Asianet Suvarna News Asianet Suvarna News

13 ವರ್ಷಗಳ ಕಾಲ ಅಮ್ಮನ ಶವದೊಂದಿಗೆ ದಿನ ಕಳೆದ ಮಗ

ಪೋಲೆಂಡ್‌ನಲ್ಲಿ  ತನ್ನ ತಾಯಿಯ ಮೃತದೇಹವನ್ನು 13 ವರ್ಷಗಳ ಕಾಲ ಸಂರಕ್ಷಿಸಿ ಜೊತೆಯಲ್ಲಿ ಇರಿಸಿಕೊಂಡಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ

Poland man kept his mothers dead body at home for 13 years after her death akb
Author
First Published Mar 31, 2023, 3:58 PM IST

ಪೋಲೆಂಡ್: ತಾಯಿಯ ಜೊತೆ ಮಗುವಿಗೆ ಅವಿನಾಭಾವ ಸಂಬಂಧವಿರುತ್ತದೆ. ತಾಯಿ ಮಕ್ಕಳ ಒಡನಾಟವನ್ನು  ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಆದರೆ  ಅಮ್ಮ ಮಕ್ಕಳ ಮಧ್ಯೆ ಎಷ್ಟೇ ಪ್ರೀತಿ ಇದ್ದರೂ ಅವರು ದೇಹ ತ್ಯಜಿಸಿದಾಗ ಮೃತದೇಹವನ್ನು ಯಾರೂ ಕೂಡ ಜೊತೆಯಲ್ಲಿ ಇರಿಸಿಕೊಳ್ಳುವುದಿಲ್ಲ. ಆದರೆ ಪೋಲೆಂಡ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಯ ಮೃತದೇಹವನ್ನು  ಆಕೆ ತೀರಿ ಹೋದ 13 ವರ್ಷಗಳ ನಂತರವೂ ಜೊತೆಯಲ್ಲೇ ಇರಿಸಿಕೊಂಡ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. 

ಲಂಡನ್‌ ಮೂಲದ ಎಕ್ಸ್‌ಪ್ರೆಸ್‌ ಈ ಬಗ್ಗೆ ವರದಿ ಮಾಡಿದೆ., ಪೋಲೆಂಡ್‌ನಲ್ಲಿ  ತನ್ನ ತಾಯಿಯ ಮೃತದೇಹವನ್ನು 13 ವರ್ಷಗಳ ಕಾಲ ಸಂರಕ್ಷಿಸಿ ಜೊತೆಯಲ್ಲಿ ಇರಿಸಿಕೊಂಡಿದ್ದಕ್ಕಾಗಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪತ್ರಿಕೆ ವರದಿ ಮಾಡಿದೆ.  ವ್ಯಕ್ತಿಯ ಸೋದರ ಮಾವ ಮನೆಯಲ್ಲಿ ಶವವನ್ನು ನೋಡಿದ ಬಳಿಕ  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ನಂತರ ಪೊಲೀಸರು ಆತನನ್ನು ಬಂಧಿಸಿದ್ದಾರೆ.  ಮರಿಯನ್ ಎಲ್‌ ಬಂಧಿತ ವ್ಯಕ್ತಿ . ಹೀಗೆ ತಾಯಿಯ ಶವವನ್ನು ಮನೆಯಲ್ಲಿ ಇರಿಸಿಕೊಂಡಿದ್ದ ಮರಿಯನ್ ಎಲ್ ಎಂಬಾತನ ರಾಡ್ಲಿನ್‌ನಲ್ಲಿರುವ  ಮನೆಗೆ ಆತನ 70 ವರ್ಷದ ದೂರದ ಸಂಬಂಧಿಯೊಬ್ಬರು  ಹೀಗೆ ಸುಮ್ಮನೆ ಭೇಟಿ ಕೊಟ್ಟ ವೇಳೆ ಈ ವಿಚಾರ ಗಮನಕ್ಕೆ ಬಂದಿದೆ.  ಈ ವರ್ಷದ ಫೆಬ್ರವರಿ 22 ರಂದು  ಮರಿಯನ್ ಎಲ್‌ ಮನೆ ಮುಂಭಾಗದಲ್ಲಿ ಹುಚ್ಚನಂತೆ ಸುತ್ತಾಡುತ್ತಿರುವುದನ್ನು ಅವರು ಗಮನಿಸಿದ್ದಾರೆ. ನಂತರ ಅವರು ಮನೆಗೆ ಬಂದು ಗಮನಿಸಿದಾಗ 2009ರ ಸುದ್ದಿ ಪತ್ರಿಕೆಗಳ ರಾಶಿಯ  ಇದ್ದ ಸೋಫಾದ ಮೇಲೆ ಆತ ತಾಯಿಯ ಶವವನ್ನು ಇಟ್ಟುಕೊಂಡಿರುವುದು ಕಂಡು ಬಂದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಆ ಅಪಾರ್ಟ್‌ಮೆಂಟ್‌ನ ಮಾಲೀಕರಿಂದ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಸಿಕ್ಕಿದೆ ಎಂದುಪೊಲೀಸ್ ವಕ್ತಾರ ಮಾಲ್ಗೊರ್ಜಾಟಾ ಕೊನಿಯರ್ಸ್ಕಾ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ನಂತರ ಪೊಲೀಸರು ರಾಡ್ಲಿನ್‌ನಲ್ಲಿರುವ (Radlin) ರೋಗೋಜಿನಾ ಸ್ಟ್ರೀಟ್‌ನಲ್ಲಿರುವ (Rogozina Street) ಮನೆಗೆ ಪೊಲೀಸರು ಭೇಟಿ ನೀಡಿದ್ದು,  ವಯಸ್ಸಾದ ವ್ಯಕ್ತಿಗೆ ಸೇರಿದ ಮನೆಯಲ್ಲಿ ಸಂರಕ್ಷಿತ ಶವ ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ. ಘಟನೆಯ ನಂತರ ಹೀಗೆ ತಾಯಿಯ ಶವವನ್ನು ಸಂಗ್ರಹಿಸಿಟ್ಟಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆತನಿಗೆ ಮಾನಸಿಕ ತಜ್ಞರಿಂದ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. 

ಇತ್ತ ಸೋಫಾದ ಮೇಲಿದ್ದ ಶವವು ರಾಡ್ಲಿನ್ ತಾಯಿ (mother) ಆಗಿದ್ದು, ಅವರು 2010 ರಲ್ಲಿ ತಮ್ಮ  95 ನೇ ವಯಸ್ಸಿನಲ್ಲಿ ನಿಧನರಾಗಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ.  ಅಲ್ಲದೇ ಶವ ಸಿಕ್ಕ ಬಳಿಕ ಆತನ ತಾಯಿಯ ಸಮಾಧಿಯನ್ನು ಹೋಗಿ ಪೊಲೀಸರು ತಪಾಸಣೆ ನಡೆಸಿದಾಗ ಅಲ್ಲಿ ಶವ ಪೆಟ್ಟಿಗೆ ಖಾಲಿಯಾಗಿತ್ತು ಎಂದು ತಿಳಿದು ಬಂದಿದೆ.   ಮರಿಯನ್ ತನ್ನ ತಾಯಿಯ ಶವವನ್ನು ಸಮಾಧಿ ಮಾಡಿದ ಕೂಡಲೇ ಮತ್ತೆ ಅಗೆದು ಶವವನ್ನು ಅಪಾರ್ಟ್‌ಮೆಂಟ್‌ಗೆ ಕೊಂಡೊಯ್ದಿದ್ದ, ಅಲ್ಲಿ ರಾಸಾಯನಿಕಗಳನ್ನು  ಬಳಸಿ ಶವವನ್ನು ಹಾಳಾಗದಂತೆ ಸಂರಕ್ಷಿಸಿದ್ದ. ಈತನ ವಿರುದ್ಧ ಜಿಲ್ಲಾ ಪ್ರಾಸಿಕ್ಯೂಟರ್ ಕಚೇರಿಯ ಪ್ರಾಸಿಕ್ಯೂಟರ್ ಜೊವಾನ್ನಾ ಸ್ಮೊರ್ಕ್‌ಜೆವ್ಸ್ಕಾ (Joanna Smorczewska ) ಅವರು ಶವಕ್ಕೆ ಅಡ್ಡಿಪಡಿಸಿದ ಆರೋಪ ಹೊರಿಸಿದ್ದಾರೆ. ಅಲ್ಲದೇ ಆತನ ಆರೋಗ್ಯ ಪರಿಶೀಲಿಸಿದ ವೈದ್ಯರ ಹೇಳಿಕೆಗಾಗಿ ಅವರು ಕಾಯುತ್ತಿದ್ದಾರೆ. 

Follow Us:
Download App:
  • android
  • ios