Breaking ಇಮ್ರಾನ್ ಖಾನ್ ಬಂಧನ ಕಾನೂನು ಬಾಹಿರ; ತಕ್ಷಣ ಬಿಡುಗಡೆ ಮಾಡಿ: ಪಾಕಿಸ್ತಾನ ಸುಪ್ರೀಂಕೋರ್ಟ್ ಆದೇಶ
ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗಿನಿಂದ ಪಾಕಿಸ್ತಾನಿ ರೇಂಜರ್‌ಗಳು ಮಂಗಳವಾರ ಬಂಧಿಸಿದ್ದರು. ಅಲ್-ಖಾದಿರ್ ಟ್ರಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು.
ಇಸ್ಲಾಮಾಬಾದ್ ( ಮೇ 11, 2023): ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಮಾಜಿ ಪ್ರಧಾನಿಯ ಬೆಂಬಲಿಗರ ಹಿಂಸಾತ್ಮಕ ಪ್ರತಿಭಟನೆಯ ನಡುವೆಯೇ ಇಮ್ರಾನ್ ಖಾನ್ ಅವರನ್ನು ಭ್ರಷ್ಟಾಚಾರ ವಿರೋಧಿ ಸಂಸ್ಥೆಯಿಂದ ಬಂಧಿಸಿರುವುದು ಕಾನೂನುಬಾಹಿರ ಎಂದು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಹೇಳಿದೆ. ಅಲ್ಲದೆ, ಅವರನ್ನು ಕೂಡಲೇ ಬಿಡುಗಡೆ ಮಾಡಿ ಎಂದೂ ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.
ಇನ್ನು, ಈ ರೀತಿ ಬೆಳವಣಿಗೆ ನಡೆದದ್ದು ಸರಿಯಲ್ಲ ಎಂದೂ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಗಮನಿಸಿದೆ. ಅಲ್ಲದೆ, ಇಸ್ಲಾಮಾಬಾದ್ ಹೈಕೋರ್ಟ್‌ಗೆ ಶುಕ್ರವಾರ ಹಾಜರಾಗುವಂತೆಯೂ ಅಲ್ಲಿನ ಸುಪ್ರೀಂ ಕೋರ್ಟ್ ಇಮ್ರಾನ್ ಖಾನ್‌ಗೆ ಸೂಚಿಸಿದೆ.
ಇದನ್ನು ಓದಿ: ನನಗೆ ಟಾಯ್ಲೆಟ್‌ಗೆ ಹೋಗಲೂ ಬಿಡ್ತಿಲ್ಲ; ತೀವ್ರ ಚಿತ್ರಹಿಂಸೆ ನೀಡ್ತಿದ್ದಾರೆ: ಇಮ್ರಾನ್ ಖಾನ್
ಪಿಟಿಐ ಮುಖ್ಯಸ್ಥ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್ ಹೈಕೋರ್ಟ್‌ನ ಹೊರಗಿನಿಂದ ಪಾಕಿಸ್ತಾನಿ ರೇಂಜರ್‌ಗಳು ಮಂಗಳವಾರ ಬಂಧಿಸಿದ್ದರು. ಅಲ್-ಖಾದಿರ್ ಟ್ರಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಗಿತ್ತು. ಇನ್ನೊಂದೆಡೆ, ಮೇ 1 ರಂದು ರಾವಲ್ಪಿಂಡಿಯಲ್ಲಿ ರಾಷ್ಟ್ರೀಯ ಹೊಣೆಗಾರಿಕೆ ಬ್ಯೂರೋ (ಎನ್‌ಎಬಿ) ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.
ಇದನ್ನೂ ಓದಿ: Breaking: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ
ಇಮ್ರಾನ್ ಖಾನ್ ಬಂಧನದ ನಂತರ, ಪಾಕ್ ಮಾಜಿ ಪ್ರಧಾನಿಯ ಬೆಂಬಲಿಗರು ರಾವಲ್ಪಿಂಡಿಯ ಗ್ಯಾರಿಸನ್ ಸಿಟಿಯಲ್ಲಿರುವ ಪಾಕಿಸ್ತಾನದ ಸೇನಾ ಪ್ರಧಾನ ಕಚೇರಿ ಮತ್ತು ಲಾಹೋರ್‌ನಲ್ಲಿರುವ ಕಾರ್ಪ್ಸ್ ಕಮಾಂಡರ್ ನಿವಾಸದ ಮೇಲೆ ದಾಳಿ ನಡೆಸಿದರು. ಇನ್ನು, ಪಾಕಿಸ್ತಾನದ ಹಲವು ನಗರಗಳಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ಮಧ್ಯೆ, ಇಮ್ರಾನ್ ಖಾನ್ ಬಂಧನವನ್ನು ಬೆಂಬಲಿಸಿದ ಇಸ್ಲಾಮಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ ಪಕ್ಷವು ಬುಧವಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು.
ಈ ಹಿನ್ನೆಲೆ, ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಉಮರ್ ಅತಾ ಬಂಡಿಯಾಲ್, ನ್ಯಾಯಮೂರ್ತಿ ಮುಹಮ್ಮದ್ ಅಲಿ ಮಜರ್ ಮತ್ತು ನ್ಯಾಯಮೂರ್ತಿ ಅಥರ್ ಮಿನಲ್ಲಾ ಅವರನ್ನೊಳಗೊಂಡ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಗುರುವಾರ ವಿಚಾರಣೆ ನಡೆಸಿದೆ. ನಂತರ, ಮಾಜಿ ಪ್ರಧಾನಿಯ ಮನವಿಯನ್ನು ಆಲಿಸಿದಂತೆ ದೇಶದ ಭ್ರಷ್ಟಾಚಾರ ವಿರೋಧಿ ಪಡೆಗೆ ಇಮ್ರಾನ್ ಖಾನ್ ಅವರನ್ನು ಕರೆತರುವಂತೆ ಆದೇಶಿಸಿತು. ಇಮ್ರಾನ್ ಖಾನ್ ನಾಟಕೀಯ ಬಂಧನದ ವಿರುದ್ಧ ವಿಚಾರಣೆ ವೇಳೆ ಈ ಆದೇಶ ನೀಡಿತ್ತು.
ಇದನ್ನೂ ಓದಿ: ಪ್ರಧಾನಿ ಮೋದಿ ವಿರುದ್ಧ ದೂರು ನೀಡಬೇಕೆಂದ ಪಾಕ್ ನಟಿ: ದೆಹಲಿ ಪೊಲೀಸರ ಪ್ರತಿಕ್ರಿಯೆ ವೈರಲ್
ಅದರ ನಂತರ, ಪಾಕಿಸ್ತಾನ ಸುಪ್ರೀಂಕೋರ್ಟ್ ಇಮ್ರಾನ್ ಖಾನ್ ಬಂಧನವನ್ನು ಕಾನೂನುಬಾಹಿರ ಎಂದು ತೀರ್ಪು ನೀಡಿತು ಮತ್ತು ತಕ್ಷಣ ಅವರನ್ನು ಬಿಡುಗಡೆ ಮಾಡುವಂತೆ ಆದೇಶಿಸಿದೆ. ಅಲ್ಲದೆ, ಇಸ್ಲಾಮಾಬಾದ್ ಹೈಕೋರ್ಟ್‌ಗೆ ಶುಕ್ರವಾರ ಹಾಜರಾಗುವಂತೆ ಸುಪ್ರೀಂ ಕೋರ್ಟ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಸೂಚಿಸಿದೆ.
ಇದನ್ನೂ ಓದಿ: ವಿಭಜಿತ, ಅಸ್ಥಿರ ಪಾಕಿಸ್ತಾನ.. ಭಾರತದ ಮೇಲೆ ಇದರ ಪರಿಣಾಮವೇನು?