Asianet Suvarna News Asianet Suvarna News

ರಸ್ತೆ ಬದಿ ವರದಿ ಮಾಡ್ತಿದ್ದ ವರದಿಗಾರ್ತಿಗೆ ಬಿಸಿ ಅಪ್ಪುಗೆ : ಫೋಟೋ ವೈರಲ್‌

  • ಕರ್ತವ್ಯದಲ್ಲಿದ್ದ ವರದಿಗಾರ್ತಿಯನ್ನು ತಬ್ಬಿಕೊಂಡ ಅಪರಿಚಿತೆ
  • ಅಪರಿಚಿತೆಯ ಅಪ್ಪುಗೆಗೆ ಮರುಳಾದ ವರದಿಗಾರ್ತಿ
  • ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌
     
reporter received free hug on duty photos goes viral akb
Author
Bangalore, First Published Apr 29, 2022, 12:57 PM IST

ಕರ್ತವ್ಯದಲ್ಲಿದ್ದ ವರದಿಗಾರ್ತಿಯೊಬ್ಬರನ್ನು ನಿರ್ಗತಿಕ ಮಹಿಳೆಯೊಬ್ಬಳು ಬಂದು ಅಚಾನಕ್‌ ಆಗಿ ಬಂದು ತಬ್ಬಿಕೊಂಡು ಬಿಸಿ ಅಪ್ಪುಗೆ ನೀಡಿದ್ದಾಳೆ. ಈ ಫೋಟೋಗಳನ್ನು ವರದಿಗಾರ್ತಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ಈ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಎಬಿಎಸ್-ಸಿಬಿಎನ್ (ABS-CBN) ಚಾನೆಲ್‌ನ ವರದಿಗಾರ್ತಿ ಇಜ್ಜಿ ಲೀ (Izzy Lee) ಈ ಫೋಟೋಗಳನ್ನು (ಏಪ್ರಿಲ್ 28 ) ಗುರುವಾರ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಇದು ಇಂದು ಕರ್ತವ್ಯದಲ್ಲಿರುವಾಗ ನಡೆಯಿತು, ಉಚಿತವಾದ ಅಪ್ಪುಗೆ ಎಂದು ಲೀ ಈ ಪೋಟೊವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್‌ (twitter) ಮಾಡಿದ್ದಾರೆ. ವರದಿಗಾರ್ತಿ ಲೀ ಬಳಿ ಅಪರಿಚಿತೆ ಹೇಗೆ ಹೋದರು ಮತ್ತು ಲೀ ಬೀದಿ ಬದಿ ವರದಿ ಮಾಡುತ್ತಿದ್ದಾಗ ಅವಳನ್ನು ಹೇಗೆ ತಬ್ಬಿಕೊಂಡರು ಎಂಬುದನ್ನು ಫೋಟೋಗಳು ತೋರಿಸಿವೆ.

ಕೊನೆಯ ಫೋಟೋದಲ್ಲಿ (Photo) ಅಪರಿಚಿತೆ ಕ್ಯಾಮರಾ (Camera) ಮುಂದೆ ಪೋಸ್ ನೀಡುವಂತೆ ತೋರುತ್ತಿದೆ. ಮೈಕ್ರೋ ಬ್ಲಾಗಿಂಗ್ ಪ್ಲಾಟ್‌ಫಾರ್ಮ್‌ ಟ್ವಿಟ್ಟರ್‌ನಲ್ಲಿ ಅವರ ಈ ಟ್ವಿಟ್‌ ಸಖತ್ ವೈರಲ್‌ ಆಗಿದೆ. ಇಲ್ಲಿವರೆಗೆ ಈ ಟ್ವಿಟ್‌ 53,000 ಬಾರಿ ರಿಟ್ವೀಟ್‌ ಆಗಿದೆ. ಅಲ್ಲದೇ  500,000 ಹೆಚ್ಚು ಜನ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ. ಅಪರಿಚಿತೆಯೊಬ್ಬಳು ಪತ್ರಕರ್ತೆಯನ್ನು ತಬ್ಬಿಕೊಂಡಿದ್ದು ಹಾಗೂ ವರದಿಗಾರ್ತಿ ಅದಕ್ಕೆ ಪ್ರತಿಕ್ರಿಯಿಸಿದ ರೀತಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದು, ಇದೊಂದು ಮುದ್ದಾದ, ಹೃದಯಸ್ಪರ್ಶಿ ಮತ್ತು ಆರೋಗ್ಯಕರ ಬೆಳವಣಿಗೆ ಎಂದಿದ್ದಾರೆ. ಇದು ತುಂಬಾ ಮುದ್ದಾಗಿದೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಆಕೆಯ ನಗು ಎಲ್ಲವನ್ನು ಭಾವನೆಗಳನ್ನು ಕರಗಿಸುತ್ತದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಬೆಚ್ಚನೆಯ ಅಪ್ಪುಗೆಯೂ ಬೇಕು ಎಂದು ಕಾಮೆಂಟ್ ಮಾಡಿದ್ದಾರೆ. 

ನನಗೆ ಇದೀಗ ಅಪ್ಪುಗೆಯ ಅಗತ್ಯವಿದೆ ಎಂದು ಮಗದೊಬ್ಬ ಟ್ವಿಟರ್ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಅಪ್ಪಿಕೊಳ್ಳುವುದು (Hug) ಅತ್ಯಂತ ಆರಾಮದಾಯಕ ಮತ್ತು ಖುಷಿ (Happy) ನೀಡುವ ಸಂವಹನದ ಸ್ಪರ್ಶವಾಗಿದೆ. ನಾವು ಉತ್ಸುಕರಾದಾಗ, ಸಂತೋಷದಿಂದ, ದುಃಖದಲ್ಲಿರುವಾಗ ಅಥವಾ ಸಾಂತ್ವನ ನೀಡಲು ಪ್ರಯತ್ನಿಸಿದಾಗ ನಾವು ಇತರರನ್ನು ತಬ್ಬಿಕೊಳ್ಳುತ್ತೇವೆ. ಇದ್ರಿಂದ ಆರೋಗ್ಯ (Health)ಕ್ಕೂ ಅದೆಷ್ಟು ಪ್ರಯೋಜನವಿದೆ ಗೊತ್ತಾ ?

Hug day: ಮನದ ಮಾತನ್ನು ಅಪ್ಪಿಕೊಂಡು ಹೇಳಿದ್ರೆ ಒಪ್ಪಿಕೊಳ್ದೆ ಇರ್ತಾರಾ?
ಮನುಷ್ಯ ಭಾವನೆಗಳನ್ನು ವ್ಯಕ್ತಪಡಿಸಲು ಹಲವಾರು ವಿಧಾನಗಳಿವೆ. ಮಾತನಾಡುವುದು, ಸನ್ನೆ ಮಾಡುವುದು, ನಗುವುದು (Laughing), ಅಳುವುದು (Crying) ಹೀಗೆ ಸಂವಹನಕ್ಕೆ ಹಲವು ರೂಪಗಳನ್ನು ಜನರು ಬಳಸುತ್ತಾರೆ. ಅಪ್ಪಿಕೊಳ್ಳುವುದು ಅತ್ಯಂತ ಆರಾಮದಾಯಕ ಮತ್ತು ಖುಷಿ (Happy) ನೀಡುವ ಸಂವಹನದ ಸ್ಪರ್ಶವಾಗಿದೆ. ಅಪ್ಪಿಕೊಳ್ಳುವುದು ಸಾರ್ವತ್ರಿಕವಾಗಿ ಸಾಂತ್ವನ ನೀಡುತ್ತದೆ ಎಂದು ಹೇಳಲಾಗುತ್ತದೆ. ಅದಲ್ಲದೆಯೂ ಅಪ್ಪಿಕೊಳ್ಳುವುದರಿಂದ ಅದೆಷ್ಟು ಆರೋಗ್ಯ ಪ್ರಯೋಜನ (Health Benefits) ಗಳಿವೆ ಅನ್ನೋದು ನಿಮಗೆ ಗೊತ್ತಾ ?

ಹಗ್ ಮಿ ಪ್ಲೀಸ್..ಅಪ್ಪುಗೆಯಿಂದ ಪ್ರೀತಿ ಮಾತ್ರವಲ್ಲ, ಆರೋಗ್ಯನೂ ಹೆಚ್ಚುತ್ತೆ
ಸ್ನೇಹಿತರು ಅಥವಾ ಕುಟುಂಬದ ಸದಸ್ಯರು ತಮ್ಮ ಜೀವನದಲ್ಲಿ ನೋವನ್ನು ಅನುಭವಿಸುತ್ತಿರುವಾಗ, ಅವರನ್ನು ಅಪ್ಪಿಕೊಳ್ಳಿ. ಸ್ಪರ್ಶದ ಮೂಲಕ ಇನ್ನೊಬ್ಬ ವ್ಯಕ್ತಿಗೆ ಬೆಂಬಲವನ್ನು ನೀಡುವುದರಿಂದ ಇದು ವ್ಯಕ್ತಿಯ ಒತ್ತಡವನ್ನು ಕಡಿಮೆ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ.  ನಾವು ಯಾರನ್ನಾದರೂ ತಬ್ಬಿಕೊಂಡಾಗ ಅವರನ್ನು ಸಾಂತ್ವನಗೊಳಿಸಿದಾಗ, ನಮ್ಮ ಮೆದುಳು ಸಹ ರಿಲ್ಯಾಕ್ಸ್ ಆಗುತ್ತದೆ.

ಅಪ್ಪಿಕೊಳ್ಳುವಿಕೆಯು ಒತ್ತಡವನ್ನು ಕಡಿಮೆ ಮಾಡುತ್ತದೆ. 400ಕ್ಕೂ ಹೆಚ್ಚು ವಯಸ್ಕರ ಅಧ್ಯಯನದಲ್ಲಿ, ತಬ್ಬಿಕೊಳ್ಳುವಿಕೆಯು ವ್ಯಕ್ತಿಯು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಹೆಚ್ಚು ತಬ್ಬಿಕೊಳ್ಳುವವರಲ್ಲಿ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಕಡಿಮೆ, ಕಡಿಮೆ ತಬ್ಬಿಕೊಳ್ಳುವವರಲ್ಲಿ ಹೆಚ್ಚು ಆರೋಗ್ಯ ಸಮಸ್ಯೆ ಕಂಡು ಬಂತು.
 

Follow Us:
Download App:
  • android
  • ios