ಉಕ್ರೇನ್ ಮೇಲೆ ರಷ್ಯಾದ ಆಕ್ರಮಣರಷ್ಯಾ ಮೇಲೆ ಮುಂದುವರಿದ ಅಮೆರಿಕದ ನಿರ್ಬಂಧರಷ್ಯಾ ದೇಶದ ತೈಲ ಹಾಗೂ ಗ್ಯಾಸ್ ಗೆ ನಿಷೇಧ ಹೇರಿದ ಅಮೆರಿಕ

ವಾಷಿಂಗ್ಟನ್ (ಮಾ.8): ಉಕ್ರೇನ್ (Ukraine) ದೇಶದ ಮೇಲೆ ರಷ್ಯಾದ (Russia) ಆಕ್ರಮಣ ಬೆನ್ನಲ್ಲಿಯೇ, ರಷ್ಯಾ ದೇಶದ ಮೇಲೆ ಅಮೆರಿಕ (United States) ಹಾಗೂ ಯುರೋಪಿಯನ್ ಯೂನಿಯನ್ ಗಳು (European Union) ದಿನಕ್ಕೊಂದರಂತೆ ನಿರ್ಬಂಧಗಳನ್ನು ಹೇರಿವೆ. ಸಾಧ್ಯವಾದಷ್ಟು ಎಲ್ಲಾ ನಿರ್ಬಂಧಗಳನ್ನು ಹೇರಿ ರಷ್ಯಾವನ್ನು ವಿಶ್ವದಲ್ಲಿಯೇ ಏಕಾಂಗಿಯನ್ನಾಗಿ ಮಾಡುವ ಪ್ರಯತ್ನದಲ್ಲಿರುವ ಅಮೆರಿಕ, ಮಂಗಳವಾರ ರಷ್ಯಾದಿಂದ ಅಮೆರಿಕದ ತೈಲ ಆಮದಿಗೆ (Oil Imports) ನಿಷೇಧವನ್ನು ಪ್ರಕಟಿಸಿದೆ. ಶ್ವೇತಭವನದಲ್ಲಿ ಅಧ್ಯಕ್ಷ ಜೋ ಬಿಡೆನ್ (Joe Biden) ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ನಿಷೇಧವು ಭಾಗಶಃ ಕಾಂಗ್ರೆಸ್‌ನಿಂದ ಬಲವಾದ ಉಭಯಪಕ್ಷೀಯ ಒತ್ತಡಕ್ಕೆ ಪ್ರತಿಕ್ರಿಯೆಯಾಗಿದೆ, ಆದರೆ, ಅಮೆರಿಕದ ಈ ನಿರ್ಧಾರ ಈಗಾಗಲೇ ಗಗನಕ್ಕೇರುತ್ತಿರುವ ದೇಶೀಯ ಅನಿಲ ಬೆಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಉಕ್ರೇನ್ ಮೇಲೆ ಅದರ ಅಪ್ರಚೋದಿತ ಮತ್ತು ನ್ಯಾಯಸಮ್ಮತವಲ್ಲದ ಯುದ್ಧಕ್ಕೆ ರಷ್ಯಾವನ್ನು ಹೊಣೆಗಾರರನ್ನಾಗಿ ಮಾಡಲು ಕ್ರಮಗಳನ್ನು ಘೋಷಿಸುವ ನಿಟ್ಟಿನಲ್ಲಿ ಅಧ್ಯಕ್ಷ ಬಿಡೆನ್ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಶ್ವೇತಭವನ ಪ್ರಕಟಣೆ ನೀಡಿತ್ತು, ಅದರ ಬೆನ್ನಲ್ಲಿಯೇ ಅಮೆರಿಕ ಸರ್ಕಾರ ರಷ್ಯಾದಿಂದ ತೈಲ ಹಾಗೂ ಅನಿಲ ಆಮದಿಗೆ ನಿಷೇಧ ಹೇರುವುದು ಖಚಿತ ಎನ್ನುವ ವರದಿಗಳೂ ಬಂದಿದ್ದವು.

ಯುಎಸ್ ಮಾಧ್ಯಮ ವರದಿಗಳ ಪ್ರಕಾರ, ನಿಷೇಧವು ರಷ್ಯಾದ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲವನ್ನು ಒಳಗೊಂಡಿರುತ್ತದೆ. ಅಮೆರಿಕಕ್ಕಿಂತ ಹೆಚ್ಚಾಗಿ ರಷ್ಯಾದ ತೈಲ ಹಾಗೂ ಗ್ಯಾಸ್ ನ ಮೇಲೆ ಅತಿಯಾದ ಅವಲಂಬನೆಯನ್ನು ಹೊಂದಿರುವ ಯುರೋಪಿಯನ್ ಯೂನಿಯನ್ ಗಳು ಸದ್ಯದ ಮಟ್ಟಿಗೆ ಈ ನಿಷೇಧದಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಲಾಗಿದೆ.

Scroll to load tweet…


ಅಮೆರಿಕ, ರಷ್ಯಾದಿಂದ ನಿತ್ಯ 2 ಲಕ್ಷ ಬ್ಯಾರಲ್‌ ಕಚ್ಚಾತೈಲ ಮತ್ತು 5 ಲಕ್ಷ ಬ್ಯಾರಲ್‌ಗಳಷ್ಟುಇತರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸುತ್ತದೆ. ಇದು ಒಟ್ಟಾರೆ ಅಮೆರಿಕದ ಬೇಡಿಕೆಯ ಶೇ. 10ಕ್ಕಿಂತ ಕಡಿಮೆಯಾಗಿದೆ. ಇದರಿಂದಾಗಿ ಅಮೆರಿಕದ ಈ ನಿರ್ಧಾರವು ವಿಶ್ವದ ಅತೀದೊಡ್ಡ ಆರ್ಥಿಕತೆಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಇನ್ನೊಂದೆದೆ ಯುರೋಪಿಯನ್‌ ದೇಶಗಳು ವರ್ಷಕ್ಕೆ ರಷ್ಯಾದಿಂದ 11.3 ಕೋಟಿ ಬ್ಯಾರಲ್‌ಗಳಷ್ಟುಕಚ್ಚಾತೈಲ ಖರೀದಿಸುತ್ತವೆ. ರಷ್ಯಾದ ಒಟ್ಟು ರಫ್ತಿನಲ್ಲಿ ಯುರೋಪಿಯನ್‌ ದೇಶಗಳ ಪಾಲು ಶೆ.60ರಷ್ಟಿದೆ. ಹಾಗಾಗಿ ಈ ನಿಷೇಧವನ್ನು ಹೇರುವುದು ಯುರೋಪಿಯನ್ ಯೂನಿಯನ್ ಗಳ ಪಾಲಿಗೆ ಕಷ್ಟವಾಗಲಿದೆ.

ಅಮೆರಿಕದಲ್ಲಿಏರುತ್ತಿರುವ ತೈಲ ಬೆಲೆಗಳು ಹಣದುಬ್ಬರದ ಕಳವಳವನ್ನು ಹೆಚ್ಚಿಸಿವೆ. ಆ ಮೂಲಕ ಜನರಲ್ಲಿ ಬಿಡೆನ್ ಮೇಲಿನ ವಿಶ್ವಾಸವನ್ನೂ ಕಡಿಮೆ ಮಾಡಿದೆ. ಇನ್ನೊಂದೆಡೆ ಡೆಮಾಕ್ರಟಿಕ್ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈಲ ನಿಷೇಧವನ್ನು ಬೆಂಬಲಿಸಿದ್ದು, ಜಾಗತಿಕ ಆರ್ಥಿಕತೆಯಿಂದ ರಷ್ಯಾವನ್ನು ಮತ್ತಷ್ಟು ಪ್ರತ್ಯೇಕ ಮಾಡಲು ರಷ್ಯಾದ ಇತರ ಸರಕುಗಳ ಮೇಲೆಯೂ ಸುಂಕವ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ, ಅಮೆರಿಕದ ಆಯಕಟ್ಟಿನ ಪೆಟ್ರೋಲಿಯಂ ರಿಸರ್ವ್‌ನಿಂದ ಹೆಚ್ಚಿನ ಕಚ್ಚಾ ತೈಲವನ್ನು ಬಿಡುಗಡೆ ಮಾಡುವ ಮೂಲಕ ತೈಲ ಬೆಲೆಗಳನ್ನು ಕಡಿಮೆ ಮಾಡುವ ಕ್ರಮಗಳನ್ನು ಸಹ ಅವರು ಬೆಂಬಲಿಸಿದ್ದಾರೆ.

Russia Ukraine War ಅಮೆರಿಕ ನಡೆಯಿಂದ ಕಚ್ಚಾ ತೈಲ ಬೆಲೆ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ 130 ದಾಟಿದರೂ ಆಶ್ಚರ್ಯವಿಲ್ಲ!
"ನಾನು ಸ್ಪಷ್ಟವಾಗಿ ಹೇಳುತ್ತೇನೆ: ಯುನೈಟೆಡ್ ಸ್ಟೇಟ್ಸ್ ನಮ್ಮ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ನಮ್ಮ ಆರ್ಥಿಕ ಹಿತಾಸಕ್ತಿಗಳ ನಡುವೆ ಆಯ್ಕೆ ಮಾಡಬೇಕಾಗಿಲ್ಲ" ಎಂದು ಅವರು ಶಾಸಕರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಅಮೆರಿಕದ ನಿಷೇಧ ಘೋಷಣೆ ಮಾಡುವ ಮುನ್ನವೇ ಅದಕ್ಕೆ ಪ್ರತಿಕ್ರಿಯೆಯಾಗಿ ತೈಲ ಬೆಲೆಗಳು ಶೇ. 30ರಷ್ಟು ಏರಿಕೆ ಕಂಡಿದ್ದು, ಬ್ರೆಂಟ್ ಕಚ್ಚಾ ತೈಲದ ದರವು ಮಂಗಳವಾರ ಪ್ರತಿ ಬ್ಯಾರಲ್ ಗೆ 130 ಡಾಲರ್ ವರೆಗೆ ಏರಿತ್ತು. ಅಮೇರಿಕನ್ ಆಟೋಮೊಬೈಲ್ ಅಸೋಸಿಯೇಷನ್ (AAA) ರಾಷ್ಟ್ರೀಯ ಸರಾಸರಿ ಪ್ರಕಾರ, ಪೆಟ್ರೋಲ್ ಪಂಪ್ ಗಳಲ್ಲಿ ಬೆಲೆಗಳು ಮಂಗಳವಾರ ಲೀಟರ್ ಗೆ 4.17 ಡಾಲರ್ ಗೆ ಜಿಗಿದಿವೆ. ಒಂದು ತಿಂಗಳ ಹಿಂದೆ ಇದರ ಬೆಲೆ 3.46 ಡಾಲರ್ ಆಗಿದ್ದವು.

Rahul Gandhi Taunt "ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ" ಚುನಾವಣೆಯ ಆಫರ್ ಕ್ಲೋಸ್ ಆಗಲಿದೆ!
"ಅಂತಿಮವಾಗಿ ಹೇಳುವುದೇನೆಂದರೆ. ಅಮೆರಿಕ ರಷ್ಯಾದಿಂದ ತೈಲ ಸರಬರಾಜನ್ನು ನಿಲ್ಲಿಸಿದಲ್ಲಿ, ಸ್ವಲ್ಪ ಕಷ್ಟವನ್ನು ಎದುರಿಸುತ್ತದೆ. ಆದರೆ ನಾವು ಯುರೋಪ್ ಒಕ್ಕೂಟಗಳಿಗಿಂತ ಉತ್ತಮ ಸ್ಥಾನದಲ್ಲಿದ್ದೇವೆ' ಎಂದು ಇಂಧನ ವಿಶ್ಲೇಷಕ ಆಂಡಿ ಲಿಪೊವ್ ಹೇಳಿದ್ದಾರೆ.