ಚೆನ್ನೈನಲ್ಲಿ ಹಿಂದಿ ಹೇರಿಕೆ ವಿರುದ್ಧ ಡಿಎಂಕೆ ಪ್ರತಿಜ್ಞೆ ಮಾಡುತ್ತಿದ್ದಾಗ, ಕಾರ್ಪೊರೇಟರ್ ಒಬ್ಬರು ಕಾರ್ಯಕರ್ತೆಯ ಬಳೆ ಕದಿಯಲು ಯತ್ನಿಸಿದ್ದಾರೆ. ಈ ಘಟನೆಯ ವಿಡಿಯೋವನ್ನು ಬಿಜೆಪಿ ರಾಜ್ಯಾಧ್ಯಕ್ಷರು ಹಂಚಿಕೊಂಡಿದ್ದು, ಡಿಎಂಕೆಯನ್ನು ಟೀಕಿಸಿದ್ದಾರೆ.

ಚೆನ್ನೈ: ಹಿಂದಿ ಹೇರಿಕೆ ವಿರುದ್ಧ ಡಿಎಂಕೆ ಕಾರ್ಯಕರ್ತರು ಪ್ರತಿಜ್ಞೆ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಪಕ್ಷದ ಕಾರ್ಪೊರೇಟರ್‌ ಒಬ್ಬರು ಕಾರ್ಯಕರ್ತೆಯ ಬಳೆ ಎಗರಿಸಲು ಯತ್ನಿಸಿದ ಘಟನೆ ನಡೆದಿದೆ.

ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಘಟನೆ 30 ಸೆಕೆಂಡ್‌ಗಳ ವಿಡಿಯೋ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು ‘ಕಳ್ಳರು ಮತ್ತು ಡಿಎಂಕೆಯನ್ನು ಎಂದಿಗೂ ಪ್ರತ್ಯೇಕಿಸಲು ಸಾಧ್ಯವಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

ಕಳ್ಳತನಕ್ಕೆ ಯತ್ನಿಸಿದ ಕಾರ್ಪೊರೇಟರ್‌ನ್ನು ಡಿಎಂಕೆಯ ಕುನೂರು ಪುರಸಭೆಯ ಕೌನ್ಸಿಲರ್‌ ಜಾಕಿರ್‌ ಹುಸೇನ್ ಎಂದು ಗುರುತಿಸಲಾಗಿದೆ. ಹುಸೇನ್ ಮಹಿಳೆಯೊಬ್ಬರ ಕೈಯಿಂದ ಚಿನ್ನದ ಬಳೆ ತೆಗೆಯಲು ಯತ್ನಿಸಿದ್ದರು. ಈ ವೇಳೆ ಮತ್ತೊಬ್ಬ ಕಾರ್ಯಕರ್ತೆ ಅದನ್ನು ತಡೆಯಲು ಮುಂದಾಗಿದ್ದಾರೆ. ಆದರೆ ಹುಸೇನ್‌ ಮತ್ತೆ ಪ್ರಯತ್ನಿಸಿದ್ದಾರೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Bofors scam: ರಾಜೀವ್‌ ಗಾಂಧಿ ಪ್ರಧಾನಿಯಾಗಿದ್ದ ವೇಳೆ ನಡೆದಿದ್ದ ಬೊಫೋರ್ಸ್‌ ಗನ್‌ ಖರೀದಿ ಹಗರಣಕ್ಕೆ ಮರುಜೀವ?

Scroll to load tweet…