್ಥಾವರ ಹಾನಿಯಾಗಿ, ಅಲ್ಲಿ ಸಂಗ್ರಹಿಸಲಾಗಿರುವ ಭಾರೀ ಪ್ರಮಾಣದ ಅಣುತ್ಯಾಜ್ಯ ಸ್ಫೋಟಗೊಂಡು ಇಡೀ ಯುರೋಪ್‌ ಹರಡುವ ಭೀತಿ ವ್ಯಕ್ತವಾಗಿತ್ತು. ಈ ಕುರಿತು ಸ್ವತಃ ಉಕ್ರೇನ್‌ ಸರ್ಕಾರ ಕಳವಳ ವ್ಯಕ್ತಪಡಿಸಿತ್ತು.

1986ರಲ್ಲಿ ಚರ್ನೋಬಿಲ್‌ ಪರಮಾಣು ಸ್ಥಾವರ ಸ್ಫೋಟಗೊಂಡು ಸಂಭವಿಸಿದ ದುರಂತದಲ್ಲಿ ಸತ್ತಿದ್ದು ಕೆಲವೇ ನೂರಾರು ಜನರಾದರೂ, ಅದರ ಭೀಕರ ಪರಿಣಾಮಗಳಿಗೆ ತುತ್ತಾಗಿದ್ದು 5 ಲಕ್ಷಕ್ಕೂ ಹೆಚ್ಚು ಜನರು. ಈಗಲೂ ಅದರಿಂದ ಲಕ್ಷಾಂತರ ಜನರು ನರಳುತ್ತಿದ್ದಾರೆ. ಹೀಗಾಗಿ ಮತ್ತೇನಾದರೂ ಅಂಥದ್ದೇ ದುರಂತ ಸಂಭವಿಸಿದರೆ ವಿಶ್ವ ಮತ್ತೊಂದು ಘೋರ ದುರಂತಕ್ಕೆ ಸಾಕ್ಷಿಯಾಗುವ ಭೀತಿ ಎದುರಾಗಿದೆ.

ಇದನ್ನೂ ಓದಿ: Russia Ukraine Crisis: ನ್ಯಾಟೋ ಒಕ್ಕೂಟ ಎಂದರೇನು?: ನ್ಯಾಟೋ ಬಗ್ಗೆ ರಷ್ಯಾಕ್ಕೇಕೆ ಸಿಟ್ಟು?

ಉಕ್ರೇನ್‌ ಮೇಲೆ ಮಹಾಬಾಂಬ್‌ ಹಾಕುತ್ತಾ ರಷ್ಯಾ?: ಉಕ್ರೇನ್‌ ಮೇಲೆ ಯುದ್ಧ ಘೋಷಣೆ ಮಾಡಿರುವ ರಷ್ಯಾದ ಸೇನಾ ಬತ್ತಳಿಕೆಯಲ್ಲಿ ಎದುರಾಳಿ ರಾಷ್ಟ್ರದ ಮೇಲೆ ಹಾನಿಕಾರಕ ದಾಳಿ ಎಸಗುವ ಸಾಮರ್ಥ್ಯದ ಹಲವು ಶಸ್ತ್ರಾಸ್ತ್ರಗಳಿವೆ. ಅದರಲ್ಲಿ 44 ಟನ್‌ ಹಾಗೂ 300 ಕಿ.ಮೀ ವ್ಯಾಪ್ತಿಯಲ್ಲಿ ಭಾರೀ ಹಾನಿ ಎಸಗುವ ಸಾಮರ್ಥ್ಯವಿರುವ ಅಣ್ವಸೆತ್ರೕತರ ಟಿಎನ್‌ಟಿ ಬಾಂಬ್‌(ಮಹಾಬಾಂಬ್‌) ಪ್ರಮುಖವಾಗಿದೆ. 

ಒಂದು ವೇಳೆ ಯುದ್ಧದಲ್ಲಿ ಶತ್ರು ದೇಶಕ್ಕೆ ಇತರೆ ದೇಶಗಳ ಭಾರೀ ನೆರವು ಸಿಕ್ಕಿದ್ದೇ ಆದಲ್ಲಿ ಎಲ್ಲಾ ಬಾಂಬ್‌ಗಳ ತಂದೆ(ಮಹಾಬಾಂಬ್‌)(ಫಾದರ್‌ ಆಫ್‌ ಆಲ್‌ ಬಾಂಬ್ಸ್‌) ಅನ್ನು ಪ್ರಯೋಗಿಸಲು ಪುಟಿನ್‌ ಯೋಜಿಸಿದ್ದಾರೆ. ತಮ್ಮ ಆಘಾತ ಮತ್ತು ವಿಸ್ಮಯ ಅಭಿಯಾನದ ಭಾಗವಾಗಿ ಮಹಾಬಾಂಬ್‌ ಅನ್ನು ಬಳಕೆ ಮಾಡುವಂತೆ ಪುಟಿನ್‌ ಅವರು ಸೂಚಿಸಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಾಂಬ್‌ ಪ್ರಯೋಗ ಹೇಗೆ?: ಮಹಾಬಾಂಬ್‌ ಅಣ್ವಸೆತ್ರೕತರವಾದ ಸೂಪರ್‌-ಪವರ್‌ಫುಲ್‌ ಬಾಂಬ್‌ ಆಗಿದೆ. ಇದನ್ನು ಜೆಟ್‌ ಮೂಲಕ ನಿಗದಿತ ಸ್ಥಳಗಳನ್ನು ಗುರಿಯಾಗಿಸಿ ಪ್ರಯೋಗಿಸಲಾಗುತ್ತದೆ. ಭೂಮಿಗೆ ಅಪ್ಪಳಿಸುವ ಮುಂಚೆಯೇ ಸ್ಫೋಟವಾಗುವ ಈ ಬಾಂಬ್‌ ಸುತ್ತಮುತ್ತಲ 300 ಕಿ.ಮೀ ವ್ಯಾಪ್ತಿಯಲ್ಲಿ ಭಾರೀ ದೊಡ್ಡ ಪ್ರಮಾಣದ ಹಾನಿ ಎಸಗಲಿದೆ.

ಇದನ್ನೂ ಓದಿRussia Ukraine Crisis: ಪುಟಿನ್‌ ಎಂಬ ಜಗಮೊಂಡ: ಅಂದುಕೊಂಡಿದ್ದನ್ನು ಸಾಧಿಸುವ ಹಟವಾದಿ!

ಭಾರತಕ್ಕೆ ಈಗ ಧರ್ಮಸಂಕಟ: ರಷ್ಯಾ- ಉಕ್ರೇನ್‌ ಯುದ್ಧ ಆರಂಭವಾಗುವುದರೊಂದಿಗೆ ಭಾರತದ ರಾಜಕೀಯ ನಾಯಕತ್ವಕ್ಕೆ ರಾಜತಾಂತ್ರಿಕವಾಗಿ ಧರ್ಮಸಂಕಟ ಎದುರಾಗಿದೆ. ಸೋವಿಯತ್‌ ಒಕ್ಕೂಟದ ಕಾಲದಿಂದಲೂ ರಷ್ಯಾ ಜತೆ ಭಾರತ ಉತ್ತಮ ಬಾಂಧವ್ಯವನ್ನು ಹೊಂದಿದೆ. ಭಾರತದ ಸಂಕಷ್ಟದ ಸಂದರ್ಭಗಳಲ್ಲಿ ರಷ್ಯಾ ನೆರವಾಗಿದೆ. ಹಾಗೆಯೇ ಅಂದಿನ ಸೋವಿಯತ್‌ ಒಕ್ಕೂಟದ ಒಂದು ಭಾಗವಾಗಿದ್ದ ಉಕ್ರೇನ್‌ ಜತೆಗೂ ಉತ್ತಮ ಸಂಬಂಧವನ್ನು ಇಟ್ಟುಕೊಂಡಿದೆ. ಹೀಗಾಗಿ ಯಾವುದೇ ದೇಶದ ಪರವೂ ನಿಲುವು ತಾಳುವ ಅಥವಾ ಬೆಂಬಲಕ್ಕೆ ನಿಲ್ಲುವ ಸ್ಥಿತಿಯಲ್ಲಿ ಭಾರತ ಇಲ್ಲ.

ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾವನ್ನು ಖಂಡತುಂಡವಾಗಿ ವಿರೋಧಿಸುತ್ತಿರುವ ಅಮೆರಿಕ, ಬ್ರಿಟನ್‌ನಂತಹ ದೇಶಗಳು ಭಾರತ ತಮ್ಮ ಬೆನ್ನಿಗೆ ನಿಲ್ಲಬೇಕು ಎಂದು ಬಯಸುತ್ತಿವೆ. ಹಾಗೊಂದು ವೇಳೆ ಆ ದೇಶಗಳ ಜತೆ ಉಕ್ರೇನ್‌ ಪರವಾಗಿ ನಿಂತರೆ ರಷ್ಯಾ ಮುನಿಸಿಕೊಳ್ಳುತ್ತದೆ. ಸಾಂಪ್ರದಾಯಿಕ ಸ್ನೇಹಿತ ಎಂದು ರಷ್ಯಾವನ್ನು ಸಮರ್ಥಿಸಿಕೊಂಡರೆ ಉಕ್ರೇನ್‌ ಮಾತ್ರವೇ ಅಲ್ಲದೆ ಅಮೆರಿಕ, ಬ್ರಿಟನ್‌ನಂತಹ ದೇಶಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

ಅಮೆರಿಕದ ಆಕ್ಷೇಪವನ್ನು ಕಡೆಗಣಿಸಿ ರಷ್ಯಾದಿಂದ ಎಸ್‌ 400 ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಭಾರತ ಖರೀದಿಸಿತ್ತು. ಆಗಲೇ ಅಮೆರಿಕ ಕೊಂಚ ಅಸಮಾಧಾನ ತೋಡಿತ್ತು. ಈಗ ಏನಾದರೂ ರಷ್ಯಾ ಪರ ಬಹಿರಂಗ ಬೆಂಬಲಕ್ಕೆ ನಿಂತರೆ ಭಾರತದ ವಿರುದ್ಧ ಅಮೆರಿಕ ಕೆಂಡಕಾರುವ ಸಾಧ್ಯತೆ ನಿಚ್ಚಳವಾಗಿದೆ.

Latest Videos
Follow Us:
Download App:
  • android
  • ios