ನವದೆಹಲಿ(ಜು.12): ಗಡಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ಮಧ್ಯೆ ಎರಡನೇ ಸುತ್ತಿನ ಲೆಫ್ಟಿನೆಂಟ್‌ ಜನರಲ್‌ ಮಟ್ಟದ ಮಾತುಕತೆಗೂ ಮುನ್ನನೇ ಚೀನಾದ ಸೇನೆ ಪೂರ್ವ ಲಡಾಖ್‌ನ ಪ್ಯಾಂಗಾಂಗ್‌ ತ್ಸೋ ಪ್ರದೇಶದಿಂದ ಇನ್ನಷ್ಟುಹಿಂದೆ ಸರಿದಿದೆ.

4ನೇ ಫಿಂಗರ್‌ ಪ್ರದೇಶದಿಂದ ಚೀನಾ ತನ್ನ ಸೇನೆಯನ್ನು ವಾಪಸ್‌ ಕರೆಸಿಕೊಂಡಿದೆ ಮತ್ತು ಪ್ಯಾಂಗಾಂಗ್‌ ಸರೋವರದಿಂದ ದೋಣಿಗಳನ್ನು ತೆರವುಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ಯಾಂಗಾಂಗ್‌ನಿಂದಲೂ ಹಿಂದೆ ಸರಿದ ಚೀನಾ ಸೇನೆ!

ಮುಂದಿನ ವಾರ ನಡೆಯಬೇಕಿದ್ದ ಸೇನಾ ಜನರಲ್‌ಗಳ ಮಟ್ಟದ ಮಾತುಕತೆಯ ವೇಳೆ ಪ್ಯಾಂಗಾಂಗ್‌ ತ್ಸೋ ಮತ್ತು ದೆಪ್ಸಂಗ್‌ನಿಂದ ಎರಡೂ ಕಡೆಯ ಸೇನೆಯನ್ನು ಸಂಪೂರ್ಣವಾಗಿ ಹಿಂಪಡೆಯುವ ಬಗ್ಗೆ ಚರ್ಚೆ ನಡೆಸಲು ಉದ್ದೇಶಿಸಲಾಗಿತ್ತು. ಆದರೆ, ಮಾತುಕತೆಗೆ ಮುನ್ನವೇ ಚೀನಾದ ಸೇನೆಗಳು ಹಿಂದೆ ಸರಿದಿದ್ದು, ಕುತೂಹಲಕ್ಕೆ ಕಾರಣವಾಗಿವೆ.