Asianet Suvarna News Asianet Suvarna News

ಬ್ರಿಟನ್ ರಾಜ ಚಾರ್ಲ್ಸ್ ಭೇಟಿ ಮಾಡಿದ ರಾಷ್ಟ್ರಪತಿ ದ್ರೌಪದಿ ಮರ್ಮು

ರಾಣಿ ಎಲಿಜಬೆತ್ ಅಂತ್ಯಸಂಸ್ಕಾರದ ಸಲುವಾಗಿ ಬ್ರಿಟನ್‌ ನಲ್ಲಿರುವ  ಭಾರತದ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ನೂತನ ರಾಜ ಎಲಿಜಬೆತ್ ಪುತ್ರ ಚಾರ್ಲ್ಸ್‌ ಅವರನ್ನು ಭೇಟಿ ಮಾಡಿದರು. 

Queen Elizabeth state funeral, Indian President Draupadi Murmu meets Britain King Charles akb
Author
First Published Sep 19, 2022, 9:39 AM IST

ಬಂಕಿಂಗ್‌ಹ್ಯಾಮ್: ಸೆಪ್ಟೆಂಬರ್ 8 ರಂದು ನಿಧನರಾದ ಬ್ರಿಟಿಷ್‌ ಸಮ್ರಾಜ್ಯವನ್ನು ಧೀರ್ಘಕಾಲ ಆಳಿದ ರಾಣಿ ಕ್ವೀನ್ ಎಲಿಜಬೆತ್ ಅಂತ್ಯಸಂಸ್ಕಾರ ಇಂದು ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಪ್ರಪಂಚದ ಎಲ್ಲಾ ದೇಶಗಳ ಒಟ್ಟು 500ಕ್ಕೂ ಹೆಚ್ಚು ಗಣ್ಯರು ಬ್ರಿಟನ್ ತಲುಪಿದ್ದಾರೆ. ಹಾಗೆಯೇ ಭಾರತವನ್ನು ಪ್ರತಿನಿಧಿಸಿರುವ ನಮ್ಮ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ಬ್ರಿಟನ್ ರಾಜ ಚಾರ್ಲ್ಸ್‌  III ಅವರನ್ನು ಭಾನುವಾರ ಭೇಟಿ ಮಾಡಿದರು. ಬಂಕಿಂಗ್‌ ಹ್ಯಾಮ್ ಪ್ಯಾಲೇಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಮರ್ಮು ಅವರು ಬ್ರಿಟನ್ ರಾಜ ಚಾರ್ಲ್ಸ್‌ ಅವರನ್ನು ಭೇಟಿ ಮಾಡಿದರು. 

ಇದೇ ವೇಳೆ ರಾಷ್ಟ್ರಪತಿ ಮರ್ಮು ಅವರು,ಲಂಡನ್‌ನ ಬಕಿಂಗ್‌ಹ್ಯಾಮ್ ಅರಮನೆ (Buckingham Palace) ಬಳಿಯ ಲ್ಯಾಂಕಾಸ್ಟರ್ ಹೌಸ್‌ನಲ್ಲಿ(Lancaster House) ರಾಣಿ ಎಲಿಜಬೆತ್ II ಅವರ ಸಂತಾಪ ಪುಸ್ತಕದಲ್ಲಿ (condolence book) ಸಹಿ ಹಾಕಿದರು. ರಾಷ್ಟ್ರಪತಿ ಮರ್ಮು ಅವರು ರಾಣಿ ಎಲಿಜಬೆತ್ ಗೌರವಾರ್ಥವಾಗಿ ಅವರ ನೆನಪಿನ ಸಂತಾಪ ಪುಸ್ತಕದಲ್ಲಿ ಸಹಿ ಹಾಕಿದ್ದಾರೆ ಎಂದು ರಾಷ್ಟ್ರಪತಿ ಭವನ ಟ್ವಿಟ್ ಮಾಡಿದೆ. ಇದರ ಜೊತೆಗೆ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಹಾಲ್‌ನಲ್ಲಿ ಇಟ್ಟಿರುವ ರಾಣಿ ಎಲಿಜಬೆತ್ II ಅವರ ಪಾರ್ಥಿವ ಶರೀರಕ್ಕೆ ದ್ರೌಪದಿ ಅಂತಿಮ ನಮನ ಸಲ್ಲಿಸಿದರು. 

ಬ್ರಿಟನ್ ರಾಜಮನೆತನದ ಪಾಲಿನ ಡರ್ಟಿ ಡಯಾನಾ: ಇಂದಿಗೂ ನೆನೆಯುತ್ತಾರೆ ಈಕೆಯನ್ನ ಜನ

ರಾಣಿ ಎಲಿಜಬೆತ್ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮತ್ತು ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲು ರಾಷ್ಟಪತಿಗಳು ಸೆಪ್ಟೆಂಬರ್ 17 ರಿಂದ 19 ರವರೆಗೆ ಬ್ರಿಟನ್‌  ಅಧಿಕೃತ ಪ್ರವಾಸದಲ್ಲಿದ್ದಾರೆ. ಇದಕ್ಕಾಗಿ ಅವರು ಶನಿವಾರ ಲಂಡನ್‌ನ ಗಾಟ್ವಿಕ್ ಏರ್‌ಪೋರ್ಟ್‌ಗೆ (Gatwick Airport) ಬಂದಿಳಿದಿದ್ದರು. 

ಪುರಿ ಜಗನ್ನಾಥನಿಗೆ ಸೇರಿದ್ದು ಕೊಹಿನೂರ್‌ ವಜ್ರ, ಮರಳಿಸುವಂತೆ ಒಡಿಶಾ ಸಂಸ್ಥೆ ಆಗ್ರಹ!

ಅಂತ್ಯ ಸಂಸ್ಕಾರಕ್ಕೆ 10 ಲಕ್ಷ ಜನ ಆಗಮನ

ಎಲಿಜಬೆತ್‌ ಅಂತ್ಯಸಂಸ್ಕಾರಕ್ಕೆ ವಿಶ್ವದ ವಿವಿಧ ಮೂಲೆಗಳಿಂದ ಲಂಡನ್‌ಗೆ ಕನಿಷ್ಠ 10 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬ್ರಿಟನ್‌ ರಾಜಧಾನಿಯಲ್ಲಿ ಭಾರೀ ವ್ಯವಸ್ಥೆ ಮಾಡಲಾಗುತ್ತಿದೆ. ಜನರ ಆಗಮನಕ್ಕೆ ಅನುಕೂಲ ಮಾಡಿಕೊಡಲು 250 ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಜೊತೆಗೆ ಅಂತ್ಯಸಂಸ್ಕಾರದ ಇಡೀ ಪ್ರಕ್ರಿಯೆಗೆ ವಿಮಾನಗಳ ಸಂಚಾರದ ಭಾರೀ ಸದ್ದು ತಡೆಗಟ್ಟಲು, ಹೀಥ್ರೂ ವಿಮಾನ ನಿಲ್ದಾಣದಲ್ಲಿ ಸಂಜೆ ಬಳಿಕದ ನೂರಾರು ವಿಮಾನಗಳ ಸಂಚಾರ ರದ್ದುಪಡಿಸಲಾಗಿದೆ.

ಸಿನೆಮಾ ಥಿಯೇಟರ್‌ಗಳಲ್ಲಿ  ನೇರ ಪ್ರಸಾರ

ರಾಣಿಯ‌ ಅಂತ್ಯ ಸಂಸ್ಕಾರ ವೀಕ್ಷಣೆಗೆ ಬ್ರಿಟನ್‌ನಾದ್ಯಂತ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ನಗರಗಳ ಆಯಕಟ್ಟಿನ ಸ್ಥಳಗಳಲ್ಲಿ ಬೃಹತ್‌ ಪರದೆಗಳನ್ನು ಅಳವಡಿಸಿ ಅಲ್ಲಿ ವೆಸ್ಟ್‌ಮಿನಿಸ್ಟರ್‌ ಅಬೆಯಲ್ಲಿ ನಡೆಯುವ ಅಂತ್ಯಸಂಸ್ಕಾರ ಪ್ರಕ್ರಿಯೆಯನ್ನು ನೇರ ಪ್ರಸಾರ ಮಾಡಲಾಗುವುದು. ಜೊತೆಗೆ ಬಹುತೇಕ ಎಲ್ಲಾ ಸಿನೆಮಾ ಥಿಯೇಟರ್‌ಗಳಲ್ಲೂ ಬೆಳಗ್ಗೆಯಿಂದ ರಾತ್ರಿಯವರೆಗೂ ಅಂತ್ಯಸಂಸ್ಕಾರ ಪ್ರಕ್ರಿಯೆಯ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

500 ವಿವಿಐಪಿಗಳ ಆಗಮನ ಭಾರೀ ಭದ್ರತಾ ಸವಾಲು

ರಾಣಿ ಎಲಿಜಬೆತ್‌ ಅಂತ್ಯಸಂಸ್ಕಾರಕ್ಕೆ ವಿಶ್ವದ ವಿವಿಧ ದೇಶಗಳ ಅಧ್ಯಕ್ಷರು, ಪ್ರಧಾನಿಗಳು, ರಾಜರು, ರಾಣಿಯರು, ಸಚಿವರು ಸೇರಿದಂತೆ 500ಕ್ಕೂ ಹೆಚ್ಚು ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಲಂಡನ್‌ನಲ್ಲಿ ಹಿಂದೆಂದೂ ಕಾಣದ ಭದ್ರತೆ ಒದಗಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಒಂದೇ ಸ್ಥಳದಲ್ಲಿ ಇಷ್ಟು ಪ್ರಮಾಣದ ಗಣ್ಯರು ಸೇರುತ್ತಿರುವ ಕಾರಣ, ಜಾಗತಿಕ ನಾಯಕರಿಗೆ ಭದ್ರತೆ ಒದಗಿಸುವುದು ದೊಡ್ಡ ಸವಾಲು ಎಂದು ಲಂಡನ್‌ ಮೇಯರ್‌ ಸಾದಿಕ್‌ ಖಾನ್‌ (London Mayor)ತಿಳಿಸಿದ್ದಾರೆ.

24 ಗಂಟೆ ಸರದಿ

ಭಾನುವಾರ ರಾತ್ರಿಯವರೆಗೂ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಸಾವಿರಾರು ಜನರು 24 ಗಂಟೆಗಳ ಕಾಲ ಸರದಿಯಲ್ಲಿ ನಿಂತುಕೊಂಡಿದ್ದರೂ ಸಮಯದ ಅಭಾವದ ಕಾರಣ ಬಹಳಷ್ಟು ಜನರಿಗೆ ಅಂತಿಮ ದರ್ಶನದ ಅವಕಾಶ ನಿರಾಕರಿಸಲಾಯಿತು.

Follow Us:
Download App:
  • android
  • ios