Swami Nithyananda: ನಿತ್ಯಾನಂದನ ಕೈಲಾಸಕ್ಕೆ ಮಾಜಿ ನಟಿ ರಂಜಿತಾ ಪ್ರಧಾನಿ
ಸ್ವಯಂಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ತಾನು ಸ್ಥಾಪನೆ ಮಾಡಿರುವ ಕೈಲಾಸ ದೇಶಕ್ಕೆ ಮಾಜಿ ನಟಿ ರಂಜಿತಾರನ್ನು ಪ್ರಧಾನಿಯಾಗಿ ನೇಮಿಸಿದ್ದಾರೆ. 13 ವರ್ಷಗಳ ಹಿಂದೆ ರಂಜಿತಾ ಅವರೊಂದಿಗಿನ ಅಶ್ಲೀಲ ವಿಡಿಯೋ ಹೊರಬಂದ ಬೆನ್ನಲ್ಲಿಯೇ ಇಡೀ ನಿತ್ಯಾನಂದನ ಪಾಲಿಗೆ ಶನಿಕಾಟ ಆರಂಭವಾಗಿತ್ತು.
ಬೆಂಗಳೂರು (ಜು.7): ಸ್ವಾಮಿ ನಿತ್ಯಾನಂದನ ವಿರುದ್ಧ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಎಲ್ಲಾ ರೀತಿಯ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನ ಬಿಡದಿಯಲ್ಲಿ ಆಶ್ರಮ ಹೊಂದಿದ್ದ ಸ್ವಯಂಘೋಷಿತ ದೇವಮಾನವ ನಿತ್ಯಾನಂದನ 'ವೃತ್ತಾಂತ'ಗಳು ಮೊಟ್ಟಮೊದಲ ಬಾರಿಗೆ ಹೊರಬಂದಿದ್ದು 2010ರಲ್ಲಿ. ಅಂದು ಖಾಸಗಿ ಟಿವಿಯಲ್ಲಿ ನಟಿ ರಂಜಿತಾ ಜೊತೆಗಿನ ನಿತ್ಯಾನಂದನ ಸೆಕ್ಸ್ ವಿಡಿಯೋಗಳಿ ಪ್ರಸಾರವಾಗಿದ್ದವು. ಆ ಬಳಿಕ ಈತನ ಒಂದೊಂದೇ ಅನಾಚಾರಗಳು ಬೆಳಕಿಗೆ ಬಂದಿದ್ದವು. ಇಂದು ನಿತ್ಯಾನಂದನ ವಿರುದ್ಧ ಭಾರತದಲ್ಲಿ ಹಲವು ಕೇಸ್ ದಾಖಲಾಗಿವೆ. ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ, ಅಪಹರಣ ಕೇಸ್‌ಗಳಲ್ಲಿ ಈತನ ವಿರುದ್ಧ ಜಾಮೀನುರಹಿತ ವಾರಂಟ್‌ಗಳು ಜಾರಿಯಾಗಿದೆ. ಇದರ ನಡುವೆ 2019ರಲ್ಲಿ ಭಾರತದಿಂದ ಓಡಿಹೋಗಿದ್ದ ನಿತ್ಯಾನಂದ ಕೆಲ ದಿನಗಳಲ್ಲೇ ತಾನು ಕೈಲಾಸ ಎನ್ನುವ ದೇಶವನ್ನು ರಚನೆ ಮಾಡಿದ್ದು, ಅದಕ್ಕೆ ನಾನೇ ಅಧ್ಯಕ್ಷ ಎಂದಿದ್ದ. ಹೀಗಿರುವ ನಿತ್ಯಾನಂದ, ಮಾಜಿ ನಟಿ ರಂಜಿತಾರನ್ನು ತನ್ನ ಕೈಲಾಸ ದೇಶದ ಪ್ರಧಾನಿಯಾಗಿ ನೇಮಿಸಿದ್ದಾನೆ ಎಂದು ವರದಿಯಾಗಿದೆ. ಈಕ್ವಡಾರ್‌ನ ಕರಾವಳಿಯಲ್ಲಿರುವ ದ್ವೀಪವನ್ನು ನಿತ್ಯಾನಂದ ಖರೀದಿ ಮಾಡಿದ್ದು ಈ ದೇಶಕ್ಕೆ ರಂಜಿತಾ ಪ್ರಧಾನಿಯಾಗಿ ನೇಮಕವಾಗಿದ್ದಾರೆ.
ಇಲ್ಲಿಯವರೆಗೂ ಕೈಲಾಸ ಎನ್ನುವ ದೇಶ ಹೇಗಿದೆ, ಅದರ ಇತಿಹಾಸವೇನು, ಅದರ ಸಂಪ್ರದಾಯವೇನು, ಕರೆನ್ಸಿ, ಸಂವಿಧಾನ, ಸಂಸತ್ತು, ಸುಪ್ರೀಂ ಕೋರ್ಟ್ ಇವೆಲ್ಲ ಇದೆಯೇ ಎನ್ನುವುದರ ಬಗ್ಗೆ ಅನುಮಾನಗಳಿವೆ. ಇದರ ನಡುವೆ ತಮ್ಮ ದೇಶದ ಪ್ರಧಾನಿಯನ್ನು ಘೋಷಣೆ ಮಾಡಲಾಗಿದೆ.
ದೇವರನ್ನೇ ನಂಬದಿರುವವಳು ನಿತ್ಯಾನಂದನನ್ನ ನಂಬಿದ್ದಳು: 10ನೇ ಕ್ಲಾಸ್‌ನಲ್ಲೇ ರಂಜಿತಾ ಮೇಲೆ ಲವ್ !
ನಿತ್ಯಾನಂದನಿಗೆ ನಟಿ ರಂಜಿತಾ ತಮ್ಮ ನೆಚ್ಚಿನ ಶಿಷ್ಯೆ ಮಾತ್ರವಲ್ಲ, ಆರಂಭದಿಂದಲೂ ನಿತ್ಯಾನಂದ ಜೊತೆಯಲ್ಲಿ ಇದ್ದ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇತ್ತೀಚೆಗೆ ರಂಜಿತಾ ಅವರನ್ನು ಕೈಲಾಸದ ಪ್ರಧಾನಿಯಾಗಿ ನಿತ್ಯಾನಂದ ಘೋಷಣೆ ಮಾಡಿದ್ದಾರೆ ಎಂದು ತಮಿಳಿನ ಪ್ರಮುಖ ಮ್ಯಾಗಝೀನ್ ವರದಿ ಮಾಡಿದೆ. ರಂಜಿತಾ ತೆಲುಗು, ತಮಿಳು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಕೆರಿಯರ್ ಉತ್ತುಂಗದಲ್ಲಿರುವಾಗಲೇ ನಿತ್ಯಾನಂದನ ಜೊತೆ ಸೇರಿಕೊಂಡಿದ್ದಲ್ಲದೆ, ಆತನ ನೆಚ್ಚಿನ ಶಿಷ್ಯೆ ಕೂಡ ಆಗಿದ್ದರು. ನಿತ್ಯಾನಂದ ಮತ್ತು ರಂಜಿತಾ ನಡುವಿನ ದೈಹಿಕ ಸಂಬಂಧದ ವಿಡಿಯೋಗಳು ಲೀಕ್ ಆಗಿ ವೈರಲ್ ಆಗಿದ್ದ ದಿನದಿಂದಲೇ ನಿತ್ಯಾನಂದನಿಗೆ ಶನಿಕಾಟ ಆರಂಭವಾಗಿತ್ತು.
ನನ್ನ ಇಬ್ಬರೂ ಮಕ್ಕಳು ಗಂಡಂದಿರಿಗೆ ಡಿವೋರ್ಸ್ ನೀಡಿ ನಿತ್ಯಾನಂದನ ಜೊತೆಗಿದ್ದಾರೆ: ನಟ ಅಶೋಕ್ ಕಣ್ಣೀರು