Afghans Sell Body Organs: ಆಹಾರಕ್ಕಾಗಿ ದೇಹದ ಅಂಗಾಗಗಳನ್ನೇ ಮಾರುತ್ತಿರುವ ಅಫ್ಘಾನಿಗಳು!

  • ತಾಲಿಬಾನಿಗಳ ಕ್ರೂರತನಕ್ಕೆ ತೀರಾ ಹದಗೆಟ್ಟ  ಅಫ್ಘಾನ್‌ರ ಸ್ಥಿತಿ
  • ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವ ಅಫ್ಘಾನಿಗಳು
  • ಆಹಾರಕ್ಕಾಗಿ ದೇಹದ ಅಂಗಾಗಗಳ ಮಾರಾಟಕ್ಕೆ ಮುಂದಾದ ಜನ
Afghans Sell Body Organs after Worst Economic Crisis gow

ಕಾಬೂಲ್‌ (ಡಿ.10): ಅಫ್ಘಾನಿಸ್ತಾನದಲ್ಲಿ (Afghanistan) ಪ್ರಜಾಪ್ರಭುತ್ವ ಸರ್ಕಾರ ಪತನಗೊಂಡು ತಾಲಿಬಾನ್ (Taliban) ಆಡಳಿತ ಮತ್ತೆ ಸ್ಥಾಪಿತವಾದ ಬಳಿಕ, ಅಲ್ಲಿನ ಜನರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ.  ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಬದುಕು ಸಾಗಿಸಲು ಜನರು ತಮ್ಮ ದೇಹಗಳ ಅಂಗಾಂಗಗಳನ್ನೇ (Body Organs) ಮಾರಾಟ ಮಾಡಿಕೊಂಡು ಜೀವನ ನಡೆಸುವಂತಹ ಪರಿಸ್ಥಿತಿಗೆ ಬಂದು ತಲುಪಿದೆ. ಇದಕ್ಕೆ ಸಾಕ್ಷಿ ಎಂಬಂತೆ ಕಾಬೂಲ್‌ನ (Kabul) ಬೀದಿಯೊಂದರ ಮರವೊಂದಕ್ಕೆ ಅಂಟಿಸಿದ್ದ ಭಿತ್ತಿಪತ್ರದಲ್ಲಿ  "ಕಿಡ್ನಿ ಮಾರಾಟಕ್ಕಿದೆ" ಎಂದು ಬರೆಯಲಾಗಿದ್ದು, ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿದೆ.

ತಾಲಿಬಾನಿಗಳ ಕ್ರೂರ ಆಡಳಿತದ ಬಳಿಕ ಅಫ್ಘಾನಿಸ್ತಾನದಲ್ಲಿ ನೂರಾರು ಮಂದಿ ಕೆಲಸ ಕಳೆದುಕೊಂಡಿದ್ದು, ಅತ್ಯಗತ್ಯ ವಸ್ತುಗಳಾದ ಆಹಾರ ಹಾಗೂ ಇಂಧನದ ಬೆಲೆ ಗಗನಕ್ಕೇರಿದೆ. ಚಳಿಗಾಲದ ಸಂಕಷ್ಟಗಳಿಂದ ಅಫ್ಘನ್ನರ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಹಸಿವು ನೀಗಿಸಿಕೊಳ್ಳಲು ಜನರು ತಮ್ಮ  ಹೆಣ್ಣು ಮಕ್ಕಳನ್ನು ಮತ್ತು ಆಸ್ತಿಗಳನ್ನೆಲ್ಲ ಮಾರಿಕೊಳ್ಳುತ್ತಿದ್ದಾರೆ. 

ಹಸಿವೆ ಹಾಗೂ ಅರಾಜಕತೆಯಿಂದಾಗಿ ಸಾಯುವ ಅಫ್ಘನ್ನರ ಸಂಖ್ಯೆಯು ಮುಂದಿನ ದಿನಗಳಲ್ಲಿ ದುಪ್ಪಟ್ಟು ಇರಲಿದೆ ಎಂದು ವಿಶ್ವ ಸಂಸ್ಥೆಯ ವಿಶ್ವ ಸಂಸ್ಥೆಯ ಜಾಗತಿಕ ಆಹಾರ ಕಾರ್ಯಕ್ರಮ ಮತ್ತು ಆಹಾರ ಮತ್ತು ಕೃಷಿ ಸಂಸ್ಥೆ ತಿಳಿಸಿದೆ.

India's Aid to Afghan : ಅಫ್ಘಾನ್‌ಗೆ ಭಾರತದ ನೆರವಿಗೆ ಪಾಕ್‌ ಅಡ್ಡಿ

ಕಳೆದ ನಾಲ್ಕು ವರ್ಷಗಳಲ್ಲಿ ಎರಡನೇ ಬಾರಿಗೆ ಅಷ್ಘಾನಿಸ್ತಾನ ಭೀಕರ ಬರ ಎದುರಿಸುತ್ತಿದ್ದು, ದೇಶದ 4 ಕೋಟಿ ಜನಸಂಖ್ಯೆಯ ಪೈಕಿ 2 ಕೋಟಿ 28 ಲಕ್ಷ ಜನ ಹಸಿವಿನ ಭೀತಿಗೆ ತುತ್ತಾಗಿದ್ದಾರೆ. ಅದರಲ್ಲೂ ಕೃಷಿಯನ್ನೇ ನೆಚ್ಚಿಕೊಂಡಿರುವ ಗ್ರಾಮೀಣ ಪ್ರದೇಶದ ಮೇಲೆ ಬರ ಭೀಕರ ಪರಿಣಾಮ ಬೀರಿದ್ದು, 73 ಲಕ್ಷ ಜನ ಮತ್ತು ಜಾನುವಾರುಗಳು ಅತಂತ್ರರಾಗಿದ್ದಾರೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಎಚ್ಚರಿಸಿದೆ.

Afghanistan: Talibanಯಿಂದ ನಟಿ, ನಿರೂಪಕಿಯರಿಗೆ ಹೊಸ 'ಧಾರ್ಮಿಕ' ಮಾರ್ಗಸೂಚಿ!

ಈ ನಡುವೆ ನಿರುದ್ಯೋಗ, ಬಡತನದಿಂದ ತತ್ತರಿಸಿರುವ ಜನತೆಗೆ ಆಹಾರ ಪೂರೈಸಲು ತಾಲಿಬಾನ್‌ ಸರ್ಕಾರ, ಭಾರತದ ಉದ್ಯೋಗ ಖಾತ್ರಿ ಯೋಜನೆಯ ಕೂಲಿಗಾಗಿ ಕಾಳು ಎಂಬ ಯೋಜನೆ ಜಾರಿಗಳಿಸಿದೆ. ತಾಲಿಬಾನಿ ಆಡಳಿತ ಕಾರ್ಮಿಕರಿಗೆ ಸಂಬಳದ ರೂಪದಲ್ಲಿ ಗೋದಿ ನೀಡುತ್ತಿದೆ. ಅಷ್ಘಾನಿಸ್ತಾನದಾದ್ಯಂತ ಈ ಯೋಜನೆ ಜಾರಿ ಮಾಡಿದ್ದು, ರಾಜಧಾನಿ ಕಾಬೂಲ್‌ ಒಂದರಲ್ಲೇ 40,000 ಜನಕ್ಕೆ ಕಾಲುವೆ ತೋಡುವ ಕಾಮಗಾರಿ ನೀಡಿ ಸಂಬಳದ ರೂಪದಲ್ಲಿ ಗೋದಿ ನೀಡುತ್ತಿದೆ. 

NSA Level Meeting ಆಫ್ಘನ್‌ನ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡಲಿ : ತಾಲಿಬಾನ್‌!

ಭಾರತದ ನೆರವಿಗೆ ಪಾಕ್‌ ಅಡ್ಡಿ: ಆಹಾರ ಕೊರತೆ ಅನುಭವಿಸುತ್ತಿರುವ ಅಫ್ಘಾನಿಸ್ತಾನಕ್ಕೆ 50 ಸಾವಿರ ಮೆಟ್ರಿಕ್‌ ಟನ್‌ನಷ್ಟು ಗೋಧಿ ನೀಡಲು ಭಾರತ ಮುಂದಾಗಿತ್ತು. ಆದರೆ ಈ ಯೋಜನೆಗೆ ಈಗ ಪಾಕ್‌ ಅಡ್ಡಗಾಲಾಗಿದೆ. ಭಾರತ ಪಾಕ್‌ ನಡುವಿನ ವಾಘಾ ಗಡಿ (Wagah border) ದಾಟಿ ಪಾಕಿಸ್ತಾನದ ರಸ್ತೆಗಳ ಮೂಲಕ ಸಾಗಿ ಅಫ್ಘಾನಿಸ್ತಾನಕ್ಕೆ ತೆರಳುವ ಯೋಜನೆ ಇದಾಗಿತ್ತು. ಆದರೆ ಭಾರತದ ಟ್ರಕ್‌ಗಳು ತನ್ನ ನೆಲದಲ್ಲಿ ಸಂಚರಿಸುವುದಕ್ಕೆ ಪಾಕಿಸ್ಥಾನ ಅನುಮತಿ ನಿರಾಕರಿಸಿದೆ. 

ಭಾರತದಿಂದ ಅಪ್ಘಾನಿಸ್ತಾನಕ್ಕೆ ಗೋಧಿಯ ಸಾಗಣೆಗೆ ಹಾಗೂ ಜೀವ ಉಳಿಸುವ ಔಷಧಿಗಳ ರವಾನೆಗೆ ಮಾನವೀಯ ನೆಲೆಯಲ್ಲಿ ಅವಕಾಶ ಒದಗಿಸುವುದಾಗಿ  ಕಳೆದ ವಾರ ಪಾಕಿಸ್ತಾನ ಹೇಳಿತ್ತು. ಆದರೆ  ಈಗ ಮತ್ತೆ ತನ್ನ ನಿರ್ಧಾರ ಬದಲಿಸಿದಂತಿದೆ.

ಅಫ್ಘಾನ್‌ನಲ್ಲಿ ತಾಲಿಬಾನಿಗಳ ಅಟ್ಟಹಾಸದಿಂದಾಗಿ ಆರ್ಥಿಕ ವ್ಯವಸ್ಥೆ ಕುಸಿದು ಹೋಗಿದ್ದು, ಅರಾಜಕತೆ ನಿರ್ಮಾಣವಾಗಿದೆ. ತಾಲಿಬಾನ್‌ ಸಂಘಟನೆಯನ್ನು ಬುಡ ಸಮೇತ ಕಿತ್ತು ಹಾಕುವುದಾಗಿ ಹೇಳಿದ ಅಮೆರಿಕಾ ಎರಡು ದಶಕಗಳ ಕಾಲ ಅಮೆರಿಕಾದಲ್ಲಿ ಮಿಲಿಟರಿ ನೆಲೆಯನ್ನು ಸ್ಥಾಪಿಸಿ ತಾಲಿಬಾನ್‌ ವಿರುದ್ಧ ಯುದ್ಧ ಸಾರಿದ್ದರು. ಆದರೆ ಇತ್ತೀಚೆಗೆ ತನ್ನ ಸೇನೆಯನ್ನು ಅಮೆರಿಕಾ ಹಿಂಪಡೆದಿದ್ದು, ತಾಲಿಬಾನಿಗರು ಇಡೀ ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. 

Latest Videos
Follow Us:
Download App:
  • android
  • ios