ಪಾಕಿಸ್ತಾನದಲ್ಲಿ ಇಮ್ರಾನ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತಂದಿದ್ದ ಅವಿಶ್ವಾಸ ನಿರ್ಣಯವನ್ನು ರಾಷ್ಟ್ರೀಯ ಅಸೆಂಬ್ಲಿಯ ಉಪ ಸ್ಪೀಕರ್ ತಿರಸ್ಕರಿಸಿದ್ದಾರೆ. ಇದಕ್ಕಾಗಿ ಸ್ಪೀಕರ್ ಆರ್ಟಿಕಲ್ 5 ಅನ್ನು ಉಲ್ಲೇಖಿಸಿದ್ದಾರೆ. ಈ ಕುರಿತು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಭಾರಿ ಗದ್ದಲ ನಡೆದಿದೆ. ಇದರ ಬೆನ್ನಲ್ಲೇ ಅವಿಶ್ವಾಸ ನಿರ್ಣಯದ ವಜಾಗೊಳಿಸುವಿಕೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಮುಂದಾಗಿದೆ.
ಇಸ್ಲಾಮಾಬಾದ್ (ಏ. 3): ಪಾಕಿಸ್ತಾನದಲ್ಲಿ (Pakistan) ಅಧಿಕಾರ ಉಳಿಸಿಕೊಳ್ಳುವ ಆಸೆಯಲ್ಲಿ ಇಮ್ರಾನ್ ಖಾನ್ (Imran Khan) ಕೊನೆಯ ಅಸ್ತ್ರವಾಗಿ ಪ್ರಯೋಗಿಸಿದ್ದ "ವಿಸರ್ಜನೆ" ಗೂಗ್ಲಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ (Pakistan Supreme Court) ಮೆಟ್ಟಿಲೇರಿದೆ. ಅವಿಶ್ವಾಸ ನಿರ್ಣಯವನ್ನು ಉಪಸ್ಪೀಕರ್ ಯಾವ ಕಾರಣಕ್ಕಾಗಿ ವಜಾಗೊಳಿಸಿದರು, ಅದರ ಬೆನ್ನಲ್ಲೇ ರಾಷ್ಟ್ರೀಯ ಅಸೆಂಬ್ಲಿ (National Assembly) ವಿಸರ್ಜನೆಯಾಗಿರುವ ಕುರಿತಾಗಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ವಿಚಾರಣೆ ಕೈಗೆತ್ತಿಕೊಂಡಿದೆ.
ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ (united opposition) ಅವಿಶ್ವಾಸ ನಿರ್ಣಯವನ್ನು ರಾಷ್ಟ್ರೀಯ ಅಸೆಂಬ್ಲಿಯ ಉಪ ಸ್ಪೀಕರ್ ಖ್ವಾಸಿಂ ಸೂರಿ ( National Assembly Deputy Speaker Qasim Suri ) ಭಾನುವಾರ ಮುಂಜಾನೆ ತಿರಸ್ಕರಿಸಿದ್ದರು. ಇದಕ್ಕಾಗಿ ಅವರು ಸಂವಿಧಾನದ 5 ನೇ ಪರಿಚ್ಛೇದವನ್ನು ಉಲ್ಲೇಖ ಮಾಡಿದ್ದರು. ಪಾಕಿಸ್ತಾನದ ಸಂವಿಧಾನದ (Pakistan constitution ) 5 ನೇ ವಿಧಿಯ ಪ್ರಕಾರ, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ತಂದ ನಿರ್ಣಯದ ಅವಧಿಯು ನಿಗದಿತ ಸಮಯವನ್ನು ಮೀರಿದರೆ, ಅದನ್ನು ತಿರಸ್ಕರಿಸುವ ಆಯ್ಕೆಯನ್ನು ಸ್ಪೀಕರ್ ಹೊಂದಿರುತ್ತಾರೆ. ಇದರ ನಡುವೆ ಪ್ರಧಾನಿ ಇಮ್ರಾನ್ ಖಾನ್ ಅವರ ಸಲಹೆಯ ಮೇರೆಗೆ ಅಧ್ಯಕ್ಷ ಆರಿಫ್ ಅಲ್ವಿ (Dr Arif Alvi) ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಿದ್ದಾರೆ. ಇದರೊಂದಿಗೆ ದೇಶದಲ್ಲಿ ಮತ್ತೊಮ್ಮೆ ಚುನಾವಣೆ ನಡೆಯಲಿದೆ. ರಾಷ್ಟ್ರೀಯ ಅಸೆಂಬ್ಲಿಯ ವಿಸರ್ಜನೆ ಆದ ಪ್ರಕ್ರಿಯೆಯನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ತೆಗೆದುಕೊಂಡಿದೆ.
ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ವಿಸರ್ಜನೆಯ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಮಹಾನಿರ್ದೇಶಕ ಬಾಬರ್ ಇಫ್ತಿಕರ್ ಅವರು ಇಂದು ಏನಾಯಿತು ಎಂಬುದರಲ್ಲಿ ಸೇನೆಯ ಪಾತ್ರವಿಲ್ಲ ಎಂದು ಹೇಳಿದರು. ಖಂಡಿತವಾಗಿಯೂ ಇದರಲ್ಲಿ ಸೇನೆಯ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸುವ ಸಾಮರ್ಥ್ಯದ ಬಗ್ಗೆ ವಿಶ್ವಾಸ ಹೊಂದಿದ್ದ ಪ್ರತಿಪಕ್ಷಗಳು, ಡೆಪ್ಯುಟಿ ಸ್ಪೀಕರ್ ಅವರ ಆಘಾತಕಾರಿ ನಡೆಯಿಂದ ಅಚ್ಚರಿಗೆ ಒಳಗಾಗಿದೆ. ಕೆಲವರು ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಬೀಡು ಬಿಟ್ಟಿದ್ದರೆ, ಇನ್ನು ಕೆಲವರು ಸುಪ್ರೀಂ ಕೋರ್ಟ್‌ನ ಬಾಗಿಲು ತಟ್ಟಲು ನಿರ್ಧರಿಸಿದ್ದಾರೆ.
ಅವಿಶ್ವಾಸ ನಿರ್ಣಯದ ಮೇಲೆ ಮತದಾನಕ್ಕೆ ಅವಕಾಶ ನೀಡದೆ ಸರ್ಕಾರ ಸಂವಿಧಾನವನ್ನು ಉಲ್ಲಂಘಿಸಿದೆ ಎಂದು ಪಿಪಿಪಿ ಅಧ್ಯಕ್ಷ ಬಿಲಾವಲ್-ಭುಟ್ಟೋ ಜರ್ದಾರಿ (PPP Chairman Bilawal-Bhutto Zardari) ಹೇಳಿದ್ದಾರೆ. "ಸಂಯುಕ್ತ ವಿರೋಧ ಪಕ್ಷವು ಸಂಸತ್ತನ್ನು ಬಿಟ್ಟು ಹೊರಡಲು ತಯಾರಿಲ್ಲ. ನಮ್ಮ ವಕೀಲರು ಸುಪ್ರೀಂ ಕೋರ್ಟ್‌ಗೆ ತೆರಳಿದ್ದಾರೆ. ಪಾಕಿಸ್ತಾನದ ಸಂವಿಧಾನವನ್ನು ರಕ್ಷಿಸಲು, ಎತ್ತಿಹಿಡಿಯಲು, ರಕ್ಷಿಸಲು ಮತ್ತು ಜಾರಿಗೆ ತರಲು ನಾವು ಎಲ್ಲಾ ಸಂಸ್ಥೆಗಳಿಗೆ ಕರೆ ನೀಡುತ್ತೇವೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.
Pakistan ಗೂಗ್ಲಿ ಎಸೆದ ಇಮ್ರಾನ್ ಖಾನ್? ಮನವಿ ಮಾಡಿದ ಅರ್ಧಗಂಟೆಯಲ್ಲೇ ಪಾಕ್ ಶಾಸನಸಭೆ ವಿಸರ್ಜನೆ!
ಇದರ ಬೆನ್ನಲ್ಲೇ, ಉಪಸಭಾಪತಿಯ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸುವುದು ಮತ್ತು ಸಂಸತ್ತಿನ ವಿಸರ್ಜನೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ವಿಶೇಷ ಪೀಠವನ್ನು() ರಚನೆ ಮಾಡಿದೆ. ಈ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಸರ್ಕಾರಕ್ಕೆ ಬಹುಮತವಿರಲಿಲ್ಲ ಎಂದು ಉಲ್ಲೇಖ ಮಾಡಲಾಗಿದೆ.
BREAKING: ಪಾಕಿಸ್ತಾನ ಶಾಸನಸಭೆ ವಿಸರ್ಜಿಸಲು Imran Khan ಮನವಿ, ಶೀಘ್ರದಲ್ಲಿ ಚುನಾವಣೆ
ಇಮ್ರಾನ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ ಪಿಎಂಎಲ್-ಎನ್ ಉಪಾಧ್ಯಕ್ಷ ಮರ್ಯಮ್ ನವಾಜ್ ( PML-N Vice President Maryam Nawaz), ತಮ್ಮ ಸ್ಥಾನವನ್ನು ಉಳಿಸುವ ಸಲುವಾಗಿ ಸಂವಿಧಾನವನ್ನು "ವಿರೂಪಗೊಳಿಸಲು" ಯಾರಿಗೂ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದರು. "ಈ ಅಪರಾಧಕ್ಕಾಗಿ ಈ ಹುಚ್ಚು ಮತಾಂಧನಿಗೆ ಶಿಕ್ಷೆಯಾಗದಿದ್ದರೆ, ಇಂದಿನ ನಂತರ ದೇಶದಲ್ಲಿ ಜಂಗಲ್ ಕಾನೂನು ಚಾಲ್ತಿಯಲ್ಲಿರಲಿದೆ" ಎಂದು ಅವರು ಟ್ವೀಟ್‌ನಲ್ಲಿ ಹೇಳಿದ್ದಾರೆ.
