ಗ್ವಾಲಿಯರ್(ಮೇ.07):  ಆಕ್ಸಿಜನ್, ಕೊರತೆ, ಲಸಿಕೆ ಕೊರತೆ, ಬೆಡ್ ಕೊರತೆ, ಔಷಧಿ ಕೊರತೆ ಸೇರಿದಂತೆ ದೇಶದಲ್ಲೀಗ ಕೊರತೆಗಳೇ ಎದ್ದು ಕಾಣುತ್ತಿದೆ. ಹೀಗಾಗಿ ಕೊರೋನಾ ನಿಯಂತ್ರಣಕ್ಕೆ ನಡೆಯುತ್ತಿರುವ ಕೆಲಸಗಳು ಕಾಣುತ್ತಿಲ್ಲ. ಇದೀಗ ದೇಶದಲ್ಲಿ ವಾಯು ಮಾರ್ಗದ ಮೂಲಕ ಔಷಧಿ, ಲಸಿಕೆ, ಆಕ್ಸಿಜನ್ ಸೇರಿದಂತೆ ವೈದ್ಯಕೀಯ ಸಲಕರಣೆ ರವಾನೆಯಾಗುತ್ತಿದೆ. ಈ ಮೂಲಕ ತ್ವರಿತಗತಿಯಲ್ಲಿ ದೇಶದ ಮೂಲೆ ಮೂಲೆಗೂ ತಲುಪಿಸಲಾಗುತ್ತಿದೆ. ಹೀಗೆ ರೆಮ್ಡೆಸಿವಿಯರ್ ಔಷದಿ ಹೊತ್ತ ವಿಮಾನ ಲ್ಯಾಂಡಿಂಗ್ ವೇಳೆ ಅಪಘಡಕ್ಕೆ ತುತ್ತಾಗಿದೆ.

ರೆಮ್‌ಡೆಸಿವಿರ್‌ ದಂಧೆ: ರಾಜ್ಯಾದ್ಯಂತ 90 ಮಂದಿ ಸೆರೆ

ರೆಮ್ಡಿಸಿವಿರ್ ಲಸಿಕೆ ಹೊತ್ತು ಅಹಮ್ಮದಾಬಾದ್‌ನಿಂದ ಗ್ವಾಲಿಯರ್ ವಿಮಾನ ನಿಲ್ದಾಣಕ್ಕ ಆಗಮಿಸಿತ್ತು. ಬೆಳಗ್ಗೆ 8.30ಕ್ಕೆ ಈ ಘಟನೆ ನಡೆದಿದೆ.  ಲ್ಯಾಂಡಿಂಗ್ ವೇಳೆ ವಿಮಾನ ನಿಯಂತ್ರಣ ತಪ್ಪಿದೆ. ಪರಿಣಾಣ ಅಪಘಾತವಾಗಿದೆ. ಪೈಲೈಟ್ ಹಾಗೂ ಕೋ ಪೈಲೈಟ್‌ಗೆ ಸಣ್ಣ ಗಾಯಗಳಾಗಿವೆ.  ಪೈಲಟ್, ಸಹ ಪೈಲಟ್ ಮತ್ತು ಸಿಬ್ಬಂದಿಗಳಿಗೆ ಪ್ರಥಮ ಚಿಕಿತ್ಸೆ ನೀಡಲಾಗಿದೆ.  ರೆಮೆಡೆಸಿವಿರ್ ಲಸಿಕೆಯನ್ನು ಸ್ಥಳೀಯ ಆಡಳಿತಕ್ಕೆ ಹಸ್ತಾಂತರಿಸಲಾಗಿದೆ ಎಂದು ಭಾರತೀಯ ವಾಯುಪಡೆಯ ಕೇಂದ್ರ ಕಮಾಂಡ್ ವಕ್ತಾರ ಶಾಂತನು ಸಿಂಗ್ ಹೇಳಿದ್ದಾರೆ.

ಲ್ಯಾಂಡಿಂಗ್ ಅವಘಡ ಕುರಿತು ಗ್ವಾಲಿಯರ್ ಕಲೆಕ್ಟರ್ ಕೌಶೇಂದ್ರ ವಿಕ್ರಮ್ ಸಿಂಗ್ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಇದೇ ವೇಲೆ ಲ್ಯಾಂಡಿಂಗ್ ಅವಘಡ ಕುರಿತು ವಿಮಾನಯಾನ ತಜ್ಞರು ತನಿಖೆ ನಡೆಸಲಿದ್ದಾರೆ ಎಂದಿದ್ದಾರೆ. ರೆಮ್ಡಿಸಿವಿರ್ ಲಸಿಕೆಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.