ಎರಡು ಪಾಕಿಸ್ತಾನಿ ಹುಡುಗಿಯರು ಭಾರತೀಯರನ್ನು ಪಾಕಿಸ್ತಾನಕ್ಕೆ ಆಹ್ವಾನಿಸಿರುವ ವೀಡಿಯೊ ವೈರಲ್ ಆಗಿದೆ. ಲಕ್ಷಾಂತರ ಲೈಕ್ಸ್ ಮತ್ತು ಕಾಮೆಂಟ್‌ಗಳೊಂದಿಗೆ ಈ ವೀಡಿಯೊ ಸಖತ್ ಚರ್ಚೆಗೆ ಗ್ರಾಸವಾಗಿದೆ.

ವೈರಲ್ ಡೆಸ್ಕ್. ಇನ್‌ಸ್ಟಾಗ್ರಾಮ್‌ನಲ್ಲಿ ಪಾಕಿಸ್ತಾನದ ಇಬ್ಬರು ಹುಡುಗಿಯರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ ಇಬ್ಬರೂ ಭಾರತದ ಜನರನ್ನು ಪಾಕಿಸ್ತಾನಕ್ಕೆ ಬರಲು ಆಹ್ವಾನಿಸುತ್ತಿದ್ದಾರೆ. ಎರಡು ಸುಂದರ ಹುಡುಗಿಯರು ಭಾರತೀಯರನ್ನು ಆಹ್ವಾನಿಸುತ್ತಿರುವುದು ಎಲ್ಲರ ಗಮನ ಸೆಳೆದಿದೆ.

ಏಳು ದಿನಗಳಲ್ಲಿ ಈ ವೀಡಿಯೊಗೆ 15 ಲಕ್ಷಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿವೆ. ವೀಡಿಯೊವನ್ನು 30 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಇದಕ್ಕೆ 1.21 ಲಕ್ಷ ಜನರು ಕಾಮೆಂಟ್ ಮಾಡಿದ್ದಾರೆ. ವೀಡಿಯೊದಲ್ಲಿ ಎರಡು ಹುಡುಗಿಯರು ಹಸಿರು ಮತ್ತು ಕಪ್ಪು ಬಣ್ಣದ ಬಟ್ಟೆಯಲ್ಲಿದ್ದಾರೆ. ಇಬ್ಬರೂ ಬೆಟ್ಟದ ಕೆಳಗೆ ಇದ್ದಾರೆ. ಅಲ್ಲಿ ಒಂದು ಮನೆ ಇದೆ. ಮನೆಯ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಲಾಗಿದೆ.

ಭಾರತದವರೇ ಪಾಕಿಸ್ತಾನಕ್ಕೆ ಬನ್ನಿ: ಒಬ್ಬ ಹುಡುಗಿ ಮೊಬೈಲ್‌ನಿಂದ ವಿಡಿಯೋ ಮಾಡುತ್ತಾಳೆ. ಮತ್ತೊಬ್ಬ ಹುಡುಗಿ ಪಾಕಿಸ್ತಾನದ ಧ್ವಜದತ್ತ ಕೈ ತೋರಿಸುತ್ತಾ, 'ಭಾರತದವರೇ, ಒಮ್ಮೆಯಾದರೂ ಪಾಕಿಸ್ತಾನಕ್ಕೆ ಬನ್ನಿ' ಎಂದು ಹೇಳುತ್ತಾಳೆ. ಈ ಮಾತನ್ನು ಹೇಳುವ ಹುಡುಗಿ ತನ್ನ ತಲೆಯ ಮೇಲೆ ವಿಶಿಷ್ಟ ಆಕಾರದ ಟೋಪಿ ಧರಿಸಿದ್ದಾಳೆ. ಅವಳು ವಿಡಿಯೋದಲ್ಲಿ ನಗುತ್ತಿರುವುದು ಕಂಡುಬರುತ್ತದೆ. ಅವಳ ಈ ನಗು ಸಾವಿರಾರು ಜನರ ಮನ ಗೆದ್ದಿದೆ. ಜನರು ವೀಡಿಯೊದಲ್ಲಿ ವಿವಿಧ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

View post on Instagram

ವೀಡಿಯೊವನ್ನು ಆಫಿಯಾ ಖಾನ್ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಒಬ್ಬ ಬಳಕೆದಾರರು ವೀಡಿಯೊ ನೋಡಿ, 'ಅಮ್ಮಾ ನಾನು ಪ್ರಮಾಣ ಮಾಡುತ್ತೇನೆ, ಈ ಹುಡುಗಿಯರನ್ನು ನೋಡಿ ಪಾಕಿಸ್ತಾನದ ಮೇಲೆ ಬಾಂಬ್ ಹಾಕೋ ಮನಸ್ಸೇ ಆಗ್ತಿಲ್ಲ' ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ಹುಡುಗಿಯರ ಸ್ಥಳದ ಬಗ್ಗೆ ಕೇಳಿದ್ದಾರೆ.

ಇದನ್ನೂ ಓದಿ: ಹೆಣ್ಣು ಕೊಟ್ಟ ಮಾವನ ಆಸೆ ಈಡೇರಿಸಲು ಹೈದರಾಬಾದ್ ಮನೆ ಮೇಲೆ ಹಣದ ಸುರಿಮಳೆಗೈದ ಪಾಕಿಸ್ತಾನಿ ಅಳಿಯ

ವೀಡಿಯೊದಲ್ಲಿ ಭಾರತದ ಜನರನ್ನು ಪಾಕಿಸ್ತಾನಕ್ಕೆ ಆಹ್ವಾನಿಸುವುದು ಬೇರೆ ವಿಷಯ. ಆದರೆ, ನಿಜ ಜೀವನದಲ್ಲಿ ಎರಡೂ ದೇಶಗಳ ಜನರು ಪರಸ್ಪರ ಪ್ರವಾಸಕ್ಕೆ ಹೋಗುವುದು ತುಂಬಾ ಕಷ್ಟ. ಭಾರತ-ಪಾಕಿಸ್ತಾನ ಸಂಬಂಧಗಳು ದೀರ್ಘಕಾಲದವರೆಗೆ ಹದಗೆಟ್ಟಿವೆ. ಇದರಿಂದಾಗಿ ವೀಸಾ ಪಡೆಯುವುದು ಕಷ್ಟ.