ನವದೆಹಲಿ(ಸೆ.22): 2017ರ ಸೆ.17ರಿಂದ 2020ರ ಸೆ.17ರ ವರೆಗೆ ಒಟ್ಟು 2120 ಪಾಕಿಸ್ತಾನಿಯರಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಗೃಹ ಇಲಾಖೆಯ ಸಹಾಯಕ ಸಚಿವ ನಿತ್ಯಾನಂದ ರೈ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.

ಬಡ ದೇಶಗಳ ಸೆಳೆಯಲು ಚೀನಾ ಮಾಸ್ಟರ್‌ ಪ್ಲಾನ್!

ಇದರ ಜತೆಗೆ 188 ಆಫ್ಘನ್ನರಿಗೆ, 99 ಬಾಂಗ್ಲಾದೇಶಿಯರಿಗೆ, 60 ಅಮೆರಿನ್ನರಿಗೆ, 58 ಶ್ರೀಲಂಕನ್ನರಿಗೆ, 31 ನೇಪಾಳಿಗಳಿಗೆ, 20 ಬ್ರಿಟೀಷರಿಗೆ, 19 ಮಲೇಷಿಯನ್ನರಿಗೆ, 13 ಕೆನಡಿಯನ್ನರಿಗೆ ಹಾಗೂ 13 ಸಿಂಗಾಪುರದವರಿಗೆ ದೇಶದ ಪೌರತ್ವ ನೀಡಲಾಗಿದೆ.

ಇದರ ಹೊರತಾಗಿ 44 ದೇಶಗಳ 2729 ಮಂದಿಗೆ ಭಾರತದ ಪೌರತ್ವ ನೀಡಿರುವುದಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.