'ಹಗ್ ಡೇ' ವ್ಯಾಲೆಟೈನ್ಸ್ ವೀಕ್ ನಲ್ಲಿ ಆಚರಿಸುವ ಮತ್ತೊಂದು ವಿಶೇಷ ದಿನ. ಫೆಬ್ರವರಿ 12 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಹಗ್ ಮಾಡುವುದರಿಂದ ಏನೆಲ್ಲಾ ಉಪಯೋಗಗಳಿವೆ, ಇದರಿಂದಾಗಿ ನಿಮ್ಮ ಸಂಗಾತಿಗೆ ನಿಮ್ಮ ಬಗ್ಗೆ ಯಾವ ಭಾವನೆ ಮೂಡುತ್ತದೆ ಎಂಬುದನ್ನು ನೋಡೋಣ.

ವ್ಯಾಲೆಂಟೈನ್ಸ್ ಡೇ ಫೆಬ್ರವರಿ (February) 14 ನೇ ತಾರೀಕು. ಆದರೆ, ಅದಕ್ಕಿಂತ ಎರಡು ದಿನ ಮುಂಚೆ ಹಗ್ ಡೇ (Hug day ) ಆಚರಿಸಲಾಗುತ್ತದೆ. ಈ ಹೆಸರು ಕೇಳಿದರೇನೇ ಬೆಚ್ಚಗಿನ (Warm) ಅನುಭವವಾಗುತ್ತದೆ. ಹಾಗೆಯೇ ನಿಮ್ಮ ಸಂಗಾತಿಗೆ ನಿಮ್ಮ ಮೇಲಿನ ಪ್ರೀತಿ ಹಾಗೂ ಭಾವನೆಗಳು (Feeling) ಬೆಚ್ಚಗಿನ ಅನುಭವ ನೀಡುವಂತೆ ಮಾಡಲು ಹಗ್ ಡೇ ಆಚರಿಸಿಕೊಳ್ಳಿ.

ಬರಿಯ ಒಂದು ಹಗ್ ಮಾಡುವುದರಿಂದ ನಿಮ್ಮ ಮನಸ್ಸಿನ ಭಾವನೆಗಳು ನಿಮ್ಮ ಸಂಗಾತಿಯ ಮನಸ್ಸನ್ನು ಮುಟ್ಟುತ್ತದೆ. ಮಾತಿನಲ್ಲಿ ಹೇಳಲಾಗದ ಎಷ್ಟೋ ವಿಚಾರಗಳನ್ನು ಸ್ಪರ್ಶ ಹೇಳುತ್ತದೆ. ಪ್ರೀತಿ, ಆರೈಕೆ, ಸಂತೋಷ, ಕಾಳಜಿ ಈ ಎಲ್ಲ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಹಗ್ ಮಾಡುವುದು ಒಳ್ಳೆಯ ಮಾರ್ಗ. ಇದು ನಿಮ್ಮ ಭಾವನೆಯನ್ನು ನೇರವಾಗಿ ನಿಮ್ಮ ಸಂಗಾತಿಯ ಹೃದಯಕ್ಕೆ (Heart) ತಲುಪಿಸುತ್ತದೆ. ಹಗ್ ಮಾಡುವುದು ಎಂದರೆ ಬರಿಯ ರೊಮ್ಯಾನ್ಸ್ (Romance) ಎಂದರ್ಥವಲ್ಲ. ಬದಲಿಗೆ ಎರಡು ಹೃದಯಗಳು ಪರಸ್ಪರ ಮಾತನಾಡಿಕೊಳ್ಳುವ ವಿಶೇಷ ಸಮಯ. ನೀವು ಬಾಯಿ ಮಾತಿನಲ್ಲಿ ಹೇಳಲಾಗದ ಎಷ್ಟೋ ಸಂಗತಿಗಳನ್ನು ಈ ಸಣ್ಣ ಕ್ರಿಯೆ ಅರ್ಥ ಮಾಡಿಸುತ್ತದೆ. ನೀವು ಹೇಳುತ್ತಿರುವ ಭಾವನೆಗಳನ್ನು ಅಪ್ಪುಗೆ ನಿಮ್ಮ ಸಂಗಾತಿಯ ಮನ ಮುಟ್ಟುವಂತೆ ಅರ್ಥ ಮಾಡಿಸುತ್ತದೆ.

ಇದು ಸುಮ್ಮನೆ ಹೇಳುತ್ತಿರುವ ಮಾತಲ್ಲ, ಇದರ ಬಗ್ಗೆ ಸಂಶೋಧನೆಗಳು (Research) ಕೂಡ ನಡೆದಿವೆ. ಹಾಗಾಗಿ ವೈಜ್ಞಾನಿಕವಾಗಿಯೂ ಕೂಡ ಈ ಎಲ್ಲ ಸಂಗತಿಗಳು ಸಾಬೀತಾಗಿದೆ. ಒತ್ತಡ (Stress) ಹಾಗೂ ಉದ್ವೇಗ (Anxiety) ಇಂತಹ ಸೂಕ್ಷ್ಮ ವಿಚಾರಗಳನ್ನು ಸ್ಪರ್ಶದಿಂದ ಕಡಿಮೆ ಮಾಡಬಹುದು ಅಂದರೆ ಶೇಕ್ ಹ್ಯಾಂಡ್ (Shake Hand) ಅಥವಾ ಹಗ್ ಮಾಡುವುದರಿಂದ ಮತ್ತೊಬ್ಬ ವ್ಯಕ್ತಿಗೆ ಧೈರ್ಯ ನೀಡಬಹುದು ಅವರ ಬಗ್ಗೆ ಅವರಿಗೆ ಆತ್ಮವಿಶ್ವಾಸ (Confidence) ಮೂಡುವಂತೆ ಮಾಡಬಹುದು ಹಾಗೂ ನಂಬಿಕೆ ಹೆಚ್ಚಿಸಬಹುದು. ಇದಿಷ್ಟೇ ಅಲ್ಲ ಹಗ್ ಮಾಡುವುದರಿಂದ ಇನ್ನೂ ಕೆಲವು ಉಪಯೋಗಗಳನ್ನು ತಿಳಿಯೋಣ..

  • ತಬ್ಬಿ ಕೊಳ್ಳುವುದರಿಂದ ಒತ್ತಡವನ್ನು ಸೃಷ್ಟಿ ಮಾಡುವ ಹಾರ್ಮೋನುಗಳು ಕಡಿಮೆಯಾಗುತ್ತದೆ. ಇದು ಮಾನಸಿಕ ನೆಮ್ಮದಿಯನ್ನು ಹೆಚ್ಚಿಸುತ್ತದೆ. ಒತ್ತಡ ಕಡಿಮೆಯಾದಾಗ ಸಹಜವಾಗಿ ನಿದ್ರಾಹೀನತೆಯ (Sleeplessness) ಸಮಸ್ಯೆ ನಿವಾರಣೆಯಾಗುತ್ತದೆ.

Cool Tips: ಪದೇ ಪದೇ ನೀವೂ ಕಿರುಚಾಡ್ತೀರಾ? ಆರೋಗ್ಯಕ್ಕೆ ಒಳ್ಳೇದಲ್ಲ ಬಿಟ್ಟು ಬಿಡಿ

  • ಒಂದು ಅಪ್ಪುಗೆಯಿಂದ ಆಕ್ಸಿಟೋಸಿನ್ (Oxytocin) ಎನ್ನುವ ಹಾರ್ಮೋನ್ ಬಿಡುಗಡೆಯಾಗುತ್ತದೆ. ಇದು ಸಂತೋಷದ (Happy) ಹಾರ್ಮೋನು ಆಗಿದೆ. ಇದರಿಂದ ನೀವು ಹಾಗೂ ನಿಮ್ಮ ಸಂಗಾತಿ ಇಬ್ಬರು ಹೆಚ್ಚು ಸಂತೋಷವಾಗಿರುತ್ತೀರಿ.
  • ತಬ್ಬಿ ಕೊಳ್ಳುವುದರಿಂದ ನಿಮ್ಮ ಹಾಗೂ ನೀವು ತಬ್ಬಿಕೊಳ್ಳುತ್ತಿರುವ ವ್ಯಕ್ತಿಯ ಜೊತೆಗಿನ ಬಾಂಧವ್ಯ (Connection) ಹೆಚ್ಚುತ್ತದೆ, ಇಬ್ಬರ ಮನಸ್ಸನ್ನು ಬೆಸೆಯುತ್ತದೆ.
  • ನೀವು ಒಬ್ಬಂಟಿ ಅಲ್ಲ, ನಿಮ್ಮನ್ನು ಪ್ರೀತಿಸುವವರು ನಿಮ್ಮೊಂದಿಗೆ ಇದ್ದಾರೆ, ನಿಮ್ಮ ಬಗ್ಗೆ ಕಾಳಜಿ (Care) ತೋರಿಸುವವರಿದ್ದಾರೆ, ಧೈರ್ಯವಾಗಿರಿ ಎಂಬ ಭಾವನೆ ಅಪ್ಪುಗೆಯಿಂದ ಮೂಡುತ್ತದೆ.

ಹಳಸದಿರಲಿ ಬಂಧ, ಕಡೇವರೆಗೂ ಉಳಿದುಕೊಳ್ಳಲಿ ಸಂಬಂಧ!

  • ಅಪ್ಪುಗೆ ಇಂದ ಟೆನ್ಶನ್ (Tension) ಕೂಡಾ ನಿವಾರಣೆಯಾಗುತ್ತದೆ.
  • ಇದೆಲ್ಲದರ ಜೊತೆಗೆ ನಿಮ್ಮ ಇಮ್ಯೂನಿಟಿ ಪವರ್ ಕೂಡ ಹೆಚ್ಚುತ್ತದೆ.

ಇನ್ನೇಕೆ ತಡ, ವ್ಯಾಲೆಂಟೈನ್ಸ್ ವೀಕ್ನಲ್ಲಿ ಆಚರಿಸಲಾಗುವ ಇನ್ನು ಬೇರೆ ಬೇರೆ ದಿನಗಳನ್ನು ಈಗಾಗಲೇ ಆಚರಿಸಿರುತ್ತೀರಿ. ಇದರೊಂದಿಗೆ ಹಗ್ ಡೇ ಕೂಡ ಅರ್ಥಪೂರ್ಣವಾಗಿ (Meaningful) ಆಚರಿಸಿಕೊಳ್ಳಿ. ನಿಮ್ಮ ಸಂಗಾತಿಯ ಬಗ್ಗೆ ನಿಮಗಿರುವ ಭಾವನೆಗಳನ್ನು ಅಪ್ಪುಗೆ ಮೂಲಕ ವ್ಯಕ್ತಪಡಿಸಿ ಹಾಗೂ ಅವರ ಹೃದಯದಲ್ಲಿ ಬೆಚ್ಚಗೆ ಮನೆಮಾಡಿ.