ಅರ್ಧದಲ್ಲಿ ಸ್ಥಗಿತಗೊಂಡ ರೋಲರ್ ಕೋಸ್ಟರ್: ತಲೆಕೆಳಗಾದ ಸ್ಥಿತಿಯಲ್ಲಿ ಪ್ರವಾಸಿಗರು
- ಕ್ಯಾರೋವಿಂಡ್ಸ್ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಘಟನೆ
- ಉತ್ತರ ಕೆರೊಲಿನಾದಲ್ಲಿರುವ ಅಮ್ಯೂಸ್‌ಮೆಂಟ್ ಪಾರ್ಕ್
- 45 ನಿಮಿಷಗಳ ಕಾಲ ಇದು ಸ್ಥಗಿತಗೊಂಡ ರೋಲರ್ ಕೋಸ್ಟರ್
ವಂಡರ್ ಲಾದಂತಹ ಮನೋರಂಜನಾ ಹಾಗೂ ಸಾಹಸ ತಾಣಗಳಿಗೆ ನೀವು ಭೇಟಿ ನೀಡಿದ್ದರೆ ನಿಮಗೆ ರೋಲರ್ ಕೋಸ್ಟ್‌ನಲ್ಲಿ ಪ್ರಯಾಣಿಸಿದ ಅನುಭವವಿರಬಹುದು.
ರೋಲರ್ ಕೋಸ್ಟರ್ ಸವಾರಿ ನೋಡುಗರಿಗೆ ಅದರಲ್ಲಿ ಪ್ರಯಾಣಿಸುವವರಿಗೆ ಥ್ರಿಲ್ ಹಾಗೂ ಖುಷಿ ನೀಡುತ್ತದೆ. ಆದರೆ ಅತಿವೇಗದಲ್ಲಿ ಸುತ್ತುತ್ತಿರುವ ಟ್ರ್ಯಾಕ್ ಅನ್ನು ಏರುವಾಗ ಮತ್ತು ಇಳಿಯುವಾಗ ಅನೇಕರಿಗೆ ಭಯ ಉಂಟು ಮಾಡುತ್ತದೆ. ಆದರೆ ಅಮೆರಿಕಾದ ಉತ್ತರ ಕೆರೊಲಿನಾದ (North Carolina) ಕ್ಯಾರೋವಿಂಡ್ಸ್ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ ಹೀಗೆ ರೋಲರ್ ಕೋಸ್ಟರ್ ಏರಿದ ಸವಾರರ ಗುಂಪಿಗೆ ಮಾತ್ರ ಭಯಾನಕ ಅನುಭವವಾಗಿದೆ.
ರೋಲರ್ ಕೋಸ್ಟರ್ ಏರಿ ಎಂಜಾಯ್ ಮಾಡುತ್ತಿರಬೇಕಾದರೆ ಅದು ಮಧ್ಯದಲ್ಲೇ ಸ್ಥಗಿತಗೊಂಡು ಪ್ರವಾಸಿಗರು ತಲೆಕೆಳಗಾಗಿ ಇರುವಂತಾದ ಭಯಾನಕ ಘಟನೆ ನಡೆದಿದೆ. ಸುಮಾರು 45 ನಿಮಿಷಗಳ ಕಾಲ ಇದು ಸ್ಥಗಿತಗೊಂಡು ಪ್ರವಾಸಿಗರು ತಲೆಕೆಳಗಾಗಿ ಇರುವಂತಾಗಿತ್ತು ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಅವರಲ್ಲಿ ಯಾರಿಗೂ ಯಾವುದೇ ಹಾನಿಗಳಾಗಿಲ್ಲ. 'ಫ್ಲೈಯಿಂಗ್ ಕೋಬ್ರಾ' ಎಂಬ ಹೆಸರಿನ ರೋಲರ್‌ಕೋಸ್ಟರ್ ರೈಡ್‌ನಲ್ಲಿ ಸವಾರರು ಸಿಲುಕಿಕೊಂಡಿದ್ದಾರೆ. ಇದು ಗಂಟೆಗೆ 50 ಮೈಲು ವೇಗದಲ್ಲಿ (50mph) ವೇಗದಲ್ಲಿ 360-ಡಿಗ್ರಿ ಲೂಪ್‌ನಲ್ಲಿ ಜನರನ್ನು ಕಳುಹಿಸುವ ಸವಾರಿ ಇದಾಗಿದೆ. 125 ಅಡಿ ಎತ್ತರದ ಕೋಸ್ಟರ್ ರೈಡ್ ಮುಗಿಯುವ ಮೊದಲು ಸವಾರರನ್ನು ಆರು ಬಾರಿ ತಿರುಗಿಸುತ್ತದೆ. ದುರದೃಷ್ಟವಶಾತ್ ಈ ಗುಂಪಿಗೆ, ಅವರ ಸವಾರಿಯು ಸಂಪೂರ್ಣವಾಗಿ ತಲೆಕೆಳಗಾಗಿ ಚಲಿಸುತ್ತಿದ್ದಾಗ ಮೇಲ್ಭಾಗದಲ್ಲಿ ನಿಂತಿದೆ.
20 ತಾಸು, ಕೇಬಲ್‌ನಲ್ಲಿ ಸಿಲುಕಿದ್ದಾರೆ 46 ಪ್ರವಾಸಿಗರು, ಜೀವ ರಕ್ಷಿಸಲು ಯೋಧರ ಸಾಹಸ!
ನನ್ನ ಕಣ್ಣೀರು ಆಕಾಶದಿಂದ ಬೀಳುವುದನ್ನು ನಾನು ಸ್ವತಃ ನೋಡಿದೆ. ಅದು ಭಯಾನಕವಾಗಿತ್ತು ಎಂದು ಹೀಗೆ ಮಧ್ಯದಲ್ಲಿ ಸಿಲುಕಿಕೊಂಡ ವ್ಯಕ್ತಿಯೊಬ್ಬರು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ. ನಾನು ಅತ್ಯಂತ ಮೇಲ್ಭಾಗಕ್ಕೆ ಹೋದಾಗ ಇದು ಮಧ್ಯದಲ್ಲಿ ಸ್ಟಕ್ ಆಗಿದೆ ಎಂದು ಮೊದಲ ಬಾರಿಗೆ ಥೀಮ್ ಪಾರ್ಕ್‌ನಲ್ಲಿ ರೋಲರ್ ಕೋಸ್ಟರ್ ಸವಾರಿಯನ್ನು ಅನುಭವಿಸಿದ ಬ್ರ್ಯಾಂಡನ್ ಅಲೆನ್ ಹೇಳಿದ್ದಾರೆ.
ಬಾಯಾರಿಕೆ ನೀಗಿಸಲು ಮೂತ್ರ ಕುಡಿದೆವು: ರೋಪ್ ವೇನಲ್ಲಿ ಸಿಲುಕಿದವರ ಕರಾಳ ಅನುಭವ
ಘಟನೆಯ ಸ್ವಲ್ಪ ಸಮಯದ ನಂತರ ಕ್ಯಾರೋವಿಂಡ್ಸ್ ಅಮ್ಯೂಸ್‌ಮೆಂಟ್ ಪಾರ್ಕ್ (Carowinds amusement park) ಹೇಳಿಕೆಯನ್ನು ಬಿಡುಗಡೆ ಮಾಡಿತು. ರೈಡರ್‌ಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಿರ್ವಹಣಾ ತಂಡವು ತ್ವರಿತವಾಗಿ ಸ್ಪಂದಿಸಿದೆ ಎಂದು ಅದು ಹೇಳಿದೆ. 2019 ರಲ್ಲಿ 'ದಿ ಸ್ಮೈಲರ್' ಹೆಸರಿನ ರೋಲರ್‌ಕೋಸ್ಟರ್‌ನಲ್ಲಿ ಸವಾರರು ತಮ್ಮ ಸವಾರಿ ಮಧ್ಯದಲ್ಲಿ ಸ್ಥಗಿತಗೊಂಡ ನಂತರ ನೆಲದಿಂದ 100 ಅಡಿಗಳಷ್ಟು ದೂರದಲ್ಲಿ ಸಿಲುಕಿಕೊಂಡರು. ಯುಕೆಯ ಸ್ಟಾಫರ್ಡ್‌ಶೈರ್‌ನ ಆಲ್ಟನ್ ಟವರ್ಸ್‌ನಲ್ಲಿ ಈ ಘಟನೆ ನಡೆದಿತ್ತು. ಸವಾರರು 20 ನಿಮಿಷಕ್ಕೂ ಹೆಚ್ಚು ಕಾಲ ಸಿಲುಕಿಕೊಂಡಿದ್ದರು ಮತ್ತು ಹಲವರು ಭಯದಿಂದ ಕಿರುಚುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅದೃಷ್ಟವಶಾತ್, ಈ ಸಮಯದಲ್ಲಿ ಯಾರಿಗೂ ಗಾಯಗಳಾಗಿಲ್ಲ.