ಪೋಪ್ ಫ್ರಾನ್ಸಿಸ್ ಸಲಿಂಗಕಾಮಿಗಳ ಹಕ್ಕುಗಳನ್ನು ಸಂರಕ್ಷಿಸುವ ನಾಗರಿಕ ಒಕ್ಕೂಟ ಕಾನೂನು ರಚನೆಗೆ ಸ್ಪಷ್ಟ ಬೆಂಬಲ ನೀಡಿದ್ದಾರೆ. ಹೊಸ ಸಾಕ್ಷ್ಯಚಿತ್ರದ ಮೂಲಕ ರೋಮನ್ ಕೆಥೋಲಿಕ್ ಚರ್ಚ್‌ನ ಅಧಿಕೃತ ಬೋಧನೆಯಲ್ಲಿ ನಾಗರಿಕ ಒಕ್ಕೂಟ ಕಾನೂನು ರಚನೆ ಅಗತ್ಯದ ಬಗ್ಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.

ರೋಮ್‌ನಲ್ಲಿ ಬಿಡುಗಡೆಯಾದ ಸಾಕ್ಷ್ಯ ಚಿತ್ರದಲ್ಲಿ ನಾಗರಿಕ ಒಕ್ಕೂಟ ಕಾನೂನು ರಚನೆಯಾಗಬೇಕು, ಈ ಮೂಲಕ ಸಲಿಂಗಿಗಳನ್ನು ಕಾನೂನಾತ್ಮಕವಾಗಿ ರಕ್ಷಿಸಬೇಕು ಎಂದಿದ್ದಾರೆ.

ಕೊರೋನಾ ಹಬ್ಬಿಸಿ ಲಸಿಕೆ ಪರೀಕ್ಷೆಗೆ ಮುಂದಾದ ವಿಜ್ಞಾನಿಗಳು!

ಫ್ರಾನ್ಸಿಸ್ ಅವರ ಹೇಳಿಕೆ ಕ್ಯಾಥೊಲಿಕ್ ಸಿದ್ಧಾಂತಗಳನ್ನು ಬದಲಿಸಲು ಸಾಧ್ಯವಿಲ್ಲ. ಆದರೂ LGBTಗಳ ಕಾನೂನಾತ್ಮಕ ಹಕ್ಕುಗಳನ್ನು ಬಲವಾಗಿ ವಿರೋಧಿಸಿದ್ದ ಚರ್ಚ್‌ನ ನಿಲುವಿನಲ್ಲಿ ಈಗ ಆಗಿರುವ ಬದಲಾವಣೆಯನ್ನು ಪೋಪ್ ಹೇಳಿಕೆ ಸ್ಪಷ್ಟವಾಗಿ ತೋರಿಸಿದೆ. ಆದರೆ ಹಿಂದಿನ ಪೋಪ್‌ಗಳು ಸಲಿಂಗ ಜೋಡಿಗಳನ್ನು ಬಲವಾಗಿ ವಿರೋಧಿಸಿದ್ದರು.

ಸಂಪ್ರದಾಯವಾದಿಗಳು ಅಂದುಕೊಂಡಷ್ಟು ಕ್ರಾಂತೀಕಾರಿಗಳಲ್ಲ ಎಂಬುದನ್ನು ಸಾಬೀತುಪಡಿಸಿದೆ ಫ್ರಾನ್ಸಿನ್ ನೀಡಿರುವ ಹೇಳಿಕೆ. ಚರ್ಚ್‌ನ LGBT ಅನುಯಾಯಿಗಳ ಹಕ್ಕು ಸಂರಕ್ಷಣೆಗೆ ಅವರು ಹಿಂದಿನಿಂದಲೂ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಅವರು ಇದೇ ಮೊದಲ ಬಾರಿಗೆ ಈ ರೀತಿ ಸ್ಪಷ್ಟವಾದ ಹೇಳಿಕೆ ಕೊಟ್ಟಿದ್ದಾರೆ ಎಂದು ರೆವ್. 
ಜೇಮ್ಸ್ ಮಾರ್ಟಿನ್ ಹೇಳಿದ್ದಾರೆ. ಜೇಮ್ಸ್ ಚರ್ಚ್‌ಗೆ LGBT ಅನುಯಾಯಿಗಳನ್ನು  ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಪಾಕ್‌ ಸೇನೆಯಿಂದ ಹೈಡ್ರಾಮಾ:ಸಿಡಿದೆದ್ದ ಪೊಲೀಸರು!

ನನಗನಿಸಿದಂತೆ ಇದು ಅತ್ಯಂತ ದೊಡ್ಡ ಹೆಜ್ಜೆ. ಹಿಂದೆ, ನಾಗರಿಕ ಸಂಘಗಳು ಸಹ ಚರ್ಚ್‌ಗಳಲ್ಲಿ ಸಲಿಂಗಿಗಳ ಹಕ್ಕುಗಳನ್ನು ಬೆಂಬಲಿಸುತ್ತಿರಲಿಲ್ಲ. ಫ್ರಾನ್ಸಿನ್ ಅವರು ಈಗ ಸಲಿಂಗ ನಾಗರಿಕ ಒಕ್ಕೂಟ ಕಾನೂನು ಮಾನ್ಯತೆಗೆ ತಮ್ಮ ಬೆಂಬಲ ನೀಡುತ್ತಿದ್ದಾರೆ ಎಂದು ರೆವ್. ಜೇಮ್ಸ್ ಮಾರ್ಟಿನ್ ಹೇಳಿದ್ದಾರೆ.

ರೋಮನ್ ಕ್ಯಾಥೊಲಿಕ್ ಚರ್ಚ್‌ನ ಪೋಪ್ ಹೇಳಿಕೆ ಸುಮಾರು 1.3 ಬಿಲಿಯನ್ ಅನುಯಾಯಿಗಳ ನಿಲುವನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದೆ ಎಂಬುದು ಗಮನಾರ್ಹ.

ದುರ್ಗೆ ಅವತಾರದಲ್ಲಿ ಕಮಲಾ ಹ್ಯಾರಿಸ್, ಭಾರೀ ವಿವಾದ!

ವಿಶ್ವದ ಕೆಲವು ಭಾಗಗಳಲ್ಲಿ ಕ್ಯಾಥೊಲಿಕ್ ಫಾದರ್‌ಗಳು ಈಗಾಗಲೇ ಸಲಿಂಗ ವಿವಾಹವನ್ನು ನಡೆಸಿ ಬೆಂಬಲಿಸುತ್ತಿದ್ದರೆ, ಇನ್ನೂ ಹಲವು ಕಡೆ ಫಾದರ್‌ಗಳು ಸಲಿಂಗಕಾಮ ಕಾನೂನುಬಾಹಿರವಾಗಿರುವ ದೇಶಗಳಲ್ಲಿ ಕೆಲಸ ಮಾಡುತ್ತಾರೆ.

ಫ್ರಾನ್ಸೆಸ್ಕೋ ಎಂಬ ಡಾಕ್ಯುಮೆಂಟರಿಯಲ್ಲಿ, ಸಲಿಂಗ ಕಾಮಿಗಳ ವಿವಾಹವನ್ನು ಹೆಚ್ಚಾಗಿ ನಡೆಸುವುದನ್ನು ಬೆಂಬಲಿಸುವುದಿಲ್ಲವಾದರೂ, ಸಲಿಂಗಿಗಳು ಕುಟುಂಬವಾಗಿರುವುದನ್ನು ಬೆಂಬಲಿಸಲಾಗಿದೆ. 

ಹೆಂಡತಿಯೊಂದಿಗೆ ಸೆಕ್ಸ್... ನಂತ್ರ ಕೋಳಿಗಳ ಜತೆ... ವಿಡಿಯೋ ಮಾಡ್ತಿದ್ದ ಪತ್ನಿ!

ಅವರೆಲ್ಲರೂ ದೇವರ ಮಕ್ಕಳು. ಅವರಿಗೆ ಕುಟುಂಬ ಹೊಂದುವ ಹಕ್ಕಿದೆ. ಯಾರನ್ನೂ ಹೊರಗೆ ಹಾಕಬಾರದು, ಸಲಿಂಗಿಗಳೆಂಬ ಕಾರಣಕ್ಕೆ ಅವರನ್ನು ದಯಾನೀಯವಾಗಿ ಸ್ಥಿತಿಗೆ ತರಬಾರದು ಎಂದು ಫ್ರಾನ್ಸಿನ್ ತಿಳಿಸಿದ್ದಾರೆ.