2016ರಲ್ಲಿ ಸಂಭವಿಸಿದ ಈಜಿಪ್ಟ್ ಏರ್ ವಿಮಾನದ ಅಫಘಾತದಲ್ಲಿ 66 ಮಂದಿ ಸಾವಿಗೀಡಾಗಿದ್ದರು. ಇಲ್ಲಿಯವರೆಗೂ ಇದೊಂದು ಭಯೋತ್ಪಾದಕ ಕೃತ್ಯ ಎಂದೇ ಅಂದಾಜಿಸಲಾಗಿತ್ತು. ಅಂದಾಜು 6 ವರ್ಷಗಳ ಬಳಿಕ ಸಿಕ್ಕ ಮಾಹಿತಿಯ ಪ್ರಕಾರ, ವಿಮಾನದ ಪೈಲಟ್ ಕಾಕ್ ಪಿಟ್ ನಲ್ಲಿ ಸಿಗರೇಟ್ ಸೇದಲು ಪ್ರಯತ್ನಿಸಿದ್ದರಿಂದ ವಿಮಾನಕ್ಕೆ ಬೆಂಕಿ ಹೊತ್ತಿಕೊಂಡಿತು ಎನ್ನಲಾಗಿದೆ.

ಪ್ಯಾರಿಸ್ (ಏ.27): ಈಜಿಪ್ಟ್ (Egypt) ದೇಶ ಕಂಡ ಭೀಕರ ದುರಂತದಲ್ಲಿ 2016ರ ಈಜಿಪ್ಟ್ ಏರ್ ( EgyptAir ) ವಿಮಾನ ಅಪಘಾತವೂ ಒಂದು. ಈ ದುರಂತದಲ್ಲಿ ವಿಮಾನದಲ್ಲಿದ್ದ(Flight) ಎಲ್ಲಾ 66 ಮಂದಿಯೂ ಸಾವಿಗೀಡಾಗಿದ್ದರು. ಅಂದಾಜು ಆರು ವರ್ಷಗಳ ಬಳಿಕ ಫ್ರೆಂಚ್ ವಾಯುಯಾನ ತಜ್ಞರು (French aviation experts) ಈ ದುರಂತದ ಕುರಿತಾದ ತಜ್ಞ ವರದಿಯನ್ನ ಪ್ರಕಟಿಸಿದ್ದು, ಕಾಕ್ ಪಿಟ್ ನಲ್ಲಿ ಪೈಲಟ್ ಸಿಗರೇಟ್ ಹಚ್ಚುವ ಸಲುವಾಗಿ ಬೆಂಕಿ ಹೊತ್ತಿಸಿದ್ದರಿಂದ ದುರಂತ ಸಂಭವಿಸಿದೆ ಎಂದು ಹೇಳಿದೆ.

ಈ ವರದಿಯು 134 ಪುಟ ಹೊಂದಿದೆ. ಎಂಎಸ್804 ವಿಮಾನದ ಪೈಲಟ್ ಕಾಕ್ ಪಿಟ್ ನಲ್ಲಿ ಸಿಗರೇಟ್ ಹಚ್ಚುವ ಪ್ರಯತ್ನ ಮಾಡಿದ್ದ. ಆದರೆ, ಈ ವೇಳೆ ಎಮರ್ಜೆನ್ಸಿ ಮಾಸ್ಕ್ ನಿಂದ ಆಮ್ಲಜನಕ ಸೋರಿಕೆಯಾಗಿದ್ದರಿಂದ ಇಡೀ ವಿಮಾನ ಪೂರ್ತಿ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಿದೆ. 

ವರದಿಯ ಪ್ರಕಾರ, ಈಜಿಪ್ಟ್ ಪೈಲಟ್‌ಗಳು ನಿಯಮಿತವಾಗಿ ಕಾಕ್‌ಪಿಟ್‌ನಲ್ಲಿ ಧೂಮಪಾನ ಮಾಡುತ್ತಾರೆ ಮತ್ತು ಅಭ್ಯಾಸವನ್ನು 2016 ರಲ್ಲಿ ವಿಮಾನಯಾನ ಸಂಸ್ಥೆಯು ನಿಷೇಧ ಮಾಡುವ ಗೋಜಿಗೆ ಹೋಗಲಿಲ್ಲ. ವರದಿಯನ್ನು ಪ್ಯಾರಿಸ್‌ನ ಮೇಲ್ಮನವಿ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ.

ಮೇ 2016 ರಲ್ಲಿ, ಏರ್‌ಬಸ್ ಎ 320 ಪ್ಯಾರಿಸ್‌ನಿಂದ ಕೈರೋಗೆ ತೆರಳುತ್ತಿದ್ದಾಗ ಅಚ್ಚರಿಯ ರೀತಿಯಲ್ಲಿ ಕ್ರೀಟ್ ದ್ವೀಪದ ಬಳಿ ಪೂರ್ವ ಮೆಡಿಟರೇನಿಯನ್ ಸಮುದ್ರಕ್ಕೆ ಅಪ್ಪಳಿಸಿತು. ಸಾವಿಗೀಡಾದವರ ಪೈಕಿ 40 ಮಂದಿ ಈಜಿಪ್ಟಿನವರು, 15 ಫ್ರೆಂಚ್ ಪ್ರಜೆಗಳು, ಇಬ್ಬರು ಇರಾಕಿಗಳು, ಇಬ್ಬರು ಕೆನಡಿಯನ್ನರು ಮತ್ತು ಅಲ್ಜೀರಿಯಾ, ಬೆಲ್ಜಿಯಂ, ಬ್ರಿಟನ್, ಚಾಡ್, ಪೋರ್ಚುಗಲ್, ಸೌದಿ ಅರೇಬಿಯಾ ಮತ್ತು ಸುಡಾನ್‌ನಿಂದ ತಲಾ ಒಬ್ಬರು ಪ್ರಯಾಣಿಕರು ಸೇರಿದ್ದರು. ಅಪಘಾತವಾಗುವ ವೇಳೆ ವಿಮಾನವು 37,000 ಅಡಿ ಎತ್ತರದಲ್ಲಿ ಹಾರುತ್ತಿತ್ತು ಮತ್ತು ಗ್ರೀಕ್ ದ್ವೀಪವಾದ ಕಾರ್ಪಥೋಸ್‌ನಿಂದ ಸುಮಾರು 130 ನಾಟಿಕಲ್ ಮೈಲಿ ದೂರದಲ್ಲಿ ವಿಮಾನ ಕಣ್ಮರೆಯಾಗಿತ್ತು.

ನಾಪತ್ತೆಯಾದ ಇಂಡೋನೇಷ್ಯಾ ವಿಮಾನದ ಅವಶೇಷ ಪತ್ತೆ; 2021ರ ಆರಂಭದಲ್ಲೇ ಅವಘಢ!

ಅಪಘಾತದ ನಂತರ, ಪ್ರಮುಖ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿತ್ತು ಮತ್ತು ವಿಮಾನದ ಕಪ್ಪು ಪೆಟ್ಟಿಗೆಯು ಗ್ರೀಸ್ ದೇಶದ ಬಳಿಯ ಸಮುದ್ರದಲ್ಲಿ ಕಂಡುಬಂದಿತ್ತು. ಅಪಘಾತದ ಸಮಯದಲ್ಲಿ, ಈಜಿಪ್ಟ್‌ನ ಅಧಿಕಾರಿಗಳು ಭಯೋತ್ಪಾದಕ ದಾಳಿಯ ಪರಿಣಾಮವಾಗಿ ಅಪಘಾತ ಸಂಭವಿಸಿದೆ ಎಂದು ಹೇಳಿದ್ದರು.

ರೆಮ್ಡಿಸಿವಿರ್ ಲಸಿಕೆ ಹೊತ್ತ ವಿಮಾನ ಲ್ಯಾಂಡಿಂಗ್ ವೇಳೆ ಅವಘಡ; ತನಿಖೆಗೆ ಆದೇಶಿಸಿದ ಸರ್ಕಾರ!

ಇನ್ನು 2021ರಲ್ಲಿ ಇಂಡೋನೇಷ್ಯಾದಿಂದ (Indonesia) ಟೇಕ್ ಆಫ್ ಆಗಿದ್ದ ಬೋಯಿಂಗ್ 737-500 ವಿಮಾನ ಕೆಲ ಹೊತ್ತಲ್ಲೆ ರೆಡಾರ್ ಸಂಪರ್ಕ ಕಡಿತಗೊಂಡು ಅಪಘಾತಕ್ಕೆ ಈಡಾಗಿತ್ತು ತಕ್ಷಣವೇ ಶೋಧ ಕಾರ್ಯ ಆರಂಭಿಸಿದ ತಂಡಕ್ಕೆ ವಿಮಾನದ ಅವಶೇಷಗಳು ಪತ್ತೆಯಾಗಿತ್ತು. ಆದರೆ ಇದು ನಾಪತ್ತೆಯಾದ ವಿವಾಮದ ಅವಶೇಷ ಎಂಬುದು ಇನ್ನು ಖಚಿತಗೊಂಡಿಲ್ಲ. ವಿಮಾನದಲ್ಲಿ ಒಟ್ಟು 62 ಪ್ರಯಾಣಿಕರಿದ್ದರು. ಮಧ್ಯಾಹ್ನ 1.56ಕ್ಕೆ ವಿಮಾನ ಜಕಾರ್ತದಿಂದ ಟೇಕ್ ಆಫ್ ಆಗಿತ್ತು. ಪಶ್ಚಿಮ ಕಲಿಮಾಂಟಾನ್‌ನ ಪೊಂಟಿಯಾನಕ್‌ಗೆ ತೆರಳುತ್ತಿದ್ದ ಬೋಯಿಂಗ್ 737-500 ವಿಮಾನ 2.30ರ ವೇಳೆಗೆ ನಾಪತ್ತೆಯಾಗಿದೆ. ರೆಡಾರ್ ಸಂಪರ್ಕ ಕಳೆದುಕೊಂಡ ವಿಮಾನ ಪತ್ತೆ ವಿಶೇಷ ತಂಡ ಕಾರ್ಯಚರಣೆಗೆ ಇಳಿದಿತ್ತು. ಅವಶೇಷಗಳು ಪತ್ತೆಯಾಗಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಬೇಕಿದೆ. ಸದ್ಯ ರಕ್ಷಣಾ ತಂಡದ ಮಾಹಿತಿಗಾಗಿ ಎಲ್ಲರು ಕಾಯುತ್ತಿದ್ದಾರೆ. 10 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ವೇಳೆ ತಾಂತ್ರಿಕ ಸಮಸ್ಯೆಯಿಂದ ರೆಡಾರ್ ಸಂಪರ್ಕ ಕಡಿತಗೊಂಡಿದೆ. 10 ಮಕ್ಕಳು ಸೇರಿದಂತೆ 56 ಪ್ರಯಾಣಿಕರು ಹಾಗೂ 6 ಸಿಬ್ಬಂದಿಗಳು ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ರಕ್ಷಣಾ ತಂಡಗಳು ಶೋಧ ಕಾರ್ಯ ನಡೆಸುತ್ತಿದೆ. ಇಂಡೋನೇಷ್ಯಾ ವಿಮಾನ ನಾಪತ್ತೆ ಕುರಿತು ತನಿಖೆಗೆ ಆದೇಶಿಸಿದೆ.