Asianet Suvarna News Asianet Suvarna News

ನಿತ್ಯಾನಂದನನ್ನು ಹೊಗಳಿ, ಕೈಲಾಸ ದೇಶದೊಂದಿಗೆ ವ್ಯವಹರಿಸಿದ ಹಿರಿಯ ಅಧಿಕಾರಿ ವಜಾ!

ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಉದ್ದೇಶಿತ ಅಧಿಕಾರಿಗಳೊಂದಿಗೆ ಡಾಕ್ಯುಮೆಂಟ್‌ಗೆ ಸಹಿ ಹಾಕಿದ ನಂತರ ಕೃಷಿ ಸಚಿವರ ಸಿಬ್ಬಂದಿಯ ಮುಖ್ಯಸ್ಥ ಹುದ್ದೆಯಿಂದ ತನ್ನನ್ನು ವಜಾಗೊಳಿಸಲಾಗಿದೆ ಎಂದು ಅರ್ನಾಲ್ಡೊ ಚಮೊರೊ ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

paraguay sacks official over dealings with nithyananda s kailasa ash
Author
First Published Dec 1, 2023, 6:08 PM IST

ನವದೆಹಲಿ (ಡಿಸೆಂಬರ್ 1, 2023):  ದಕ್ಷಿಣ ಅಮೆರಿಕದ ಪರಾಗ್ವೆಯ ಹಿರಿಯ ಅಧಿಕಾರಿಯೊಬ್ಬರು ಅಸ್ತಿತ್ವದಲ್ಲಿಲ್ಲದ ದೇಶದೊಂದಿಗೆ ಸಹಕಾರ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದ ನಂತರ ಅವರನ್ನು ವಜಾ ಮಾಡಲಾಗಿದೆ. ಭಾರತದಿಂದ ತಲೆಮರೆಸಿಕೊಂಡಿರುವ ಸ್ವಾಮಿ ನಿತ್ಯಾನಂದನ ಕಪೋಕಲ್ಪಿತ ದೇಶ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ಅಧಿಕೃತ ದೇಶವೆಂದು ತಿಳಿದುಕೊಂಡು ಅಧಿಕಾರಿ ಅಲ್ಲಿನ ಅಧಿಕಾರಿಗಳು ಎಂದು ಹೇಳಿಕೊಂಡು ಬಂದವರ ಜತೆ ಮಾತುಕತೆ ನಡೆಸಿದ್ದಾರೆ. 

ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದ ಉದ್ದೇಶಿತ ಅಧಿಕಾರಿಗಳೊಂದಿಗೆ ಡಾಕ್ಯುಮೆಂಟ್‌ಗೆ ಸಹಿ ಹಾಕಿದ ನಂತರ ಕೃಷಿ ಸಚಿವರ ಸಿಬ್ಬಂದಿಯ ಮುಖ್ಯಸ್ಥ ಹುದ್ದೆಯಿಂದ ತನ್ನನ್ನು ವಜಾಗೊಳಿಸಲಾಗಿದೆ ಎಂದು ಅರ್ನಾಲ್ಡೊ ಚಮೊರೊ ಗುರುವಾರ ಸುದ್ದಿಗಾರರಿಗೆ ತಿಳಿಸಿದರು. ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ದಕ್ಷಿಣ ಅಮೆರಿಕದ ದ್ವೀಪ ಹಾಗೂ ಅಧಿಕೃತ ದೇಶವೆಂದು ಅವರಿಗೆ ಪ್ರಸ್ತುತಪಡಿಸಲಾಗಿದೆ.

ಕೈಲಾಸಕ್ಕೆ ವಿಶ್ವಸಂಸ್ಥೆ ಮಾನ್ಯತೆ ಸಿಕ್ಕಿತೆಂದು ಕತೆ ಕಟ್ಟಿದ ನಿತ್ಯಾ! UN ಸಭೆಯಲ್ಲಿ ತನ್ನವರು ಭಾಗಿ ಎಂದು ಸುಳ್ಳು ಸುದ್ದಿ

ಅಲ್ಲಿನ ಅಧಿಕಾರಿಗಳೆಂದು ಹೇಳಿಕೊಂಡು ಬಂದು ಪರಾಗ್ವೆಗೆ ಸಹಾಯ ಮಾಡಲು ಇಚ್ಛೆಯನ್ನು ವ್ಯಕ್ತಪಡಿಸಿದರು. ಅವರು ಹಲವಾರು ಯೋಜನೆಗಳನ್ನು ಪ್ರೆಸೆಂಟೇಷನ್‌ ಮಾಡಿದರು, ನಾವು ಅದನ್ನು ಕೇಳಿದೆವು, ಅಷ್ಟೇ ಎಂದು ತಾವು ಮೂರ್ಖರಾಗಿರುವುದನ್ನು ಒಪ್ಪಿಕೊಂಡರು. ಅವರನ್ನು ಬುಧವಾರ ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ನಕಲಿ ಅಧಿಕಾರಿಗಳು ತಮ್ಮ ಸಚಿವ ಕಾರ್ಲೋಸ್ ಗಿಮೆನೆಜ್ ಅವರನ್ನು ಭೇಟಿಯಾದರು ಎಂದೂ ಚಮೊರೊ ಹೇಳಿದರು. ಆದರೆ, ಅವರ ಉದ್ದೇಶ ತಿಳಿದು ಬಂದಿಲ್ಲ. ಎರಡು ಪಕ್ಷಗಳು ಸಹಿ ಮಾಡಿದ ಜ್ಞಾಪಕ ಪತ್ರವು ಎರಡು "ದೇಶಗಳ" ನಡುವೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸುವುದನ್ನು ಕಲ್ಪಿಸಿದೆ ಎಂದೂ ಹೇಳಲಾಗಿದೆ.

ನನ್ನ ಇಬ್ಬರೂ ಮಕ್ಕಳು ಗಂಡಂದಿರಿಗೆ ಡಿವೋರ್ಸ್ ನೀಡಿ ನಿತ್ಯಾನಂದನ ಜೊತೆಗಿದ್ದಾರೆ: ನಟ ಅಶೋಕ್ ಕಣ್ಣೀರು

ಸಚಿವಾಲಯದ ಲೆಟರ್‌ಹೆಡ್ ಮತ್ತು ಅಧಿಕೃತ ಡಾಕ್ಯುಮೆಂಟ್‌ನಲ್ಲಿ, ಚಮೊರೊ ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸದ ಸಾರ್ವಭೌಮ ಗೌರವಾನ್ವಿತ ನಿತ್ಯಾನಂದ ಪರಮಶಿವಂ ಅವರನ್ನು ವಂದಿಸಿದ್ದಾರೆ ಮತ್ತು ಹಿಂದೂ ಧರ್ಮ, ಮಾನವೀಯತೆ ಮತ್ತು ಪರಾಗ್ವೆ ಗಣರಾಜ್ಯಕ್ಕೆ ಅವರ ಕೊಡುಗೆಗಳನ್ನು ಹೊಗಳಿದ್ದಾರೆ.

ಪರಾಗ್ವೆ ಸರ್ಕಾರವು ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸುವುದನ್ನು ಸಕ್ರಿಯವಾಗಿ ಅನ್ವೇಷಿಸುತ್ತದೆ ಮತ್ತು ವಿಶ್ವಸಂಸ್ಥೆ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ಸಂಸ್ಥೆಗಳಿಗೆ ಸಾರ್ವಭೌಮ ರಾಜ್ಯವಾಗಿ ಅದರ ಪ್ರವೇಶವನ್ನು ಬೆಂಬಲಿಸುತ್ತದೆ ಎಂದು ಜ್ಞಾಪಕ ಪತ್ರವು ಶಿಫಾರಸು ಮಾಡುತ್ತದೆ.

Swami Nithyananda: ನಿತ್ಯಾನಂದನ ಕೈಲಾಸಕ್ಕೆ ಮಾಜಿ ನಟಿ ರಂಜಿತಾ ಪ್ರಧಾನಿ

ನಂತರ ಸ್ವಾಮಿ ನಿತ್ಯಾನಂದ ಪರಮಶಿವಂ ವಾಸ್ತವದಲ್ಲಿ ಭಾರತೀಯ ಪ್ರಜೆ ಹಾಗೂ ತನ್ನ ದೇಶದಲ್ಲಿ ಮಾಡಿದ ಅಪರಾಧಗಳಿಗೆ ಬೇಕಾಗಿದ್ದಾರೆ ಎಂದು ಪರಾಗ್ವೆಯ ಮಾಧ್ಯಮಗಳು  ವರದಿ ಮಾಡಿದೆ. ಬಳಿಕ, ಈ ಬಗ್ಗೆ ಸ್ಪಷ್ಟನೆ ನೀಡಿದ ಕೃಷಿ ಸಚಿವಾಲಯವು ವಿಷಾದಿಸಿದ್ದು, ಈ ಜ್ಞಾಪಕ ಪತ್ರವನ್ನು "ಅಧಿಕೃತವೆಂದು ಪರಿಗಣಿಸಲಾಗುವುದಿಲ್ಲ" ಅಥವಾ ಪರಾಗ್ವೆ ರಾಜ್ಯಕ್ಕೆ ಯಾವುದೇ ಜವಾಬ್ದಾರಿಗಳನ್ನು ನೀಡಲಾಗುವುದಿಲ್ಲ ಎಂದು ಹೇಳಿದೆ.

Follow Us:
Download App:
  • android
  • ios