ಬೀದಿಯಲ್ಲಿ ಪೋಲ್ ಡಾನ್ಸ್ ಮಾಡಿದ ಹುಡುಗಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಘಟನೆ ಪೊಲೀಸರಿಗೆ ವಿಡಿಯೋ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹ
ಕರಾಚಿ: ಬೀದಿಯಲ್ಲಿ ಡಾನ್ಸ್ ಮಾಡೋದು ತಪ್ಪಾ? ನೀವು ಯಾರಿಗೂ ತೊಂದರೆ ಕೊಡದೇ ಡಾನ್ಸ್ ಮಾಡ್ತಿರಿ ಎಂದಾದರೆ ತಪ್ಪಲ್ಲಾ. ಆದರೆ ಪಾಕಿಸ್ತಾನದ ಕರಾಚಿಯಲ್ಲಿ ಮಾತ್ರ ಬೀದಿಲಿ ಡಾನ್ಸ್ ಮಾಡಿದ್ಲು ಅಂತ ಯುವತಿಯೊಬ್ಬಳ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ಪಾಕಿಸ್ತಾನದಲ್ಲಿ ಮಹಿಳೆಯರ ಸ್ವಾತಂತ್ರ್ಯಕ್ಕೆ ಎಷ್ಟು ಮಾನ್ಯತೆ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಸಂದರ್ಭ ಹೀಗಿರುವಾಗ ಅಲ್ಲಿನ ಬೀದಿಯಲ್ಲಿ ಯುವತಿಯೊಬ್ಬಳು ಪೋಲ್ ಡಾನ್ಸ್ ಮಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ವ್ಯಕ್ತಿಯೊಬ್ಬ ರೆಕಾರ್ಡ್ ಮಾಡಿದ್ದು, ಹುಡುಗಿ ಪೋಲ್ ಡಾನ್ಸ್ ಮಾಡುತ್ತಿದ್ದಾಳೆ ಎಂದು ಬರೆದು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ಆತ ಅನ್ನು ಇಸ್ಲಾಮಾಬಾದ್ ಪೊಲೀಸರಿಗೆ ಟ್ಯಾಗ್ ಮಾಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾನೆ. ಆದರೆ ಈತನ ಈ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಣ್ಣು ಎಂಬ ಕಾರಣಕ್ಕೆ ಈ ರೀತಿ ದೂರು ನೀಡಲಾಗಿದೆ ಎಂದು ನೆಟ್ಟಿಗರು ಬೈದಾಡಿದ್ದಾರೆ.
ವಿಡಿಯೋದಲ್ಲಿ ಕಾಣಿಸುವಂತೆ ಫುಲ್‌ಕೈ ಟೀಶರ್ಟ್ ಹಾಗೂ ಕಪ್ಪು ಹಾಗೂ ಬಿಳಿ ಮಿಶ್ರಿತ ಲೆಗಿನ್ ಪ್ಯಾಂಟ್ ಧರಿಸಿದ್ದಾಳೆ. ಇಸ್ಲಾಮಾಬಾದ್‌ನಲ್ಲಿ ರಸ್ತೆ ಪಕ್ಕದ ಪಾದಾಚಾರಿ ರಸ್ತೆಯಲ್ಲಿ ಸಣ್ಣ ಸಣ್ಣ ಸ್ಟೆಪ್‌ಗಳನ್ನು ಮಾಡುತ್ತಾ ಕಂಬವನ್ನು ಹಿಡಿದು ಡಾನ್ಸ್ (Dance) ಮಾಡುತ್ತಿದ್ದಾಳೆ. ಕೈಯಲ್ಲಿ ಮೊಬೈಲ್ ಹಿಡಿದಿರುವ ಆಕೆ ಒಂತರ ಸ್ಟೈಲ್ ಆಗಿ ಡಾನ್ಸ್ ಮಾಡುತ್ತಿದ್ದಾಳೆ. ಈ ವಿಡಿಯೋವನ್ನು ಒಂದೂವರೆ ಲಕ್ಷಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.
ಇನ್ನು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿ ಇಸ್ಲಾಮಾಬಾದ್ ಪೊಲೀಸರಿಗೆ (Islamabad police) ಟ್ಯಾಗ್ ಮಾಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಇಸ್ಲಾಮಾಬಾದ್ ಪೊಲೀಸರು, ಈ ವಿಡಿಯೋ ಮೂರು ದಿನ ಹಿಂದೆ ಚಿತ್ರೀಕರಣಗೊಂಡಿದೆ. ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ ಡಾನ್ಸ್ ಮಾಡುತ್ತಿರುವ ಯುವತಿಯ ಮಾನಸಿಕ ಅರೋಗ್ಯ ಸರಿ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಆದರೆ ಕೆಲವರು ಯುವತಿಯ ಸಾಮಾಜಿಕ ನೈತಿಕತೆ ಹಾಗೂ ಘಟನೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಆದಾಗ್ಯೂ ಅನೇಕರು ಯುವತಿಯನ್ನು ಬೆಂಬಲಿಸಿ ಕಾಮೆಂಟ್ ಮಾಡಿದ್ದಾರೆ. ಬೀದಿಯಲ್ಲಿ ಡಾನ್ಸ್ ಮಾಡುವುದು ದೊಡ್ಡ ವಿಚಾರವಲ್ಲ, ಇದೊಂದು ಸಾಮಾನ್ಯ ಸ್ಥಿತಿ ಎಂದು ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರಿಗಳು ಟಿವಿ ಚಾನೆಲ್‌ಗಳಲ್ಲಿನ ಎಲ್ಲಾ ಮಹಿಳಾ ನಿರೂಪಕರಿಗೆ ತಮ್ಮ ಮುಖವನ್ನು ಲೈವ್‌ನಲ್ಲಿದ್ದಾಗ ಮುಚ್ಚುವಂತೆ ಆದೇಶಿಸಿದ್ದಾರೆ ಎಂದು ಇತ್ತೀಚೆಗೆ ವರದಿಯಾಗಿತ್ತು. ತಾಲಿಬಾನಿ ತೀರ್ಪುಗಳನ್ನು ಜಾರಿಗೊಳಿಸುವ ಕಾರ್ಯವನ್ನು ವಹಿಸಿಕೊಂಡಿರುವ ವರ್ಚು ಆಂಡ್ ವೈಸ್ (Virtue and Vice Ministry) ಸಚಿವಾಲಯ ಈ ಆದೇಶ ನೀಡಿದೆ ಎನ್ನಲಾಗಿದೆ.
ಹಲವಾರು ಮಹಿಳಾ ಆ್ಯಂಕರ್‌ಗಳು ಮತ್ತು ನಿರೂಪಕರು ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವಾಗ ಫೇಸ್ ಮಾಸ್ಕ್‌ಗಳಿಂದ ಮುಖವನ್ನು ಮುಚ್ಚಿರುವ ಅವರ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಒಬ್ಬ ಪ್ರಮುಖ TOLO ನಿರೂಪಕಿ, ಯಾಲ್ಡಾ ಅಲಿ, "ವರ್ಚು ಆಂಡ್ ವೈಸ್ ಸಚಿವಾಲಯದ ಆದೇಶದ ಮೇರೆಗೆ ಮಹಿಳೆಯನ್ನು ಅಳಿಸಲಾಗುತ್ತಿದೆ" ಎಂಬ ಶೀರ್ಷಿಕೆಯೊಂದಿಗೆ ಮಾಸ್ಕ್ ಹಾಕಿಕೊಂಡು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.