ಅಮೆರಿಕಾದಲ್ಲಿ ದರೋಡೆಕೋರನೊಬ್ಬ 6 ಕೋಟಿ ಮೌಲ್ಯದ ವಜ್ರದ ಕಿವಿಯೋಲೆಗಳನ್ನು ನುಂಗಿ ಪೊಲೀಸರಿಗೆ ಶಾಕ್ ನೀಡಿದ್ದಾನೆ. ಟಿಫಾನಿ & ಕೋ ಅಂಗಡಿಯಲ್ಲಿ ದರೋಡೆ ನಡೆಸಿ ಕಿವಿಯೋಲೆಗಳನ್ನು ನುಂಗಿದ ಕಳ್ಳನ ವಿರುದ್ಧ ಪೊಲೀಸರು ಈಗ ದರೋಡೆ ಪ್ರಕರಣ ದಾಖಲಿಸಿದ್ದಾರೆ.
ದರೋಡೆ ಬಳಿಕ 6 ಕೋಟಿ ಮೊತ್ತದ ಡೈಮಂಡ್‌ನ್ನು ಕಳ್ಳ ನುಂಗಿದಂತಹ ವಿಚಿತ್ರ ಘಟನೆ ಅಮೆರಿಕಾದಲ್ಲಿ ನಡೆದಿದೆ. ಟಿಫಿನಿ & ಕೋ ಬ್ರಾಂಡ್‌ನ 769,000 ಡಾಲರ್ ಮೊತ್ತದ (6.6 ಕೋಟಿ ಭಾರತೀಯ ರೂಪಾಯಿಗಳು) ಕಿವಿಯೋಲೆಗಳನ್ನು ಕಳ್ಳ ನುಂಗಿದ್ದಾನೆ. ಅಮೆರಿಕಾದ ಫ್ಲೋರಿಡಾದಲ್ಲಿ ಕಳೆದ ವಾರ ನಡೆದ ದರೋಡೆಯ ಬಳಿಕ ಈ ಘಟನೆ ನಡೆದಿದೆ.
ಜಾದೂಗಾರನಂತೆ ಬಂದು ಕಳ್ಳತನ
ಫೆಬ್ರವರಿ 26 ರಂದು ಮ್ಯಾಜಿಷಿಯನ್ (ಜಾದೂಗರನಂತೆ ಮುಖವಾಡ ಧರಿಸಿ) ರೀತಿ ಬಂದು ಟಿಫಾನಿ & ಕಂ ಶಾಪ್‌ಗೆ ಈ ಕಳ್ಳ ಎಂಟ್ರಿ ಕೊಟ್ಟಿದ್ದಾರೆ. ನಂತರ ಅಲ್ಲಿನ ಆಭರಣಗಳನ್ನು ಎಬ್ಬಿಸಿದ್ದಾನೆ. ಹೀಗೆ ಉಪಾಯವಾಗಿ ಡೈಮಂಡ್ ಆಭರಣಗಳನ್ನು ಕದ್ದ ಕಳ್ಳನನ್ನು 32 ವರ್ಷ ಜಯ್ಥನ್ ಲಾರೆನ್ಸ್ ಗಿಲ್ಡರ್ ಒರ್ಲ್ಯಾಂಡೊ ಎಂದು ಗುರುತಿಸಲಾಗಿದೆ.
Bengaluru: ರಾಜಧಾನಿಯಲ್ಲಿ 27 ಮೂಟೆಗಳಲ್ಲಿದ್ದ 1 ಕೋಟಿ ಮೌಲ್ಯದ 830 ಕೆಜಿ ಕೂದಲು ಕಳ್ಳತನ
ಒಟ್ಟು ಆರು ಕೋಟಿ ಮೌಲ್ಯದ ವಜ್ರದಾಭರಣ:
ಸ್ಥಳೀಯ ವರದಿಗಳ ಪ್ರಕಾರ, ಗಿಲ್ಡರ್ ಎರಡು ಜೋಡಿ ಕಿವಿಯೋಲೆಗಳೊಂದಿಗೆ ಅಂಗಡಿಯಿಂದ ಪರಾರಿಯಾಗಿದ್ದಾನೆ. ಅದರಲ್ಲಿ ಒಂದು 4.86 ಕ್ಯಾರೆಟ್‌ಗಳನ್ನು ಒಳಗೊಂಡಿದ್ದು, ಅದರ ಬೆಲೆ $160,000 (ಸುಮಾರು 1.3 ಕೋಟಿ ರೂ.), ಹಾಗೆಯೇ ಇನ್ನೊಂದು, 8.10 ಕ್ಯಾರೆಟ್ ಡೈಮಂಡ್ ಹೊಂದಿದ್ದ ಸೆಟ್‌ನ ಬೆಲೆ $609,500 (ಸುಮಾರು 5.3 ಕೋಟಿ ರೂ.).
ಆರೋಪಿಯ ಸ್ಕ್ಯಾನಿಂಗ್ ರಿಪೋರ್ಟ್ ನೋಡಿದ ಪೊಲೀಸರಿಗೆ ಆಘಾತ
ವಿಚಾರ ತಿಳಿದ ಒರ್ಲ್ಯಾಂಡೊ ಪೊಲೀಸರು ಗಿಲ್ಡರ್‌ನನ್ನು ಇಂಟರ್‌ಸ್ಟೇಟ್ 10 ರಲ್ಲಿ ಬಂಧಿಸಲು ಯತ್ನಿಸಿದಾಗ ಆತ ವಿರೋಧ ವ್ಯಕ್ತಪಡಿಸಿದ್ದಾನೆ. ಆದರೆ ಆತನನ್ನು ತಪಾಸಣೆ ಮಾಡಿದಾಗ ಪೊಲೀಸರಿಗೆ ಕಾಣೆಯಾದ ಕಿವಿಯೋಲೆಗಳನ್ನು ಆತನ ಬಳಿ ಪತ್ತೆ ಮಾಡಲಾಗಲಿಲ್ಲ, ಹೀಗಾಗಿ ತನ ವಿರುದ್ಧ ದರೋಡೆ ಪ್ರಕರಣ ದಾಖಲಿಸಲು ಪೊಲೀಸರಿಗೆ ಯಾವುದೇ ಸಾಕ್ಷ್ಯ ಸಿಕ್ಕಿರಲಿಲ್ಲ, ಆದರೂ ಬಂಧನಕ್ಕೆ ವಿರೋಧ ವ್ಯಕ್ತಪಡಿಸಿದ ಆರೋಪ ಹೊರಿಸಿ ಪೊಲೀಸರು ಆತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಆದರೆ ಜೈಲಿನಲ್ಲಿ ಆರೋಪಿ ಗ್ಲಿಡರ್ ಅಲ್ಲಿನ ಸಿಬ್ಬಂದಿ ಜೊತೆ ತನ್ನ ಹೊಟ್ಟೆಯಲ್ಲಿರುವುದಕ್ಕೆ ಆರೋಪ ಹೊರಿಸಲಾಗುವುದೇ ಎಂದು ಕೇಳಿದ್ದಾನೆ. ಇದಾದ ನಂತರ ಆತನ ದೇಹವನ್ನು ಸಂಪೂರ್ಣ ವೈದ್ಯಕೀಯವಾಗಿ ತಪಾಸಣೆ ಮಾಡಿದಾಗ ಜೀರ್ಣಾಂಗದಲ್ಲಿ ಏನೋ ಹೊರಗಿನ ವಸ್ತು ಇರುವುದು ಪತ್ತೆಯಾಗಿದೆ.
ಇವು ದರೋಡೆ ವೇಳೆ ಮಾಯವಾದ ಟಿಫಾನಿ ಕಂಪನಿಯ ಕಿವಿಯೋಲೆಗಳಾಗಿದೆ ಎಂದು ಅಧಿಕಾರಿಗಳು ವರದಿ ಮಾಡಿದ್ದಾರೆ. ಇದಾದ ನಂತರ ಆರೋಪಿ ಜಯ್ತನ್ ಲಾರೆನ್ಸ್ ಗಿಲ್ಡರ್ ವಿರುದ್ಧ ಈಗ ಪ್ರಥಮ ದರ್ಜೆಯ ಭಾರಿ ದರೋಡೆ ಹಾಗೂ ಮುಖವಾಡದೊಂದಿಗೆ ದರೋಡೆಗಿಳಿದ ಆರೋಪ ಹೊರಿಸಲಾಗಿದೆ.
ಪ್ರತಿಜ್ಞೆ ವೇಳೆ ಪಕ್ಷದ ಕಾರ್ಯಕರ್ತೆ ಬಳೆ ಎಗರಿಸಲು ಯತ್ನಿಸಿದ DMK ಕಾರ್ಪೊರೇಟರ್: ವಿಡಿಯೋ ನೋಡಿ
