ವೈರತ್ವ ಬೇಡ ಪಾರ್ಟ್ನರ್ ಆಗೋಣ; ಭಾರತದ ನಡೆಗೆ ಬೆಚ್ಚಿ ವರಸೆ ಬದಲಿಸಿದ ಚೀನಾ!

ಗಡಿಯಲ್ಲಿ ಭಾರತ ಮೇಲೆ ಕಾಲು ಕೆರೆದು ಜಗಳಕ್ಕೆ ಬಂದ ಚೀನಾ, ಹಲವು ಸುತ್ತಿನ ಮಾತುಕತೆಯಲ್ಲೂ ಸಂಧಾನ ಸಾಧ್ಯವಾಗಿರಲಿಲ್ಲ. ಭಾರತದ 20 ಯೋಧರು ಹುತಾತ್ಮರಾದ ಬೆನ್ನಲ್ಲೇ ಭಾರತದ ತಿರುಗೇಟಿಗೆ ಸಜ್ಜಾಯಿತು. ಹಂತ ಹಂತದಲ್ಲಿ ಚೀನಾಗೆ ಹೊಡೆತ ನೀಡಲು ಆರಂಭಿಸಿತು. ಇದೀಗ ಭಾರತ ನಡೆಗೆ ಬೆಚ್ಚಿದ ಚೀನಾ ತನ್ನ ವರಸೆ ಬದಲಿಸಿದೆ.

India china should be partners rather than rivals says china envoy

ನವದೆಹಲಿ(ಜು.10):  ಗಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಮೇಲೆರಗಿದ ಚೀನಾ ಲಡಾಖ್ ಆಕ್ರಮಣಕ್ಕೆ ಮುಂದಾಗಿತ್ತು. ಆದರೆ  ಭಾರತೀಯ ಯೋಧರು ಉತ್ತರಕ್ಕೆ ಚೀನಾ ತತ್ತರಿಸಿತು. ಭಾರತದ 20 ಯೋಧರು ಹುತಾತ್ಮರಾಗಿದ್ದರೆ, ಚೀನಾದ 35ಕ್ಕೂ ಹೆಚ್ಚು ಸೈನಿಕರು ಹತರಾಗಿದ್ದರು. ಇಲ್ಲಿಂದ ಚೀನಾ ವಿರುದ್ಧ ಭಾರತದ ನಿಲುವು ಬದಲಾಯಿತು. ಎಲ್ಲಾ ಹಂತದಲ್ಲೂ ಚೀನಾಗೆ ಹೊಡೆತ ನೀಡಲು ಭಾರತ ಸಜ್ಜಾಯಿತು. ಭಾರತೀಯ ಸೇನೆ, ಕೇಂದ್ರ ಸರ್ಕಾರ , ನಾಗರೀಕರು ಚೀನಾಗೆ ಹೊಡೆತ ನೀಡಿದರು. ಇದರ ಬೆನ್ನಲ್ಲೇ ಚೀನಾದ ವರಸೆ ಬದಲಾಗಿದೆ. 

ಚೀನಾಗೆ ಸ್ಪಷ್ಟ ಸಂದೇಶ ರವಾನೆ; ಭಾರತದಲ್ಲಿ ಆಸ್ಟ್ರೇಲಿಯಾ ನೌಕಾಪಡೆ ಡ್ರಿಲ್!.

ಭಾರತ-ಚೀನಾ ದೇಶಗಳ ನಡುವೆ ಪರಸ್ವರ ಸಹಕಾರ ಅಗತ್ಯ. ಸದ್ಯದ ಪರಿಸ್ಥಿತಿಯನ್ನು ಮುಂದುವರಿಸುವುದು ಉಚಿತವಲ್ಲ. ಈ ವೈರತ್ವಕ್ಕಿಂತ ಭಾರತ ಚೀನಾ ಜೊತೆಗಾರರಾಗಿ ಮುಂದುವರಿಯುವುದು ಉತ್ತಮ. ಗಡಿಯಲ್ಲಿ ಎರಡೂ ದೇಶಗಳೂ ಅಶಾಂತಿ, ಅತಿಕ್ರಮಣ ಸೃಷ್ಟಿಯಾಗದಂತೆ ನೋಡಿಕೊಳ್ಳುಬೇಕು. ಭಾರತ ಹಾಗೂ ಚೀನಾ ಸ್ನೇಹಕ್ಕೆ 2,000 ವರ್ಷಗಳ ಇತಿಹಾಸವಿದೆ. ಈ ಸ್ನೇಹ ಮುಂದುವರಿಯಬೇಕು ಎಂದು ಚೀನಾ ರಾಯಭಾರಿ ಕಚೇರಿ ಮನವಿ ಮಾಡಿದೆ.

ಲಡಾಖ್ ಸಂಘರ್ಷದ ಬೆನ್ನಲ್ಲೇ ಭಾರತೀಯ ಸೇನೆ ಸೇರಿಕೊಂಡ ಅಪಾಚೆ, ಚಿನೊಕ್ ಮಿಲಿಟರ್ ಹೆಲಿಕಾಪ್ಟರ್!.

ಗಲ್ವಾನ್ ಕಣಿವೆಯಲ್ಲಿ ಚೀನಾ ಶಾಂತಿ ಸ್ಥಾಪಿಸಲು ಎಲ್ಲಾ ಕ್ರಮಗಳನ್ನು ಕೈಗೊಂಡಿದೆ. ಸದ್ಯ ಎರಡೂ ದೇಶ ಪ್ರತೀಕಾರ, ತಿರುಗೇಟು ಬಿಟ್ಟು ಶಾಂತಿಗೆ ಮುಂದಾಬೇಕು. ಎರಡು ದೇಶದ ನಡುವೆ ಅನುಮಾನಗಳು ಹೆಚ್ಚಾಗುತ್ತಿದೆ. ಇದು ಉತ್ತಮ ಬೆಳೆವಣಿಗೆಯಲ್ಲ. ಎರಡು ದೇಶದ ನಡುವಿನ ವಿಶ್ವಾಸ, ನಂಬಿಕೆ ಮತ್ತಷ್ಟು ಗಟ್ಟಿಗೊಳ್ಳಬೇಕಿದೆ. ಇದಕ್ಕಾಗಿ ಹೆಜ್ಜೆ ಇಡಬೇಕು ಎಂದು ರಾಯಭಾರಿ ಕಚೇರಿ ಹೇಳಿದೆ.

Latest Videos
Follow Us:
Download App:
  • android
  • ios