ಪಾಕಿಸ್ತಾನದಲ್ಲಿ ಸೀಕ್ರೆಟ್ ಎಜೆಂಟ್‌ಗಳನ್ನು ನೇಮಿಸಿದರೂ ಧುರಂಧರ್ ಸದ್ದು ಮಾಡುತ್ತಿದೆ. ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಪರಿಚಿತನ ಗುಂಡಿನ ದಾಳಿಗೆ ಹತ್ಯೆಯಾಗಿದ್ದಾನೆ. ಈ ಹತ್ಯೆ ಬೆನ್ನಲ್ಲೇ ಪಾಕಿಸ್ತಾನ ಕಂಗಾಲಾಗಿದೆ.
ಲಾಹೋರ್ (ಮೇ.21) ಭಾರತದ ಮೋಸ್ಟ್ ವಾಂಟೆಡ್ ಉಗ್ರರು ಒಬ್ಬರ ಹಿಂದೆ ಒಬ್ಬರು ಪಾಕಿಸ್ತಾನದಲ್ಲಿ ಅಪರಿಚಿತನ ಗುಂಡಿನ ದಾಳಿಗೆ ಹತ್ಯೆಯಾಗುತ್ತಿರುವ ಸಂಪ್ರದಾಯ ಮತ್ತೆ ಮುಂದುವರಿದಿದೆ. ಈ ಬಾರಿ ಭಾರತಕ್ಕೆ ಬೇಕಾದ, ಭಾರತೀಯರ ಆಕ್ರೋಶಕ್ಕೆ ಗುರಿಯಾಗಿದ್ದ ಮೋಸ್ಟ್ ವಾಂಟೆಡ್ ಉಗ್ರನ ಹತ್ಯೆಯಾಗಿದೆ. 2019ರಲ್ಲಿ ಭಾರತೀಯ ಯೋಧರ ಮೇಲೆ ದಾಳಿ ಮಾಡಿದ ಪುಲ್ವಾಮಾ ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆಯಾಗಿದ್ದಾನೆ. ಅಪರಿಚಿತನ ಗುಂಡಿನ ದಾಳಿಗೆ ಹಮ್ಜಾ ಬುರ್ಹಾನ್ ಹತ್ಯೆಯಾಗಿದ್ದಾನೆ.

ಪುಲ್ವಾಮ ದಾಳಿ ಸಂಚುಕೋರನ ಹತ್ಯೆ
ಪಾಕಿಸ್ತಾನ ಆಕ್ರಮಿತ ಕಾಶ್ಮೀರ (PoK)ಯ ಮುಜಫರಬಾದ್‌ನಲ್ಲಿ ಅಪರಿಚಿತ ಬಂಧೂಕುದಾರಿ ವ್ಯಕ್ತಿ ಹಮ್ಜಾ ಬುರ್ಹಾನ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಹಮ್ಜಾ ಬುರ್ಹಾನ್ ಸ್ಥಳದಲ್ಲೇ ಹತ್ಯೆಯಾಗಿದ್ದಾನೆ. ಅರ್ಜುಮಂಡ್ ಗುಲ್ಜರ್ ದಾರ್ ಅಲಿಯಾಸ್ ಹಮ್ಜಾ ಬುರ್ಹಾನ್ ಪುಲ್ವಾಮದ ರತ್ನಿಪೋರಾ ಪ್ರದೇಶದವನು. 23ರ ಹರೆಯದ ಈ ಹಮ್ಜಾ ಬುರ್ಹಾನ್ ಪುಲ್ವಾಮಾ ದಾಳಿ ಹಿಂದಿನ ಮಾಸ್ಟರ್ ಮೈಂಡ್ ಆಗಿ ಕಾರ್ಯನಿರ್ವಹಿಸಿದ್ದ. ಪುಲ್ವಾಮ ಮೂಲದವನಾಗಿದ್ದ ಕಾರಣ ಯಾವ ಪ್ರದೇಶದಲ್ಲಿ ಭಾರತೀಯ ಯೋಧರ ಮೇಲೆ ದಾಳಿ ಮಾಡಬೇಕು, ಯಾವಾಗ ಭಾರತೀಯ ಯೋಧರು ತರಳುತ್ತಾರೆ ಎಲ್ಲಾ ಮಾಹಿತಿ ಈತನಿಗಿತ್ತು.
ಮುಜಾಫರಬಾದ್‌ನ AIMS ಕಾಲೇಜು ಬಳಿ ಅಪರಿಚಿತ ಬಂಧೂಕುದಾರಿ ಹಮ್ಜಾ ಬುರ್ಹಾನ್ ಮೇಲೆ ಹಲವು ಸುತ್ತುಗಂಡು ಹಾರಿಸಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ಹಮ್ಜಾ ಬುರ್ಹಾನ್‌ನನ್ನು ತಕ್ಷಣವೇ ಆಸ್ಪತ್ರೆ ದಾಖಲಿಸುವ ಪ್ರಯತ್ನಗಳು ನಡೆದಿದೆ. ಆದರೆ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಪುಲ್ವಾಮಾ ದಾಳಿಗೆ ಸಂಬಂಧಿಸಿದ ಭಯೋತ್ಪಾದಕ ಕಾರ್ಯಾಚರಣೆಗಳಲ್ಲಿ ಹಮ್ಜಾ ಬುರ್ಹಾನ್ ಪ್ರಮುಖ ಮಾಸ್ಟರ್ ಮೈಂಡ್‌ಗಳಲ್ಲಿ ಒಬ್ಬನಾಗಿದ್ದ. ಗುಪ್ತಚರ ಸಂಸ್ಥೆಗಳ ಪ್ರಕಾರ ಬುರ್ಹಾನ್ ಭಾರತ ವಿರೋಧಿ ಚಟುವಟಿಕೆಗಳ ದೀರ್ಘ ಇತಿಹಾಸವನ್ನು ಹೊಂದಿದ್ದಾನೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಯುವಕರನ್ನು ಉಗ್ರಗಾಮಿತ್ವ ಮತ್ತು ಮೂಲಭೂತವಾದದತ್ತ ಸೆಳೆಯುವುದು, ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸುವಂತೆ ಪ್ರೇರಿಸುವುದು ಮಾಡುತ್ತಿದ್ದ. ಏಳು ವರ್ಷಗಳ ಹಿಂದೆ ನಕಲಿ ದಾಖಲೆ ಬಳಸಿ ಪಾಕಿಸ್ತಾನಕ್ಕೆ ಭೇಟಿ ನೀಡಿ ಅಲ್-ಬದರ್ ಭಯೋತ್ಪಾದಕ ಸಂಘಟನೆಗೆ ಸೇರಿದ್ದ ಈತ ಈಗ ಹತ್ಯೆಯಾಗಿದ್ದಾನೆ.


