Suspected Alien: ಫೆಸಿಫಿಕ್ ಮಹಾಸಾಗರ ಮೇಲೆ ಪೈಲೆಟ್ ಗೆ ಕಾಣಿಸ್ತಾ ಏಲಿಯನ್? ವಿಡಿಯೋದಲ್ಲಿರುವುದೇನು?
- ಪೆಸಿಫಿಕ್ ಮಹಾಸಾಗರದ ಮೇಲೆ ಹಾರಾಡುತ್ತಿರುವ ನಿಗೂಢ ವಸ್ತು
- ಬಿಳಿ ಬಣ್ಣದ ಹಾರುವ ವಸ್ತುವನ್ನು ಚಿತ್ರೀಕರಿಸಿದ ಪೈಲಟ್
- ಏಲಿಯನ್ ಇರಬಹುದೆಂದ ಪೈಲಟ್
ಏಲಿಯನ್ ಗಳು, ಹಾರುವ ತಟ್ಟೆ ಇವೆಯೇ ? ಇಲ್ಲವೇ ? ಎಂಬ ಬಗ್ಗೆ ಬೇಕಾದಷ್ಟು ಚರ್ಚೆಗಳು ನಡೆಯುತ್ತಲೇ ಇದೆ. ಆದರೆ ಅವುಗಳ ಅಸ್ತಿತ್ವದ ಬಗ್ಗೆ ಈವರೆಗೆ ಎಲ್ಲೂ ಕೂಡ ಸ್ಪಷ್ಟತೆ ಸಿಕ್ಕಿಲ್ಲ. ಇದೀಗ ಫೆಸಿಫಿಕ್ ಮಹಾಸಾಗರದ ಮೇಲೆ ಏಲಿಯನ್ ಗಳು ಹಾರುವ ರೀತಿಯಲ್ಲಿ ವಸ್ತುಗಳನ್ನು ನೋಡಿದ್ದಾಗಿ ಪೈಲಟ್ ಒಬ್ಬರು ಹೇಳಿಕೊಂಡಿದ್ದು, ಈ ಬಗ್ಗೆ ಅವರು ವಿಡೀಯೋವನ್ನು ಹಂಚಿಕೊಂಡಿದ್ದಾರೆ. ಶಂಕಿತ ಅನ್ಯಗ್ರಹ ಜೀವಿಗಳ ವಿಮಾನವು ಚಲಿಸುತ್ತಿದ್ದು, ಅದರ ದೀಪಗಳು ಮಾತ್ರ ಉರಿಯುತ್ತಿರುವ ದೃಶ್ಯವು ಪೈಲಟ್ ಮಾಡಿರುವ ವಿಡಿಯೋದಲ್ಲಿ ಕಂಡುಬಂದಿದೆ. ಪೆಸಿಫಿಕ್ ಮಹಾಸಾಗರದ ಮೇಲೆ ಹಾರಾಡುತ್ತಿರುವ ದೀಪಗಳು ಮಾತ್ರ ಕಾಣುತ್ತಿದೆ. ಆದರೆ, ಇದು ನಿಜವಾಗಿಯೂ ಏಲಿಯನ್ ಗಳದ್ದಾ ಅಥವಾ ಬೇರೆ ಏನಾದರೂ ಜೀವಿಗಳಿರಬಹುದೇ ಎಂಬುವ ಬಗ್ಗೆ ಮಾತ್ರ ಇನ್ನೂ ತಿಳಿದುಬಂದಿಲ್ಲ.
ಪೈಲಟ್ ಸೆರೆಹಿಡಿದಿರುವ ವಿಡಿಯೋದಲ್ಲಿ, ಮೂರು ಸಾಲುಗಳಲ್ಲಿ ಬಿಳಿ ಬಣ್ಣದ ವಸ್ತು ಹಾರಾಡುತ್ತಿದೆ. ಒಂದರಲ್ಲಿ ನಾಲ್ಕು ಚುಕ್ಕೆಗಳು ಕಂಡು ಬಂದರೆ, ಮತ್ತೆ ಎರಡರಲ್ಲಿ ಮೂರು ಚುಕ್ಕೆಗಳು ಕಂಡು ಬಂದಿವೆ. ವರದಿಗಳ ಪ್ರಕಾರ, ವಿಡಿಯೋವನ್ನು 39,000 ಅಡಿ ಎತ್ತರದಲ್ಲಿ ಚಿತ್ರೀಕರಿಸಲಾಗಿದೆ. ಸ್ವಲ್ಪ ಸಮಯದ ಬಳಿಕ ದೀಪಗಳು ಮೋಡದ ಮರೆಯಲ್ಲಿ ಕಣ್ಮರೆಯಾಗಿದೆ. ಸದ್ಯ, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೀಪಗಳು ಯುದ್ಧನೌಕೆಯಿಂದ ಹೊಡೆದ ಕ್ಷಿಪಣಿಗಳಾಗಿರಬಹುದು ಎಂದು ಕೆಲವು ಮಂದಿ ಶಂಕಿಸಿದ್ದಾರೆ. ಆದರೆ ಇಲ್ಲಿಯವರೆಗೆ ಅದೇನೆಂಬುದು ಸ್ಪಷ್ಟವಾಗಿಲ್ಲ. ಇತ್ತೀಚೆಗೆ, ಪಂಜಾಬ್‌ನಲ್ಲಿ ನಾಗರಿಕರು ರಾತ್ರಿ ವೇಳೆ ಆಕಾಶದಲ್ಲಿ ಪ್ರಕಾಶಮಾನವಾದ ದೀಪಗಳ ನಿಗೂಢ ರೇಖೆಯನ್ನು ನೋಡಿದ್ದಾಗಿ ಹೇಳಿದ್ದರು. ಬಳಿಕ ಅದು ಉಪಗ್ರಹ ಎಂದು ಸ್ಪಷ್ಟಪಡಿಸಲಾಯಿತು.
ಈ ಹಿಂದೆ 2020 ರಲ್ಲಿ ಬಾಹ್ಯಾಕಾಶ ಯಾನ ಮುಗಿಸಿ ಬಂದ ಮೊದಲ ಬ್ರಿಟಿಷ್ ಗಗನಯಾತ್ರಿ ಡಾ. ಹೆಲೆನ್ ಶರ್ಮಾನ್ ಈ ಹಿಂದೆ ಅನ್ಯಗ್ರಹ ಜೀವಿಗಳು ಇದ್ದಿರುವುದು ಸತ್ಯ, ಏಲಿಯನ್ ಗಳು ನಮ್ಮ ನಡುವೆ ಜೀವಿಸುತ್ತಿದ್ದರೂ ನಮ್ಮ ಕಣ್ಣಿಗೆ ಕಾಣಿಸದೇ ಇರಬಹುದು ಎಂದು ಹೇಳಿದ್ದರು.
Area 51ರಲ್ಲಿದೆ ಏಲಿಯನ್ ಶವ, ಹೇಗಿದೆ ಗೊತ್ತಾ ವಿಶ್ವದ ಟಾಪ್ ಸೀಕ್ರೆಟ್ ಸ್ಥಳ!
ಬಾಹ್ಯಾಕಾಶದಲ್ಲಿ ಲಕ್ಷಾಂತರ ನಕ್ಷತ್ರಗಳಿದ್ದು, ನಮ್ಮ ಸೂರ್ಯನಂತೆ ಬೇರೆ ನಕ್ಷತ್ರಗಳಿದ್ದು, ಜೀವಿಗಳನ್ನು ಕಾಣಬಹುದಾಗಿದೆ. ಕಾರ್ಬನ್, ನೈಟ್ರೋಜನ್ ಮಿಶ್ರಿತ ಜೀವಿಯಾಗಿರಲು ಸಾಧ್ಯವಿಲ್ಲ. ಮನುಷ್ಯರಿಗಿಂತ ಬೇರೆ ಸ್ವರೂಪದಲ್ಲಿರುವುದರಿಂದ ನಮ್ಮ ಕಣ್ಣಿಗೆ ಏಲಿಯನ್ ಗಳು ಕಾಣಿಸುತ್ತಿಲ್ಲ ಎಂದಿದ್ದರು.
AFGHANS SELL BODY ORGANS: ಆಹಾರಕ್ಕಾಗಿ ದೇಹದ ಅಂಗಾಗಗಳನ್ನೇ ಮಾರುತ್ತಿರುವ ಅಫ್ಘಾನಿಗಳು!
ಈ ಹಿಂದೆ ಚಂದ್ರನ ಮೇಲೆ ಮಾನವನ ನೆರಳು ಕಂಡು ಬಂದ ರೀತಿಯ ಚಿತ್ರ ಎಲ್ಲೆಡೆ ಹಬ್ಬಿತ್ತು. ಆದರೆ, ನಂತರ ನಾಸಾ ಈ ಬಗ್ಗೆ ಸ್ಪಷ್ಟನೆ ನೀಡಿ "ಇದು ಕೇವಲ ಧೂಳು ಅಥವಾ ನೆಗೆಟಿವ್ ಮೇಲಿನ ಗೆರೆ' ಎಂದು ಸ್ಪಷ್ಟಪಡಿಸಿತ್ತು. 2017ರಲ್ಲಿ ಪೆಂಟಗಾನ್ ಕೂಡಾ ರಹಸ್ಯವಾಗಿ ಸಂಶೋಧನೆ ನಡೆಸಿತ್ತು. ಭೂಮಿಯಲ್ಲಿ ಹಾರುವ ತಟ್ಟೆ, ಅನ್ಯಗ್ರಹ ಜೀವಿ ವಾಹನಗಳು ಇರುವ ಬಗ್ಗೆ ಅಂದು ಸಂಶೋಧನೆ ನಡೆಸಿದ್ದ ಅಧಿಕಾರಿಯೊಬ್ಬರು, ಅನ್ಯಗ್ರಹ ಜೀವಿಗಳಿರುವ ಬಗ್ಗೆ ಕುರುಹುಗಳಿವೆ ಎಂದಿದ್ದರು.
ಏಲಿಯನ್ಸ್‌ಗಳಿವೆ, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಬಾಹ್ಯಾಕಾಶ ಭದ್ರತಾ ಮುಖ್ಯಸ್ಥ!
ಸೌರವ್ಯೂಹದ ಹೊರಗಿನಿಂದ ರೇಡಿಯೋ ಸಿಗ್ನಲ್ ಪಡೆದ ಭೂಮಿ: ಸೌರಮಂಡಲದ ಆಚೆ ಇರುವ ಗ್ರಹವೊಂದರಿಂದ ಸಂಭಾವ್ಯ ರೇಡಿಯೋ ಸಿಗ್ನಲ್'ವೊಂದು ಬರುತ್ತಿರುವುದನ್ನು ಅಂತರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಪತ್ತೆ ಕಳೆದ ಅಕ್ಟೋಬರ್ ನಲ್ಲಿ ಪತ್ತೆಹಚ್ಚಿದ್ದು, ಈ ಬೆಳವಣಿಗೆಯು ಏಲಿಯನ್ಸ್ ಇರುವಿಕೆ ಬಗ್ಗೆ ಮತ್ತೆ ಚರ್ಚೆಗಳು ಆರಂಭವಾಗುವಂತೆ ಮಾಡಿದೆ.
ನೆದರ್ಲೆಂಡ್'ನಲ್ಲಿರುವ ಲೋ ಫ್ರೀಕ್ವೆನ್ಸಿ ಅರ್ರೆ ಎಂಬ ರೇಡಿಯೋ ಟೆಲಿಸ್ಕೋಪ್ ಬಳಸಿ ಟೌ ಬೂಟ್ಸ್ ಎಂಬ ನಕ್ಷತ್ರ ವ್ಯವಸ್ಥೆಯಿಂದ ರೇಡಿಯೋ ಸಿಗ್ನಲ್ ಬರುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಸುದ್ದಿ ಹೊರಬೀಳುತ್ತಿದ್ದಂತೆಯೇ ಏಲಿಯನ್ಸ್ ಅಸ್ತಿತ್ವದ ಬಗ್ಗೆ ಚರ್ಚೆಗಳು ಆರಂಭವಾಗಿದೆ. ಭೂಮಿಯ ಹೊರತಾಗಿ ಬೇರೆಡೆ ಜೀವಿಗಳು ನೆಲೆಸಿರುವ ಕುರಿತು ನಡೆಯುತ್ತಿರುವ ಅಧ್ಯಯನ ಇಂದು ನಿನ್ನೆಯದಲ್ಲ. 1897ರಲ್ಲಿ ಅಮೆರಿಕಾದ ನಿಕೋಲಾ ಟೆಸ್ಲಾ ಎನ್ನುವವರು ಮಂಗಳ ಗ್ರಹದಿಂದ ರೇಡಿಯೋ ತರಂಗಗಳು ಹೊಮ್ಮುತ್ತಿರುವುದಾಗಿ ವಾದಿಸಿದ್ದರು. ಅಲ್ಲಿ ಜೀವಿಗಳು ಇರಬಹುದು ಎಂದು ಅಂದಾಜಿಸಲಾಗಿತ್ತಾದರೂ ಮಂಗಳ ಗ್ರಹದ ಮೇಲೆ ಇತ್ತೀಚೆಗೆ ನಡೆದ ಸಂಶೋಧನೆಗಳಿಂದ ಅಲ್ಲಿ ಜೀವಿಗಳು ನೆಲೆಸಿಲ್ಲ ಎನ್ನುವುದು ಗೊತ್ತಾಗಿದೆ.
1967, 1977, 2003ನೇ ಇಸವಿಯಲ್ಲೂ ಈ ವಿಚಾರಕ್ಕೆ ಸಂಬಂಧಿಸಿದ ಮಹತ್ತರ ಅಧ್ಯಯನಗಳು ನಡೆದಿವೆ. ಆದರೆ, ಇದುವರೆಗಿನ ಯಾವ ಅಧ್ಯಯನದಲ್ಲೂ ಏಲಿಯನ್ ಅಸ್ತಿತ್ವದ ಕುರಿತಾಗಿ ನಿಖರ ಮಾಹಿತಿ ಸಿಕ್ಕಿಲ್ಲ. ಪ್ರಪಂಚದಲ್ಲಿ ಏಲಿಯನ್ ಗಳ ಅಸ್ತಿತ್ವ ಇದೆಯೇ? ಈ ಏಲಿಯನ್ ಗಳು ಬೇರೊಂದು ಗ್ರಹದ ಮೇಲೆ ವಾಸಿಸುತ್ತವೆಯೇ? ವಿಜ್ಞಾನಿಗಳಿಂದ ಹಿಡಿದು ಸಾಮಾನ್ಯ ಜನರವರೆಗೆ ಎಲ್ಲರು ಇಂತಹ ಹಲವು ಪ್ರಶ್ನೆಗಳ ಉತ್ತರ ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.