ಅಮೆರಿಕ ಭಾರತದ ಮೇಲಿನ ಶೇ.೨೬ರಷ್ಟು ತೆರಿಗೆ ಕುರಿತು ಏ.೨೩ರಿಂದ ಮಾತುಕತೆ ಆರಂಭಿಸಲಿದೆ. ರಷ್ಯಾ-ಉಕ್ರೇನ್ ಯುದ್ಧದಲ್ಲಿ ಈಸ್ಟರ್ ಹಬ್ಬದ ಹಿನ್ನೆಲೆಯಲ್ಲಿ ಕದನ ವಿರಾಮ ಘೋಷಿಸಲಾಗಿದೆ. ಉಭಯ ದೇಶಗಳು ನೂರಾರು ಕೈದಿಗಳನ್ನು ವಿನಿಮಯ ಮಾಡಿಕೊಂಡಿವೆ. ಶಾಂತಿ ಮಾತುಕತೆ ವಿಫಲವಾದರೆ ಮಧ್ಯಸ್ಥಿಕೆಯಿಂದ ಅಮೆರಿಕ ಹಿಂದೆ ಸರಿಯುವ ಸಾಧ್ಯತೆಯಿದೆ.
ಭಾರತದ ಮೇಲೆ ಶೇ.26ರಷ್ಟು ಪ್ರತಿ ತೆರಿಗೆ ಹಾಕಿದ್ದ ಅಮೆರಿಕದ ಡೊನಾಲ್ಡ್ ಟ್ರಂಪ್ ಸರ್ಕಾರದ ಜತೆ ಏ.23ರಿಂದ ಭಾರತ ವ್ಯಾಪಾರ ಮಾತುಕತೆ ಆರಂಭಿಸಲಿದೆ. ಇದು ಸಾಕಾರವಾದರೆ ಭಾರತ-ಅಮೆರಿಕದ ನಡುವಿನ ಆಮದು ಸುಂಕ ಸಮರ ನಿಲ್ಲಲಿದೆ. ಮಾತುಕತೆಯಲ್ಲಿ ಪ್ರಗತಿ ಆಗದೇ ಹೋದಲ್ಲಿ ರಷ್ಯಾ- ಉಕ್ರೇನ್ ಸಂಧಾನ ಪ್ರಕ್ರಿಯೆಯಿಂದ ಹಿಂದೆ ಸರಿಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ, ಉಭಯ ದೇಶಗಳು ಶನಿವಾರ ಪರಸ್ಪರ ಕೈದಿಗಳ ವಿನಿಮಯ ಮಾಡಿಕೊಂಡಿವೆ. ಜೊತೆಗೆ ಈಸ್ಟರ್ ಹಿನ್ನೆಲೆಯಲ್ಲಿ 3 ದಿನ ಕದನ ವಿರಾಮ ಜಾರಿಗೆ ತರುವುದಾಗಿ ರಷ್ಯಾ ಘೋಷಿಸಿದೆ.
ಉಕ್ರೇನ್‌ನಲ್ಲಿನ ಸಂಘರ್ಷದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶನಿವಾರ ಈಸ್ಟರ್ ಕದನ ವಿರಾಮವನ್ನು ಘೋಷಿಸಿದರು. ಈ ವಾರ ಪ್ಯಾರಿಸ್‌ಗೆ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ ಭೇಟಿಯ ಸಂದರ್ಭದಲ್ಲಿ ಯುರೋಪಿಯನ್ ನಾಯಕರಿಗೆ ಅಮೆರಿಕದಿಂದ ಪ್ರಸ್ತಾವನೆಯನ್ನು ಮಂಡಿಸಿದ ಮಧ್ಯೆ ಈ ಘೋಷಣೆ ಬಂದಿದೆ.
ಪರಸ್ಪರ ದೇಶಗಳ ವಶದಲ್ಲಿದ್ದ ನೂರಾರು ಕೈದಿಗಳನ್ನು ರಷ್ಯಾ ಮತ್ತು ಉಕ್ರೇನ್ ವಿನಿಮಯ ಮಾಡಿಕೊಂಡಿವೆ. ಇದು ಮೂರು ವರ್ಷಗಳ ಹಿಂದೆ ಯುದ್ಧ ಆರಂಭವಾದ ಬಳಿಕ ಅತಿದೊಡ್ಡ ಪ್ರಮಾಣದಲ್ಲಿ ಕೈದಿಗಳ ವಿನಿಮಯವಾಗಿದೆ. ಉಕ್ರೇನ್ ಅಧ್ಯಕ್ಷ ವೊಲೋಡಿಮಿರ್ ಜೆಲೆನ್‌ಸ್ಕಿ ಅವರೇ 277 ಉಕ್ರೇನಿಗರು ರಷ್ಯಾದಿಂದ ಉಕ್ರೇನ್‌ಗೆ ಮರಳಿದ್ದಾರೆ ಎಂದು ಘೋಷಿಸಿದ್ದಾರೆ. ಮತ್ತೊಂದೆಡೆ ರಷ್ಯಾ ರಕ್ಷಣಾ ಇಲಾಖೆ 245 ರಷ್ಯನ್ನರು ಉಕ್ರೇನ್‌ನಿಂದ ಬಂದಿದ್ದಾರೆ ಎಂದು ಹೇಳಿದೆ. ಈ ಮಧ್ಯೆ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಈಸ್ಟರ್ ಹಬ್ಬದ ನಿಮಿತ್ತ ಶನಿವಾರ ಸಂಜೆ 6 ಗಂಟೆಯಿಂದ ಕದನ ವಿರಾಮವನ್ನು ಘೋಷಿಸಿದ್ದಾರೆ.
ಟ್ರಂಪ್ ಬೆದರಿಕೆಯಿಂದ ಭಾರತದ ಸಖ್ಯ ಬಯಸಿದ ಚೀನಾ, 85,000 ಭಾರತೀಯರಿಗೆ ವೀಸಾ ಗ್ರ್ಯಾಂಟ್
ಪ್ರಗತಿ ಕಾಣದಿದ್ದರೆ ರಷ್ಯಾ-ಉಕ್ರೇನ್ ಮಧ್ಯಸ್ಥಿಕೆ ರದ್ದು
ತಾವು ಅಮೆರಿಕ ಅಧ್ಯಕ್ಷರಾಗಿ ಅಧಿಕಾರಕ್ಕೇರುತ್ತಿದ್ದಂತೆ ರಷ್ಯಾ-ಉಕ್ರೇನ್ ಯುದ್ಧವನ್ನು ಮೇ ವೇಳೆಗೆ ಕೊನೆಗಾಣಿಸುವುದಾಗಿ ಘೋಷಿಸಿದ್ದ ಡೊನಾಲ್ಡ್ ಟ್ರಂಪ್, ಪುಟಿನ್-ಜೆಲೆನ್ಸ್‌ಕಿ ಬಡಿದಾಟದಿಂದ ಬೇಸತ್ತುಹೋದಂತಿದೆ.
‘ಶಾಂತಿ ಸ್ಥಾಪನೆಯಲ್ಲಿ ಪ್ರಗತಿಯ ಲಕ್ಷಣಗಳು ಕಂಡುಬರದೇ ಹೋದಲ್ಲಿ ಅಧ್ಯಕ್ಷ ಟ್ರಂಪ್ ಅವರು ಅದರ ಯತ್ನವನ್ನೇ ಕೈಬಿಡುತ್ತಾರೆ’ ಎಂದು ಅಮೆರಿಕದ ವಿದೇಶಾಂಗ ಖಾತೆ ಉಪ ಸಚಿವ ಮಾರ್ಕೋ ರುಬಿಯೋ ಹೇಳಿದ್ದಾರೆ.
ಯುರೋಪ್ ಹಾಗೂ ಉಕ್ರೇನ್ ನಾಯಕರೊಂದಿನ ಭೇಟಿಯ ಬಳಿಕ ಪ್ಯಾರಿಸ್‌ನಲ್ಲಿ ಮಾತನಾಡಿದ ರುಬಿಯೋ, ‘ಶಾಂತಿ ಸ್ಥಾಪನೆ ಯತ್ನದಲ್ಲಿ ನಾವು ತಿಂಗಳುಗಳ ಕಾಲ ತೊಡಗಿರಲು ಸಾಧ್ಯವಿಲ್ಲ. ಅಮೆರಿಕಕ್ಕೆ ಇನ್ನೂ ಅನೇಕ ಆದ್ಯತೆಗಳಿವೆ. ಇನ್ನು ಕೆಲ ವಾರಗಳಲ್ಲಿ ಯುದ್ಧ ನಿಲ್ಲುವುದಾದರೆ ನಾವು ಅದಕ್ಕೆ ಯತ್ನಿಸುತ್ತೇವೆ. ಇಲ್ಲದಿದ್ದರೆ ಅದರಿಂದ ಹಿಂದೆ ಸರಿಯುತ್ತೇವೆ’ ಎಂದು ಹೇಳಿದ್ದಾರೆ.
ಚೀನಾ ಮುಖ ಕೆಂಪಗಾಗಿಸಿದ ಉಕ್ರೇನ್ ನಡೆ: ತಟಸ್ಥ ನಿಲುವು ಎಂದಿದ್ದ ಚೀನಾಗೆ ಮುಖಭಂಗ
ರಷ್ಯಾ ಭರವಸೆ: ‘ಇಷ್ಟು ದಿನ ಅಮೆರಿಕದ ಅಧಿಕಾರಿಗಳೊಂದಿಗೆ ನಡೆದ ಮಾತುಕತೆಗಳು ಫಲ ನೀಡಲಿಲ್ಲವಾದರೂ ನಾವು ಅದನ್ನು ಮುಂದುವರೆಸಲು ಸಿದ್ಧರಿದ್ದೇವೆ’ ಎಂದು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲ್ಯಾವ್ರೋವ್ ಹೇಳಿದ್ದಾರೆ.
