Asianet Suvarna News Asianet Suvarna News

Rahul Gandhi Taunt "ಪೆಟ್ರೋಲ್ ಟ್ಯಾಂಕ್ ಭರ್ತಿ ಮಾಡಿಕೊಳ್ಳಿ" ಚುನಾವಣೆಯ ಆಫರ್ ಕ್ಲೋಸ್ ಆಗಲಿದೆ!

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆ

ದೇಶದಲ್ಲೂ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ಸಂಭವ

ಕೇಂದ್ರ ಸರ್ಕಾರಕ್ಕೆ ಟ್ವೀಟ್ ಮೂಲಕ ಅಣಕವಾಡಿದ ರಾಹುಲ್ ಗಾಂಧಿ
 

quickly fill up your petrol tanks modi governments election offer is going to end rahul gandhi taunt to center san
Author
Bengaluru, First Published Mar 5, 2022, 9:02 PM IST | Last Updated Mar 5, 2022, 9:02 PM IST

ನವದೆಹಲಿ (ಮಾ.5):  ಅವಕಾಶ ಸಿಕ್ಕಾಗಲೆಲ್ಲಾ ಕೇಂದ್ರ ಸರ್ಕಾರದ (Central Government ) ಕಾಲೆಳೆಯುವ ಅವಕಾಶವನ್ನು ತಪ್ಪಿಸಿಕೊಳ್ಳದ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (Congress leader Rahul Gandhi), ಡೀಸೆಲ್-ಪೆಟ್ರೋಲ್ (Petrol Diesel) ಬೆಲೆ ಏರಿಕೆಯಾಗಲಿರುವ ಸುದ್ದಿಯ ಬಗ್ಗೆ ಮೋದಿ ಸರ್ಕಾರವನ್ನು ಲೇವಡಿ ಮಾಡಿದ್ದಾರೆ. ರಾಹುಲ್ ಗಾಂಧಿ ಟ್ವೀಟ್ ಮೂಲಕ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು,  "ತಕ್ಷಣವೇ  ದೇಶದ ಜನರು ಪೆಟ್ರೋಲ್ ಟ್ಯಾಂಕ್‌ಗಳನ್ನು ಭರ್ತಿ ಮಾಡಿಕೊಳ್ಳಬೇಕು" ಮೋದಿ ಸರ್ಕಾರದ ಚುನಾವಣೆಯ ಆಫರ್ ಶೀಘ್ರದಲ್ಲೇ ಕೊನೆಗೊಳ್ಳಲಿದೆ ಎಂದು ರಾಹುಲ್ ಗಾಂಧಿ ಬರೆದಿದ್ದಾರೆ.

ಪಂಚ ರಾಜ್ಯ ಚುನಾವಣೆ (Five State Elections) ಸೋಮವಾರ ಮುಕ್ತಾಯಗೊಳ್ಳಲಿದ್ದು, ಅಂತಿಮ ಹಂತದ ಮತದಾನಕ್ಕೆ ಇನ್ನೂ ಎರಡು ದಿನ ಬಾಕಿ ಇರುವಾಗಲೇ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜನವರಿಗೆ ಬೆಲೆ ಏರಿಕೆಯಾಗುವ ಎಚ್ಚರಿಕೆಯೊಂದಿಗೆ ಸಲಹೆಯನ್ನೂ ಅವರು ನೀಡಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ 100 ಡಾಲರ್ ಗಳ ಗಡಿ ದಾಟಿದೆ. ಆದರೆ, ದೇಶದಲ್ಲಿ ಪಂಚರಾಜ್ಯ ಚುನಾವಣೆಯಿದ್ದು, ಈ ಹಂತದಲ್ಲಿ ಬೆಲೆ ಏರಿಕೆ ಆದಲ್ಲಿ ಜನರ ವಿರೋಧ ಕಟ್ಟಿಕೊಳ್ಳಬೇಕಾಗಬಹುದು ಎನ್ನುವ ಎಚ್ಚರಿಕೆಯಲ್ಲಿ ಕೇಂದ್ರ ಸರ್ಕಾರ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಪೆಟ್ರೋಲ್-ಡೀಸೆಲ್ ದರದಲ್ಲಿ ಬದಲಾವಣೆ ಮಾಡದೇ ಇರುವಂತೆ ಹೇಳಿದೆ. ಮೂಲಗಳ ಪ್ರಕಾರ, ಚುನಾವಣೆಗಳು ಮುಗಿದ ಬಳಿಕ ಇಂಧನ ದರಗಳಲ್ಲಿ ಏರಿಕೆಯಾಗುವ ಸುದ್ದಿಗಳು ಈಗಾಗಲೇ ಬಂದಿವೆ.

ಉಕ್ರೇನ್ (Ukraine) ದೇಶದ ಮೇಲೆ ರಷ್ಯಾದ (Russia) ಆಕ್ರಮಣ, ಅದರೊಂದಿಗೆ ಇಂಧನ ದೈತ್ಯ ರಷ್ಯಾದ ತೈಲ ಹಾಗೂ ಅನಿಲ ಪೂರೈಕೆಯ ಮೇಲೆ ಹೇರಲಾಗಿರುವ ನಿರ್ಬಂಧದಿಂದ ಇಂಧನ ಪೂರೈಕೆಯಲ್ಲಿ ವ್ಯತ್ಯಯವಾಗುವುದು ನಿಚ್ಚಳವಾಗಿದೆ. ಇದರ ಭಯದಲ್ಲಿಯೇ 2014ರ ಬಳಿಕ ಮೊದಲ ಬಾರಿಗೆ ಕಚ್ಚಾ ತೈಲದ (Crude Oil) ದರ ಪ್ರತಿ ಬ್ಯಾರಲ್ ಗೆ 110 ಡಾಲರ್ ಗಳ ಗಡಿ ದಾಟಿದೆ. ಇಂಧನ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶದ (ಪಿಪಿಎಸಿ) ಮಾಹಿತಿಯ ಪ್ರಕಾರ, ಮಾರ್ಚ್ 1 ರಂದು ಭಾರತ ಖರೀದಿಸಿದ ಕಚ್ಚಾ ತೈಲದ ಬಾಸ್ಕೆಟ್ ನ ಪ್ರತಿ ಬ್ಯಾರೆಲ್‌ನ ದರ 102 ಡಾಲರ್ ಆಗಿದೆ. ಇದು 2014ರ ಆಗಸ್ಟ್ ಬಳಿಕ ಅತ್ಯಧಿಕ ಮೊತ್ತ ಎಂದು ಪಿಟಿಐ ವರದಿ ಮಾಡಿತ್ತು.


ಕಳೆದ ವರ್ಷ ನವೆಂಬರ್ ಆರಂಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಲಾಕ್ ಆಗಿದ್ದಾಗ ಕಚ್ಚಾ ತೈಲದ ಪ್ರತಿ ಬ್ಯಾರೆಲ್‌ನ ಸರಾಸರಿ ಬೆಲೆ  81.5 ಡಾಲರ್ ಅಗಿದ್ದವು. "ಮುಂದಿನ ವಾರದಲ್ಲಿ ರಾಜ್ಯ ಚುನಾವಣೆಗಳು ಮುಕ್ತಾಯವಾಗಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎರಡರಲ್ಲೂ ದೈನಂದಿನ ಇಂಧನ ಬೆಲೆ ಏರಿಕೆಗಳು ಪುನರಾರಂಭಗೊಳ್ಳುತ್ತವೆ ಎನ್ನುವ ನಿರೀಕ್ಷೆ ಇದೆ" ಎಂದು ಹೂಡಿಕೆ ಬ್ಯಾಂಕಿಂಗ್ ಕಂಪನಿ ಜೆಪಿ ಮೋರ್ಗಾನ್ ವರದಿಯಲ್ಲಿ ತಿಳಿಸಿದೆ. ಉತ್ತರ ಪ್ರದೇಶ ವಿಧಾನಸಭೆಗೆ ಏಳನೇ ಮತ್ತು ಅಂತಿಮ ಹಂತದ ಮತದಾನ ಸೋಮವಾರ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

Petrol Price ಚುನಾವಣೆ ಬಳಿಕ ತೈಲ ದರ 12 ರು. ಏರಿಕೆ ಸಾಧ್ಯತೆ?
ಭಾರತವು ತನ್ನ ತೈಲ ಅಗತ್ಯಗಳ ಶೇ. 85ರಷ್ಟನ್ನು ಆಮದು ಮಾಡಿಕೊಳ್ಳುವ ಕಾರಣ, ದೇಶೀಯ ಇಂಧನ ಬೆಲೆಗಳು ನೇರವಾಗಿ ಅಂತಾರಾಷ್ಟ್ರೀಯ ತೈಲ ಬೆಲೆಗಳಇಗೆ ಸಂಬಂಧ ಹೊಂದಿದೆ. ಪ್ರಸ್ತುತ ಭಾರತದಲ್ಲಿ ಸತತ 118ನೇ ದಿನ ಇಂಧನ ದರದಲ್ಲಿ ಯಾವುದೇ ಪರಿಷ್ಕರಣೆ ಆಗಿಲ್ಲ.

Russia Ukraine Crisis:ಗೋಧಿ ಬೆಲೆ ಶೇ.55 ಏರಿಕೆ; ಜಾಗತಿಕ ಆಹಾರ ಧಾನ್ಯಗಳ ಪೂರೈಕೆ ಮೇಲೆ ಯುದ್ಧದ ಪರಿಣಾಮವೇನು?
ದರಗಳನ್ನು ಪ್ರತಿದಿನ ಪರಿಷ್ಕರಣೆ ಆಗುತ್ತವೆ,  ಆದರೆ ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಉತ್ತರ ಪ್ರದೇಶ, ಪಂಜಾಬ್ ಮತ್ತು ಇತರ ಮೂರು ರಾಜ್ಯಗಳಲ್ಲಿ ಚುನಾವಣೆಗಳಿಗೆ ದಿನಾಂಕಗಳ ಘೋಷಣೆ ಆದ ಬಳಿಕ ದರ ಪರಿಷ್ಕರಣೆಯನ್ನು ನಿಲ್ಲಿಸಿದ್ದವು.

 

Latest Videos
Follow Us:
Download App:
  • android
  • ios