MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • India Independence
  • Indian Achievers
  • 20 ತಾಸು, ಕೇಬಲ್‌ನಲ್ಲಿ ಸಿಲುಕಿದ್ದಾರೆ 46 ಪ್ರವಾಸಿಗರು, ಜೀವ ರಕ್ಷಿಸಲು ಯೋಧರ ಸಾಹಸ!

20 ತಾಸು, ಕೇಬಲ್‌ನಲ್ಲಿ ಸಿಲುಕಿದ್ದಾರೆ 46 ಪ್ರವಾಸಿಗರು, ಜೀವ ರಕ್ಷಿಸಲು ಯೋಧರ ಸಾಹಸ!

ಜಾರ್ಖಂಡ್‌ನ ದಿಯೋಘರ್‌ನ ತ್ರಿಕೂಟ ಪರ್ವತದಲ್ಲಿ ರೋಪ್‌ವೇ ಅಪಘಾತದಲ್ಲಿ ಜೀವ ಉಳಿಸಲು ಸೇನೆಯಿಂದ ರಕ್ಷಣಾ ಕಾರ್ಯ ನಡೆಯುತ್ತಿದೆ. ಸುಡುವ ಬಿಸಿಲಿನಲ್ಲಿ ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೇಬಲ್‌ಗಳು ಗಂಟಾಕಿರುವ ಪರಿಣಾಮ ಯೋಧರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ, ಆದರೆ ಎಲ್ಲರನ್ನೂ ಉಳಿಸಲು ಭಾರೀ ಯತ್ನ ನಡೆಯುತ್ತಿದೆ. 48 ಮಂದಿ ಇನ್ನೂ ಕೇಬಲ್‌ನಲ್ಲೇ ತೂಗುತ್ತಿದ್ದಾರೆ. ಡ್ರೋನ್‌ಗಳ ಮೂಲಕ ಆಹಾರ ಮತ್ತು ನೀರನ್ನು ಅವರಿಗೆ ತಲುಪಿಸಲಾಗುತ್ತಿದೆ. ಈ ಕಾರ್ಯಾಚರಣೆಯಲ್ಲಿ ಸೇನೆಯು ಹೆಲಿಕಾಪ್ಟರ್‌ಗಳನ್ನು ಸಹ ನಿಯೋಜಿಸಿದೆ. ಆದಾಗ್ಯೂ, ರೆಕ್ಕೆಯಿಂದಾಗಿ ಕೆಲ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸೇನೆಗೆ ಸಹಾಯ ಮಾಡಲು ಸ್ಥಳೀಯ ಆಡಳಿತ ತಂಡವೂ ಸ್ಥಳದಲ್ಲಿದೆ.

2 Min read
Author : Suvarna News
Published : Apr 11 2022, 02:29 PM IST
Share this Photo Gallery
  • FB
  • TW
  • Linkdin
  • Whatsapp
110

ದಿಯೋಘರ್‌ನ ತ್ರಿಕುಟ್ ಪರ್ವತದಲ್ಲಿ ರೋಪ್‌ವೇ ಅಪಘಾತದಲ್ಲಿ ವಾಯುಪಡೆಯು ಎರಡು ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದೆ. ಸೇನಾ ಕಮಾಂಡೋಗಳು ಹಗ್ಗಗಳ ಸಹಾಯದಿಂದ ಗಾಳಿಯಲ್ಲಿ ನೇತಾಡುವ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅಪಘಾತದ ನಂತರ 26 ಟ್ರಾಲಿಗಳಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು NDRF ಅನ್ನು ಕರೆಯಲಾಯಿತು. ಪೊಲೀಸರು ಕೂಡ ರಾತ್ರಿಯಿಂದಲೇ ಸ್ಥಳದಲ್ಲಿ ಜಮಾಯಿಸಿದ್ದಾರೆ.

210

ಮೋಹನಪುರದ ತ್ರಿಕುಟ್ ಬೆಟ್ಟದಲ್ಲಿ ಭಾನುವಾರ ಸಂಜೆ ಅಪಘಾತ ಸಂಭವಿಸಿದೆ. ಇನ್ನೂ 48 ಮಂದಿ ಟ್ರಾಲಿಯಲ್ಲಿ ಸಿಲುಕಿದ್ದು, ಅವರನ್ನು ಹೊರತರಲು ರಕ್ಷಣಾ ಕಾರ್ಯ ನಡೆಯುತ್ತಿದೆ. ಈ ಎಲ್ಲಾ ಜನರು ರಾತ್ರಿಯಿಡೀ ಹೀಗೇ ಕೇಬಲ್ ಕಾರಿನಲ್ಲಿ ಕಳೆದಿದ್ದಾರೆ. ಬೆಳಗ್ಗೆ ವಾಯುಪಡೆಯ ಸಹಾಯ ಪಡೆದು ಎಲ್ಲರನ್ನೂ ಸುರಕ್ಷಿತವಾಗಿ ಸ್ಥಳಾಂತರಿಸಲು ಪ್ರಯತ್ನಿಸಲಾಯಿತು.

310

ವೈರ್‌ನಿಂದಾಗಿ ಸೇನಾ ಯೋಧರು ರಕ್ಷಣಾ ಕಾರ್ಯದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ. ಈ ದುರ್ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಆಡಳಿತದಿಂದ ಇದುವರೆಗೆ ಯಾವುದೇ ಅಂಕಿ ಅಂಶ ಹೊರಬಿದ್ದಿಲ್ಲ. ಜನರೆಲ್ಲರೂ ತಮ್ಮ ಆಪ್ತರ ಬಗ್ಗೆ ಚಿಂತಿಸುತ್ತಿದ್ದಾರೆ.

410

ರೋಪ್‌ವೇಯಲ್ಲಿ ಹೊರೆ ಹೆಚ್ಚಾದ ಕಾರಣ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಕಂಡು, ಕಂಪನಿಯು ಎಲ್ಲಾ ಟ್ರಾಲಿಗಳನ್ನು ಪ್ರಾರಂಭಿಸಲು ನಿರ್ಧರಿಸಿತು. ಹೀಗಾಗಿ ಹೊರೆ ಹೆಚ್ಚಾಯಿತು. ಇದರಿಂದಾಗಿ ಈ ಅವಘಡ ಸಂಭವಿಸಿದೆ. ಡೌನ್ ನಿಲ್ದಾಣದಿಂದ ಹೋಗುತ್ತಿದ್ದಾಗ ಟಾಪ್ ರೋಲರ್ ಒಡೆದು ಮೂರು ಟ್ರಾಲಿಗಳು ಕಲ್ಲುಗಳಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.

510

ಮಕ್ಕಳು, ಮಹಿಳೆಯರು ಕೂಡ ಟ್ರಾಲಿಗಳಲ್ಲಿ ಸಿಲುಕಿದ್ದಾರೆ. ಡ್ರೋನ್ ಮೂಲಕ ಎಲ್ಲರಿಗೂ ಆಹಾರ ಪದಾರ್ಥಗಳನ್ನು ತಲುಪಿಸಲಾಗುತ್ತಿದೆ. ನಿರಂತರವಾಗಿ ಅವರಿಗೆ ಧೈರ್ಯ ತುಂಬಲಾಗುತ್ತಿದೆ. ಜಿಲ್ಲಾಧಿಕಾರಿ ಮಂಜುನಾಥ ಭೈಜಂತ್ರಿ ಮಾತನಾಡಿ, ಸದ್ಯ ರೋಪ್ ವೇ ಬಂದ್ ಆಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

610

ರಾತ್ರಿಯಿಡೀ ಈ ಜನರು ಟ್ರಾಲಿಯಲ್ಲಿ ಕುಳಿತು ಗಾಳಿಯಲ್ಲಿ ನೇತಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ. ಅವರು ಪರಸ್ಪರ ಮಾತನಾಡುವ ಮೂಲಕ ತಮ್ಮ ಭಯವನ್ನು ಹೋಗಲಾಡಿಸಲು ಪ್ರಯತ್ನಿಸಿದರು. ಮುಂಜಾನೆ ಸೇನಾ ಸಿಬ್ಬಂದಿ ಅಲ್ಲಿಗೆ ಆಗಮಿಸಿ ರಕ್ಷಣಾ ಕಾರ್ಯ ಆರಂಭಿಸಿದರು.

710

ಬೆಳಗ್ಗೆ 6.30ರ ಸುಮಾರಿಗೆ ವಾಯುಪಡೆಯ ಹೆಲಿಕಾಪ್ಟರ್‌ಗಳೂ ಅಲ್ಲಿಗೆ ತಲುಪಿದವು. ಹೆಲಿಕಾಪ್ಟರ್ ಕಾರ್ಯಾಚರಣೆ ಆರಂಭಿಸುವ ಮುನ್ನ ವೈಮಾನಿಕ ಸಮೀಕ್ಷೆ ನಡೆಸಲಾಗಿತ್ತು. ಇದಾದ ಬಳಿಕ ಟ್ರಾಲಿಯಲ್ಲಿ ಸಿಲುಕಿದ್ದವರನ್ನು ಸುರಕ್ಷಿತವಾಗಿ ಕೆಳಗಿಳಿಸಲು ಯೋಜನೆ ರೂಪಿಸಿ ನಂತರ ರಕ್ಷಣಾ ಕಾರ್ಯ ಆರಂಭಿಸಲಾಯಿತು.

810
বাংলা-দেওঘর রোপওয়ে অ্যাক্সিডেন্ট

বাংলা-দেওঘর রোপওয়ে অ্যাক্সিডেন্ট

ವದಂತಿಗಳನ್ನು ಹಬ್ಬಿಸದಂತೆ ಜಿಲ್ಲಾಧಿಕಾರಿ ಮಂಜುನಾಥ್ ಮನವಿ ಮಾಡಿದ್ದಾರೆ. ಈಗ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಹೇಳಿದರು. ಇನ್ನೂ ಕೆಲವರು ರೋಪ್ ವೇಯಲ್ಲಿ ಕೇಬಲ್ ಕಾರ್ ಗಳಲ್ಲಿ ಸಿಲುಕಿಕೊಂಡಿದ್ದು, ಅವರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತಿದೆ.

910

ಭಾನುವಾರ ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸಂಸದ ಡಾ.ನಿಶಿಕಾಂತ್ ದುಬೆ ಸೇರಿದಂತೆ ಸಾರ್ವಜನಿಕರು ಹಾಗೂ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಆಗಮಿಸಿದರು. ಎಲ್ಲರೂ ಪರಿಸ್ಥಿತಿಯ ಮೇಲೆ ನಿಗಾ ಇಡುತ್ತಿದ್ದಾರೆ. ಎಲ್ಲರೂ ರಾತ್ರಿಯಿಡೀ ಅಲ್ಲಿಯೇ ಬೀಡುಬಿಟ್ಟರು ಮತ್ತು ಕ್ಷಣ ಕ್ಷಣಕ್ಕೂ ಮಾಃಇತಿ ಪಡೆಯುತ್ತಿದ್ದಾರೆ.

1010

ರೋಪ್ ವೇ ನಡೆಸುತ್ತಿರುವ ದಾಮೋದರ್ ವ್ಯಾಲಿ ಕಾರ್ಪೊರೇಷನ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಹಫೀಜುಲ್ ಹಸನ್ ಹೇಳಿದ್ದಾರೆ. ಅವರನ್ನು ಕಪ್ಪುಪಟ್ಟಿಗೆ ಸೇರಿಸುತ್ತೇವೆ. ಅಪಘಾತದ ಪ್ರತಿಯೊಂದು ಅಂಶವನ್ನು ತನಿಖೆ ಮಾಡಲಾಗುತ್ತದೆ. ಇದರೊಂದಿಗೆ ಭಕ್ತರಿಗಾಗಿ ರಸ್ತೆ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದಿದ್ದಾರೆ. 

About the Author

SN
Suvarna News
ಅಪಘಾತ

Latest Videos
Recommended Stories
Recommended image1
ಇತಿಹಾಸ ಸೃಷ್ಟಿಸಿದ ಸಣ್ಣ ಪಟ್ಟಣದ ಸಾಮಾನ್ಯ ಹುಡುಗಿ ನಂದಿನಿ ಅಗರ್ವಾಲ್
Recommended image2
ಚಿಕ್ಕ ವಯಸ್ಸಿಗೆ ರಾಷ್ಟ್ರಪತಿಗಳಿಂದ ಚಿನ್ನದ ಪದಕ ಪಡೆದ ಈ ಬಾಲನಟ ಈಗ ಲೆಜೆಂಡರಿ ಸ್ಟಾರ್!
Recommended image3
ಸ್ವಾತಂತ್ರ್ಯ ಅಮೃತ ಮಹೋತ್ಸವ: ಸಲ್ಮಾನ್, ಶಾರುಖ್, ಕಂಗನಾ ಸಂಭ್ರಮ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved