Asianet Suvarna News Asianet Suvarna News

Putin Health ರಷ್ಯಾ ಅಧ್ಯಕ್ಷ ಪುಟಿನ್ ಬದುಕುಳಿಯುವುದು 3 ವರ್ಷ ಮಾತ್ರ, ಗುಪ್ತಚರ ಅಧಿಕಾರಿ ಸ್ಫೋಟಕ ಮಾಹಿತಿ!

  • ಉಕ್ರೇನ್ ಮೇಲೆ ಯುದ್ಧ ಸಾರಿದ ಪುಟಿನ್‌ಗೆ ತೀವ್ರ ಆರೋಗ್ಯ ಸಮಸ್ಯೆ
  • ಕಣ್ಣಿನ ದೃಷ್ಠಿ ಕಳೆಗುಂದಿದೆ, ಕ್ಯಾನ್ಸರ್‌ಗೆ ನಡೆಯುತ್ತಿದೆ ಚಿಕಿತ್ಸೆ
  • ಗುಪ್ತಚರ ಅಧಿಕಾರಿಯಿಂದ ಸ್ಫೋಟಕ ಮಾಹಿತಿ ಬಹಿರಂಗ
Russia Intelligence officer claims President Vladimir Putin given 3 years to live due to cancer ckm
Author
Bengaluru, First Published May 30, 2022, 11:30 PM IST

ಮಾಸ್ಕೋ(ಮೇ.30): ಉಕ್ರೇನ್ ಮೇಲೆ ಯುದ್ಧ ಸಾರಿ ವಿಶ್ವಗ ಕೆಂಗಣ್ಣಿಗೆ ಗುರಿಯಾಗಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇನ್ನು ಬದುಕುಳಿಯುವುದು ಗರಿಷ್ಠ ಅಂದರೆ 3 ವರ್ಷ ಮಾತ್ರ. ಈ ಮಾಹಿತಿಯನ್ನು ಸ್ವತಃ ರಷ್ಯಾ ಗುಪ್ತಚರ ಸಂಸ್ಥೆ ಅಧಿಕಾರಿ ಬಹಿರಂಗ ಪಡಿಸಿದ್ದಾರೆ.

ವ್ಲಾದಿಮಿರ್ ಪುಟಿನ್ ಈಗಾಗಲೇ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಅನ್ನೋ ಮಾಹಿತಿ ಎಲ್ಲೆಡೆ ಹರಡಿದೆ.ಇತ್ತ ಪುಟಿನ್ ಕೂಡ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ರಹಸ್ಯ ಸ್ಥಳದಲ್ಲಿ ಪುಟಿನ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ ಅನ್ನೋ ವರದಿ ಇದೆ. ಇದರ ಬೆನ್ನಲ್ಲೇ 69 ವರ್ಷದ ಪುಟಿನ್ ಆರೋಗ್ಯ ತೀವ್ರವಾಗಿ ಹದಗೆಟ್ಟಿದೆ ಎಂದು  ಗುಪ್ತಚರ ಸಂಸ್ಥೆ ಅಧಿಕಾರಿ ಹೇಳಿದ್ದಾರೆ.

ವಿಜಯೋತ್ಸವ ದಿನದ ವೇಳೆ ಪುಟಿನ್‌ ಕಾಲ ಮೇಲೆ ಬ್ಲಾಂಕೆಟ್‌, ಹೆಚ್ಚಾಯ್ತು ಆರೋಗ್ಯ ಗುಮಾನಿ!

ಪುಟಿನ್ ಕಣ್ಣಿನ ದೃಷ್ಠಿ ಕುಗ್ಗಿದೆ. ಸರಿಯಾಗಿ ಯಾವುದು ಕಾಣುತ್ತಿಲ್ಲ. ಕ್ಯಾನ್ಸರ್ ಪುಟಿನ ಆರೋಗ್ಯವನ್ನೇ ಹದಗೆಡಿಸಿದೆ. ಪುಟಿನ್‌ಗೆ ಚಿಕಿತ್ಸೆ ನೀಡುವ ವೈದ್ಯರು, ಪುಟಿನ್ ಗರಿಷ್ಠ ಅಂದರೆ 3 ವರ್ಷ ಮಾತ್ರ ಬದುಕಲ ಸಾಧ್ಯ ಎಂದಿದ್ದಾರೆ. ಈ ಕುರಿತ ಮಾಹಿತಿಯನ್ನು ಗುಪ್ತಚರ ಅಧಿಕಾರಿ ಬಹಿರಂಗಪಡಿಸಿದ್ದಾರೆ.

ಪುಟಿನ್ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ ಅನ್ನೋ ಸುದ್ದಿಗೆ ಸಾಕಷ್ಟು ಪುರಾವೆ ಲಭ್ಯವಾಗಿತ್ತು. ಹೀಗಾಗಿ ಸಾರ್ವನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ ಅನ್ನೋ ವಾದವು ಇದಕ್ಕೆ ಪುಷ್ಠಿ ನೀಡಿತ್ತು. ಇದೀಗ ಅಧಿಕಾರಿ ಬಹಿರಂಗ ಪಡಿಸಿದ ಮಾಹಿತಿ ಪುಟಿನ್ ಆರೋಗ್ಯ ಕುರಿತ ಅನುಮಾನಗಳನ್ನು ಬಲಪಡಿಸುತ್ತಿದೆ. 

ಆದರೆ ಈ ಮಾಹಿತಿಯನ್ನು ರಷ್ಯಾ ವಿದೇಶಾಂಗ ಸಚಿವ ಸರ್ಗೈ ಲಾವ್ರೋ ನಿರಾಕರಿಸಿದ್ದಾರೆ. ಪುಟಿನ್ ಆರೋಗ್ಯ ಕುರಿತು ಸುದ್ದಿಗಳು ಸತ್ಯಕ್ಕೆ ದೂರವಾಗಿದೆ. ಪುಟಿನ್ ಆರೋಗ್ಯವಾಗಿದ್ದಾರೆ ಎಂದು ಲಾರ್ವೋ ಹೇಳಿದ್ದಾರೆ.

ಪುಟಿನ್‌ ಪದಚ್ಯುತಿಗೆ ರಹಸ್ಯ ಸಂಚು, ರಷ್ಯಾಧಿಪತಿಗೆ ಗುಣಪಡಿಸಲಾಗದ ಕ್ಯಾನ್ಸರ್?

ಅನಾರೋಗ್ಯ ವದಂತಿ ಬೆನ್ನಲ್ಲೇ ಅಧ್ಯಕ್ಷ ಪುಟಿನ್‌ಗೆ ಶಸ್ತ್ರಚಿಕಿತ್ಸೆ
ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ವದಂತಿಯ ನಡುವೆಯೇ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆ ಮಸ್ಯೆಯಿಲ್ಲದೇ ಯಶಸ್ವಿಯಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಮೇ 12, 13ರಂದು ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ ಇದು ಕ್ಯಾನ್ಸರ್‌ಗೆ ಸಂಬಂಧಿಸಿದ್ದಲ್ಲ. ಶಸ್ತ್ರಚಿಕಿತ್ಸೆ ಮೂಲಕ ಅವರ ಹೊಟ್ಟೆಯಲ್ಲಿದ್ದ ನೀರನ್ನು ಹೊರತೆಗೆಯಲಾಗಿದೆ ಎಂದು ವರದಿ ಹೇಳಿದೆ. ಈ ಶಸ್ತ್ರಚಿಕಿತ್ಸೆಯ ಕಾರಣದಿಂದಾಗಿ ಪುಟಿನ್‌ ನಿಗದಿಯಾಗಿದ್ದ ಸರ್ಕಾರದ ಉನ್ನತ ಮಟ್ಟದ ಸಭೆಯಲ್ಲೂ ಭಾಗಿಯಾಗಿರಲಿಲ್ಲ ಎಂದು ವರದಿ ಹೇಳಿದೆ.

2 ತಿಂಗಳ ಹಿಂದೆ ನಡೆದಿತ್ತು ಪುಟಿನ್‌ ಹತ್ಯೆಗೆ ಯತ್ನ
ಉಕ್ರೇನ್‌ ಮೇಲೆ ರಷ್ಯಾ ಯುದ್ಧವನ್ನು ಸಾರಿದ ಬೆನ್ನಲ್ಲೇ ಪುಟಿನ್‌ ಅವರ ಹತ್ಯೆಗಾಗಿ ಪ್ರಯತ್ನ ನಡೆಸಲಾಗಿತ್ತು. ಆದರೆ ಪುಟಿನ್‌ ಈ ಹತ್ಯೆಯ ಸಂಚಿನಿಂದ ಪಾರಾಗಿ ಬದುಕುಳಿದರು ಎಂಬ ವಿಚಾರವನ್ನು ಉಕ್ರೇನಿನ ಸೇನಾಧಿಕಾರಿ ಬಹಿರಂಗ ಪಡಿಸಿದ್ದಾರೆ.

ಪುಟಿನ್‌ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂಬ ಗುಸುಗುಸು ಬೆನ್ನಲ್ಲೇ ಅವರ ಹತ್ಯೆಯ ಸಂಚು ವಿಫಲವಾಗಿತ್ತು ಎನ್ನುವ ವಿಚಾರವು ತಡವಾಗಿ ಬೆಳಕಿಗೆ ಬಂದಿದೆ. ಉಕ್ರೇನಿನ ಗುಪ್ತಚರ ಇಲಾಖೆಯ ಮುಖ್ಯಸ್ಥರಾದ ಮೇ ಜನರಲ್‌ ಕೈರಿಲೊ ಬುದಾನೋವ್‌, ‘ಸುಮಾರು 2 ತಿಂಗಳ ಹಿಂದೆ ಕಪ್ಪು ಸಮುದ್ರ ಹಾಗೂ ಕಾಸ್ಪಿಯನ್‌ ಸಮುದ್ರದ ಮಧ್ಯಭಾಗದ ವಲಯವಾದ ಕೌಕಾಸಸ್‌ನಲ್ಲಿ ಪುಟಿನ್‌ ಹತ್ಯೆಯ ಪ್ರಯತ್ನ ಮಾಡಲಾಗಿತ್ತು. ಅವರ ಮೇಲೆ ಮಾರಣಾಂತಿಕ ದಾಳಿಯನ್ನೂ ನಡೆಸಲಾಗಿತ್ತು. ಆದರೆ ಈ ಪ್ರಯತ್ನ ವಿಫಲವಾಯಿತು’ ಎಂದು ಹೇಳಿದ್ದಾರೆ.
 

Follow Us:
Download App:
  • android
  • ios