ಜೆರುಸಲೆಂ(ಡಿ.09): ಏಲಿಯನ್ಸ್‌ಗಳ ಇರುವಿಕೆ ಬಗ್ಗೆ ಆಗಾಗ ಚರ್ಚೆ ಹುಟ್ಟಿಕೊಳ್ಳುತ್ತದೆ. ಆದರೆ ಈವರೆಗೂ ಇವುಗಳು ಇವೆ ಎಂಬುವುದಕ್ಕೆ ಸಾಕ್ಷಿಗಳು ಲಭ್ಯವಾಗಿಲ್ಲ. ಆದರೀಗ ಇಸ್ರೇಲ್‌ನ ಬಾಹ್ಯಾಕಾಶ ಭದ್ರತಾ ಪ್ರೋಗ್ರಾಂನ ಮಾಜಿ ಮುಖ್ಯಸ್ಥ ಹಾಯಿಮ್ ಇಶೇದ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಏಲಿಯನ್ಸ್‌ಗಳು ನಿಜಕ್ಕೂ ಇವೆ, ಇವು ಅಮೆರಿಕ ಹಾಗೂ ಇಸ್ರೇಲ್‌ ಜೊತೆ ಗುಪ್ತವಾಗಿ ಸಂಪರ್ಕ ಹೊಂದಿವೆ ಎಂದಿದ್ದಾರೆ.

ಆಗಸದಲ್ಲಿ ವಿಚಿತ್ರ ಬ್ಲ್ಯಾಕ್ ರಿಂಗ್: ಎದ್ದು ಬಿದ್ದು ಓಡಿದ ಜನ!

ಏಲಿಯನ್ಸ್‌ಗಳ ಸಂಘಟನೆ:

ಜೆರುಸಲೆಂ ಪೋಸ್ಟ್ ಅನ್ವಯ ಹಾಯಿಮ್ ಇಶೇದ್ ಇಸ್ರೇಲ್‌ನ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಮೆರಿಕ ಹಾಗೂ ಇಸ್ರೇಲ್ ದೀರ್ಘ ಕಾಲದಿಂದ ಏಲಿಯನ್ಸ್‌ಗಳ ಅಧ್ಯಯನ ನಡೆಸುತ್ತಿದೆ. ಆದರೆ ಈವರೆಗೂ ಮನುಷ್ಯರು ಇದಕ್ಕೆ ಸಿದ್ಧರಾಗಿಲ್ಲ ಹೀಗಾಗಿ ಅವುಗಳ ಅಸ್ತಿತ್ವದ ಕುರಿತಾದ ವಿಚಾರ ರಹಸ್ಯವಾಗೇ ಇದೆ ಎಂದಿದ್ದಾರೆ. ಅಲ್ಲದೇ ಏಲಿಯನ್ಸ್‌ಗಳು ತಮ್ಮದೇ ಆದ ಗೆಲೆಕ್ಟಿಕ್ ಫೆಡರೇಶನ್ ಹೆಸರಿನ ಸಂಘಟನೆ ಹೊಂದಿದೆ ಎಂದೂ ತಿಳಿಸಿದ್ದಾರೆ.

ಏಲಿಯನ್ಸ್‌ ವಿಚಾರ ಬಹಿರಂಗಪಡಿಸಲಿದ್ದ ಟ್ರಂಪ್

1981 ರಿಂದ 2010ರವರೆಗೆ ಇಸ್ರೇಲ್ ಬಾಹ್ಯಾಕಾಶ ಭದ್ರತಾ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿರುವ ಹಾಯಿಮ್ ಇಶೇದ್ ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಅಮೆರಿಕದ ಅಧ್ಯಕ್ಷರಾಗಿದ್ದ ಡೊನಾಲ್ಡ್ ಟ್ರಂಪ್ ಈ ವಿಚಾರವನ್ನು ಬಹಿರಂಗಪಡಿಸಲಿದ್ದರು. ಆದರೆ ಗೆಲೆಕ್ಟಿಕ್ ಫೆಡರೇಶನ್‌ನ ಏಲಿಯನ್ಸ್‌ಗಳು ಅವರನ್ನು ತಡೆದರು. ಅವರು ಯಾವುದೇ ರೀತಿಯ ಸಾಮೂಹಿಕ ಉನ್ಮಾದ ಹುಟ್ಟಿಸಲು ಇಚ್ಛಿಸುವುದಿಲ್ಲ ಎಂದಿದ್ದಾರೆ.

ಏಲಿಯನ್ ಲೈಫ್ ಕುರುಹು?: ಶಂಕೆ ಮೂಡಿಸಿದ ನಕ್ಷತ್ರದ ಬೆಳಕಿನ ಹರಿವು!

ಅಮೆರಿಕ, ಏಲಿಯನ್ಸ್‌ಗಳ ನಡುವೆ ಒಪ್ಪಂದ

ಹಾಯಿಮ್ ಇಶೇದ್ ಮಾತನಾಡುತ್ತಾ ತಾನು ಏಲಿಯನ್ಸ್‌ಗಳಿವೆ ಎಂಬುವುದನ್ನು ನಿರೂಪಿಸುತ್ತೇನೆ, ಯಾಕೆಂದರೆ ಅವು ದೀರ್ಘ ಕಾಲದಿಂದ ನಮ್ಮ ನಡುವೆ ಇವೆ. ಅಲ್ಲದೇ ಅಮೆರಿಕ ಹಾಗೂ ಏಲಿಯನ್ಸ್‌ಗಳ ನಡುವೆ ಒಪ್ಪಂದವೂ ನಡೆದಿದೆ. ಅವು ಒಂದು ಪ್ರೋಗ್ರಾಂ ರೂಪಿಸುತ್ತಿದ್ದು, ಈ ಮೂಲಕ ನಮ್ಮ ಮೇಲೆ ಅಧಿಕಾರ ನಡೆಸಲು ಯೋಜನೆ ಹಾಕಿಕೊಳ್ಳುತ್ತಿವೆ ಎಂದಿದ್ದಾರೆ.

ಮಂಗಳ ಗ್ರಹದಲ್ಲಿದೆ ಅಂಡರ್‌ಗ್ರೌಂಡ್ ಸ್ಪೇಸ್ ಬೇಸ್

ಹಾಯಿಮ್ ಇಶೇದ್ ಮತ್ತೊಂದು ವಿಚಾರವನ್ನೂ ಬಹಿರಂಗಪಡಿಸಿದ್ದು, ಮಂಗಳ ಗ್ರಹದಲ್ಲಿ ಅಂಡರ್‌ಗ್ರೌಂಡ್ ಸ್ಪೇಸ್ ಬೇಸ್ ಒಂದಿದ್ದು, ಇಲ್ಲಿ ಅಮೆರಿಕ ಗಗನಯಾನಿಗಳು ಹಾಗೂ ಏಲಿಯನ್ಸ್‌ಗಳು ಒಂದಾಗಿ ಫೆಡರೇಷನ್ ಅಭಿವೃದ್ಧಿಗೆ ರೂಪು ರೇಷೆ ನಿರ್ಮಿಸುತ್ತಿವೆ.