ಪಾಕಿಸ್ತಾನದ ಮಹಿಳೆಯೊಬ್ಬರು ಒಂದು ಗಂಟೆಯೊಳಗೆ ಆರು ಮಕ್ಕಳಿಗೆ ಜನ್ಮ ನೀಡಿ ಮಹಾತಾಯಿ ಎನಿಸಿಕೊಂಡಿದ್ದಾರೆ. ಜೀನತ್ ವಾಹಿದ್ ಎಂಬ 27 ವರ್ಷದ ಮಹಿಳೆ 6 ಮಕ್ಕಳಿಗೆ ಜನ್ಮ ನೀಡಿದ್ದು, ಇದರಲ್ಲಿ 4 ಗಂಡು ಮಕ್ಕಳು ಎರಡು ಹೆಣ್ಣು ಮಕ್ಕಳಾಗಿವೆ. 

ಇಸ್ಲಾಮಾಬಾದ್‌: ಪಾಕಿಸ್ತಾನದ ಮಹಿಳೆಯೊಬ್ಬರು ಒಂದು ಗಂಟೆಯೊಳಗೆ ಆರು ಮಕ್ಕಳಿಗೆ ಜನ್ಮ ನೀಡಿ ಮಹಾತಾಯಿ ಎನಿಸಿಕೊಂಡಿದ್ದಾರೆ. ಜೀನತ್ ವಾಹಿದ್ ಎಂಬ 27 ವರ್ಷದ ಮಹಿಳೆ 6 ಮಕ್ಕಳಿಗೆ ಜನ್ಮ ನೀಡಿದ್ದು, ಇದರಲ್ಲಿ 4 ಗಂಡು ಮಕ್ಕಳು ಎರಡು ಹೆಣ್ಣು ಮಕ್ಕಳಾಗಿವೆ. ಏಪ್ರಿಲ್ 19 ರಂದು ಮೊಹಮ್ಮದ್ ವಾಹೀದ್ ಎಂಬುವವರ ಪತ್ನಿ ಜೀನತ್ ವಾಹಿದ್ ಅವರು ಒಂದು ಗಂಟೆಯ ಅವಧಿಯಲ್ಲಿ ಒಬ್ಬರಾದ ಮೇಲೆ ಒಬ್ಬರಂತೆ ಆರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ರಾವಲ್ಪಿಂಡಿಯ ಆಸ್ಪತ್ರೆಯಲ್ಲಿ ಈ ವಿಶೇಷ ಘಟನೆ ನಡೆದಿದೆ.

ಜೀನತ್ ಅವರು ರಾವಲ್ಪಿಂಡಿಯ ಹಾಜಿರಾ ಕಾಲೋನಿಯ ನಿವಾಸಿಯಾಗಿದ್ದು,ಏಪ್ರಿಲ್ 18 ರಂದು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ರಾವಲ್ಪಿಂಡಿಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸ್ತುತ ತಾಯಿ ಹಾಗೂ ಆರು ಮಕ್ಕಳೂ ಆರೋಗ್ಯವಾಗಿದ್ದಾರೆ ಅಲ್ಲದೇ ಎಲ್ಲಾ ಮಕ್ಕಳು 2 ಪೌಂಡ್‌ಗಳಿಗಿಂತ ಕಡಿಮೆ ತೂಕವನ್ನು ಹೊಂದಿವೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. 

ಇಸ್ಲಾಂ ದೇಶದಲ್ಲಿದ್ದಿ ಎಂದು ಯೂಟ್ಯೂಬರ್ ತಲೆಗೆ ಬಟ್ಟೆ ಹಾಕಿದ ಪಾಕ್ ಯುವಕ; ಆಕೆಯ ಪ್ರತಿಕ್ರಿಯೆಗೆ ಶಹಬ್ಬಾಸ್ ಎಂದ ನೆಟಿಜನ್ಸ್ ..

ಮಕ್ಕಳನ್ನು ಇನ್ಕ್ಯುಬೇಟರ್‌ನಲ್ಲಿ ಇಡಲಾಗಿದ್ದು, ಮಕ್ಕಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಜೀನತ್ ಅವರಿಗೆ ಇದು ಮೊದಲ ಹೆರಿಗೆಯಾಗಿದ್ದು, ಆಸ್ಪತ್ರೆಯ ವೈದ್ಯರು ಅವರಿಗೆ ಇದ್ದುದರಲ್ಲೇ ಉತ್ತಮ ಸೌಲಭ್ಯವನ್ನು ಒದಗಿಸಿದ್ದಾರೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಆದರೆ ಇದು ಸಹಜ ಹೆರಿಗೆ ಅಲ್ಲ, ಹೆರಿಗೆ ಸಮಯದಲ್ಲಿ ಸಂಕೀರ್ಣತೆ ಇದ್ದುದರಿಂದ ಆಸ್ಪತ್ರೆಯ ವಿಶೇಷ ವೈದ್ಯರು ಸಿಸೇರಿಯನ್ ಮೂಲಕ ಮಕ್ಕಳನ್ನು ಹೊರ ತೆಗೆದಿದ್ದಾರೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ. 

ಹೆರಿಗೆ ನಂತರ ತಾಯಿ ಜೀನತ್‌ಗೆ ಸ್ವಲ್ಪ ಅನಾರೋಗ್ಯ ಕಾಡಿತ್ತು. ಆದರೆ ಆಕೆ ನಂತರದಲ್ಲಿ ಆರೋಗ್ಯವಾಗಿದ್ದಾರೆ. ಇತ್ತ ಆರು ಮಕ್ಕಳ ಹೆರಿಗೆ ಮಾಡಿಸಿದ ಆಸ್ಪತ್ರೆ ಸಿಬ್ಬಂದಿ ಈ ಅಪರೂಪದ ಘಟನೆ ತಮ್ಮ ಆಸ್ಪತ್ರೆಯಲ್ಲಿ ನಡೆದಿರುವುದಕ್ಕೆ ಖುಷಿ ಪಟ್ಟಿದ್ದಾರೆ. ಹಾಗೆಯೇ ಜೀನತ್ ಹಾಗೂ ವಾಹೀದ್ ಕುಟುಂಬವೂ ಕೂಡ ಆರು ಮಕ್ಕಳನ್ನು ಜೊತೆಯಾಗಿ ಸ್ವಾಗತಿಸುತ್ತಿರುವುದಕ್ಕೆ ಖುಷಿ ಪಟ್ಟಿದ್ದಾರೆ. 

ನನ್ನ ಹೆಂಡ್ತಿಗೆ ಟಾಯ್ಲೆಟ್‌ ಕ್ಲೀನರ್‌ ಮಿಕ್ಸ್‌ ಮಾಡಿದ ಫುಡ್‌ ಕೊಟ್ಟಿದ್ದಾರೆ, ಇಮ್ರಾನ್‌ ಖಾನ್‌ ಆರೋಪ!