ಪಾಕಿಸ್ತಾನ ಬಹುತೇಕ ದಿವಾಳಿಯಾಗಿದೆ.ಇತ್ತ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ವಿದೇಶಿ ನಿಧಿ ಪ್ರಕರಣದಲ್ಲಿ ಈಗಾಗಲೇ ವಾರೆಂಟ್ ಹೊರಡಿಸಲಾಗಿದೆ. ಇಂದೇ ಇಮ್ರಾನ್ ಖಾನ್ ಬಂಧನವಾಗುವ ಸಾಧ್ಯತೆ ಇದೆ.

ಲಾಹೋರ್(ಫೆ.20); ಪಾಕಿಸ್ತಾನದಲ್ಲಿ ಸಮಸ್ಯೆಗಳು ಒಂದರ ಮೇಲೊಂದರಂತೆ ಬರುತ್ತಲೇ ಇದೆ. ಈಗಾಗಲೇ ತೀವ್ರ ಆರ್ಥಿಕ ಬಿಕ್ಕಿಟ್ಟಿಗೆ ಸಿಲುಕಿ ಬಹುತೇಕ ದಿವಾಳಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆಹಾರಕ್ಕಾಗಿ ಹಾಹಾಕಾರ ಎದ್ದಿದೆ. ಇದರ ನಡುವೆ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೂ ಸಂಕಷ್ಟ ಶುರುವಾಗಿದೆ. ಪಕ್ಷಕ್ಕಾಗಿ ವಿದೇಶಿ ಹಣ ಬಳಕೆ ಹಾಗೂ ಅಕ್ರಮ ಪ್ರಕರಣದಲ್ಲಿ ಇಮ್ರಾನ್ ಖಾನ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದೆ. ಪಾಕಿಸ್ತಾನ ಮಾಧ್ಯಮಗಳ ಪ್ರಕಾರ ಇಮ್ರಾನ್ ಖಾನ್ ಇಂದು ರಾತ್ರಿ ಅರೆಸ್ಟ್ ಆಗುವ ಸಾಧ್ಯತೆ ಇದೆ. ನಿರೀಕ್ಷಾ ಜಾಮೀನಿಗಾಗಿ ಇಮ್ರಾನ್ ಖಾನ್ ಲಾಹೋರ್ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಇಮ್ರಾನ್ ಖಾನ್ ಅರ್ಜಿಯನ್ನು ಕೋರ್ಟ್ ತಿರಸ್ಕರಿಸುವ ಸಾಧ್ಯತೆ ಹೆಚ್ಚಿದೆ.

ಇಮ್ರಾನ್ ಖಾನ್ ನೇತೃತ್ವದ ತೆಹ್ರಿಕ್ ಇ ಇನ್ಸಾಫ್(PTI) ಪಕ್ಷ ವಿದೇಶಗಳಿಂದ ಅಕ್ರಮವಾಗಿ ನಿಧಿ ಸಂಗ್ರಹ ಹಾಗೂ ಬಳಕೆ ಕುರಿತು 2014ರಲ್ಲಿ ಪ್ರಕರಣ ದಾಖಲಾಗಿತ್ತು. ವಿದೇಶಿ ವಿನಿಮಯ ನಿಯಮದಡಿ ಪ್ರಕರಣ ದಾಖಲಾಗಿತ್ತು.ಈ ಕುರಿತು ಎಫ್ಐಎ ಕಾರ್ಪೋರೇಟ್ ಬ್ಯಾಂಕಿಂಗ್ 2021ರಲ್ಲಿ ಇಮ್ರಾನ್ ಖಾನ್ ವಿರುದ್ಧ ಪ್ರಕರಣ ದಾಖಲಿಸಿತ್ತು.2018ರಲ್ಲಿ ಈ ಪ್ರಕರಣದ ಕುರಿತು ತನಿಖೆ ನಡೆಸಲು ಸಮಿತಿ ರಚಿಸಲಾಗಿತ್ತು. ಸತತ ನಾಲ್ಕು ವರ್ಷಗಳ ತನಿಖೆ, 92 ಸುದೀರ್ಘ ವಿಚಾರಣೆ ಬಳಿಕ ಜನವರಿ 2022ಕ್ಕೆ ವರದಿ ನೀಡಿತ್ತು.

ಬೆನಜೀರ್ ಭುಟ್ಟೋ ರೀತಿ ಹತ್ಯೆಗೆ ಪ್ಲಾನ್, ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಮೇಲಿನ ಗುಂಡಿನ ದಾಳಿ ವಿಡಿಯೋ!

ಈ ವರದಿಯಲ್ಲಿ ಅಕ್ರಮವಾಗಿ ವಿದೇಶಿ ಹಣ ಸ್ವೀಕರಣೆ, 13 ಬ್ಯಾಂಕ್ ಖಾತೆ ತೋರಿಸಿದ್ದರೆ, ಇನ್ನುಳಿದ 50ಕ್ಕೂ ಹೆಚ್ಚು ಬ್ಯಾಂಕ್ ಖಾತೆಯನ್ನು ಮರೆ ಮಾಚಿ ವ್ಯವಹಾರ ನಡೆಸಿರುವುದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇಷ್ಟೇ ಅಲ್ಲ ಅಕ್ರಮವಾಗಿ ವಿದೇಶಿ ಹಣ ಸ್ವೀಕರಣೆ, ಅಕ್ರಮ ಬಳಕೆ ಸೇರಿದಂತೆ ಹಲವು ಆರೋಪಗಳಿಗೆ ವರದಿಯಲ್ಲಿ ಸಾಕ್ಷ್ಯ ಒದಗಿಸಿದೆ. ಇದರ ಬೆನ್ನಲ್ಲೆ ಲಾಹೋರ್ ಕೋರ್ಟ್ ಇಮ್ರಾನ್ ಖಾನ್ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದೆ.

ಇಮ್ರಾನ್ ಖಾನ್ ಜೈಲು ಸೇರುವ ಸಾಧ್ಯತೆ ಹೆಚ್ಚಿದೆ. ನಿರೀಕ್ಷಾ ಜಾಮೀನು ಕೋರಿದ್ದ ಇಮ್ರಾನ್ ಖಾನ್‌ಗೆ ಖುದ್ದು ಹಾಜರಾಗಲು ಸೂಚನೆ ನೀಡಿದೆ. ಈ ವೇಳೆ ಇಮ್ರಾನ್ ಖಾನ್ ನಿರೀಕ್ಷಾ ಜಾಮೀನು ಅರ್ಜಿ ತಿರಸ್ಕೃತಗೊಂಡರೆ ಇಮ್ರಾನ್ ಖಾನ್ ಬಂಧನವಾಗಲಿದೆ. ಪಾಕಿಸ್ತಾನ ಮಾಧ್ಯಮಗಳ ಪ್ರಕಾರ ಈ ಬಾರಿ ಇಮ್ರಾನ್ ಖಾನ್ ಜೈಲು ಸೇರುವುದು ಬಹುತೇಕ ಖಚಿತ ಎಂದಿದೆ.

ಇತ್ತೀಚೆಗೆ ಇಮ್ರಾನ್ ಖಾನ್ ಆಡಿಯೋ ಟೇಪ್ ವಿವಾದದಲ್ಲಿ ಸಿಲುಕಿ ಭಾರಿ ಮುಖಭಂಗ ಅನುಭವಿಸಿದ್ದರು. ಇಮ್ರಾನ್‌ ಖಾನ್‌ ಮಾತನಾಡಿರುವುದು ಎಂದು ಹೇಳಲಾದ ‘ಸೆಕ್ಸ್‌ ಕಾಲ್‌’ ಆಡಿಯೋವೊಂದು ಬಿಡುಗಡೆಯಾಗಿದ್ದು, ಇಮ್ರಾನ್‌ರನ್ನು ವಿವಾದದಲ್ಲಿ ಸಿಲುಕಿಸಿತ್ತು. ಪತ್ರಕರ್ತ ಸೈಯದ್‌ ಅಲಿ ಹೈದರ್‌ ಇದನ್ನು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ್ದು, ಕೆಲವು ವರದಿಗಳು ಇದು ಪ್ರಧಾನಿ ಕಚೇರಿಯಿಂದ ಮಾಡಲಾದ ಕರೆ ಎಂದು ಹೇಳಿವೆ. ಈ ಆಡಿಯೋ ಕ್ಲಿಪ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

Imran Khan: ನವಾಜ್‌ ರೀತಿ ಓಡಿಹೋಗಲ್ಲ, ಐಎಸ್‌ಐ ಜಾತಕ ಬಯಲು ಮಾಡ್ತೀನಿ ಎಂದ ಪಾಕ್‌ ಮಾಜಿ ಪ್ರಧಾನಿ!

 ಇಮ್ರಾನ್‌ ಖಾನ್‌ ಎಂದು ಹೇಳಲಾಗುತ್ತಿರುವ ವ್ಯಕ್ತಿ ಹಾಗೂ ಮಹಿಳೆಯೊಬ್ಬಳ ಜೊತೆ ನಡೆದಿರುವ ಫೋನ್‌ ಸಂಭಾಷಣೆಯಾಗಿದೆ.ಇಮ್ರಾನ್‌ ಧ್ವನಿ ಹೋಲುವ ವ್ಯಕ್ತಿ, ‘ನನ್ನನ್ನು ಭೇಟಿಯಾಗು. ಸಮ್ಮಿಲನ ಆಗೋಣ’ ಎಂದು ಮಹಿಳೆಗೆ ಕೋರುತ್ತಾನೆ. ಆದರೆ, ‘ನನಗೆ ಅನಾರೋಗ್ಯ ಇದೆ. ಭೇಟಿ ಮಾಡಲಾಗದು’ ಎಂದು ಮಹಿಳೆ ಹೇಳುತ್ತಾಳೆ.ಆದರೆ ವ್ಯಕ್ತಿಯು ‘ಮಾರನೇ ದಿನ (ನಾಳೆ) ಭೇಟಿ ಆಗೋಣ. ಆದರೆ, ನನ್ನ ಕುಟುಂಬದವರು ಮನೆಗೆ ಬರುತ್ತಿದ್ದಾರೆ. ಅವರಿಗೆ ತಡವಾಗಿ ಬನ್ನಿ ಎಂದು ಮನವರಿಕೆ ಮಾಡಲು ಯತ್ನಿಸುವೆ. ಯಾವುದಕ್ಕೂ ಪರಿಸ್ಥಿತಿ ನೋಡಿಕೊಂಡು ಮತ್ತೆ ನಿನಗೆ ಕಾಲ್‌ ಮಾಡುವೆ’ ಎನ್ನುತ್ತಾನೆ. ಆದರೆ ಈ ಆಡಿಯೋ ಕಾಲ್ ನಕಲಿ ಎಂದು ಇಮ್ರಾನ್ ಖಾನ್ ಪಿಟಿಐ ಪಕ್ಷ ಸ್ಪಷ್ಟನೆ ನೀಡಿತ್ತು.