Asianet Suvarna News Asianet Suvarna News

ವಾಲ್‌ಮಾರ್ಟ್ ಇಂಡಿಯಾ ಖರೀದಿಸಿದ ಇ ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್!

ಇ ಕಾಮರ್ಸ್ ದಿಗ್ಗಜನಾಗಿ ಬೆಳೆದಿರುವ ಫ್ಲಿಪ್‌ಕಾರ್ಟ್ ಇದೀಗ ವಾಲ್‌ಮಾರ್ಟ್ ಇಂಡಿಯಾದ ಸಂಪೂರ್ಣ ಷೇರು ಖರೀದಿಸುವ ಮೂಲಕ ಭಾರತದ ಅತೀ ದೊಡ್ಡ ಆನ್‌ಲೈನ್ ಶಾಂಪಿಂಗ್ ಉದ್ಯಮಕ್ಕೆ ಫ್ಲಿಪ್‌ಕಾರ್ಟ್ ನಾಂದಿ ಹಾಡಿದೆ. ಇದೀಗ ತರಕಾರಿ, ಆಹಾರ ಉತ್ಪನ್ನಗಳು, ದಿನಸಿಗಳು ಸಗಟು ದರದಲ್ಲಿ ಲಭ್ಯವಾಗಲಿದೆ.

E commerce player Flipkart Group has acquired 100 percent stake in Walmart India
Author
Bengaluru, First Published Jul 23, 2020, 8:23 PM IST

ಬೆಂಗಳೂರು(ಜು.23); ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಆನ್‌ಲೈನ್ ಶಾಂಪಿಂಗ್ ಬೇಡಿಕೆ ಹೆಚ್ಚು. ಮನೆಯಲ್ಲಿ ಕುಳಿತು ತಮಗೆ ಬೇಕಾದ ವಸ್ತುಗಳು, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ, ದಿನಸಿ ಸೇರಿದಂತೆ ಎಲ್ಲವನ್ನೂ ಖರೀದಿಸುವ ಯುಗದಲ್ಲಿ ನಾವಿದ್ದೇವೆ. ಇದು ಇಂದಿನ ಪರಿಸ್ಥಿತಿಗೆ ಅಗತ್ಯವೂ ಹೌದು. ಹೀಗಾಗಿ ಸಣ್ಣ ಸಣ್ಣ ವ್ಯಾಪಸ್ಥರೂ ಇದೀಗ ಆನ್‌ಲೈನ್ ಆಯ್ಕೆಯನ್ನು ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ ಫ್ಲಿಪ್‌ಕಾರ್ಟ್ ಭಾರತದಲ್ಲಿ flipkart wholesale ಉದ್ದಿಮೆ ಆರಂಭಿಸಿದೆ.

ಸ್ಥಳೀಯ ಕರಕುಶಲ ವಸ್ತುಗಳ ಉತ್ತೇಜನಕ್ಕೆ ಕರ್ನಾಟಕ ಸರ್ಕಾರದ ಜೊತೆ ಫ್ಲಿಪ್‌ಕಾರ್ಟ್ ಒಪ್ಪಂದ!.

ಸಗಟುದರದಲ್ಲಿ ದಿನಸಿ, ಆಹಾರ ಪದಾರ್ಥಗಳು ಸೇರಿದಂತೆ ದಿನ ದಿನತ್ಯ ಬಳಕೆ ವಸ್ತುಗಳ ಮಾರಾಟವನ್ನು ಫ್ಲಿಪ್‌ಕಾರ್ಟ್ ವಿಸ್ತರಿಸಿದೆ. ಸಗಟು ದರದಲ್ಲಿ ದಿನಸಿ ಸೇರಿದಂತೆ ಆಹಾರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಇ ಕಾರ್ಮಸ್ ವಾಲ್‌ಮಾರ್ಟ್ ಇಂಡಿಯಾವನ್ನು ಇದೀಗ ಫ್ಲಿಪ್‌ಕಾರ್ಟ್ ಖರೀದಿಸಿದೆ. ಈ ಮೂಲಕ ಭಾರತದಲ್ಲಿ  wholesale ಉದ್ದಿಮೆಯನ್ನು ಫ್ಲಿಪ್‌ಕಾರ್ಟ್ ಆರಂಭಿಸಿದೆ.

ವಿಶ್ವದ ಇ ಕಾಮರ್ಸ್ ದಿಗ್ಗಜನಾಗಿರು ವಾಲ್‌ಮಾರ್ಟ್ ಭಾರತದಲ್ಲಿ ವೋಲ್‌ಸೇಲ್ ದರದಲ್ಲಿ ವಸ್ತುಗಳ ಮಾರಾಟ ಮಾಡುತ್ತಿತ್ತು. ಈ ಮೂಲಕ ಹಳ್ಳಿ ಹಳ್ಳಿಯ ಸಣ್ಣ ಸಣ್ಣ ವ್ಯಾಪರಸ್ಥರು, ಗ್ರಾಹಕರು ಸೇರಿದಂತೆ ಹಲವರಿಗೆ ನೆರವಾಗಿತ್ತು. ಇದೀಗ ಫ್ಲಿಪ್‌ಕಾರ್ಟ್, ವಾಲ್‌ಮಾರ್ಟ್ ಇಂಡಿಯಾ ಖರೀದಿಸಿದ್ದು, ಭಾರತ ಉದ್ದಿಮಗೆ ಹೊಸ ಭಾಷ್ಯ ಬರೆಯಲಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿದೆ.

Follow Us:
Download App:
  • android
  • ios