Asianet Suvarna News Asianet Suvarna News

ಬ್ರಿಟನ್ ರಾಜ ದಂಪತಿ ಮೇಲೆ ಮೊಟ್ಟೆ ಎಸೆದ ವಿದ್ಯಾರ್ಥಿ: ವಿಡಿಯೋ ವೈರಲ್

ಬ್ರಿಟನ್ ರಾಜ ಚಾರ್ಲ್ಸ್ III ಹಾಗೂ ರಾಣಿ ಕಮಿಲ್ಲಾ ಮೇಲೆ ಪ್ರತಿಭಟನಾ ನಿರತ ವಿದ್ಯಾರ್ಥಿಯೋರ್ವ ಮೊಟ್ಟೆ ಎಸೆದ ಘಟನೆ ಲಂಡನ್‌ನ ಉತ್ತರ ಭಾಗದ ಯಾರ್ಕ್‌ ನಗರದಲ್ಲಿ ನಡೆದಿದೆ.

protester throw eggs over king Charles III and Queen Consort camilla when they were in northern city to unveil a statue Queen Elizabeth akb
Author
First Published Nov 11, 2022, 1:42 PM IST

ಲಂಡನ್ : ಬ್ರಿಟನ್ ರಾಜ ಚಾರ್ಲ್ಸ್ III ಹಾಗೂ ರಾಣಿ ಕಮಿಲ್ಲಾ ಮೇಲೆ ಪ್ರತಿಭಟನಾ ನಿರತ ವಿದ್ಯಾರ್ಥಿಯೋರ್ವ ಮೊಟ್ಟೆ ಎಸೆದ ಘಟನೆ ಲಂಡನ್‌ನ ಉತ್ತರ ಭಾಗದ ಯಾರ್ಕ್‌ ನಗರದಲ್ಲಿ ನಡೆದಿದೆ. ಪ್ರತಿಭಟನಾನಿರತರು ರಾಜ ರಾಣಿಯತ್ತ ಮೂರು ಮೊಟ್ಟೆಗಳನ್ನು ಎಸೆದು ಈ ದೇಶ ಗುಲಾಮಿಗಿರಿಯಿಂದ, ಗುಲಾಮರ ರಕ್ತದಿಂದ ನಿರ್ಮಿತವಾಗಿದೆ ಎಂದು ಘೋಷಣೆ ಕೂಗಿದ್ದಾರೆ. ಆದರೆ ಮೊಟ್ಟೆಗಳ ಎಸೆತದಿಂದ ತಪ್ಪಿಸಿಕೊಳ್ಳುವಲ್ಲಿ ರಾಜರಾಣಿ ಯಶಸ್ವಿಯಾದರು. ಅಲ್ಲದೇ ಈ ಬಗ್ಗೆ ತಲೆಕೆಡಿಸಿಕೊಳ್ಳದ ರಾಜ ರಾಣಿ ಅದೇ ದಾರಿಯಲ್ಲಿ ಮುಂದೆ ಸಾಗಿದರು.  ಕೂಡಲೇ ಸುತ್ತಲಿದ್ದ ಪೊಲೀಸರು ಮೊಟ್ಟೆ ಎಸೆದವರನ್ನು ಬಂಧಿಸುವಲ್ಲಿ ಯಶಸ್ವಿಯಾದರು. 

ರಾಜ ಚಾರ್ಲ್ಸ್ ಹಾಗೂ ರಾಣಿ ಕಮಿಲ್ಲಾ ಅವರು, ದಿವಂಗತ ರಾಣಿ ಎಲಿಜಬೆತ್ (Queen Elizabeth II)ಅವರ ಸ್ಮರಣಾರ್ಥ ನಿರ್ಮಿಸಲಾಗಿದ್ದ ಪ್ರತಿಮೆಯನ್ನು ಲೋಕಾರ್ಪಣೆಗೊಳಿಸುವ ಸಲುವಾಗಿ ನಗರಕ್ಕೆ ಆಗಮಿಸಿದ್ದರು. ಬ್ರಿಟಿಷ್ ರಾಜನನ್ನೇ ಇಂದಿಗೂ ತಮ್ಮ ಮುಖ್ಯಸ್ಥ ಎಂದು ಒಪ್ಪುವ ಜಗತ್ತಿನ ಕೆಲ ರಾಷ್ಟ್ರಗಳಲ್ಲಿ ಇತ್ತೀಚೆಗೆ ಬ್ರಿಟಿಷರ ಗುಲಾಮಗಿರಿ ವ್ಯಾಪಾರದ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ  ಇತ್ತೀಚೆಗೆ ಪ್ರಿನ್ಸ್ ವಿಲಿಯಂ (Prince William) ಹಾಗೂ ಪತ್ನಿ ಕ್ಯಾಥರೀನ್ (Catherine) ಅವರು ಈ ವರ್ಷದ ಆರಂಭದಲ್ಲಿ ಕೆರಿಬಿಯನ್ (Caribbean) ದೇಶಕ್ಕೆ ಪ್ರವಾಸ ತೆರಳಿದ್ದಾಗ ಬ್ರಿಟಿಷ್ ಗುಲಾಮಗಿರಿಯ ಬಗ್ಗೆ ಕ್ಷಮೆ ಯಾಚಿಸುವಂತೆ ಅನೇಕರು ರಾಜ ದಂಪತಿಯನ್ನು ಕೇಳಿದ್ದರು. 

ಅಲ್ಲದೇ ರಾಜ ಚಾರ್ಲ್ಸ್ ಕೂಡ ಈ ಬಗ್ಗೆ ಚರ್ಚಿಸಲು ಸಿದ್ಧರಾಗಿದ್ದಾರೆ. ಮಂಗಳವಾರ ಲೀಡ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಗುಲಾಮಗಿರಿಯಲ್ಲಿ (slavery) ಬ್ರಿಟನ್‌ನ ಪಾತ್ರವನ್ನು ಅನ್ವೇಷಿಸುವ ಯೋಜನೆಯಲ್ಲಿ ಭಾಗವಹಿಸಿದ್ದ ಕಲಾವಿದರನ್ನು ಅವರು ಭೇಟಿಯಾಗಿದ್ದರು. ಅಲ್ಲದೇ ಈ ವಿಚಾರದ ಬಗ್ಗೆ ಕಿಂಗ್ ಚಾರ್ಲ್ಸ್ ಮಾತನಾಡಲು ಸಿದ್ಧರಿದ್ದಾರೆ ಎಂದು  ಕಲಾವಿದ ಮತ್ತು ಇತಿಹಾಸಕಾರ ಫಿಯೋನಾ ಕಾಂಪ್ಟನ್ ಎಂದು ಹೇಳಿದ್ದರು. 

Queen Elizabeth II Funeral: ಬ್ರಿಟನ್‌ ರಾಣಿಗೆ ಕಣ್ಣೀರ ವಿದಾಯ; ದ್ರೌಪದಿ ಮುರ್ಮು ಸೇರಿ 2000 ಗಣ್ಯರು ಭಾಗಿ

ರಾಣಿ ಎಲಿಜಬೆತ್ ನಿಧನದ ನಂತರ ಎರಡು ತಿಂಗಳ ಹಿಂದಷ್ಟೇ ರಾಜನಾದ ಕಿಂಗ್ ಚಾರ್ಲ್ಸ್ ಪ್ರತಿಭಟನೆ ಎದುರಿಸುತ್ತಿರುವುದು ಇದೇ ಮೊದಲೇನಲ್ಲ. ರಾಣಿಯ ಮರಣದ ನಂತರ ಅವರು ಹಲವು ಬಾರಿ ಪ್ರತಿಭಟನೆಗಳನ್ನು ಎದುರಿಸಿದ್ದಾರೆ. ಎಲಿಜಬೆತ್‌ ಅವರನ್ನು ರಾಣಿ ಎಂದು ಒಪ್ಪಿಕೊಂಡಷ್ಟು ಸುಲಭವಾಗಿ ಅವರ ಪುತ್ರ ಚಾರ್ಲ್ಸ್‌ನನ್ನು ರಾಜ ಎಂದು ಒಪ್ಪಿಕೊಳ್ಳಲು ಜನ ಸಿದ್ಧರಿಲ್ಲ. ಇದೇ ಕಾರಣಕ್ಕೆ ಚಾರ್ಲ್ಸ್‌ ವಿರುದ್ಧ ಅಲ್ಲಲ್ಲಿ ಪ್ರತಿಭಟನೆ ನಡೆಯುತ್ತಿದೆ.

ಬ್ರಿಟನ್ ರಾಜ ಚಾರ್ಲ್ಸ್ ಭೇಟಿ ಮಾಡಿದ ರಾಷ್ಟ್ರಪತಿ ದ್ರೌಪದಿ ಮರ್ಮು

ರಾಣಿ ಎಲಿಜಬೆತ್ ಅಂತಿಮವಾಗಿ ವಿಶ್ರಾಂತಿಗೆ ಜಾರಿದ ಸ್ಕಾಟ್‌ಲ್ಯಾಂಡ್‌ನ (Scotland) ಎಡಿನ್‌ಬರ್ಗ್‌ನಲ್ಲಿ (Edinburgh) ಕೆಲ ದಿನಗಳ ಹಿಂದೆ ಮಹಿಳೆಯನ್ನು ಬಂಧಿಸಲಾಗಿತ್ತು. ಆಕೆ ರಾಜಪ್ರಭುತ್ವವನ್ನು ತೊಡೆದುಹಾಕಿ ಎಂಬ ಬರಹವಿರುವ ಬೋರ್‌ ಹಿಡಿದಿದ್ದ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಅಲ್ಲದೇ ರಾಜ ಚಾರ್ಲ್ಸ್‌ನನ್ನು ಯಾರು ರಾಜನಾಗಿ ಆಯ್ಕೆ ಮಾಡಿದರು ಎಂದು ಕೂಗಿದ್ದಕ್ಕಾಗಿ ಮತ್ತೊರ್ವನನ್ನು ಬಂಧಿಸಲಾಗಿತ್ತು. 1986ರಲ್ಲಿ ರಾಣಿಯ ಎಲಿಜಬೆತ್ ನ್ಯೂಜಿಲೆಂಡ್‌  (New Zealand) ಪ್ರವಾಸದ ಸಮಯದಲ್ಲಿ, ಅಲ್ಲಿನ ಮಾವೋರಿ ಬುಡಕಟ್ಟು (aori tribes) ಜನಾಂಗದ ಮಹಿಳೆಯೊಬ್ಬರು ರಾಣಿಯ ಮೇಲೆ ಮೊಟ್ಟೆ ಎಸೆದಿದ್ದರು. ಈ ವೇಳೆ ರಾಣಿ ತೆರೆದ ಕಾರಿನಲ್ಲಿದ್ದು, ಮೊಟ್ಟೆ ಆಕೆಯ ಗುಲಾಬಿ ಬಣ್ಣದ (pink coat) ಕೋಟ್ ಮೇಲೆ ಬಿದ್ದು ಕೆಳಗೆ ಜಾರಿತ್ತು.

Follow Us:
Download App:
  • android
  • ios