Asianet Suvarna News Asianet Suvarna News

ವಾಲ್‌ಮಾರ್ಟ್ ಸೇರಿದಂತೆ ಹಲವು ರಿಟೇಲ್ ಶಾಪ್‌ಗಳಲ್ಲಿ ಮಾಸ್ಕ್ ಕಡ್ಡಾಯ, ಗ್ರಾಹಕರು ಪಾಲಿಸುತ್ತಿಲ್ಲ ನಿಯಮ!

ಕೊರೋನಾ ವೈರಸ್ ಕಾರಣ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯವಾಗಿದೆ. ಆದರೆ ಅಮೆರಿಕದ ವಾಲ್‌ಮಾರ್ಟ್ ಸೇರಿದಂತೆ ಹಲವು ರಿಟೇಲ್ ಶಾಪ್‌ಗಳಲ್ಲೂ ಮಾಸ್ಕ್ ಕಡ್ಡಾಯ ಮಾಡಿ ಎಲ್ಲರ ಗಮನಸೆಳೆದಿದ್ದರು. ಆದರೆ ಇದೀಗ ಈ ನಿಯಮದ ಆಯ್ಕೆ ಗ್ರಾಹಕರಿಗೆ ಬಿಡಲಾಗಿದೆ.

Retailers and their employees are finding themselves playing the uncomfortable role of mask police
Author
Bengaluru, First Published Jul 27, 2020, 3:45 PM IST

ಅಮೆರಿಕ(ಜು.27): ವಾಲ್‌ಮಾರ್ಟ್ ಹಾಗೂ ಇತರ ರಿಟೇಲ್ ಸ್ಟೋರ್‌ಗಳಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಮಾಸ್ಕ್ ಕಡ್ಡಾಯ ಮಾಡಲಾಗಿದೆ. ಆದರೆ ಒಂದೇ ವಾರದಲ್ಲಿ ರಿಟೇಲ್ ಸ್ಟೋರ್ ಇದೀಗ ಉಲ್ಟಾ ಹೊಡೆಯತ್ತಿದೆ. ಅಮೆರಿಕದ ವಾಲ್ಮಾರ್ಟ್, ಹೋಮ್ ಡಿಪೋ, ಲೋವೆಸ್, ವಾಲ್ಸಿನ್ಸ್ ಸಿವಿಎಸ್ ಮತ್ತು ಇತರರು ಅಂಗಡಿಗಳಲ್ಲಿ ಶಾಪಿಂಗ್ ಮಾಡಲು ಮಾಸ್ಕ್ ಕಡ್ಡಾಯ ಮಾಡಲಾಗಿತ್ತು. ಇದೀಗ ಮಾಸ್ಕ್ ಧರಿಸಿದ ಗ್ರಾಹಕರಲ್ಲೂ ಈ ರಿಟೇಲ್ ಸ್ಟೋರ್‌ಗಳು ವ್ಯವಹಾರ ನಡೆಸುತ್ತಿದೆ. 

ವಾಲ್‌ಮಾರ್ಟ್ ಇಂಡಿಯಾ ಖರೀದಿಸಿದ ಇ ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್!.

ಹಲವು ಗ್ರಾಹಕರು ಮಾಸ್ಕ್ ಧರಿಸಿ ಖರೀದಗಿ ಆಗಮಿಸತ್ತಾರೆ. ಆದರೆ ಕೆಲವರು ಮಾಸ್ಕ್ ಧರಿಸಲು ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮಾಸ್ಕ್ ಧಾರಣೆ ಆಯ್ಕೆ ಗ್ರಾಹಕರದ್ದು ಎಂದು ರಿಟೇಲ್ ಸ್ಟೋರ್ ನಿರ್ಧರಿಸಿದೆ.  ಇಷ್ಟೇ ಅಲ್ಲ ರಿಟೇಲ್ ಸ್ಟೋರ್ ಉದ್ಯೋಗಿಗಳು ಹಾಗೂ ಗ್ರಾಹಕರನ್ನು ನಿಭಾಯಿಸುವುದೇ ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಅಮೆರಿಕದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇತ್ತ ಮಾಸ್ಕ್ ಧರಿಸದೇ ರಿಟೇಲ್ ಸ್ಟೋರ್‌ಗೆ ಆಗಮಿಸುವ ಗ್ರಾಹಕರಿಗೆ ಉದ್ಯೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಉದ್ಯೋಗಿಗಳು ಹಾಗೂ ಗ್ರಾಹಕರ ನಡುವೆ ಸಮನ್ವಯ ಸಾಧಿಸುವುದೇ ಬಹುದೊಡ್ಡ ಸಮಸ್ಯೆಯಾಗಿದೆ ಎಂದು ವಾಲ್‌ಮಾರ್ಟ್ ಹೇಳಿದೆ.

Follow Us:
Download App:
  • android
  • ios