ಅಮೆರಿಕದ ರಸ್ತೆಗಳ ಬೋರ್ಡ್‌ ಮೇಲೆ 'Kiss and Ride' ಎಂಬ ಪದ ಯಾಕಿರುತ್ತೆ?

ಅಮೆರಿಕದ ರಸ್ತೆ ಬದಿಯ ಫಲಕಗಳಲ್ಲಿ 'ಕಿಸ್ ಆಂಡ್ ರೈಡ್' ಎಂಬ ಪದವನ್ನು ಬಳಸಲಾಗುತ್ತದೆ. ಈ ರೀತಿ ಯಾಕೆ ಬರೆಯಲಾಗಿರುತ್ತೆ ಎಂಬುದರ ಹಿಂದಿನ ಕಾರಣ ಇಲ್ಲಿದೆ.

Why is the word Kiss and Ride on the road sign in America mrq

ವಾಷಿಂಗ್ಟನ್: ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆರಳಿದಾಗ ಅಲ್ಲಿಯ ಸಂಸ್ಕೃತಿ, ಆಹಾರ, ವೇಷಭೂಷಣ ಸೇರಿದಂತೆ ಹವಾಮಾನ ಬೇರೆಯಾಗಿರುತ್ತದೆ. ಭಾರತ ಮತ್ತು ವಿದೇಶಿ ಸಂಸ್ಕೃತಿ ತುಂಬಾ ವಿಭಿನ್ನವಾಗಿರುತ್ತದೆ. ಇಂದು ಹಲವು ವ್ಲಾಗರ್‌ಗಳು ದೇಶಗಳನ್ನು ಸುತ್ತುತ್ತಾ ಅಲ್ಲಿಯ ಸಂಪ್ರದಾಯ ಹಾಗ ಆ ಪ್ರದೇಶದ ಮಾಹಿತಿಯನ್ನು ನೀಡುತ್ತಿರುತ್ತಾರೆ. ಈ ಮೂಲಕ ಮನೆಯಲ್ಲಿಯೇ ಕುಳಿತು ಬೇರೆ ದೇಶಗಳು ಹೇಗಿವೆ ಎಂಬುದನ್ನು ನೋಡಬಹುದಾಗಿದೆ. ಕೆಲವೊಮ್ಮೆ ವ್ಲಾಗರ್‌ಗಳ ವಿಡಿಯೋಗಳು ಕುತೂಹಲಕಾರಿ ವಿಷಯವನ್ನು ರಿವೀಲ್ ಮಾಡುತ್ತವೆ. ವ್ಲಾಗರ್‌ಗಳು ಸಹ ಹೊಸ ವಿಷಯ/ಪ್ರದೇಶ/ಆಚರಣೆಗಳನ್ನು ತಮ್ಮ ನೋಡುಗರಿಗೆ ತೋರಿಸಲು ಪ್ರಯತ್ನಿಸುತ್ತಿರುತ್ತಾರೆ. 

ಇದೀಗ ವ್ಲಾಗರ್ ಒಬ್ಬರು ಅಮೆರಿಕದ ರಸ್ತೆ ಬದಿಯಲ್ಲಿರುವ ಬೋರ್ಡ್ ಮೇಲೆ ಕಿಸ್ ಆಂಡ್ ರೈಡ್ ಬರೆದಿರೋದನ್ನು ತೋರಿಸಿದ್ದಾರೆ. ಇದರ ಜೊತೆಯಲ್ಲಿ ಈ ರೀತಿ ಯಾಕೆ ಬರೆಯಲಾಗಿರುತ್ತದೆ ಎಂಬ ವಿಷಯವನ್ನು ಪ್ರೇಕ್ಷಕರಿಗೆ ತಿಳಿಸಿದ್ದಾರೆ. Sadia Zeb Ranjha  ಹೆಸರಿನ ಮಹಿಳಾ ವ್ಲಾಗರ್ ಈ ಬಗ್ಗೆ ವಿವರವಾಗಿ ತಿಳಿಸಿದ್ದಾರೆ. ಭಾರತದಲ್ಲಿ ರಸ್ತೆ ಬದಿಯಲ್ಲಿರುವ ಫಲಕಗಳ ಮೇಲೆ ಸ್ಥಳದ ಹೆಸರು, ಟ್ರಾಫಿಕ್ ಸನ್ನೆಗಳು ಇರುತ್ತವೆ. ಆದ್ರೆ ಇಲ್ಲಿ ಇದೆಲ್ಲದರ ಜೊತೆ ಕಿಸ್ ಆಂಡ್ ರೈಡ್ ಎಂಬುದಾಗಿ ಬರೆಯುಲಾಗಿರುತ್ತದೆ. 

ಹೋಟೆಲ್‌ನಲ್ಲಿ ಪುರುಷನ ಖಾಸಗಿ ಭಾಗಕ್ಕೆ ಕಚ್ಚಿದ ಚೇಳು; ನನ್ನ ಜೀವನವೇ ಹಾಳಾಯ್ತು ಅಂತ ಕಣ್ಣೀರಿಟ್ಟ ಪತ್ನಿ!

ಸಾದಿಯಾ ಝೆಬ್ ರಂಜ್ಹಾ ಹೇಳುವ ಪ್ರಕಾರ, ನಿಲ್ದಾಣಗಳಿಗೆ ಪ್ರಯಾಣಿಕರನ್ನು ಅಂದ್ರೆ ಕುಟುಂಬಸ್ಥರು ಅಥವಾ ಆಪ್ತರನ್ನು ಪಿಕ್ ಆಂಡ್ ಡ್ರಾಪ್ ಮಾಡಲು ಬರುವ ಜನರಿಗಾಗಿ ಫಲಕಗಳ ಮೇಲೆ ಕಿಸ್ ಆಂಡ್ ರೈಡ್ ಎಂದು ಬರೆಯಲಾಗಿರುತ್ತದೆ ಎಂದು ತಿಳಿಸಿದ್ದಾರೆ. ಈ ಫಲಕಗಳನ್ನು ಶಿಕಾಗೋ ಟ್ರಾಂಜಿಟ್ ಅಥಾರಿಟಿಯಿಂದಲೇ ಅಳವಡಿಸಲಾಗಿರುತ್ತದೆ. ಈ ಹೆಸರನ್ನು ಪ್ರಾಧಿಕಾರದ ಜನರಲ್ ಮ್ಯಾನೇಜರ್ ಒಬ್ಬರು ನೀಡಿದ್ದರು. ಅಂದಿನಿಂದ ಅಮೆರಿಕಾದ ಶಿಕಾಗೋ ಭಾಗದಲ್ಲಿನ ರಸ್ತೆಗಳ ಬದಿ ಈ ರೀತಿ ಬರಹವುಳ್ಳು ಫಲಕಗಳನ್ನು ಕಾಣಬಹುದಾಗಿದೆ. 

ಯಾಕೆ ಈ ಹೆಸರು? 
ವಿದೇಶದಲ್ಲಿ ಯಾರನ್ನಾದರೂ ವೆಲ್‌ ಕಮ್ ಮಾಡಬೇಕಾದ್ರೆ ಚುಂಬಿಸಿಯೇ ಸ್ವಾಗತಿಸಲಾಗುತ್ತದೆ. ಅದೇ ರೀತಿ ಬೀಳ್ಕೊಡುವ ಸಂದರ್ಭದಲ್ಲಿಯೂ ಕಿಸ್ ಮಾಡಿಯೇ ಬೈ ಹೇಳುವ ಸಂಸ್ಕೃತಿ ಇದೆ. ಹಾಗಾಗಿ ನಿಲ್ದಾಣಕ್ಕೆ ಆಪ್ತರನ್ನು ಬಿಡಲು ಅಥವಾ ಕರೆದುಕೊಂಡು ಹೋಗಲು ಬರೋರು ಅವರಿಗೆ ಕಿಸ್ ಮಾಡಿ ಮುಂದಿನ ಪ್ರಯಾಣ ಆರಂಭಿಸಲಿ ಎಂಬ ಉದ್ದೇಶದಿಂದ ಈ ಫಲಕಗಳನ್ನು ಅಳವಡಿಸಲಾಗಿದೆ. ಇದೊಂದು ಸ್ನೇಹಪೂರ್ವಕ ಫಲಕ ಎಂದು ಇಲ್ಲಿನ ಜನರು ಹೇಳುತ್ತಾರೆ.

ಬೆಡ್‌ರೂಮ್‌ ಕ್ಯಾಮೆರಾದಲ್ಲಿತ್ತು ನೂರಾರು ನಗ್ನ ವಿಡಿಯೋಗಳು; ಸಂತ್ರಸ್ತೆಗೆ 23 ಕೋಟಿ ಪರಿಹಾರ, ಇದು ಸಾಕಾಗಲ್ಲ ಎಂದ ಮಹಿಳೆ

 
 
 
 
 
 
 
 
 
 
 
 
 
 
 

A post shared by VOA Urdu (@voaurdu)

Latest Videos
Follow Us:
Download App:
  • android
  • ios