ಜಕಾರ್ತ(ಜ.09):  ಕಳೆದ ವರ್ಷ ಸಾಕಷ್ಟು ಸಾವು ನೋವು ಅನುಭವಿಸಿದ್ದ ಜನ, 2021ರ ಆರಂಭದಲ್ಲೇ ವಿಮಾನ ಅವಘಡದ ಆಘಾತ ಎದುರಿಸಿದ್ದಾರೆ. ಇಂಡೋನೇಷ್ಯಾದಿಂದ ಟೇಕ್ ಆಫ್ ಆಗಿದ್ದ  ಬೋಯಿಂಗ್ 737-500 ವಿಮಾನ ಕೆಲ ಹೊತ್ತಲ್ಲೆ ರೆಡಾರ್ ಸಂಪರ್ಕ ಕಡಿತಗೊಂಡಿದೆ. ತಕ್ಷಣವೇ ಶೋಧ ಕಾರ್ಯ ಆರಂಭಿಸಿದ ತಂಡಕ್ಕೆ ಇದೀಗ ವಿಮಾನದ ಅವಶೇಷಗಳು ಪತ್ತೆಯಾಗಿದೆ. ಆದರೆ ಇದು ನಾಪತ್ತೆಯಾದ ವಿವಾಮದ ಅವಶೇಷ ಎಂಬುದು ಇನ್ನು ಖಚಿತಗೊಂಡಿಲ್ಲ.

ಲ್ಯಾಂಡಿಂಗ್ ವೇಳೆ ದುಬೈ-ಕೋಯಿಕ್ಕೋಡ್‌ ಏರ್ ಇಂಡಿಯಾ ವಿಮಾನ ಕ್ರ್ಯಾಶ್!.

ವಿಮಾನದಲ್ಲಿ ಒಟ್ಟು 62 ಪ್ರಯಾಣಿಕರಿದ್ದರು. ಮಧ್ಯಾಹ್ನ 1.56ಕ್ಕೆ ವಿಮಾನ ಜಕಾರ್ತದಿಂದ ಟೇಕ್ ಆಫ್ ಆಗಿತ್ತು. ಪಶ್ಚಿಮ ಕಲಿಮಾಂಟಾನ್‌ನ ಪೊಂಟಿಯಾನಕ್‌ಗೆ ತೆರಳುತ್ತಿದ್ದ  ಬೋಯಿಂಗ್ 737-500 ವಿಮಾನ 2.30ರ ವೇಳೆಗೆ ನಾಪತ್ತೆಯಾಗಿದೆ. ರೆಡಾರ್ ಸಂಪರ್ಕ ಕಳೆದುಕೊಂಡ ವಿಮಾನ ಪತ್ತೆ ವಿಶೇಷ ತಂಡ ಕಾರ್ಯಚರಣೆಗೆ ಇಳಿದಿತ್ತು.

ಅವಶೇಷಗಳು ಪತ್ತೆಯಾಗಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಬೇಕಿದೆ. ಸದ್ಯ ರಕ್ಷಣಾ ತಂಡದ ಮಾಹಿತಿಗಾಗಿ ಎಲ್ಲರು ಕಾಯುತ್ತಿದ್ದಾರೆ.  10 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ವೇಳೆ ತಾಂತ್ರಿಕ ಸಮಸ್ಯೆಯಿಂದ ರೆಡಾರ್ ಸಂಪರ್ಕ ಕಡಿತಗೊಂಡಿದೆ. 10 ಮಕ್ಕಳು ಸೇರಿದಂತೆ 56 ಪ್ರಯಾಣಿಕರು ಹಾಗೂ 6 ಸಿಬ್ಬಂದಿಗಳು ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ರಕ್ಷಣಾ ತಂಡಗಳು ಶೋಧ ಕಾರ್ಯ ನಡೆಸುತ್ತಿದೆ. ಇಂಡೋನೇಷ್ಯಾ ವಿಮಾನ ನಾಪತ್ತೆ ಕುರಿತು ತನಿಖೆಗೆ ಆದೇಶಿಸಿದೆ.