Asianet Suvarna News Asianet Suvarna News

ಹೆಂಡತಿಯೊಂದಿಗೆ ಸೆಕ್ಸ್... ನಂತ್ರ ಕೋಳಿಗಳ ಜತೆ... ವಿಡಿಯೋ ಮಾಡ್ತಿದ್ದ ಪತ್ನಿ!

ಕೋಳಿಗಳೊಂದಿಗೆ ಸೆಕ್ಸ/ ಪತ್ನಿಯೇ ವಿಡಿಯೋ ಮಾಡುತ್ತಿದ್ದಳು/ ಅಪರಾಧಿಗೆ ಮೂರು ವರ್ಷ ಜೈಲು ಶಿಕ್ಷೆ/ ಬ್ರಿಟನ್ ವ್ಯಕ್ತಿಯ ಅಸಹ್ಯಕರ ಕೆಲಸ

UK man jailed for three years for having sex with pet chickens mah
Author
Bengaluru, First Published Oct 20, 2020, 4:38 PM IST

ಲಂಡನ್ ( ಅ. 20)  ಸಾಕು ಕೋಳಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ವ್ಯಕ್ತಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.  ಪತಿಯ ಕ್ರೂರ ಕೆಲಸವನ್ನು ಪತ್ನಿಯೇ ವಿಡಿಯೋ ಚಿತ್ರೀಕರಣ ಸಹ ಮಾಡಿದ್ದಳು!

37 ವರ್ಷದ ವಿಲೇ ರೆಹನ್ ಬೇಗ್ ಕೋಳಿಗಳೊಂದಿಗೆ ಸಂಭೋಗ ಮಾಡಿದವ.   ಅಪರಾಧಿಗೆ ಬ್ರಾಡ್‌ಫೋರ್ಡ್ ಕ್ರೌನ್ ಕೋರ್ಟ್ ಶಿಕ್ಷೆ ವಿಧಿಸಿದೆ. ರೆಹಾನ್ ಪತ್ನಿಈ ಅಸಹ್ಯಕರ ಕೆಲಸವನ್ನು ಚಿತ್ರೀಕರಣ ಮಾಡಿ 'ಫ್ಯಾಮಿಲಿ ವಿಡ್ಸ್' ಎಂಬ ಫೋಲ್ಡರ್ ನಲ್ಲಿ ಸೇವ್ ಮಾಡಿ ಇಟ್ಟಿದ್ದರು.

ಮನೆಯ ತಳಮಹಡಿಯಲ್ಲಿ ಈ ಕೆಲಸ ನಡೆದಿದ್ದು ಚಿತ್ರೀಕರಣಕ್ಕೆ ಗೊಪ್ರೊ ಕ್ಯಾಮರಾ ಬಳಕೆ ಮಾಡಿದ್ದರು.   ಒಂದು ಕಡೆ ಹೆಂಡತಿಯೊಂದಿಗೆ ಸೆಕ್ಸ್ ಮಾಡಿದ ಆಸಾಮಿ ನಂತರ ಕೋಳಿಗಳ ಮೇಲೆ ತನ್ನ ಕ್ರೌರ್ಯ ಮೆರೆಯುತ್ತಿದ್ದ ಎಂದು ಪೊಲೀಸರು  ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಸೆಕ್ಸ್ ಮಾಡುವಾಗ ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಲೆ ಮಾಡಿದ 

ಈತನ ಲೈಂಗಿಕ ತೃಷೆ ಕಾರಣಕ್ಕೆ ಎರಡು ಕೋಳಿಗಳು ಸತ್ತು ಬಿದ್ದಿದ್ದವು. ಇದನ್ನು  ಅಸಹ್ಯ ಮತ್ತು ವಿಕೃತ ಎಂದು ಹೇಳಿದ ನ್ಯಾಯಾಧೀಶರು ಮೂರು ವರ್ಷದ ಶಿಕ್ಷೆ ಘೋಷಣೆ ಮಾಡಿದ್ದಾರೆ.

ಪತಿಯ ಕ್ರೂರ ಕೃತ್ಯಕ್ಕೆ ಸಹಾಯ ಮಾಡಿದ್ದಾಗಿ ಆರೋಪಿಯ 38 ವರ್ಷದ ಪತ್ನಿ ಹಲೀಮಾ ಬೇಗ್ ನ್ಯಾಯಾಲಯದಲ್ಲಿ ಒಪ್ಪಿಕೊಂಡಿದ್ದಾಳೆ. ಮಹಿಳೆ ಈಗಾಗಲೆ ಸಾಕಷ್ಟು ಕಾಲ ಜೈಲು ವಾಸ ಅನುಭವಿಸಿರುವುದರಿಂದ ಆಕೆಗೆ ಯಾವುದೆ ಶಿಕ್ಷೆ ಪ್ರಕಟ ಮಾಡಲಾಗಿಲ್ಲ.

ವೆಸ್ಟ್ ಯಾರ್ಕ್‌ಷೈರ್‌ನ ಬ್ರಾಡ್‌ಫೋರ್ಡ್‌ನಲ್ಲಿರುವ ಗ್ರೇಟ್ ಹಾರ್ಟನ್‌ನಲ್ಲಿರುವ ದಂಪತಿಗಳ ಮನೆಯ ಮೇಲೆ ಜುಲೈ 9, 2019 ರಂದು ದಾಳಿ ನಡೆದಾಗ ಈ ಅಸಹ್ಯಕರ ಪ್ರಕರಣ ಬೆಳಕಿಗೆ ಬಂದಿತ್ತು. 

ದಾಳಿಯ ನಂತರ ಪೊಲೀಸರು ಎರಡು ಕಂಪ್ಯೂಟರ್ ಟವರ್, ಲ್ಯಾಪ್‌ಟಾಪ್, ಮೊಬೈಲ್ ಫೋನ್ ಮತ್ತು ಗ್ಯಾಜೆಟ್‌ಗಳನ್ನು ವಶಪಡಿಸಿಕೊಂಡಿದ್ದರು.  ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಚಿತ್ರಗಳು ಸಿಕ್ಕಿದ್ದವು.

ರೆಹನ್ ಬೇಗ್ ಬಳಿ ವಶಪಡಿಸಿಕೊಂಡ ವಿಡಿಯೋಗಳು ಹಲವು ಕತೆ  ಹೇಳುತ್ತಿದ್ದು ಈತ ಕೋಳಿಗಳು ಮಾತ್ರವಲ್ಲದೆ ಹಲವು ಪ್ರಾಣಿಗಳ ಜತೆ ಸಂಭೋಗ ನಡೆಸಿದ್ದು ಬಹಿರಂಗವಾಗಿದೆ.

Follow Us:
Download App:
  • android
  • ios