ಗೋವುಗಳಿಗೆ AK 47 ಗನ್ ಭದ್ರತೆ; ಹಸು ಹತ್ರ ಬಂದ್ರೆ ಕೊಂದೇ ಬಿಡ್ತಾರೆ, ಇವರ ಬಳಿ ಹೋಗೋ ಮುನ್ನ ಹುಷಾರ್!
ಈ ಬುಡಕಟ್ಟು ಸಮುದಾಯವು ಹಸುಗಳನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಿ, ಅವುಗಳನ್ನು AK 47 ಬಂದೂಕುಗಳಿಂದ ಕಾವಲು ಕಾಯುತ್ತದೆ. ಗೋಮೂತ್ರವನ್ನು ಔಷಧಿಯಾಗಿ ಬಳಸುವ ಇವರು, ಹಸುವಿನ ಸಾವನ್ನು ಸಹ ಶೋಕಾಚರಣೆಯೊಂದಿಗೆ ಗೌರವಿಸುತ್ತಾರೆ.
ಇಡೀ ವಿಶ್ವದಲ್ಲ ಹಲವು ಜಾತಿ-ಪಂಗಡಗಳಿವೆ. 2024ರ ಸಂದರ್ಭದಲ್ಲಿಯೂ ಇಂದು ಸಹ ಅನೇಕ ಜನರು ಅರಣ್ಯ ಪ್ರದೇಶದಲ್ಲಿ ವಾಸವಾಗಿದ್ದಾರೆ. ಅರಣ್ಯ ಪ್ರದೇಶದಲ್ಲಿ ವಾಸಿಸುವ ಬುಡಕಟ್ಟು ಸಮುದಾಯದ ಜನರು ಪ್ರಕೃತಿ ಜೊತೆಯಲ್ಲಿಯೇ ಬದುಕು ಕಟ್ಟಿಕೊಂಡಿರುತ್ತಾರೆ. ಈ ಸಮುದಾಯದವರು ಎಲ್ಲಾ ಪ್ರಾಣಿಗಳ ಜೊತೆಯಲ್ಲಿಯೂ ಒಡನಾಟ ಹೊಂದಿರುತ್ತಾರೆ. ಹಾಗೆಯೇ ಇವರ ಆಚರಣೆಗಳು ತುಂಬಾ ವಿಭಿನ್ನ ಹಾಗೂ ವಿಚಿತ್ರವಾಗಿರುತ್ತವೆ. ಇಂತಹ ಸಂಸ್ಕೃತಿಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇಂದು ನಾವು ನಿಮಗೆ ಸಮುದಾಯವೊಂದ ಹೇಗೆ ತಮ್ಮ ಗೋವುಗಳನ್ನು ರಕ್ಷಣೆ ಮಾಡಿಕೊಳ್ಳುತ್ತೆ ಎಂಬುದರ ಬಗ್ಗೆ ಹೇಳುತ್ತಿದ್ದೇವೆ. ಇವರಿಗೆ ಹಸು ಅಂದ್ರೆ ಅಷ್ಟೊಂದು ಪ್ರೀತಿ. ಹಾಗಾಗಿಯೇ ಹಸುಗಳನ್ನು ಅತ್ಯಂತ ಕಾಳಜಿ ಅಂದ್ರೆ ಒಂದು ರೀತಿ ಝಡ್ ಪ್ಲಸ್ ಸೆಕ್ಯುರಿಟಿಯಲ್ಲಿ ಕಾವಲು ಕಾಯಲಾಗುತ್ತದೆ.
ನಮ್ಮ ದೇಶ ಭಾರತದಲ್ಲಿ ಹಸುಗಳನ್ನು 300 ಕೋಟಿ ದೇವರುಗಳ ವಾಸಸ್ಥಾನ ಎಂದು ನಂಬಲಾಗುತ್ತದೆ. ದಾರಿ ಮಧ್ಯೆ ಹಸು ಬಂದ್ರೆ ಅದನ್ನು ಮುಟ್ಟಿ ನಮಸ್ಕರಿಸುವ ಶ್ರೀಮಂತ ಸಂಸ್ಕೃತಿಯನ್ನು ಭಾರತ ಒಳಗೊಂಡಿದೆ. ಆಫ್ರಿಕಾದ ಸುಡಾನ್ ನಲ್ಲಿ ವಾಸವಾಗಿರುವ ಮುಂದರೀ ಎಂಬ ಬುಡಕಟ್ಟು ಸಮುದಾಯ ಹಸುಗಳನ್ನು ಎಕೆ 47 ಗನ್ ಆಯುಧಗಳನ್ನು ಬೆಳೆಸಿ ಕಾಯುತ್ತಾರೆ. ಹಸುಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತಾರೆ. ಹಸುಗಳು ಇವರಿಗೆ ಜೀವ. ಹಸುಗಳನ್ನು ಚಲಿಸುವ ಆಸ್ಪತ್ರೆ ಎಂದು ನಂಬುವ ಮುಂದರೀ ಸಮುದಾಯ, ಗೋ ಮೂತ್ರವನ್ನು ಔಷಧಿ ರೂಪದಲ್ಲಿ ಬಳಸಿಕೊಳ್ಳುತ್ತದೆ.
ತಮ್ಮ ಜಾನುವಾರುಗಳ ಜೊತಯಲ್ಲಿಯೇ ಇಡೀ ದಿನ ಕಳೆಯುವ ಇವರು, ರಾತ್ರಿ ಸಹ ಇವುಗಳೊಂದಿಗೆ ಮಲಗುತ್ತಾರೆ. ಹಸುಗಳನ್ನು ಯಾರು ಕಳ್ಳತನ ಮಾಡಬಾರದು, ಅವುಗಳಿಗೆ ಅಪಾಯ ಮಾಡಬಾರದು ಎಂದು ಸರತಿ ಸಾಲಿನಲ್ಲಿ ರಾತ್ರಿ ಹಸುಗಳಿಗೆ ಕಾವಲುಗಾರರಾಗಿ ಕೆಲಸ ಮಾಡುತ್ತಾರೆ. ದಕ್ಷಿಣ ಸುಡಾನ್ ರಾಜಧಾನಿ ಜುಬಾದಿಂದ ಸುಮಾರು 75 ಕಿಲೋಮೀಟರ್ ದೂರದಲ್ಲಿ ಮುಂದರೀ ಸಮುದಾಯ ಉತ್ತರ ಭಾಗದಲ್ಲಿ ವಾಸವಾಗಿದೆ.
ಕಗ್ಗತ್ತಲಿನ ಸುರಂಗದೊಳಗೆ ಹೋಗ್ತಿದ್ದಂತೆ ಕಾಣಿಸಿದ್ದೇನು? ನಡುಗಲು ಶುರು ಮಾಡಿದ ಚಾಲಕ
ಸಾಮಾನ್ಯ ಹಸುಗಳ ಎತ್ತರ 7 ರಿಂದ 8 ಅಡಿ ಇರುತ್ತದೆ. ಆದ್ರೆ ಮುಂದರೀ ಸಮುದಾಯದ ಹಸುಗಳು ಹೆಚ್ಚಿನ ಎತ್ತರವನ್ನು ಹೊಂದಿರುತ್ತವೆ. ಹಾಗಾಗಿ ಇವುಗಳನ್ನು ವಿಶೇಷ ತಳಿಯ ಹಸುಗಳೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಹಸು ಕಳ್ಳತನ ಭಯ ಇರೋ ಕಾರಣ ಹಸುಗಳನ್ನು ರಕ್ಷಣೆ ಮಾಡಲಾಗುತ್ತದೆ. ಗೋಹತ್ಯೆಯನ್ನು ಮಹಾಪಾಪ ಎಂದು ನಂಬುವ ಮುಂದರೀ ಸಮುದಾಯ, ಮದುವೆಗಳಲ್ಲಿ ದಾನದ ರೂಪದಲ್ಲಿ ಪರಸ್ಪರವಾಗಿ ವಿನಿಮಯ ಮಾಡಿಕೊಳ್ಳುತ್ತಾರೆ. ಗೋಮೂತ್ರದಿಂದಲೇ ಮುಖ ಸಹ ತೊಳೆಯುತ್ತಾರೆ. ಸುಟ್ಟ ಅಥವಾ ಒಣಗಿದ ಸಗಣಿ ಬಳಸಿಯೇ ಹಲ್ಲುಜ್ಜುತ್ತಾರೆ.
ಸುಡಾನ್ ಉಷ್ಣ ಪ್ರದೇಶವಾಗಿದ್ದು, ಇಲ್ಲಿಯ ಜನರು ಹಸುಗಳಿಗೆ ಕಡ್ಡಾಯವಾಗಿ ನೆರಳಿನ ವ್ಯವಸ್ಥೆ ಮಾಡಿರುತ್ತಾರೆ. ಒಂದು ವೇಳೆ ಹಸು ಸಾವನ್ನಪ್ಪಿದ್ರೆ ತಮ್ಮ ಸಂಪ್ರದಾಯದ ಪ್ರಕಾರವೇ ಅಂತಿಮ ಸಂಸ್ಕಾರ ಮಾಡಿ ಶೋಕಾಚರಣೆ ಮಾಡಲಾಗುತ್ತದೆ. ಮುಂದರೀ ಸಮುದಾಯದ ಒಂದು ಹಸುವಿನ ಬೆಲೆ 40 ರಿಂದ 50 ಸಾವಿರ ರೂಪಾಯಿ ಆಗಿದೆ. ಹೈನ್ಯೋದ್ಯಮವೇ ಮುಂದರೀ ಸಮುದಾಯದ ಮೂಲ ಉದ್ಯೋಗವಾಗಿದೆ.
ಅಮೆರಿಕದ ರಸ್ತೆಗಳ ಬೋರ್ಡ್ ಮೇಲೆ 'Kiss and Ride' ಎಂಬ ಪದ ಯಾಕಿರುತ್ತೆ?