ಉಕ್ರೇನ್ ನಡುಗಿಸಿದ ರಷ್ಯಾಗೆ ಇದೀಗ ತನ್ನ ದೇಶದಲ್ಲಿ ಎದ್ದಿರುವ ದಂಗೆ ನಿಯಂತ್ರಿಸುವುದೇ ಅತೀ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ರಷ್ಯಾದ ಖಾಸಗಿ ವ್ಯಾಗ್ನರ್ ಸೇನೆ ರಷ್ಯಾದ ವಿರುದ್ಧವೇ ತಿರುಗಿ ಬಿದ್ದಿದೆ. ಇದೀಗ ರಷ್ಯಾ ಸೇನೆ ಮೇಲೆ ವ್ಯಾಗ್ನರ್ ದಾಳಿ ಮಾಡಿದೆ. ಬಾಂಬ್ ದಾಳಿಯಿಂದ ಜನರು ದಿಕ್ಕುಪಾಲಾಗಿ ಓಡುತ್ತಿರುವ ದೃಶ್ಯ ವೈರಲ್ ಆಗಿದೆ.
ಮಾಸ್ಕೋ(ಜೂ.24) ಉಕ್ರೇನ್ ಮೇಲೆ ಯುದ್ದ ಸಾರಿ ಬಿಗಿ ಹಿಡಿತ ಸಾಧಿಸಲು ಹೊರಟ ರಷ್ಯಾದಲ್ಲಿ ಇದೀಗ ಆಂತರಿಕ ದಂಗೆ ತಲೆನೋವು ಹೆಚ್ಚಾಗಿದೆ. ರಷ್ಯಾ ಮಿಲಿಟರಿ ಸೇನೆ ಜೊತೆಗಿದ್ದ ಖಾಸಗಿ ಸೇನೆ ವ್ಯಾಗ್ನರ್ ತಿರುಗಿ ಬಿದ್ದಿದೆ. ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬದಲಿಸುವ ಎಚ್ಚರಿಕೆ ನೀಡಿದೆ. ವ್ಯಾಗ್ನರ್ ಸೇನೆ ನಿಯಂತ್ರಿಸಲುಸೂಚನೆ ನೀಡಿದ ಪುಟಿನ್‌ಗೆ ವಿರುದ್ಧವೇ ದಾಳಿ ಸಂಘಟಿಸಲಾಗಿದೆ. ರಷ್ಯಾ ಸೇನೆಯ ಎರಡು ಹೆಲಿಕಾಪ್ಟರ್ ಹೊಡೆದುರುಳಿಸುವುದಾಗಿ ವ್ಯಾಗ್ನರ್ ಸೇನೆ ಹೇಳಿದೆ. ಇತ್ತ ಬಾಂಬ್ ದಾಳಿಯನ್ನೂ ನಡೆಸಿದೆ. ಈ ವೇಳೆ ನಾಗರೀಕರು ದಿಕ್ಕುಪಾಲಾಗಿ ಓಡಿದ್ದಾರೆ. ವ್ಯಾಗ್ನರ್ ಹಾಗೂ ರಷ್ಯಾ ಸೇನೆ ನಡುವಿನ ಯುುದ್ಧ ತೀವ್ರಗೊಂಡಿದೆ.
ಬಾಂಬ್ ದಾಳಿಯಿಂದ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ರಷ್ಯಾ ಸೇನೆ ಹಾಗೂ ಖಾಸಗಿ ವ್ಯಾಗ್ನರ್ ಸೇನೆ ನಡುವಿನ ಯುದ್ಧ ಸಾಮಾನ್ಯ ಜನರ ಆತಂಕವನ್ನು ಹೆಚ್ಚಿಸಿದೆ.
ರಷ್ಯಾ ಸೇನೆ ತಮ್ಮನ್ನು ಕಡೆಗಣಿಸಿದೆ ಎಂದು ಆರೋಪಿಸಿರುವ ‘ವ್ಯಾಗ್ನರ್’ ಎಂಬ ಖಾಸಗಿ ಸೇನಾ ಪಡೆ, ಇದೀಗ ನೇರವಾಗಿ ರಷ್ಯಾದ ಮೇಲೆ ಸಶಸ್ತ್ರ ಬಂಡಾಯ ಘೋಷಿಸಿದೆ. ಅಲ್ಲದೆ ಆದಷ್ಟುಶೀಘ್ರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ರಷ್ಯಾದ ರಕ್ಷಣಾ ಸಚಿವ ಸೆರ್ಗೇಯ್ ಶೋಯ್‌ಗು ಮತ್ತು ಸೇನಾ ಮುಖ್ಯಸ್ಥ ಜ.ವಲೆರಿ ಗೆರಸಿಮೋವ್ ಅವರನ್ನು ಪದಚ್ಯತಗೊಳಿಸುವುದಾಗಿ ವ್ಯಾಗ್ನರ್ ಸೇನೆ ಮುಖ್ಯಸ್ಥ ಯೆವ್‌ಗೆನಿ ಪ್ರಿಗೋಝಿನ್ ಘೋಷಿಸಿದ್ದಾರೆ.
ಪುಟಿನ್ ವಿರುದ್ಧವೇ ತಿರುಗಿಬಿದ್ದ ವ್ಯಾಗ್ನರ್, ಶೀಘ್ರವೇ ರಷ್ಯಾಕ್ಕೆ ಹೊಸ ಅಧ್ಯಕ್ಷ ಎಂದ ರೆಬಲ್ ಆರ್ಮಿ!
ಅಲ್ಲದೆ ಈಗಾಗಲೇ ರಷ್ಯಾದ ಒಂದು ಪಟ್ಟಣವನ್ನು ಕೈವಶ ಮಾಡಿಕೊಂಡಿದ್ದು, ಶೀಘ್ರವೇ ಮಾಸ್ಕೋ ಸೇರಿ ಇನ್ನಷ್ಟುಪ್ರದೇಶಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳುವುದಾಗಿ ಪ್ರಿಗೋಝಿನ್ ಘೋಷಿಸಿದ್ದಾರೆ. ಈ ನಡುವೆ ಅಂರ್ತಯುದ್ಧ ಆರಂಭವಾದ ಬೆನ್ನಲ್ಲೇ ದೇಶವನ್ನು ಉದ್ದೇಶಿಸಿ ಮಾತನಾಡಿರುವ ರಷ್ಯಾ ಅಧ್ಯಕ್ಷ ವ್ಯಾಡಿಮಿರ್ ಪುಟಿನ್, ‘ಬಂಡಾಯ ಏಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಈಗಾಗಲೇ ಸಶಸ್ತ್ರ ಪಡೆಗಳು ಮತ್ತು ಇತರೆ ಸರ್ಕಾರಿ ಸಂಸ್ಥೆಗಳಿಗೆ ಅಗತ್ಯ ಸೂಚನೆ ನೀಡಲಾಗಿದೆ. ಇಂಥ ಸಶಸ್ತ್ರ ಬಂಡಾಯದಿಂದ ದೇಶವನ್ನು ರಕ್ಷಿಸಿಕೊಳ್ಳಲು ನಾವು ಬದ್ಧ ಮತ್ತು ಸಿದ್ಧರಾಗಿದ್ದೇವೆ’ ಎಂದು ಎಚ್ಚರಿಸಿದ್ದಾರೆ. ಮತ್ತೊಂದೆಡೆ ಸೇನೆ ಕೂಡಾ ಪ್ರಿಗೋಝೀನ್ ಬಂಧನಕ್ಕೆ ಆದೇಶಿಸಿದೆ.
ನಮ್ಮ ಭವಿಷ್ಯಕ್ಕಾಗಿ ನಾವು ಉಕ್ರೇನ್ ವಿರುದ್ಧ ಅತ್ಯಂತ ಕಠಿಣ ಯುದ್ಧ ನಡೆಸುತ್ತಿರುವಾಗ ನಡೆದ ಈ ಸೇನಾ ದಂಗೆಯನ್ನು ನಾವು ಸಹಿಸುವುದಿಲ್ಲ. ಪಾಶ್ಚಿಮಾತ್ಯ ದೇಶಗಳ ಇಡೀ ಸೇನಾಪಡೆ, ಆರ್ಥಿಕತೆ ಮತ್ತು ಮಾಧ್ಯಮಗಳು ನಮ್ಮ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಹೊತ್ತಿನಲ್ಲಿ ಎದ್ದಿರುವ ಬಂಡಾಯವನ್ನು ಸೂಕ್ತ ರೀತಿಯಲ್ಲಿ ಹತ್ತಿಕ್ಕಲಾಗುವುದು. ಬಂಡಾಯ ಎದ್ದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಸಿದ್ದಾರೆ.
ದೇಶದ ಸೇನಾ ಶಕ್ತಿ ಹೆಚ್ಚಿಸುವುದೇ ಈ ಒಪ್ಪಂದ ?: ಅದೆಷ್ಟು ಶಕ್ತಿಶಾಲಿ GE-F414 ಫೈಟರ್ ಜೆಟ್.. MQ-9B ಡ್ರೋನ್..?
ರಷ್ಯಾದ ಮಿಲಿಟರಿ ನಾಯಕತ್ವವನ್ನು ಕಿತ್ತೊಗೆಯುವವರೆಗೂ ನಾವು ವಿರಮಿಸಲ್ಲ. ರಷ್ಯಾಕ್ಕೆ ನಮ್ಮ 50000 ಯೋಧರ ಸೇನಾಪಡೆ ಆತ್ಮಾರ್ಪಣೆಗೆ ಸಿದ್ಧವಾಗಿದೆ. ನಾವು ರಷ್ಯಾದ ಜನರಿಗಾಗಿ ಈ ಹೋರಾಟ ನಡೆಸುತ್ತಿದ್ದೇವೆ. ನಮಗೆ ಯಾರೇ ಎದುರಾದರೂ ಅವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ವ್ಯಾಗ್ನರ್ ಖಾಸಗಿ ಪಡೆ ಮುಖ್ಯಸ್ಥ ಯೆವ್‌ಗೆನಿ ಪ್ರಿಗೋಝಿನ್ ತಿರುಗೇಟು ನೀಡಿದ್ದಾರೆ.
