ಲಂಡನ್(ಜು.14); ಲಡಾಖ್ ಗಡಿ ಪ್ರಾಂತ್ಯದಲ್ಲಿ ಚೀನಾ ಖ್ಯಾತೆಗೆ ಭಾರತ ತಿರುಗೇಟು ನೀಡಿದೆ. ಆದರೆ ಈ ಹೋರಾಟದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ. ಹೀಗಾಗಿ ಭಾರತೀಯರ ಆಕ್ರೋಶ ಕಡಿಮೆಯಾಗಿಲ್ಲ. ಚೀನಿ ವಸ್ತು ಬಹಿಷ್ಕರಿಸಿದ್ದಾರೆ. ಜೊತೆಗೆ ಚೀನಾ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದೆ. ಲಂಡನ್‌ನಲ್ಲಿರುವ ಭಾರತೀಯರು ಚೀನಾ ರಾಯಭಾರಿ ಕಚೇರಿ ಎದುರು ನಡೆಸಿದ ಪ್ರತಿಭಟನೆ ವಿಶೇಷವಾಗಿತ್ತು. ಕಾರಣ ಭಾರತೀಯರ ಜೊತೆ ಪಾಕಿಸ್ತಾನಿಯರು ಸೇರಿಕೊಂಡಿದ್ದರು.

ಪ್ಯಾಂಗಾಂಗ್‌ನಿಂದ ಚೀನಾ ಇನ್ನಷ್ಟು ಹಿಂದಕ್ಕೆ!

ಲಂಡನ್‌ನಲ್ಲಿರುವ ಚೀನಾ ರಾಯಭಾರಿ ಕಚೇರಿ ಮುಂದೆ ಭಾರತೀಯರ ಮೂಲದ ಲಂಡನ್ ನಿವಾಸಿಗಳು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಚೀನಾ ನರಿ ಬುದ್ದಿ ವಿರುದ್ಧ ಭಾರತ ಪ್ರತಿಭಟನೆಯಲ್ಲಿ ಪಾಕಿಸ್ತಾನಿಯರು ಪಾಲ್ಗೊಂಡಿದ್ದಾರೆ. ಇಷ್ಟೇ ಅಲ್ಲ ಪ್ರತಿಭಟನೆಯಲ್ಲಿ ಭಾರತೀಯರ ಜೊತೆ ರಾಷ್ಟ್ರಗೀತೆ ಜನಗಣ ಮನ ಹಾಗೂ ವಂದೇ ಮಾತರಂ ಹಾಡಿದ್ದಾರೆ.

 

ವೈರತ್ವ ಬೇಡ ಪಾರ್ಟ್ನರ್ ಆಗೋಣ; ಭಾರತದ ನಡೆಗೆ ಬೆಚ್ಚಿ ವರಸೆ ಬದಲಿಸಿದ ಚೀನಾ!.

ಚೀನಾ ಕುತಂತ್ರಕ್ಕೆ ನೆರೆ ಹೊರೆಯ ಹಲವು ದೇಶಗಳು ಬಲಿಯಾಗುತ್ತಿದೆ. ಆದರೆ ಭಾರತ ತಕ್ಕ ತಿರುಗೇಟು ನೀಡಿದೆ. ಇದೇ ಮೊದಲ ಭಾರಿಗೆ ಭಾರತದ ರಾಷ್ಟ್ರ ಗೀತೆ ಹಾಡಿದೆ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡ ಪಾಕಿಸ್ತಾನಿ ಪ್ರಜೆ ಹೇಳಿದ್ದಾರೆ.

ನಾನು ಪಾಕಿಸ್ತಾನ ಆಕ್ರಮಿತ(Pok) ಮೀರ್‌ಪುರ ಪ್ರದೇಶದವನು. ನಾನು ಮೂಲ ಭಾರತೀಯನಾಗಿದ್ದರೂ, ಪಾಕಿಸ್ತಾನ ಆಡಳಿತ ಕಾಶ್ಮೀರದಲ್ಲಿದ್ದೇನೆ. ಪಾಕಿಸ್ತಾನ ಹಾಗೂ ಚೀನಾ ಕುತಂತ್ರದಿಂದ ಎಕಾಮಿಕ್ ಕಾರಿಡಾರ್ ನಡೆಯುತ್ತಿದೆ. ಈ ಕಾರಿಡಾರ್‌ನಿಂದ ಗಿಲ್ಗಿಟ್, ಬಾಲ್ಟಿಸ್ತಾನದಲ್ಲಿ ಎದ್ದಿರುವ ಪಾಕ್ ವಿರೋಧಿ ಅಲೆಯನ್ನು ಸದ್ದಿಡಿಗಿಸುಲ ಪ್ರಯತ್ನವಿದೆ ಎಂದು ಲಂಡನ್ ಪ್ರತಿಭಟೆಯಲ್ಲಿ ಪಾಲ್ಗೊಂಡ ಪಾಕಿಸ್ತಾನಿ ಪ್ರಜೆ ಆಯುಬ್ ಮಿರ್ಜಾ ಹೇಳಿದ್ದಾರೆ.